Fuel for India: Meta 2ನೇ ಆವೃತ್ತಿಯ ಫ್ಯುಯಲ್ ಫಾರ್ ಇಂಡಿಯಾ: ಮಾರ್ನೆ ಲೆವಿನ್ ಜೊತೆ ಆಕಾಶ್​​ & ಇಶಾ ಅಂಬಾನಿ ಮಾತುಕತೆ

Meta: ಮೆಟಾದ 2ನೇ ಆವೃತ್ತಿಯ ಫ್ಯುಯಲ್ ಫಾರ್ ಇಂಡಿಯಾ-2 ಕಾರ್ಯಕ್ರಮದಲ್ಲಿ ರಿಲಯನ್ಸ್ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ನಿರ್ದೇಶಕರಾದ ಆಕಾಶ್ ಮತ್ತು ಇಶಾ ಅಂಬಾನಿ ಕೂಡ ಭಾಗಿಯಾಗಿದ್ದು, ಅವರೊಂದಿಗೆ ಮೆಟಾದ ಮುಖ್ಯ ವ್ಯಾಪಾರ ಅಧಿಕಾರಿ ಮಾರ್ನೆ ಲೆವಿನ್ ಅವರು ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ

ಫ್ಯುಯಲ್ ಫಾರ್ ಇಂಡಿಯಾ 2

ಫ್ಯುಯಲ್ ಫಾರ್ ಇಂಡಿಯಾ 2

 • Share this:
  ಮೆಟಾ(Meta) ಎಂದು ಹೆಸರು ಬದಲಾವಣೆ ಮಾಡಿಕೊಂಡಿರುವ ಫೇಸ್ ಬುಕ್(Face Book) ತನ್ನ 2ನೇ ಆವೃತ್ತಿಯ ಫ್ಯುಯಲ್ ಫಾರ್ ಇಂಡಿಯಾ-2(Fuel for India 2021) ಕಾರ್ಯಕ್ರಮವನ್ನ ಇಂದು ಆಯೋಜನೆ ಮಾಡಿದೆ.. ಡಿಜಿಟಲ್ ಫ್ಲಾಟ್ ಫಾರ್ಮ್(Digital Platform), ಉದ್ಯಮಿಗಳು, ಸಣ್ಣ ವ್ಯಾಪಾರಿಗಳೊಂದಿಗೆ ಚರ್ಚೆ ನಡೆಸುವ ಮೂಲಕ ದೇಶದಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳ ಕುರಿತು ಚರ್ಚೆ ನಡೆಸಲಾಗಿದೆ. ಮೆಟಾದ 2ನೇ ಆವೃತ್ತಿಯ ಫ್ಯುಯಲ್ ಫಾರ್ ಇಂಡಿಯಾ-2 ಕಾರ್ಯಕ್ರಮದಲ್ಲಿ ರಿಲಯನ್ಸ್ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ನಿರ್ದೇಶಕರಾದ ಆಕಾಶ್ ಮತ್ತು ಇಶಾ ಅಂಬಾನಿ ಕೂಡ ಭಾಗಿಯಾಗಿದ್ದು, ಅವರೊಂದಿಗೆ ಮೆಟಾದ ಮುಖ್ಯ ವ್ಯಾಪಾರ ಅಧಿಕಾರಿ ಮಾರ್ನೆ ಲೆವಿನ್ ಅವರು ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

  ಮೆಟಾದ ಮುಖ್ಯ ವ್ಯಾಪಾರ ಅಧಿಕಾರಿ ಮಾರ್ನೆ ಲೆವಿನ್ ರಿಲಯನ್ಸ್ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ನಿರ್ದೇಶಕರಾದ ಆಕಾಶ್ ಮತ್ತು ಇಶಾ ಅಂಬಾನಿ ಅವರ ಜೊತೆಗೆ ನಡೆದ ಸಂಪೂರ್ಣ ಸಂಭಾಷಣೆಯ ಮಾಹಿತಿ ಇಲ್ಲಿದೆ.

  ಮಾರ್ನೆ ಲೆವಿನ್: ರಿಲಯನ್ಸ್ ಜಿಯೋ ಭಾರತಕ್ಕೆ ನೀಡಿದ ಅನೇಕ ಕೊಡುಗೆಗಳಲ್ಲಿ, ಇದು ಇಂದು ಲಕ್ಷಾಂತರ ಭಾರತೀಯರಿಗೆ ಕೈಗೆಟುಕುವ ಇಂಟರ್ನೆಟ್ ಪ್ರವೇಶವನ್ನು ಲಭ್ಯವಾಗುವಂತೆ ಮಾಡಿರುವುದು ನಿಜಕ್ಕೂ ಕ್ರಾಂತಿಕಾರಿ ನಡೆ..ಪ್ರಸ್ತುತ ಭಾರತದಲ್ಲಿ ಚಿಲ್ಲರೆ ವ್ಯಾಪಾರಿಗಳ ಭವಿಷ್ಯ ಹೇಗಿದೆ.. ಮತ್ತು ಸಾಂಕ್ರಾಮಿಕ ರೋಗದ ಹಾವಳಿಯ ಮಧ್ಯೆಯೇ ಹೇಗೆ ವ್ಯಾಪಾರದ ಪಾಲುದಾರಿಕೆಯು ಚಿಲ್ಲರೆ ವ್ಯಾಪಾರಿಗನ್ನ ತಲುಪಲು ಸಾಧ್ಯವಾಯಿತು..?

  ಇಶಾ: ಸಣ್ಣ ಉದ್ಯಮಗಳು ನಮ್ಮ ದೇಶದ ಆರ್ಥಿಕ ಬೆನ್ನೆಲುಬಿನ ತಳಹದಿ ಎಂದು ನಾವು ನಂಬುತ್ತೇವೆ. ಸಣ್ಣ ವ್ಯಾಪಾರಿ ಅಂಗಡಿಗಳು, ಚಿಲ್ಲರೆ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಗಳು ತಮ್ಮ ಭೌತಿಕ ಇಟ್ಟಿಗೆ ಮತ್ತು ಗಾರೆ ಅಂಗಡಿಗಳಲ್ಲಿ ಡಿಜಿಟಲ್ ಕ್ರಾಂತಿಯಾಗಲು ಸಾಂಕ್ರಾಮಿಕ ರೋಗ ಕಾರಣವಾಗಿದೆ. ಪ್ರಸ್ತುತ ೪೦೦ ಮಿಲಿಯನ್ ಗಿಂತ ಅಧಿಕ ಜನರು ವಾಟ್ಸಪ್ ಫ್ಲಾಟ್ ಫಾರ್ಮ್ ಮೂಲಕ ಇಂದು ಡಿಜಿಟಲ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ.ಹೀಗಾಗಿಯೇ ಜಿಯೋ ಚಂದಾದಾರು ಆನ್ ಲೈನ್ ಮೂಲಕ ಡಿಜಿಟಲ್-ಕಾಮರ್ಸ್ ವ್ಯವಹಾರಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿದೆ.

  ಆಕಾಶ್: ಕೆಲವು ಅಂಕಿ ಅಂಶಗಳ ಪ್ರಕಾರ ನಾವು ಪ್ರಸ್ತುತ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಚಿಲ್ಲರೆ ವ್ಯಾಪಾರಿಗಳನ್ನು ಹೊಂದಿದ್ದೇವೆ ಮತ್ತು ಅದು ಪ್ರತಿನಿತ್ಯ ಹೆಚ್ಚುತ್ತಲೆ ಇದೆ. Jio Mart ನ ಸಾಟಿಯಿಲ್ಲದ ನೆಟ್‌ವರ್ಕ್ - ಆನ್‌ಲೈನ್ ಮತ್ತು ಆಫ್‌ಲೈನ್ ಚಿಲ್ಲರೆ ವ್ಯಾಪಾರದಿಂದ ಇದು ಸಾಧ್ಯವಾಗಿದೆ.Meta ಜೊತೆಗಿನ ನಮ್ಮ ಪಾಲುದಾರಿಕೆ ಮತ್ತು WhatsApp ತಂಡದ ಸಹಯೋಗದೊಂದಿಗೆ ಇದು ಸಾಧ್ಯವಾಗಿದೆ. ಸದ್ಯ ನಮ್ಮ ಬಳಕೆದಾರರು WhatsApp ಮೂಲಕ ಜಿಯೋ ಮಾರ್ಟ್ ನಿಂದ ಶಾಂಪಿಗ್ ಮಾಡುತ್ತಿದ್ದು, ಇದು ಚಿಲ್ಲರೆ ವ್ಯಾಪಾರಿಗಳಿಗೆ ಸ್ಟಾಕ್ ವಿಂಗಡಣೆ ಮಾಡಲು ಸಹಾಯಕಾವಾಗಿದೆ.

  ಮಾರ್ನೆ ಲೆವಿನ್: ಸಣ್ಣ ವ್ಯಾಪಾರಿಗಳು - ಅಥವಾ ಕಿರಣಿ ಅಂಗಡಿಯವರು ಶತಮಾನಗಳಿಂದಲೂ ಭಾರತದ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ. ಈಗ ಅವರಲ್ಲಿ ಹೆಚ್ಚು ಹೆಚ್ಚು ಇ-ಕಾಮರ್ಸ್ ಜಗತ್ತಿಗೆ ಸೇರುತ್ತಿದ್ದಂತೆ, ಗ್ರಾಹಕರಿಗೆ ಶಾಪಿಂಗ್ ಅನುಭವ ಹೇಗೆ ಬದಲಾಗಿದೆ?

  ಆಕಾಶ್: ಹೊಸ ಟ್ಯಾಪ್ ಮತ್ತು ಚಾಟ್ (Tap And Chat) ಆಯ್ಕೆಯ ಮೂಲಕ Jio Mart ನಿಂದ ದಿನಸಿ ವಸ್ತುಗಳನ್ನು ಆರ್ಡರ್ ಮಾಡುವ ಹೊಸ ಪ್ರಕ್ರಿಯೆ ಹಾಗೂ ಜಿಯೋ ಮತ್ತು ವಾಟ್ಸಪ್ ಪಾಲುದಾರಿಕೆಯ ಕುರಿತು ಮಾತನಾಡಿದ ಆಕಾಶ್ ಅಂಬಾನಿ, ವಾಟ್ಸಪ್ ಮೂಲಕ ಜಿಯೋ ಮಾರ್ಟ್ ನಲ್ಲಿ ಶಾಪಿಂಗ್ ಮಾಡುವುದು ಸಂಭಾಷಣೆಯ ಸ್ವರೂಪದಾಗಿದ್ದು, ಅತ್ಯಂತ ಸರಳವಾಗಿ, ಬೇಕಾದ ವಸ್ತುಗಳನ್ನ ಶಾಪಿಂಗ್ ಮಾಡಬಹುದಾಗಿದೆ ಎಂದು ಹೇಳಿದ್ರು. ಇನ್ನೂ, ಜಿಯೋ ಮಾರ್ಟ್ ನಲ್ಲಿ ಖರೀದಿ ಮಾಡಲು ವಾಟ್ಸಪ್ ಬಳಕೆ ಮಾಡುವುದು ಅತ್ಯಂತ ಸರಳವಾಗಿದ್ದು, ಡಿಜಿಟಲ್ ಯುಗದ ಹೊಸ ಕ್ರಾಂತಿಯಾಗಿದೆ ಎಂದು ತಿಳಿಸಿದ್ರು.

  ಇದನ್ನೂ ಓದಿ: ಡೌನ್​ಲೋಡ್​ ವೇಗದಲ್ಲಿ ಜಿಯೋಗೆ ಅಗ್ರಸ್ಥಾನ!

  ಇಶಾ: ಗ್ರಾಹಕರು ಜಿಯೋ ಮಾರ್ಟ್ ನಲ್ಲಿ ತಮ್ಮ ದೈನಂದಿನ ಜೀವನಕ್ಕೆ ಅಗತ್ಯವಿರುವ ಬ್ರೆಡ್, ಬೆಣ್ಣೆ, ತರಕಾರಿಗಳು, ಪಾನೀಯಗಳನ್ನ ಜಿಯೋ ಮಾರ್ಟ್ ಮೂಲಕವೇ ಆರ್ಡರ್ ಮಾಡಬಹುದಾಗಿದೆ.

  ಮಾರ್ನೆ ಲೆವಿನ್: ಜಿಯೋ ಮೊಬೈಲ್ ಜನರಿಗೆ ಕೈಗೆಟುಕುವ ಡೇಟಾ ಯೋಜನೆಗಳನ್ನು ತಂದಿದೆ. ಭಾರತದಲ್ಲಿ ಬಹುಪಾಲು ಮೊಬೈಲ್ ಫೋನ್ ಬಳಕೆದಾರರು ಪ್ರಿ-ಪೇಯ್ಡ್ ರೀಚಾರ್ಜ್ ಫಾರ್ಮ್ಯಾಟ್ ಅನ್ನು ಹೊಂದಿದ್ದಾರೆ, ಇದರರ್ಥ ಜನರು ತಮ್ಮ ಫೋನ್ ಬಳಕೆಗೆ ಪಾವತಿಸುತ್ತಾರೆ. Jio ಮೊಬೈಲ್ ರೀಚಾರ್ಜ್ WhatsApp ಮೂಲಕ ಕಾರ್ಯನಿರ್ವಹಿಸುತ್ತಿದೆ ಮತ್ತು ಜನರಿಗೆ ಆ ಅನುಭವವನ್ನು ಹೇಗೆ ಸುಲಭಗೊಳಿಸಿದೆ..?

  ಆಕಾಶ್: ಗ್ರಾಹಕರ ಅನುಭವವನ್ನ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. WhatsApp ನಲ್ಲಿ Jio, ಇದು ಸಂಪೂರ್ಣ ಪ್ರಿಪೇಯ್ಡ್ ರೀಚಾರ್ಜ್ ಪ್ರಕ್ರಿಯೆ ಸರಳಗೊಳಿಸಿರುವುದು ಗ್ರಾಹಕರಿಗೆ ಈ ಹಿಂದೆ ಎಂದು ಸಿಗದ ಅನುಭವವನ್ನ ನೀಡಿದೆ.

  ಮಾರ್ನೆ ಲೆವಿನ್: ಪ್ರಸ್ತುತ WhatsApp ಮೂಲಕ ಪಾವತಿಗಳು ಈಗ UPI ಪ್ಲಾಟ್‌ಫಾರ್ಮ್‌ನಲ್ಲಿ ನಡೆಯುತ್ತಿದ್ದು, Jio Mobile ರೀಚಾರ್ಜ್ ಪ್ರಕ್ರಿಯೆಯು ಇದರಿಂದ ಮತ್ತಷ್ಟು ಸರಳವಾಗಬಹುದೇ..?

  ಇದನ್ನೂ ಓದಿ: ದಿನಕ್ಕೆ 5GB ಡೇಟಾ, ಅನಿಯಮಿತ ಕರೆ ಸೌಲಭ್ಯ.. BSNL​ನ ಈ​ ಪ್ರಿಪೇಯ್ಡ್​ ಪ್ಲಾನ್​ ರೀಚಾರ್ಜ್​ ಮಾಡಿ ನೋಡಿ

  ಇಶಾ: Jio ರೀಚಾರ್ಜ್ ಸುಲುಭವಾದ ಪ್ರಕ್ರಿಯೆ ಆಗಿದ್ದು, ಸುಲುಭವಾಗಿ ಪಾವತಿ ಮಾಡುವ ವಿಧಾನವಾಗಿದೆ.

  ಆಕಾಶ್: ವಾಟ್ಸಾಪ್ ಮೂಲಕ ರೀಚಾರ್ಜ್‌ಗಾಗಿ ಎಂಡ್-ಟು-ಎಂಡ್ ಅನುಭವ ಮತ್ತು ಪಾವತಿ ಮಾಡುವುದರಿಂದ ಲಕ್ಷಾಂತರ ಜಿಯೋ ಚಂದಾದಾರು ಡಿಜಿಟಲ್ ಪ್ಲಾಟ್ ಫಾರ್ಮ್ ಬಳಕೆ ಸರಳವಾಗಿದೆ
  Published by:ranjumbkgowda1 ranjumbkgowda1
  First published: