ತೃತೀಯ ಲಿಂಗಿಯಾಗಿ ಬದಲಾಗಿದ್ದಕ್ಕೆ ಕೆಲಸ ಕಳೆದುಕೊಂಡ ಡಾಕ್ಟರ್​; ದಿಕ್ಕುತೋಚದೆ ಭಿಕ್ಷಾಟನೆ ಮಾಡಿದ ವೈದ್ಯೆ

ಈ ಹಿಂದೆ ವರ್ಷಗಳ ಕಾಲ ಡಾಕ್ಟರ್​ ಆಗಿ ವೃತ್ತಿ ಸಲ್ಲಿಸುತ್ತಿದ್ದು, ಲಿಂಗ ಬದಲಾವಣೆ ಮಾಡಿಕೊಂಡ ಹಿನ್ನಲೆ ಆಸ್ಪತ್ರೆ ಸಿಬ್ಬಂದಿ ಈಕೆಯನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಚೆನ್ನೈ (ನ.24): ರಸ್ತೆಯಲ್ಲಿ ವಾಹನ  ಸವಾರರಿಗೆ ಹಣದ ಬೇಡಿಕೆ ಇಡುತ್ತಿದ್ದ ತೃತೀಯಲಿಂಗಿಗಳನ್ನು ಮಧುರೈ ಪೊಲೀಸರು ಬಂಧಿಸಿದ್ದರು. ಇದರಲ್ಲಿ ಒಬ್ಬ ತೃತೀಯ ಲಿಂಗಿಯ ವಿವರ ಕೇಳಿ ಪೊಲೀಸರೇ ಅಚ್ಚರಿಗೆ ಒಳಗಾಗಿದ್ದಾರೆ. ಕಾರಣ ಆಕೆ ಈ ವೈದ್ಯೆ ಪದವೀಧರ. ಈ ಹಿಂದೆ ವರ್ಷಗಳ ಕಾಲ ಡಾಕ್ಟರ್​ ಆಗಿ ವೃತ್ತಿ ಸಲ್ಲಿಸುತ್ತಿದ್ದು, ಲಿಂಗ ಬದಲಾವಣೆ ಮಾಡಿಕೊಂಡ ಹಿನ್ನಲೆ ಆಸ್ಪತ್ರೆ ಆಕೆಯನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ತೃತೀಯ ಲಿಂಗಿ ಹೇಳಿದ ಈ ವಿಷಯದ ಸತ್ಯಾಂಶವನ್ನು ತಿಳಿಯಲು ಪೊಲೀಸರು ವಿಚಾರಣೆ ನಡೆಸಿದ್ದು, ಈಕೆ 2018ರಲ್ಲಿ ಮಧುರೈ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಂ ಪದವಿ ಮುಗಿಸಿರುವುದು ಸ್ಪಷ್ಟವಾಗಿದೆ.

  ಈ ಕುರಿತು ಮಾತನಾಡಿದ ಪೊಲೀಸ್​ ಇನ್ಸ್​ಪೆಕ್ಟರ್​ ಜಿ ಕವಿತಾ, ಆಕೆ ತಾನು ವೈದ್ಯೆ ಎಂದಾಗ ನಾವು ನಂಬಲಿಲ್ಲ. ಈಕೆಯ ದಾಖಲಾತಿಗಳನ್ನು ಪರಿಶೀಲಿಸಿದೆವು. ಈ ಕುರಿತು ಕಾಲೇಜಿನಿಂದಲೂ ದೃಢೀಕರಣ ಪಡೆದವು. ಪುರುಷನಾಗಿ ವೈದ್ಯಕೀಯ ಶಿಕ್ಷಣವನ್ನು ಈ ತೃತೀಯ ಲಿಂಗಿ ಪಡೆದಿದ್ದಾರೆ. ಓದಿನಲ್ಲಿ ಅತ್ಯಂತ ಪ್ರತಿಭಾನ್ವಿತಯಾಗಿದ್ದರು. ಪದವಿ ಬಳಿಕ ಒಂದು ವರ್ಷ ನಗರದ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇದಾದ ಬಳಿಕ ಲಿಂಗ ಬದಲಾವಣೆ ಚಿಕಿತ್ಸೆಗೆ ಒಳಗಾಗಿದ್ದಾರೆ. ನಂತರ ಅವನು ಅವಳಾಗಿ ಬದಲಾಗಿದ್ದಾಳೆ. ಇದರ ಪರಿಣಾಮ ಆಕೆ ಕೆಲಸ ಕಳೆದುಕೊಂಡಿದ್ದಾಳೆ.

  ಇದನ್ನು ಓದಿ: ಕರ್ನಾಟಕದ ಮೊದಲ ತೃತೀಯ ಲಿಂಗಿ ವೈದ್ಯೆ; ಅವನು ಅವಳಾದ ಕಥೆ

  ಹುಡುಗನಾಗಿ ಪದವಿ, ಕೆಲಸ ಪಡೆದ ತೃತೀಯ ಲಿಂಗಿಯ ಪ್ರಮಾಣಪತ್ರಗಳು ಈಗ ಬದಲಾಗಬೇಕಿದೆ. ಈ ಪ್ರಮಾಣ ಪತ್ರ ಬದಲಾದರೆ ಮಾತ್ರ ಆಕೆ ಮತ್ತೆ ವೈದ್ಯೆಯಾಗಿ ಕಾರ್ಯನಿರ್ವಹಿಸಲು ಸಾಧ್ಯ. ಅಲ್ಲದೇ ಆಕೆ ಸ್ನಾತಕೋತ್ತರ ಪದವಿಯನ್ನು ಪಡೆಯಲು ಇಚ್ಛಿಸಿದ್ದಾಳೆ ಎಂದು ತೃತೀಯ ಲಿಂಗಿ ಭೇಟಿಯಾದ ಪೊಲೀಸ್​ ಇನ್ಸ್​ಪೆಕ್ಟರ್​ ಕವಿತಾ ತಿಳಿಸಿದ್ದಾರೆ.

  ಈಕೆಯ ಕಥೆ ಕೇಳಿದ ಬಳಿಕ ಮಧುರೈ ಮೆಡಿಕಲ್​ ಕಾಲೇಜಿನ ವೈದ್ಯರು ಕೆಲಸ ನೀಡಿ ಸಹಾಯಕ್ಕೆ ಮುಂದಾಗಿದ್ದಾರೆ. ನಮ್ಮ ಕಾಲೇಜಿನಲ್ಲಿಯೇ ಓದಿದ ವಿದ್ಯಾರ್ಥಿಗೆ ನಾವು ಸಹಾಯ ಮಾಡಲು ಸಿದ್ಧ. ಆತ ಆಕೆಯಾಗಿ ಲಿಂಗ ಬದಲಾವಣೆ ಮಾಡಿಕೊಂಡಿರುವ ವಿಷಯ ತಿಳಿಯಿತು . ಇದಾದ ಬಳಿಕ ನಡೆದ ಘಟನೆ ಕೂಡ ಬೇಸರ ತರಿಸಿತು. ಈ ಹಿನ್ನಲೆ ಆಕೆಗೆ ಹೌಸ್​ ಸರ್ಜನ್​ ಆಗಿ ಕೆಲಸ ನೀಡಲು ಸಿದ್ಧ ಎಂದು ಡೀನ್​ ಡಾ. ಸಂಗುಮಣಿ ತಿಳಿಸಿದ್ದಾರೆ.'

  ತೃತೀಯ ಲಿಂಗಿಗೆ ಹೊಸ ಗುರುತನ್ನು ಸಹಾಯ ಮಾಡಲು ಪೊಲೀಸ್​ ಇನ್ಸ್​ಪೆಕ್ಟರ್​ ಸಹಾಯ ಮಾಡಿದ್ದು, ಆಕೆಯ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ. ಮೊದಲು ಆಕೆ ದಾಖಲಾತಿಗಳಲ್ಲಿ ಹೆಸರುಗಳು ಬದಲಾವಣೆಯಾಗಬೇಕು ಎಂದಿದ್ದಾರೆ. ಇನ್ನು ತೃತೀಯ ಲಿಂಗಿ ವೈದ್ಯೆಗಾಗಿ ನಗರದಲ್ಲಿ ಒಂದು ಕ್ಲಿನಿಕ್​ ನಿರ್ಮಾಣ ಮಾಡಿಕೊಡಲು ಸಹಾಯ ಮಾಡಿದ್ದು, ಆಕೆಗೆ ಉಡುಗೊರೆಯಾಗಿ ಸ್ಟೆತೋಸ್ಕೋಪ್​ ನೀಡಿದ್ದಾರೆ
  Published by:Seema R
  First published: