ಪಾಕಿಸ್ತಾನದಲ್ಲಿ ರೈಲು ದುರಂತ; 29ಕ್ಕೂ ಹೆಚ್ಚು ಸಿಖ್ ಯಾತ್ರಾರ್ಥಿಗಳು ಧಾರುಣ ಸಾವು
ಘರ್ಷಣೆಯಲ್ಲಿ ಕನಿಷ್ಠ 29 ಜನ ಸಾವನ್ನಪ್ಪಿದ್ದಾರೆ, ಮೃತಪಟ್ಟವರಲ್ಲಿ ಪಾಕಿಸ್ತಾನಿ ಸಿಖ್ಖರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರೆಲ್ಲರೂ ಯಾತ್ರಿಕರಾಗಿದ್ದು, ನಂಕಾನಾ ಸಾಹಿಬ್ನಿಂದ ಹಿಂದಿರುಗುತ್ತಿದ್ದರು"ಎಂದು ಪಾಕಿಸ್ತಾನದ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ವಕ್ತಾರ ಅಮೀರ್ ಹಶ್ಮಿ ಹೇಳಿದ್ದಾರೆ.
ಲಾಹೋರ್ (ಜುಲೈ 03); ನೆರೆಯ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶುಕ್ರವಾರ ಮಿನಿ ಬಸ್ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 29 ಜನ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಮೃತಪಟ್ಟವರ ಪೈಕಿ ಸಿಖ್ ಸಮುದಾಯಕ್ಕೆ ಸೇರಿದವರು ಅಧಿಕ ಸಂಖ್ಯೆಯಲ್ಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕರಾಚಿಯಿಂದ ಲಾಹೋರ್ಗೆ ಬರುತ್ತಿದ್ದ ಷಾ ಹುಸೇನ್ ಎಕ್ಸ್ಪ್ರೆಸ್ ಇಂದು ಮಧ್ಯಾಹ್ನ 1.30 ಕ್ಕೆ ಲಾಹೋರ್ನಿಂದ 60 ಕಿ.ಮೀ ದೂರದಲ್ಲಿರುವ ಫಾರೂಕಾಬಾಬ್ನಲ್ಲಿ ಮಾನವರಹಿತ ಲೆವೆಲ್ ಕ್ರಾಸಿಂಗ್ನಲ್ಲಿ, ಸಿಖ್ ಯಾತ್ರಾರ್ಥಿಗಳನ್ನು ಹೊತ್ತ ಮಿನಿ ಬಸ್ಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಘರ್ಷಣೆಯಲ್ಲಿ ಕನಿಷ್ಠ 29 ಜನ ಸಾವನ್ನಪ್ಪಿದ್ದಾರೆ, ಮೃತಪಟ್ಟವರಲ್ಲಿ ಪಾಕಿಸ್ತಾನಿ ಸಿಖ್ಖರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರೆಲ್ಲರೂ ಯಾತ್ರಿಕರಾಗಿದ್ದು, ನಂಕಾನಾ ಸಾಹಿಬ್ನಿಂದ ಹಿಂದಿರುಗುತ್ತಿದ್ದರು"ಎಂದು ಪಾಕಿಸ್ತಾನದ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ವಕ್ತಾರ ಅಮೀರ್ ಹಶ್ಮಿ ಹೇಳಿದ್ದಾರೆ.
ಪಾಕಿಸ್ತಾನದ ಡಾನ್ ಪತ್ರಿಕೆ ವರದಿಯ ಪ್ರಕಾರ, ಸ್ಥಳಕ್ಕೆ ಆಗಮಿಸಿರುವ ಪಾಕಿಸ್ತಾನದ ರಕ್ಷಣಾ ಅಧಿಕಾರಿಗಳು ಗಾಯಾಳುಗಳು ಮತ್ತು ಮೃತದೇಹವನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದಾರೆ ಎನ್ನಲಾಗುತ್ತಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ