Indian Railway: ರೈಲು ಪ್ರಯಾಣಿಕರೇ ಗಮನಿಸಿ; ಇಂದಿನಿಂದ ಹಲವು ರೈಲುಗಳ ಮಾರ್ಗ ಬದಲಾವಣೆ..!

ಕೆಎಸ್ಆರ್ ಬೆಂಗಳೂರು - ಎರ್ನಾಕುಲಂ ಜಂಕ್ಷನ್ - ಪ್ರತಿನಿತ್ಯ ವಿಶೇಷ ರೈಲು ( 02677 ) - ಕೆಎಸ್ಆರ್ ಬೆಂಗಳೂರಿನಿಂದ ಹೊರಟು ತಿರುಪುರ್ ಮತ್ತು ಪಾಲಕ್ಕಾಡ್ ಜಂಕ್ಷನ್ ನಡುವೆ ಮಾರ್ಗ ಬದಲಾಯಿಸಲಿದ್ದು, ಇರುಗುರ್ ಜಂಕ್ಷನ್ - ಪೊಡನೂರ್ ಜಂಕ್ಷನ್ ಮೂಲಕ ಮಾರ್ಚ್ 15 ಮತ್ತು ಮಾರ್ಚ್ 17 ರಂದು ಚಲಿಸಲಿದೆ.

ಭಾರತೀಯ ರೈಲ್ವೆ.

ಭಾರತೀಯ ರೈಲ್ವೆ.

  • Share this:
    ನವದೆಹಲಿ(ಮಾ.14): ಭಾರತೀಯ ರೈಲ್ವೆ ಹಲವಾರು ವಿಭಾಗಗಳು ಮತ್ತು ವಲಯಗಳಲ್ಲಿ ಮೂಲಸೌಕರ್ಯ ಮತ್ತು ನಿರ್ವಹಣಾ ಕಾರ್ಯಗಳನ್ನು ವೇಗಗೊಳಿಸಲು ಸಂಚಾರ ಮತ್ತು ವಿದ್ಯುತ್ ಸ್ಥಾವರಗಳನ್ನು ಕೈಗೊಳ್ಳಲಿದೆ. ಈ ಹಿನ್ನೆಲೆ ಕರ್ನಾಟಕ,ತಮಿಳುನಾಡು ಮತ್ತು ಕೇರಳ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಗೆ ಪ್ರಯಾಣಿಸಲು ನಿರ್ಧರಿಸಿದ ರೈಲುಗಳ ಸಂಚಾರ ವ್ಯತ್ಯಯವಾಗಲಿದ್ದು, ಹಲವು ರೈಲುಗಳ ಮಾರ್ಗ ಬದಲಾವಣೆ ಆಗಲಿದೆ. ಈ ಹಿನ್ನೆಲೆ  ಇಂದಿನಿಂದ ಮಾರ್ಚ್‌ ತಿಂಗಳಾಂತ್ಯದವರೆಗೂ ಹಲವು ದಿನಗಳ ಕಾಲ ಹಲವು ರೈಲುಗಳ ಮಾರ್ಗ ಬದಲಾವಣೆ ಆಗಲಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಸಲು ಯೋಜಿಸಿರುವವರು ಮಾರ್ಗ ಬದಲಾಗಲಿರುವ ರೈಲುಗಳ ಪಟ್ಟಿಯನ್ನು ಪರಿಶೀಲಿಸಬಹುದು.

    ಕೆಎಸ್ಆರ್ ಬೆಂಗಳೂರು - ಎರ್ನಾಕುಲಂ ಜಂಕ್ಷನ್ - ಪ್ರತಿನಿತ್ಯ ವಿಶೇಷ ರೈಲು ( 02677 ) - ಕೆಎಸ್ಆರ್ ಬೆಂಗಳೂರಿನಿಂದ ಹೊರಟು ತಿರುಪುರ್ ಮತ್ತು ಪಾಲಕ್ಕಾಡ್ ಜಂಕ್ಷನ್ ನಡುವೆ ಮಾರ್ಗ ಬದಲಾಯಿಸಲಿದ್ದು, ಇರುಗುರ್ ಜಂಕ್ಷನ್ - ಪೊಡನೂರ್ ಜಂಕ್ಷನ್ ಮೂಲಕ ಮಾರ್ಚ್ 15 ಮತ್ತು ಮಾರ್ಚ್ 17 ರಂದು ಚಲಿಸಲಿದೆ.

    ಅದೇ ರೀತಿ ಮಾರ್ಚ್ 15 ಮತ್ತು ಮಾರ್ಚ್ 17 ರಂದು ಎರ್ನಾಕುಲಂ ಜಂಕ್ಷನ್‌ನಿಂದ ಹೊರಡುವ ಎರ್ನಾಕುಲಂ ಜಂಕ್ಷನ್ - ಕೆಎಸ್ಆರ್ ಬೆಂಗಳೂರು ಪ್ರತಿನಿತ್ಯ ವಿಶೇಷ ರೈಲು (02678) ಕೂಡ ಅದೇ ಮಾರ್ಗಗಳಲ್ಲಿ ರೈಲಿನ ಮಾರ್ಗ‌ ಬದಲಾಗಲಿದೆ.

    ಇನ್ನು, ಧನಬಾದ್‌ನಿಂದ ಹೊರಡಲಿರುವ ಧನಬಾದ್‌ ಜಂಕ್ಷನ್ - ಅಲಪ್ಪುಳ ಪ್ರತಿನಿತ್ಯ ವಿಶೇಷ ರೈಲು (03351) - ತಿರುಪುರ್ ಮತ್ತು ಪಾಲಕ್ಕಾಡ್ ಜಂಕ್ಷನ್ ನಡುವೆ ಮಾರ್ಚ್ 13 ಮತ್ತು ಮಾರ್ಚ್ 15, 2021 ರಂದು ಮಾರ್ಗ ಬದಲಿಸಲಿದ್ದು, ಇರುಗುರ್ ಜಂಕ್ಷನ್ ಮತ್ತು ಪೊಡನೂರ್ ಜಂಕ್ಷನ್ ಮೂಲಕ ಓಡಿಸಲಾಗುವುದು. ಇದೇ ರೀತಿ, ಮಾರ್ಚ್ 15 ಮತ್ತು ಮಾರ್ಚ್ 17 ರಂದು ಅಲಪ್ಪುಳದಿಂದ ಧನಬಾದ್‌ಗೆ ಹೊರಡುವ (03352) ಅಲಪ್ಪುಳ- ಧನಬಾದ್‌ ಪ್ರತಿನಿತ್ಯ ವಿಶೇಷ ರೈಲು ಸಹ ಅದೇ ಮಾರ್ಗದ ಮೂಲಕ ಬದಲಾವಣೆಯಾಗಲಿದೆ.

    ಅಲ್ಲದೆ, ನವದೆಹಲಿಯಿಂದ ತಿರುವನಂತಪುರಂಗೆ ಹೊರಡುವ ಸೆಂಟ್ರಲ್‌ ಡೈಲಿ ಸೂಪರ್‌ಫಾಸ್ಟ್ ಸ್ಪೆಷಲ್ ರೈಲು (02626) ಸಹ ತಿರುಪುರ್ ಮತ್ತು ಪಾಲಕ್ಕಾಡ್ ಜಂಕ್ಷನ್ ನಡುವೆ ಮಾರ್ಚ್ 13 ಮತ್ತು ಮಾರ್ಚ್ 15 ರಂದು ಇರುಗುರ್ ಜಂಕ್ಷನ್ - ಪೊಡನೂರ್ ಜಂಕ್ಷನ್ ಮೂಲಕ ಚಲಿಸಲಿದೆ.

    ಇದೇ ರೀತಿ, ಉತ್ತರ ರಾಜ್ಯಗಳಿಂದ ತಮಿಳುನಾಡಿಗೆ ತೆರಳುವ ವಿಶೇಷ ರೈಲುಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ಥಾಣೆ ಮತ್ತು ಕರೂರ್ ನಡುವೆ ರೈಲು ಮಾರ್ಗ ಬದಲಾಯಿಸಲಿದ್ದು, ನಿಗದಿತ ಹೆಚ್ಚುವರಿ ನಿಲ್ದಾಣಗಳ ಮೂಲಕ ಚಲಿಸುತ್ತದೆ.

    ಅತೀ ಹೆಚ್ಚು ಟ್ಯಾಟೂ ಹಾಕಿಸಿಕೊಂಡಿರುವ ಜರ್ಮನಿಯ ವೃದ್ಧ; ಮ್ಯಾಗ್ನೆಟೋ ಎಂಬ ಹೆಗ್ಗಳಿಕೆಗೆ ಪಾತ್ರ

    1) ಮುಂಬೈ ಸಿಎಸ್‌ಎಂಟಿ - ನಾಗರ್‌ಕೋಯಿಲ್ ಜಂಕ್ಷನ್‌ ವಿಶೇಷ ರೈಲು ( 06339) - ಮಾರ್ಚ್ 13, 16, 17, 18, 20, 23, 25, 27, 30 ಮತ್ತು 31 ರಂದು ಥಾಣೆ ಜಂಕ್ಷನ್ ಮತ್ತು ಕರೂರ್ ಜಂಕ್ಷನ್ ನಡುವೆ ರೈಲು ಮಾರ್ಗ ಬದಲಾಗಲಿದ್ದು, ಪನ್ವೆಲ್ ಜಂಕ್ಷನ್, ರತ್ನಗಿರಿ, ಮಡ್ಗಾಂವ್ ಜಂಕ್ಷನ್, ಮಂಗಳೂರು ಜಂಕ್ಷನ್, ಶೋರನೂರ್ ಜಂಕ್ಷನ್ ಮತ್ತು ಈರೋಡ್ ಜಂಕ್ಷನ್ ಮೂಲಕ ಚಲಿಸಲಿದೆ.

    2) ಮುಂಬೈ ಸಿಎಸ್‌ಎಂಟಿ-ನಾಗರ್‌ಕೋಯಿಲ್ ಜಂಕ್ಷನ್ ನಡುವೆ ವಾರಕ್ಕೆ ಎರಡು ದಿನ ಪ್ರಯಾಣಿಸುವ ವಿಶೇಷ ರೈಲು (06351) ಮುಂಬೈ ಸಿಎಸ್‌ಎಂಟಿಯಿಂದ ಹೊರಡಲಿದ್ದು, ಮಾರ್ಚ್ 12, 15, 19, 22, 26 ಮತ್ತು 29 ರಂದು ಥಾಣೆ ಜಂಕ್ಷನ್ ಮತ್ತು ತಿರುಚ್ಚಿರಪ್ಪಳ್ಳಿ ಜಂಕ್ಷನ್ ನಡುವೆ ಮಾರ್ಗ ಬದಲಿಸಿ ಪನ್ವೆಲ್, ರತ್ನಗಿರಿ, ಮಡ್ಗಾಂವ್, ಮಂಗಳೂರು, ಶೋರನೂರ್ ಮತ್ತು ಈರೋಡ್ ಜಂಕ್ಷನ್‌ಗಳ ಮೂಲಕ ಚಲಿಸಲಿದೆ.

    3) ನಾಗರ್‌ಕೋಯಿಲ್ ಜಂಕ್ಷನ್‌ನಿಂದ ಹೊರಡುವ ನಾಗರ್‌ಕೋಯಿಲ್ ಜಂಕ್ಷನ್ - ಮುಂಬೈ ಸಿಎಸ್‌ಎಂಟಿ ವಿಶೇಷ ರೈಲು (06340) ಕರೂರ್ ಜಂಕ್ಷನ್ ಮತ್ತು ಥಾಣೆ ಜಂಕ್ಷನ್ ನಡುವೆ ಮಾರ್ಗ ಬದಲಾಯಿಸಲಿದ್ದು, ಮಾರ್ಚ್ 12, 15, 16, 17, 19, 22, 23, 24, 26, 29, 30 ಮತ್ತು 31 ರಂದು ಈರೋಡ್ ಜಂಕ್ಷನ್, ಶೋರನೂರ್ ಜಂಕ್ಷನ್, ಮಂಗಳೂರು ಜಂಕ್ಷನ್, ಮಡ್ಗಾಂವ್ ಜಂಕ್ಷನ್, ರತ್ನಗಿರಿ ಮತ್ತು ಪನ್ವೆಲ್‌ ಜಂಕ್ಷನ್‌ ಮೂಲಕ ಚಲಿಸಲಿದೆ.

    4) ನಾಗರ್‌ಕೋಯಿಲ್ ಜಂಕ್ಷನ್-ಮುಂಬೈ ಸಿಎಸ್‌ಎಂಟಿ ನಡುವೆ ವಾರಕ್ಕೆ ಎರಡು ದಿನ ಪ್ರಯಾಣಿಸುವ ವಿಶೇಷ ರೈಲು (06352) ನಾಗರ್‌ಕೋಯಿಲ್ ಜಂಕ್ಷನ್ ನಿಂದ ಹೊರಟು ತಿರುಚಿರಾಪ್ಪಳ್ಳಿ ಮತ್ತು ಥಾಣೆ ಜಂಕ್ಷನ್‌ಗಳ ನಡುವೆ ಮಾರ್ಚ್ 14, 18, 21, 25 ಮತ್ತು 28 ರಂದು ಈರೋಡ್, ಶೋರನೂರ್, ಮಂಗಳೂರು, ಮಡ್ಗಾಂವ್, ರತ್ನಾಗಿರಿ ಮತ್ತು ಪನ್ವೆಲ್ ಜಂಕ್ಷನ್‌ಗಳ ಮೂಲಕ ಓಡಿಸಲಾಗುವುದು.

    5) ನಾಗರ್‌ಕೋಯಿಲ್ ಜಂಕ್ಷನ್ - ಕೊಯಮತ್ತೂರು ಜಂಕ್ಷನ್ ಪ್ರತಿನಿತ್ಯ ಸ್ಪೆಷಲ್ ಟ್ರೈನ್ (06321) ಮಾರ್ಚ್ 19 ರಂದು ನಾಗರ್‌ಕೋಯಿಲ್ ಜಂಕ್ಷನ್‌ನಿಂದ ಹೊರಟು ಕರೂರ್ ಜಂಕ್ಷನ್‌ನಲ್ಲಿ ಕೊನೆಗೊಳ್ಳುತ್ತದೆ. ನಿರ್ಮಾಣ ಕಾರ್ಯಗಳ ಹಿನ್ನೆಲೆ ಈ ಕ್ರಮ ಕೈಗೊಳ್ಲಲಾಗಿದೆ.

    6) ಹಜರತ್ ನಿಜಾಮುದ್ದೀನ್-ಎರ್ನಾಕುಲಂ ಜಂಕ್ಷನ್ ಪ್ರತಿನಿತ್ಯ ಸ್ಪೆಷಲ್ ರೈಲು ( 02618 ) ಹಜರತ್ ನಿಜಾಮುದ್ದೀನ್ ನಿಂದ ಮಾರ್ಚ್ 13 ರಂದು ಹೊರಡಲಿದ್ದು, ಕಸಾರದಲ್ಲಿ 2 ಗಂಟೆಗಳ 40 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.
    Published by:Latha CG
    First published: