ತುಂಬು ಗರ್ಭಿಣಿ ಪತ್ನಿಯನ್ನು ಜೋಳಿಗೆಯಲ್ಲಿ ಹೊತ್ತು ಆಸ್ಪತ್ರೆ ಸೇರಿಸಿದ ಗಂಡ; ವಿಡಿಯೋ ವೈರಲ್

Viral Video: ಛತ್ತೀಸ್​ಗಢದ ಕುಗ್ರಾಮಕ್ಕೆ ರಸ್ತೆ ಸಂಪರ್ಕ ಇರಲಿಲ್ಲ. ಹೀಗಾಗಿ, 9 ತಿಂಗಳ ಗರ್ಭಿಣಿಯನ್ನುಆಕೆಯ ಗಂಡ ಮತ್ತು ಸಂಬಂಧಿಕರು ದಪ್ಪವಾದ ಕೋಲಿಗೆ ಹಗ್ಗವನ್ನು ಕಟ್ಟಿ, ತೊಟ್ಟಿಲಿನ ರೀತಿ ಮಾಡಿ, ಅದರಲ್ಲಿ ಕೂರಿಸಿಕೊಂಡು ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.

Sushma Chakre | news18-kannada
Updated:July 9, 2020, 3:12 PM IST
ತುಂಬು ಗರ್ಭಿಣಿ ಪತ್ನಿಯನ್ನು ಜೋಳಿಗೆಯಲ್ಲಿ ಹೊತ್ತು ಆಸ್ಪತ್ರೆ ಸೇರಿಸಿದ ಗಂಡ; ವಿಡಿಯೋ ವೈರಲ್
ಜೋಳಿಗೆಯಲ್ಲಿ ಗರ್ಭಿಣಿಯನ್ನು ಹೊತ್ತು ಸಾಗುತ್ತಿರುವ ಕುಟುಂಬಸ್ಥರು
  • Share this:
ನವದೆಹಲಿ (ಜು. 9): ಛತ್ತೀಸ್​ಗಢದ ಕೊಂಡಗಾಂವ್​ನ ಮೋಹನ್​ಬೇದ ಎಂಬ ಗ್ರಾಮದಲ್ಲಿ ರಸ್ತೆಯ ವ್ಯವಸ್ಥೆಯಿಲ್ಲದೆ ತುಂಬು ಗರ್ಭಿಣಿಯನ್ನು ಜೋಳಿಗೆಯಲ್ಲಿ ಕೂರಿಸಿಕೊಂಡು, ಹೆಗಲ ಮೇಲೆ ಹೊತ್ತು ಹೋಗಿರುವ ವಿಡಿಯೋ ಈಗ ವೈರಲ್ ಆಗಿದೆ.

ಊರಿಗೆ ರಸ್ತೆ ಸೌಕರ್ಯ ಇಲ್ಲದ ಕಾರಣ ಮೋಹನ್​ಬೇದ ಗ್ರಾಮದವರೆಲ್ಲರೂ ನಡೆದುಕೊಂಡೇ ಪಟ್ಟಣಕ್ಕೆ ಸಾಗಬೇಕಾಗಿತ್ತು. ಅದೇ ಊರಿನಲ್ಲಿದ್ದ 9 ತಿಂಗಳ ಗರ್ಭಿಣಿಯನ್ನು ಹೆರಿಗೆಗಾಗಿ ಆಸ್ಪತ್ರೆಗೆ ಸೇರಿಸಬೇಕಾಗಿತ್ತು. ಆದರೆ, ಊರಿಗೆ ರಸ್ತೆಯಿಲ್ಲದ ಕಾರಣ ಆ್ಯಂಬುಲೆನ್ಸ್​, ಬೇರೆ ವಾಹನಗಳು ಬರಲು ಸಾಧ್ಯವಿರಲಿಲ್ಲ. ಹೀಗಾಗಿ, ಆ ಮಹಿಳೆಯ ಗಂಡ ಮತ್ತು ಸಂಬಂಧಿಕರು ದಪ್ಪವಾದ ಕೋಲಿಗೆ ಹಗ್ಗವನ್ನು, ತೊಟ್ಟಿಲಿನ ರೀತಿ ಮಾಡಿ, ಅದರಲ್ಲಿ ಗರ್ಭಿಣಿಯನ್ನು ಕೂರಿಸಿಕೊಂಡು ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.
ಕಿಲೋಮೀಟರ್​ಗಟ್ಟಲೆ ದೂರವಿದ್ದ ಆಸ್ಪತ್ರೆಗೆ ಗರ್ಭಿಣಿಯನ್ನು ಹೊತ್ತು ಸಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದಾಗಲೇ ಹೆರಿಗೆನೋವಿನಿಂದ ನರಳುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ ಕೆಲವೇ ಹೊತ್ತಿನಲ್ಲಿ ಹೆರಿಗೆಯಾಯಿತು. ಸದ್ಯಕ್ಕೆ ತಾಯಿ-ಮಗುವಿಬ್ಬರೂ ಆರೋಗ್ಯವಾಗಿದ್ದಾರೆ.
Published by: Sushma Chakre
First published: July 9, 2020, 3:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading