Tragic Story: ನದಿಯಲ್ಲಿ ಸಿಲುಕಿದ್ದ ಆನೆ ರೆಸ್ಕ್ಯೂ ವೇಳೆ ಘೋರ ದುರಂತ; ಪತ್ರಕರ್ತ ಸಾವು, ರಕ್ಷಣಾ ಸಿಬ್ಬಂದಿ ನಾಪತ್ತೆ..

ಅರಣ್ಯಾಧಿಕಾರಿಗಳ ಮಾಹಿತಿ ಪ್ರಕಾರ, ಗುರುವಾರ ತಡರಾತ್ರಿ ಚಂದಕದಿಂದ ಬಂಕಿಗೆ 17 ಆನೆಗಳ ಹಿಂಡು ಸಂಚರಿಸುತ್ತಿತ್ತು. ಇದೇ ವೇಳೆ ನದಿಯನ್ನು ದಾಟುವ ಸಂದರ್ಭದಲ್ಲಿ ಮೂರು ಆನೆಗಳು ಪ್ರವಾಹದಲ್ಲಿ ಸಿಲುಕಿದ್ದವು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಒಡಿಶಾದ ಕಟಕ್ ಜಿಲ್ಲೆಯ ಮಹಾನದಿಯ ಮುಂಡಾಲಿ(Mundali) ಸೇತುವೆಯಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಮುಂಡಾಲಿ ಸೇತುವೆಯಲ್ಲಿ ಉಂಟಾದ ಪ್ರವಾಹದಲ್ಲಿ ಆನೆಯೊಂದು ಸಿಲುಕಿಕೊಂಡಿತ್ತು. ಸತತ 6 ಗಂಟೆಗಳ ಕಾಲ ಆನೆ ಪ್ರವಾಹದಲ್ಲಿ ಸಿಲುಕಿ ಪರದಾಡಿತ್ತು. ಆನೆ ರೆಸ್ಕ್ಯೂ(Rescue)ಕಾರ್ಯಾಚರಣೆಗೆ ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ( ODRAF)ಇಳಿದಿತ್ತು. ರಕ್ಷಣಾ ತಂಡದ ಜೊತೆ ಅಲ್ಲಿನ ಪ್ರಾದೇಶಿಕ ಟಿವಿಯೊಂದರ ಪತ್ರಕರ್ತ ದೋಣಿಯಲ್ಲಿ ತೆರಳಿದ್ದರು. ಈ ವೇಳೆ ನೀರಿನ ರಭಸಕ್ಕೆ ದೋಣಿ ಮಗುಚಿ ಪತ್ರಕರ್ತ ಸಾವನ್ನಪ್ಪಿದ್ದಾರೆ. ರಕ್ಷಣಾ ತಂಡದ ಸಿಬ್ಬಂದಿಯೊಬ್ಬರು ಕಾಣೆಯಾಗಿದ್ದು, ಅವರಿಗಾಗಿ ಶೋಧ ಮುಂದುವರೆದಿದೆ. ಪತ್ರಕರ್ತ ಅರಿಂದಾಮ್ ದಾಸ್(Arindam Das) ಮೃತಪಟ್ಟಿದ್ದಾರೆ. ಇನ್ನು ಇವರ ಸಹೋದ್ಯೋಗಿ ವಿಡಿಯೋ ಪತ್ರಕರ್ತ ಪ್ರಭಾತ್ ಸಿನ್ಹಾ(Prabhat Sinha) ಎಂಬಾತ ಗಾಯಗೊಂಡಿದ್ದಾರೆ. ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

  ಅರಿಂದಾಮ್ ದಾಸ್(Arindam Das) ಹಾಗೂ ಪ್ರಭಾತ್ ಸಿನ್ಹಾ(Prabhat Sinha) ಇಬ್ಬರು ಒಡಿಯಾ ಟಿವಿ ಸುದ್ದಿ ವಾಹಿನಿ ಒಟಿವಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ದುರ್ಘಟನೆ ನಡೆಯುತ್ತಿದ್ದಂತೆ, ದಾಸ್ ಅವರನ್ನ ಕಟಕ್ ನ ಎಸ್ ಸಿಬಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು, ಆಸ್ಪತ್ರೆಗೆ ದಾಖಲಾಗುವ ಮೊದಲೇ ದಾಸ್ ಕೊನೆಯುಸಿರೆಳೆದಿದ್ದರು. ಅವರನ್ನು ಉಳಿಸಿಕೊಳ್ಳಲು ವೈದ್ಯರು ಒಂದು ಗಂಟೆಗಳ ಕಾಲ ಪ್ರಯತ್ನ ನಡೆಸಿದ್ದರು ಅಂತ ಆಸ್ಪತ್ರೆಯ ತುರ್ತು ಅಧಿಕಾರಿ ಭುಬಾನಂದ ಮಹಾರಾಣಾ ಹೇಳಿದ್ದಾರೆ.

  ಇದನ್ನೂ ಓದಿ:Jammu-Kashmir Issue: UN ಸಭೆಯಲ್ಲಿ ಮತ್ತೆ ವಿಷಯ ಕೆದಕಿದ ಪಾಕ್, ತಿರುಗೇಟು ನೀಡಿದ ಭಾರತ

  ಇನ್ನು ಒಡಿಶಾದ ಎರಡು ವಿಭಾಗಗಳ 80 ಅರಣ್ಯ ಅಧಿಕಾರಿಗಳು ಮತ್ತು ಒಡಿಆರ್ ಎಎಫ್ ಸದಸ್ಯರ ತಂಡವು ಆನೆ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಈ ರಕ್ಷಣಾ ತಂಡದೊಂದಿಗೆ ಇಬ್ಬರು ಮಾಧ್ಯಮ ಪ್ರತಿನಿಧಿಗಳಿಗೆ ಹೇಗೆ ಅನುಮತಿ ನೀಡಲಾಯಿತು ಎಂಬುದರ ಬಗ್ಗೆ ಒಡಿಶಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತನಿಖೆಯನ್ನು ಆರಂಭಿಸಿದೆ. "ಈ ದುರ್ಘಟನೆ ನಡೆಯಬಾರದಿತ್ತು, ನಡೆದುಹೋಗಿದೆ ಈ ಬಗ್ಗೆ ತನಿಖೆ ಕೂಡ ನಡೆಯಲಿದೆ. ಸಾಮಾನ್ಯ ಪರಿಸ್ಥಿತಿಗಳಲ್ಲಿ ಅಥವಾ ಈ ರೀತಿಯ ಕಠಿಣ ಪರಿಸ್ಥಿತಿಗಳಲ್ಲಿ ರಕ್ಷಣಾ ತಂಡದೊಂದಿಗೆ ಯಾರು ಹೋಗುವುದು ಸೂಕ್ತವಲ್ಲ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಅರಣ್ಯಾಧಿಕಾರಿಗಳ ಮಾಹಿತಿ ಪ್ರಕಾರ, ಗುರುವಾರ ತಡರಾತ್ರಿ ಚಂದಕದಿಂದ ಬಂಕಿಗೆ 17 ಆನೆಗಳ ಹಿಂಡು ಸಂಚರಿಸುತ್ತಿತ್ತು. ಇದೇ ವೇಳೆ ನದಿಯನ್ನು ದಾಟುವ ಸಂದರ್ಭದಲ್ಲಿ ಮೂರು ಆನೆಗಳು ಪ್ರವಾಹದಲ್ಲಿ ಸಿಲುಕಿದ್ದವು. ಮೂರರಲ್ಲಿ ಎರಡು ಆನೆ ಹರಸಾಹಸ ಪಟ್ಟು ದಡ ಸೇರಿಕೊಂಡಿತ್ತು. ಒಂದು ಆನೆ ಮಾತ್ರ ನದಿಯಲ್ಲಿ ಸಿಲುಕಿ ಪರದಾಡುತ್ತಿತ್ತು. ಈ ಆನೆ ದಡ ಸೇರಲು 20 ಮೀಟರ್ ಕ್ರಮಿಸಬೇಕಿತ್ತು. ದಡಸೇರಲು ಈ ಸಲಗ ಮಾತ್ರ ಹರಸಾಹಸ ಪಟ್ಟು ಸುಸ್ತಾಗಿತ್ತು. ಈ ವೇಳೆ ಕಾರ್ಯಾಚರಣೆಗೆ ರಕ್ಷಣಾ ತಂಡ ಆಗಮಿಸಿತ್ತು.

  ಇದನ್ನೂ ಓದಿ:Firing in Delhi's Rohini Court: ದೆಹಲಿಯ ಕೋರ್ಟ್​ ಆವರಣದಲ್ಲಿ ಸಿನಿಮೀಯ ರೀತಿ ಗುಂಡಿನ ಚಕಮಕಿ; ಗ್ಯಾಂಗ್​ಸ್ಟರ್​ ಸೇರಿ ನಾಲ್ವರ ಹತ್ಯೆ

  ಮೊದಲು ಆನೆಯ ಸುತ್ತ ಬಲೆಗಳನ್ನು ಹಾಕಿ ಕೊಚ್ಚಿ ಹೋಗದಂತೆ ರಕ್ಷಿಸಲಾಯಿತು. ಬಳಿಕ ದಣಿದಿದ್ದ ಆನೆಗೆ ಆಹಾರವನ್ನ ಎಸೆಯಲಾಯಿತು. ಬಳಿಕ ಸಲಗದ ಸುತ್ತ ಮರದ ಕೊಂಬೆಗಳನ್ನು ಎಸೆದು, ಅದನ್ನು ಬಳಸಿ ತಾನೇ ಆನೆ ದಡ ಸೇರುವಂತೆ ಮಾಡಲಾಗಿದೆ. ಈ ಮೊದಲು ರಕ್ಷಣೆಗೆ ಆಗಮಿಸಿದ ತಂಡದಲ್ಲಿ ಪತ್ರಕರ್ತ ತೆರಳಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿ ಪತ್ರಕರ್ತ ದಾಸ್ ಸಾವನ್ನಪ್ಪಿದ್ದಾರೆ.

  (ವರದಿ ವಾಸುದೇವ್. ಎಂ)
  Published by:Latha CG
  First published: