Snowstorm: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭಾರೀ ಹಿಮಪಾತ: 22 ಜನ ಸಾವು

Pakistan: ರಾವಲ್ಪಿಂಡಿ ಜಿಲ್ಲೆಯ ಮುರ್ರಿಗೆ ಸಾವಿರಾರು ವಾಹನಗಳು ಪ್ರವೇಶಿಸಿದ್ದು, ಸದ್ಯ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಲಾಗಿದೆ. ರಸ್ತೆಗಳಲ್ಲಿ ಸಿಲುಕಿದ ಪ್ರವಾಸಿಗರು ಹಿಮಪಾತದಿಂದ ಹೊರಬರಲು ಅಸಹಾಯಕರಾಗಿದ್ದಾರೆ. ಸುಮಾರು 1,000 ಕಾರುಗಳು ಗಿರಿಧಾಮದಲ್ಲಿ ಸಿಲುಕಿಕೊಂಡಿವೆ

ಪಾಕಿಸ್ತಾನ ಹಿಮಪಾತ

ಪಾಕಿಸ್ತಾನ ಹಿಮಪಾತ

 • Share this:
  ಭಾರಿ ಹಿಮಪಾತದಿಂದಾಗಿ(Avalanche) ರಸ್ತೆಗಳು(Road) ಬಂದ್ ಆಗಿ ವಾಹನಗಳಲ್ಲೇ(Vehicles) ಹೆಪ್ಪುಗಟ್ಟಿದ ವಾತಾವರಣದಲ್ಲಿ(Weather) ಸಿಲುಕಿ ಹತ್ತು ಮಕ್ಕಳು(Childrens) ಸೇರಿದಂತೆ ಕನಿಷ್ಠ 22 ಜನರು ಮೃತಪಟ್ಟಿರುವ ಘಟನೆ ಪಾಕಿಸ್ತಾನದ(Pakistan) ಜನಪ್ರಿಯ ಗಿರಿಧಾಮ ಮುರ್ರಿಯಲ್ಲಿ ನಡೆದಿದೆ. ಅಲ್ಲದೆ ಹಿಮಪಾತದಿಂದಾಗಿ ಸ್ಥಳೀಯರು ಮತ್ತು ಪ್ರವಾಸಿಗರು(Tourist) ಎದುರಿಸುತ್ತಿರುವ ಸಂಕಷ್ಟ ಹಾಗೂ ಅನೇಕ ಸಾವುಗಳು ಸಂಭವಿಸಿದ ಕಾರಣ ಮುರ್ರೆಯಲ್ಲಿ ತುರ್ತು ಪರಿಸ್ಥಿತಿಯನ್ನು(Emergency) ಘೋಷಿಸಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ. ರಾವಲ್ಪಿಂಡಿ ಜಿಲ್ಲೆಯ ಮುರ್ರಿಗೆ ಸಾವಿರಾರು ವಾಹನಗಳು ಪ್ರವೇಶಿಸಿದ್ದು, ಸದ್ಯ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಲಾಗಿದೆ. ರಸ್ತೆಗಳಲ್ಲಿ ಸಿಲುಕಿದ ಪ್ರವಾಸಿಗರು ಹಿಮಪಾತದಿಂದ ಹೊರಬರಲು ಅಸಹಾಯಕರಾಗಿದ್ದಾರೆ. ಸುಮಾರು 1,000 ಕಾರುಗಳು ಗಿರಿಧಾಮದಲ್ಲಿ ಸಿಲುಕಿಕೊಂಡಿವೆ. ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ರಕ್ಷಣಾ ಕಾರ್ಯವನ್ನು ತ್ವರಿತಗೊಳಿಸಲು ಮತ್ತು ಸಿಕ್ಕಿಬಿದ್ದ ಪ್ರವಾಸಿಗರಿಗೆ ನೆರವು ನೀಡಲು ಸೂಚನೆಗಳನ್ನು ನೀಡಿದ್ದಾರೆ.

  ಇದನ್ನೂ ಓದಿ: ಅಟ್ಟಿಸಿಕೊಂಡು ಬಂದು ಕುರಿ ಜೊತೆ ಹಿಮಪರ್ವತದಿಂದ ಉರುಳಿದ ಚಿರತೆ.. ಭಯಾನಕ ದೃಶ್ಯ ಸೆರೆ!

  ತುರ್ತು ಪರಿಸ್ಥಿತಿ ಘೋಷಣೆ..

  ಸದ್ಯ ಹಿಮಪಾತದಲ್ಲಿ ಸಾವಿರಾರು ಜನರು ಸಿಲುಕಿರುವ ಕಾರಣ ಮುಂಜಾಗೃತಾ ಕ್ರಮವಾಗಿ ಪಾಕ್ ಪ್ರದೇಶದಲ್ಲಿರುವ ಪಂಜಾಬ್ ಸರ್ಕಾರವು ಆಸ್ಪತ್ರೆಗಳು, ಪೊಲೀಸ್ ಠಾಣೆಗಳು ಮತ್ತು ಆಡಳಿತ ಕಚೇರಿಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದೆ.

  ಇಸ್ಲಾಮಾಬಾದ್ ನ ಸಬ್ ಇನ್‌ಸ್ಪೆಕ್ಟರ್ ಕುಟುಂಬವು ಹಿಮಪಾತಕ್ಕೆ ಬಲಿ

  ಪಾರುಗಾಣಿಕಾ 1122 (ಪಾಕಿಸ್ತಾನದ ತುರ್ತು ಸೇವೆ) ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಹತ್ತು ಮಕ್ಕಳು ಸೇರಿದಂತೆ 22 ವ್ಯಕ್ತಿಗಳು ದುರಂತದಲ್ಲಿ ಸಾವನ್ನಪ್ಪಿದ್ದಾರೆ. ರಸ್ತೆಗಳು ಬ್ಲಾಕ್ ಆಗಿದ್ದರಿಂದ ಮತ್ತು ಜನರು ಗಂಟೆಗಳ ಕಾಲ ತಮ್ಮ ಕಾರುಗಳಲ್ಲಿ ಸಿಲುಕಿಕೊಂಡಿದ್ದರಿಂದ ಸಾವುಗಳು ಸಂಭವಿಸಿವೆ. ಅವರು ಹೋಟೆಲ್‌ಗಳು ಅಥವಾ ಯಾವುದೇ ಬೆಚ್ಚಗಿನ ಸ್ಥಳವನ್ನು ತಲುಪಲು ಸಾಧ್ಯವಾಗಲಿಲ್ಲ. ಮೃತರಲ್ಲಿ ಇಸ್ಲಾಮಾಬಾದ್ ಪೊಲೀಸ್‌ನ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಮತ್ತು ಅವರ ಕುಟುಂಬದ ಏಳು ಸದಸ್ಯರು ಸೇರಿದ್ದಾರೆ ಇಂದು ಮಾಹಿತಿ ನೀಡಿದೆ.

  ಸದ್ಯ ಇದುವರೆಗೆ ಗಿರಿಧಾಮದಲ್ಲಿ 32 ಇಂಚುಗಳಷ್ಟು ಹಿಮಪಾತ ದಾಖಲಾಗಿದೆ. ತಾಪಮಾನ -1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹಿಮಪಾತವನ್ನು ನೋಡಲು ಬಂದಿದ್ದ ಪ್ರವಾಸಿಗರಿಂದ ಗಿರಿಧಾಮ ಕಿಕ್ಕಿರಿದು ತುಂಬಿತ್ತು. ಇನ್ನು ಕಳೆದ ರಾತ್ರಿ ಮುರ್ರೆ ಮತ್ತು ಗಲಿಯತ್ ಜಿಲ್ಲೆಗಳಿಗೆ ಪ್ರವಾಸಿಗರು ಪ್ರವೇಶಿಸುವುದನ್ನು ಅಧಿಕಾರಿಗಳು ನಿಷೇಧಿಸಿದ್ದಾರೆ.

  ಪ್ರವಾಸಿಗರಿಗೆ ನೆರವು ನೀಡಿದ ಸ್ಥಳೀಯರು

  ಭಾರೀ ಹಿಮಪಾತ ದಿಂದ ತಮ್ಮ ವಾಹನಗಳಲ್ಲಿ ಸಿಲುಕಿರುವ ಪ್ರವಾಸಿಗರಿಗೆ ಮುರ್ರೆಯ ನಿವಾಸಿಗಳು ಆಹಾರ ಮತ್ತು ಹೊದಿಕೆಗಳನ್ನು ಒದಗಿಸಿದರು ಬಳಿಕ ಮುರ್ರೆಯ ಸ್ಥಳೀಯ ಆಡಳಿತ ಪ್ರವಾಸಿಗರ ನೆರವಿಗೆ ಬಂದರೂ ಈವರೆಗೂ ಸಂಪೂರ್ಣವಾಗಿ ಪ್ರವಾಸಿಗರನ್ನ ರಕ್ಷಣೆ ಮಾಡಲು ಆಗಿಲ್ಲ..

  ಪಾಕ್ ಸೇನೆಯಿಂದ ಪ್ರವಾಸಿಗರ ರಕ್ಷಣೆ ಕಾರ್ಯ..

  ಪಾಕಿಸ್ತಾನದ ಸಚಿವ ಶೇಖ್ ರಶೀದ್ ಅಹ್ಮದ್ ಅವರು ನೀಡಿರುವ ಮಾಹಿತಿಯ ಪ್ರಕಾರ ಕಳೆದ 15 ರಿಂದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಿರಿಧಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ.. ಇಂತಹ ವೇಳೆಯಲ್ಲಿ ಹಿಮಪಾತ ಉಂಟಾಗಿದೆ.. ಅಲ್ಲದೆ ಹಿಮಪಾತ ಸಂಭವಿಸುವ ಮುನ್ಸೂಚನೆಯನ್ನು ಡಿಸೆಂಬರ್ 31ರಂದು ನೀಡಲಾಗಿತ್ತು.. ಹೀಗಿದ್ದರೂ ಸಹ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮುರ್ರೆಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ಪಾಕ್ ಸೇನೆಯ ಐದು ತುಕಡಿಗಳು, ಹಾಗೂ ರೇಂಜರ್ಸ್ ಮತ್ತು ಫ್ರಾಂಟಿಯರ್ ಕಾರ್ಪ್ಸ್, ಸ್ಥಳೀಯ ಪೊಲೀಸರು ನಿಮ್ಮ ಪಾದದಲ್ಲಿ ಸಿಲುಕಿರುವ ಪ್ರವಾಸಿಗರ ರಕ್ಷಣೆ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

  ಇದನ್ನೂ ಓದಿ: ಎಲ್ಲಿ ನೋಡಿದರೂ ಬೆಳ್ಳನೆಯ ಹಿಮ, ಸುರಿಯುತ್ತಿರುವ ಮಳೆ; ಶಿಮ್ಲಾದಂತಾದ ನೊಯ್ಡಾ, ದೆಹಲಿ

  ಘಟನೆ ಬಗ್ಗೆ ಪಾಕ್ ಪ್ರಧಾನಿ ಆತಂಕ..

  ಇನ್ನು 22 ಜನರು ಬಲಿಯಾಗಿರುವ ಘಟನೆಯ ಬಗ್ಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಹಿಮಪಾತ ಮತ್ತು ಹವಾಮಾನದ ವೈಪರಿತ್ಯ ಪರಿಸ್ಥಿತಿಗಳನ್ನು ಪರಿಶೀಲಿಸದೆ ಜನರು ಗಿರಿಧಾಮಕ್ಕೆ ತೆರಳಿ ಈ ದುರಂತಕ್ಕೆ ಸಿಲುಕಿದ್ದಾರೆ.. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದರು ಸ್ಥಳೀಯ ಆಡಳಿತ ಸೂಕ್ತ ಕ್ರಮ ಕೈಗೊಂಡಿರಲಿಲ್ಲ.. ಹೀಗಾಗಿ ಇನ್ನು ಮುಂದೆ ಈ ರೀತಿಯ ದುರಂತಗಳು ಆಗದಂತೆ ತಡೆಗಟ್ಟಲು ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಮ್ರಾನ್ ಖಾನ್ ಹೇಳಿಕೆ ನೀಡಿದ್ದಾರೆ.
  Published by:ranjumbkgowda1 ranjumbkgowda1
  First published: