Train Accident: ಪಶ್ಚಿಮ ಬಂಗಾಳದಲ್ಲಿ ಹಳಿ ತಪ್ಪಿದ ರೈಲು, ಸಾವಿನ ಸಂಖ್ಯೆ 8ಕ್ಕೆ ಏರಿಕೆ, ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

ಹಲವು ಮಂದಿ ಪ್ರಯಾಣಿಕರು ಹಳಿತಪ್ಪಿರುವ ರೈಲಿನ ಬೋಗಿಯೊಳಗೆ ಸಿಲುಕಿದ್ದರು. ಗ್ಯಾಸ್​ ಕಟ್ಟರ್​​​ನಿಂದ ಕೋಚ್​​ಗಳನ್ನು ಕತ್ತರಿಸಿ ಪ್ರಯಾಣಿಕರನ್ನು ರಕ್ಷಿಸಲಾಯಿತು.

ರೈಲು ಅಪಘಾತದ ದೃಶ್ಯ

ರೈಲು ಅಪಘಾತದ ದೃಶ್ಯ

  • Share this:
Train Accident: ಪಶ್ಚಿಮ ಬಂಗಾಳದಲ್ಲಿ(West Bengal) ಸಂಭವಿಸಿದ ರೈಲು ಅಪಘಾತದಲ್ಲಿ(Train Accident) ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಗುರುವಾರ ಗುವಾಹಟಿ-ಬಿಕಾನೇರ್​​ ಎಕ್ಸ್​​ಪ್ರೆಸ್​ ರೈಲು ಜಲ್ಪೈಗುರಿ ಜಿಲ್ಲೆಯ ಮಾಯ್ನಾಗುರಿ ನಗರದ ಬಳಿ ಹಳಿ ತಪ್ಪಿತ್ತು. ಸುಮಾರು 12 ಬೋಗಿಗಳು ಹಳಿತಪ್ಪಿ ಸುಮಾರು 8 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಹಲವು ಪ್ರಯಾಣಿಕರು ರೈಲಿನೊಳಗೆ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಸಾಗುತ್ತಿದೆ. ಘಟನೆಯಲ್ಲಿ ಸುಮಾರು 45 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ(PTI) ಹೇಳಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರದ ಮೂಲಗಳ ಪ್ರಕಾರ ರೈಲು ಅಪಘಾತದಲ್ಲಿ 50 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 10 ಮಂದಿಯ ಸ್ಥಿತಿ ತೀರಾ ಗಂಭೀರವಾಗಿದೆ. ಗಾಯಗೊಂಡವರಲ್ಲಿ 24 ಮಂದಿಯನ್ನು ಜಲ್ಪೈಗುರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರೆ, ಇನ್ನುಳಿದ 16 ಮಂದಿ ಪ್ರಯಾಣಿಕರನ್ನು ಮಾಯ್ನಾಗುರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪರಿಸ್ಥಿತಿ ತೀರಾ ಗಂಭೀರವಾಗಿರುವ ಪ್ರಯಾಣಿಕರನ್ನು ಸಿಲಿಗುರಿಯ ಉತ್ತರ ಬಂಗಾಳ ಮೆಡಿಕಲ್​ ಕಾಲೇಜಿಗೆ ದಾಖಲಿಸಲಾಗಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ:Viral News: ದೇಶ ವಿಭಜನೆಯಾದ 74 ವರ್ಷಗಳ ನಂತರ ಒಂದಾದ ‌ʼಭಾಯಿಜಾನ್ʼ..!

ಹಲವು ಮಂದಿ ಪ್ರಯಾಣಿಕರು ಹಳಿತಪ್ಪಿರುವ ರೈಲಿನ ಬೋಗಿಯೊಳಗೆ ಸಿಲುಕಿದ್ದರು. ಗ್ಯಾಸ್​ ಕಟ್ಟರ್​​​ನಿಂದ ಕೋಚ್​​ಗಳನ್ನು ಕತ್ತರಿಸಿ ಪ್ರಯಾಣಿಕರನ್ನು ರಕ್ಷಿಸಲಾಯಿತು.

ಅಶ್ವಿನಿ ವೈಷ್ಣವ್ ಅವರು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಅವಲೋಕಿಸುತ್ತಿದ್ದಾರೆ ಮತ್ತು ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದಾರೆ. ಜೊತೆಗೆ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ತಿಳಿಸಿದ್ದಾರೆ. "ನಾವು ನಮ್ಮ ಎಲ್ಲಾ ಕರ್ತವ್ಯಗಳನ್ನು ಪೂರೈಸುತ್ತೇವೆ" ಎಂದು ಅವರು ಹೇಳಿದ್ದಾರೆ.

ಈ ದುರದೃಷ್ಟಕರ ಅಪಘಾತದಲ್ಲಿ, ಇಂದು ಸಂಜೆ ನ್ಯೂ ಮಾಯ್ನಾಗುರಿ (ಪಶ್ಚಿಮ ಬಂಗಾಳ) ಬಳಿ ಬಿಕಾನೇರ್ - ಗುವಾಹಟಿ ಎಕ್ಸ್‌ಪ್ರೆಸ್‌ನ 12 ಕೋಚ್‌ಗಳು ಹಳಿತಪ್ಪಿದವು. ತ್ವರಿತ ರಕ್ಷಣಾ ಕಾರ್ಯಾಚರಣೆಗಾಗಿ ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ" ಎಂದು ಅವರು ನಿನ್ನೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

"ನಾಳೆ ಬೆಳಿಗ್ಗೆ ನಾನು ಅಪಘಾತದ ಸ್ಥಳವನ್ನು ತಲುಪುತ್ತಿದ್ದೇನೆ. ವೈದ್ಯಕೀಯ ತಂಡಗಳು, ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಪ್ರಧಾನಿ ಮೋದಿ ಅವರು ಪರಿಸ್ಥಿತಿ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ನಮ್ಮ ಗಮನ ರಕ್ಷಣೆಯ ಮೇಲೆ ಇದೆ. ಪರಿಹಾರವನ್ನು ಸಹ ಘೋಷಿಸಲಾಗಿದೆ" ಎಂದು ಸಚಿವರು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದರು.

ಇದನ್ನೂ ಓದಿ: ISROದ ನೂತನ ಮುಖ್ಯಸ್ಥರಾಗಿ ನೇಮಕವಾಗಿರುವ ಎಸ್‌. ಸೋಮನಾಥ್ ಬಗ್ಗೆ ನಿಮಗೆಷ್ಟು ಗೊತ್ತು..?

ಅಪಘಾತದ ಕುರಿತು ಉನ್ನತ ಮಟ್ಟದ ರೈಲ್ವೆ ಆಯುಕ್ತರು ತನಿಖೆಗೆ ಆದೇಶಿಸಿದ್ದಾರೆ. ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಡಿಜಿ (ಸುರಕ್ಷತೆ), ರೈಲ್ವೆ ಮಂಡಳಿಯು ದೆಹಲಿಯಿಂದ ಅಪಘಾತದ ಸ್ಥಳಕ್ಕೆ ತೆರಳಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ₹ 5 ಲಕ್ಷ ಪರಿಹಾರ, ಗಂಭೀರ ಗಾಯಗೊಂಡವರಿಗೆ ₹ 1 ಲಕ್ಷ, ಹಾಗೂ ಲಘುವಾಗಿ ಗಾಯಗೊಂಡವರಿಗೆ ₹ 25,000 ಪರಿಹಾರ ಘೋಷಿಸಲಾಗಿದೆ.



ಕೋವಿಡ್-19 ಪರಿಸ್ಥಿತಿಯನ್ನು ಅವಲೋಕಿಸಲು ಮುಖ್ಯಮಂತ್ರಿಗಳೊಂದಿಗಿನ ಸಭೆಯ ಮಧ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಅಪಘಾತದ ಬಗ್ಗೆ ವಿಚಾರಿಸಿದರು. ಜಲ್ಪೈಗುರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಜೊತೆ ಮಾತನಾಡಿದ ಬ್ಯಾನರ್ಜಿ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಪ್ರಧಾನಿಗೆ ವಿವರಿಸಿದರು.



ನ್ಯೂ ದೋಮೊಹನಿ ಮತ್ತು ನ್ಯೂ ಮಾಯ್ನಾಗುರಿ ರೈಲು ನಿಲ್ದಾಣಗಳ ನಡುವೆ ಸಂಜೆ 5 ಗಂಟೆ ಸುಮಾರಿಗೆ ರೈಲು ಹಳಿತಪ್ಪಿತು. ರೈಲ್ವೆ ಮತ್ತು ಜಿಲ್ಲಾಡಳಿತ ಅಧಿಕಾರಿಗಳು ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿದ್ದರು.
Published by:Latha CG
First published: