ತಮ್ಮ ಸರಳತೆ ಹಾಗೂ ಸಮಾಜಸೇವೆಯಿಂದಲೇ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ ಇನ್ಫೋಸಿಸ್ ಫೌಂಡೇಶನ್ (Sudha Murthy Sudha Murthy) ಸುಧಾಮೂರ್ತಿ. ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಅಗ್ರಜನೆನಿಸಿಕೊಂಡಿರುವ ಇನ್ಫೋಸಿಸ್ ಸಂಸ್ಥೆಯ ಸ್ಥಾಪಕರಾಗಿದ್ದರೂ ಸಹ ತನ್ನನು ತಾನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಣ, ಶ್ರೀಮಂತಿಕೆ (Richness) ಬದುಕಿನ ಒಂದು ಭಾಗವಷ್ಟೇ ಎಂಬುದನ್ನು ಇವರು ನಿರೂಪಿಸಿದ್ದಾರೆ. ಜೊತೆಗೆ, ಬರಹಗಾರ್ತಿಯಾಗಿಯೂ ಸಹ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾರೆ.
ಇವರು ಇತ್ತೀಚೆಗೆ ಸೋನಿ ಟಿವಿಯ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದ್ದು, ಅದರ ಎಪಿಸೋಡ್ ಇನ್ನಷ್ಟೇ ಟಿವಿಯಲ್ಲಿ ಪ್ರಸಾರವಾಗಬೇಕಿದೆ. ಆದರೆ, ಅದಕ್ಕೂ ಮುನ್ನ ಅದರ ಪ್ರೋಮೋ ಸೋನಿ ಚಾನೆಲ್ ಬಿಡುಗಡೆಯಾಗಿದೆ. ಅದರಲ್ಲಿ ಅವರು ತಮ್ಮ ವಿಮಾನ ಪ್ರಯಾಣದ ಕುರಿತು ಹಂಚಿಕೊಂಡಿರುವ ಸ್ವಾರಸ್ಯಕರ ಘಟನೆಯ ವಿಡಿಯೋವೊಂದು ಸೋಷಿಯಾ ಮೀಡಿಯಾದಲ್ಲಿ ಹರಿದಾಡುತ್ತಿದೆ.
Iss weekend raat 9:30 baje, #SonyEntertainmentTelevision par #TheKapilSharmaShow mein, hasi-mazaak ke saath #SudhaMurthy ji karne wali hai kayi prerna-janak baatein!🥺@KapilSharmaK9 pic.twitter.com/y9oNefqjAm
— sonytv (@SonyTV) May 10, 2023
ಆಗ ಸುಧಾಮೂರ್ತಿ ಅವರು, “ಸುಮಾರು ನಾಲ್ಕು ವರ್ಷಗಳ ಹಿಂದೆ ನಾನು ಸಲ್ವಾರ್ ಕಮೀಜ್ ಧರಿಸಿ ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ನನ್ನ ಬಳಿ ಬಿಸಿನೆಸ್ ಕ್ಲಾಸ್ ಟಿಕೆಟ್ ಇದ್ದದ್ದರಿಂದ ಬಿಸಿನೆಸ್ ಕ್ಲಾಸ್ ಸರತಿ ಸಾಲಿನಲ್ಲಿ ನಿಂತಿದ್ದೆ. ಆದರೆ, ಅಲ್ಲಿದ್ದ ಕೆಲವು ಜನರು ನನ್ನನ್ನು ನೋಡಿ, “ಈ ಎಕಾನಮಿ ಕ್ಲಾಸ್ ಟಿಕೆಟ್ ಇರುವ ಜನರು ಇಲ್ಲೇಕೆ ಬಂದು ನಿಂತಿದ್ದಾರೆ. ಇವರಿಗೇನು ಅರ್ಥವಾಗುವುದಿಲ್ಲವೇ, ಬಿಜಿನೆಸ್ ಕ್ಲಾಸ್ ಯಾವುದು, ಕ್ಯಾಟಲ್ ಕ್ಲಾಸ್ ಯಾವುದು ಎಂದು (ವಿಮಾನದಲ್ಲಿ ಕಡಿಮೆ ಟಿಕೆಟ್ ದರವುಳ್ಳ ವಿಭಾಗಕ್ಕೆ ತಮಾಷೆಯ ಹೆಸರು, ಇದರಲ್ಲಿ ಪ್ರಯಾಣಿಕರಿಗೆ ಚಲಿಸಲು ಕಡಿಮೆ ಸ್ಥಳಾವಕಾಶವಿರುತ್ತದೆ) ಎಂದು ವ್ಯಂಗ್ಯವಾಡಿದರು. ನಾನು ತಕ್ಷಣ ಅವರ ಬಳಿ ಹೋಗಿ ಕ್ಯಾಟಲ್ ಕ್ಲಾಸ್ ಎಂದರೇನು ಎಂದು ಕೇಳಿದೆ” ಎಂಬ ಘಟನೆಯೊಂದನ್ನು ಅವರು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: Digvijay Singh: ಹಿಂದುತ್ವ ಅನ್ನೋದು ಧರ್ಮವಲ್ಲ, ಬಜರಂಗ ದಳ ಗೂಂಡಾಗಳ ಗುಂಪು: ದಿಗ್ವಿಜಯ್ ಸಿಂಗ್
ಯಾವುದೇ ವ್ಯಕ್ತಿಯನ್ನು ಆತ ಧರಿಸುವ ಬಟ್ಟೆಯಿಂದಾಗಲೀ, ಆತನಲ್ಲಿರುವ ಆಸ್ತಿಯಿಂದಾಗಲೀ ಅಳೆಯಲಾಗುವುದಿಲ್ಲ. ಯಾರು ತನ್ನ ಕೆಲಸವನ್ನು ಖುಷಿಯಿಂದ, ನಿಷ್ಠೆಯಿಂದ ಮಾಡುತ್ತಾರೋ ಅವರೇ ಉತ್ತಮ ವ್ಯಕ್ತಿಗಳು, ಅವರೇ ‘ಕ್ಲಾಸ್’ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ತಮಗಾದ ಈ ಅನುಭವವನ್ನು ಇವರು ತಮ್ಮ ‘ತ್ರೀ ಥೌಸಂಡ್ ಸ್ಟಿಚ್ಚಸ್’ ಎಂಬ ಪುಸ್ತಕದಲ್ಲಿ ಕಥೆಯ ರೂಪದಲ್ಲಿಯೂ ಸಹ ಬರೆದಿದ್ದರು.
ಮದರ್ ತೆರೆಸಾ ಕ್ಲಾಸ್ ವ್ಯಕ್ತಿ
ಕ್ಲಾಸ್ ವ್ಯಕ್ತಿಗಳೆಂದರೆ ಯಾರು ಎಂಬುದರ ಕುರಿತು ಮಾತಾಡಿದ ಸುಧಾ ಮೂರ್ತಿ, ಮದರ್ ತೆರೇಸಾ ಅವರ ಉದಾಹರಣೆಯನ್ನು ನೀಡಿದರು. ಆಕೆಯ ಸೇವಾಮನೋಭಾವ ಹಾಗೂ ಕೆಲಸಗಳನ್ನು ನೋಡಿದರೆ, ಆಕೆ ‘ಕ್ಲಾಸ್ ವ್ಯಕ್ತಿ’ ಎಂದೆನಿಸದಿರದು ಎಂದರು.
ಕಪಿಲ್ ಶರ್ಮಾ ಕಾಮಿಡಿಯಲ್ಲಿ ಕ್ಲಾಸ್
ಕಾರ್ಯಕ್ರಮದಲ್ಲಿ ನಿರೂಪಕ ಕಪಿಲ್ ಶರ್ಮಾ ಅವರನ್ನು ಹೊಗಳಿದ ಸುಧಾಮೂರ್ತಿ, “ಕಪಿಲ್ ಹಾಸ್ಯದಲ್ಲಿ 'ಕ್ಲಾಸ್'” ಎಂದರು. ಸುಧಾಮೂರ್ತಿ ಅವರು ಹಾಗೂ ಆಸ್ಕರ್ ವಿಜೇತೆ ಗುನ್ನೀತ್ ಹಾಗೂ ನಟಿ ರವಿನಾ ಟಂಡನ್ ಅವರೊಂದಿಗೆ ಕಪಿಲ್ ಶರ್ಮಾ ಅವರೊಂದಿಗೆ ಭಾಗವಹಿಸಿರುವ ಈ ಎಪಿಸೋಡ್ ಇದೇ ವಾರಾಂತ್ಯದಲ್ಲಿ ರಾತ್ರಿ 9.30 ಕ್ಕೆ ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ ನಲ್ಲಿ ಪ್ರಸಾರವಾಗಲಿದೆ.
ಇದನ್ನೂ ಓದಿ: Star Sports: ಐಪಿಎಲ್ ಶೋನಲ್ಲಿ ಹಾಸ್ಯನಟ ಮುನಾವರ್ ಫಾರುಕಿ ಭಾಗಿ, ಸ್ಟಾರ್ ಸ್ಪೋರ್ಟ್ಸ್ ಬಹಿಷ್ಕಾರಕ್ಕೆ ಒತ್ತಡ!
ಸುಧಾಮೂರ್ತಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳೆರಡರಲ್ಲೂ ಸಾಕಷ್ಟು ಪುಸ್ತಕಗಳನ್ನು ರಚಿಸಿದ್ದು, ಅದು ಭಾರತದ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಮಾತ್ರವಲ್ಲದೇ, ಇವರ ಕೃತಿಗಳು ಕನ್ನಡ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ. ಜೊತೆಗೆ, ಇವರ ‘ಡಾಲರ್ ಸೊಸೆ’ ಪುಸ್ತಕದ ವಸ್ತುವನ್ನು ‘ಡಾಲರ್ ಬಹು’ ಹೆಸರಿನಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಸಾಕಷ್ಟು ಪ್ರಸಿದ್ದಿ ಪಡೆದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ