HOME » NEWS » National-international » TRANSFER THE MPS FUNDS TO THE ACCOUNTS OF THE MIGRANT WORKERS BENGAL GOVERNMENT INSISTENCE TO THE CENTER MAK

ಸಂಸದರ ನಿಧಿಯನ್ನು ವಲಸೆ ಕಾರ್ಮಿಕರ ಖಾತೆಗಳಿಗೆ ವರ್ಗಾಯಿಸಿ, ಆಂಫಾನ್ ಪರಿಹಾರ ನೀಡಿ; ಕೇಂದ್ರಕ್ಕೆ ಬಂಗಾಳದ ಒತ್ತಾಯ

ಆಂಫಾನ್ ಚಂಡಮಾರುತ‌ದಿಂದ ಉಂಟಾದ ಒಟ್ಟು ಹಾನಿ 1,02,000 ಕೋಟಿ ಎಂದು ಅಂದಾಜಿಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಈವರೆಗೆ 1 ಸಾವಿರ ಕೋಟಿ ರೂ ಮಾತ್ರ ನೀಡಿದೆ. ಉಳಿದ ಒಂದು ಲಕ್ಷದ ಒಂದು ಸಾವಿರ ಕೋಟಿಯ ಕತೆಯೇನು? ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರಿಯೆನ್ ಪ್ರಶ್ನಿಸಿದ್ದಾರೆ.

MAshok Kumar | news18-kannada
Updated:June 8, 2020, 6:18 PM IST
ಸಂಸದರ ನಿಧಿಯನ್ನು ವಲಸೆ ಕಾರ್ಮಿಕರ ಖಾತೆಗಳಿಗೆ ವರ್ಗಾಯಿಸಿ, ಆಂಫಾನ್ ಪರಿಹಾರ ನೀಡಿ; ಕೇಂದ್ರಕ್ಕೆ ಬಂಗಾಳದ ಒತ್ತಾಯ
ತೃಣಮೂಲ ಕಾಂಗ್ರೆಸ್‌ ಸಂಸದ ಡೆರೆಕ್ ಒ’ಬ್ರಿಯೆನ್
  • Share this:
ಕೋಲ್ಕತ್ತಾ (ಜೂನ್ 08); ವಲಸೆ ಕಾರ್ಮಿಕರ ಸಮಸ್ಯೆಗೆ ಮಿಡಿದಿರುವ ಪಶ್ಚಿಮ ಬಂಗಾಳ ಸರ್ಕಾರ ತನ್ನ ಪಕ್ಷದ ಸಂಸದರ ನಿಧಿ (ಎಂಪಿ ಲಾಡ್‌) ಹಣವನ್ನು ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಿ, ಆ ಮೂಲಕ ಸಂಗ್ರಗವಾಗುವ ಹಣವನ್ನು ನೇರವಾಗಿ ವಲಸೆ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಅಲ್ಲದೆ, ಆಂಫಾನ್ ಚಂಡಮಾರುತಕ್ಕೆ ಕೇಂದ್ರದಿಂದ ಬರಬೇಕಿರುವ ಪರಿಹಾರದ ಹಣವನ್ನೂ ಶೀಘ್ರದಲ್ಲಿ ನೀಡುವಂತೆ ಮನವಿ ಮಾಡಿದೆ.

ತೃಣಮೂಲ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸಂಸದ ಡೆರೆಕ್ ಒ’ಬ್ರಿಯೆನ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, "ಪಶ್ಚಿಮ ಬಂಗಾಳಕ್ಕೆ ರೂ 53 ಸಾವಿರ ಕೋಟಿ ಕೇಂದ್ರದ ಹಿಂದಿನ ಬಾಕಿ ಇದೆ. ಅಲ್ಲದೆ, ಕೇಂದ್ರವು ಎಂಪಿಎಲ್ಎಡಿಎಸ್ ಹಣವನ್ನು ಎರಡು ವರ್ಷಗಳ ಕಾಲ ನಿಲ್ಲಿಸಿದೆ, ಇದರಲ್ಲಿ ಸುಮಾರು 8,000 ಕೋಟಿ ಹಣ ಉಳಿತಾಯವಾಗಿದೆ. ಅಸಂಘಟಿತ ವಲಯದ 80 ಲಕ್ಷ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಈ ಹಣದ ಮೂಲಕ ತಲಾ ರೂ.10,000 ಹಾಕಿ" ಎಂದು ಅವರು ಕೇಳಿಕೊಂಡಿದ್ದಾರೆ.

ಅಲ್ಲದೆ, "ಆಂಫಾನ್ ಚಂಡಮಾರುತ‌ದಿಂದ ಉಂಟಾದ ಒಟ್ಟು ಹಾನಿ 1,02,000 ಕೋಟಿ ಎಂದು ಅಂದಾಜಿಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಈವರೆಗೆ  1 ಸಾವಿರ ಕೋಟಿ ರೂ ಮಾತ್ರ ನೀಡಿದೆ. ಉಳಿದ ಒಂದು ಲಕ್ಷದ ಒಂದು ಸಾವಿರ ಕೋಟಿಯ ಕತೆಯೇನು?

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ರಾಜ್ಯವು 1,200 ಕೋಟಿ ಖರ್ಚು ಮಾಡಿದೆ. ಕೇಂದ್ರವು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ 144 ಕೋಟಿ ಮತ್ತು 250 ಕೋಟಿ ಎಸ್‌ಡಿಆರ್‌ಎಫ್ ಅಡಿಯಲ್ಲಿ ನೀಡಿದೆ. ಉಳಿದ ರೂ 806 ಕೋಟಿ ಹಣವನ್ನು ಕೇಂದ್ರ ಯಾವಾಗ ಬಿಡುಗಡೆ ಮಾಡುತ್ತೆ?” ಎಂದು ಡೆರೆಕ್ ಒ’ಬ್ರೇನ್ ಕೇಂದ್ರ ಸರ್ಕಾರದ ಎದುರು ಸಾಲು ಸಾಲು ಪ್ರಶ್ನೆಗಳನ್ನಿಟ್ಟಿದ್ದಾರೆ.

ಕೇಂದ್ರವು ಘೋಷಿಸಿರುವ ಲಾಕ್‌ಡೌನ್‌ ವಿಶೇಷ ಪ್ಯಾಕೇಜ್‌ ಕುರಿತು ಕಿಡಿಕಾರಿರು ಅವರು, "ಆರ್ಥಿಕ ಉತ್ತೇಜಕ ಪ್ಯಾಕೇಜ್ “ಖಾಲಿ” ಹಾಗೂ ಸುಧಾರಣೆಗಳು “ಟೊಳ್ಳು” ಎಂದು ಆರೋಪಿಸಿದ್ದಾರೆ. ಅಲ್ಲದೆ, ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (ಎಫ್‌ಆರ್‌ಬಿಎಂ) ಮಿತಿಯನ್ನು ಶೇಕಡಾ 3 ರಿಂದ 5 ಕ್ಕೆ ಏರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದು ತಪ್ಪ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಘೋಷಿಸಿದ ಪ್ಯಾಕೇಜ್‌ನಲ್ಲಿ ಅಸಂಘಟಿತ ವಲಯಕ್ಕೆ ಯಾವುದೇ ನೆರವು ನೀಡಿಲ್ಲ. ಹೀಗಾಗಿ ಎಂಪಿ ಲಾಡ್‌ನಿಂದ ಸಂಗ್ರಹವಾದ ಹಣವನ್ನಾದರೂ ವಲಸೆ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಒದಿ : COVID-19 | ಕೊರೋನಾ ಗೆದ್ದ ನ್ಯೂಜಿಲೆಂಡ್; ಕಿವೀಸ್ ನಾಡಲ್ಲಿ ಈಗ ಶೂನ್ಯ ಕೇಸ್
First published: June 8, 2020, 6:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories