• Home
 • »
 • News
 • »
 • national-international
 • »
 • America: ಹಿಮ ಬಿರುಗಾಳಿಗೆ ತತ್ತರಿಸಿದ ಅಮೆರಿಕ: ಹೆಪ್ಪುಗಟ್ಟಿದ ಕೆರೆಯಲ್ಲಿ ಮುಳುಗಿ ಮೂವರು ಭಾರತೀಯರು ದುರ್ಮರಣ

America: ಹಿಮ ಬಿರುಗಾಳಿಗೆ ತತ್ತರಿಸಿದ ಅಮೆರಿಕ: ಹೆಪ್ಪುಗಟ್ಟಿದ ಕೆರೆಯಲ್ಲಿ ಮುಳುಗಿ ಮೂವರು ಭಾರತೀಯರು ದುರ್ಮರಣ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ನು ಅಮೆರಿಕದಲ್ಲಿ ಹೊರಗಡೆ ಸಿಕ್ಕಿಹಾಕಿಕೊಂಡವರ ಪಾಡು ಹೇಳತೀರದಾಗಿದೆ. ಒಬ್ಬೊಬ್ಬರದ್ದೂ ಒಂದೊಂದು ಕಥೆಯಾಗಿದೆ.

 • News18 Kannada
 • 5-MIN READ
 • Last Updated :
 • New Delhi, India
 • Share this:

ಭೀಕರ ಚಳಿಯಿಂದಾಗಿ ಅಮೆರಿಕ (America) ಅಕ್ಷರಶಃ ಹೆಪ್ಪುಗಟ್ಟಿದೆ. ಹಿಮಮಾರುತದಿಂದಾಗಿ ಜನರು ನಿಂತಲ್ಲಿಯೇ ಮರಗಟ್ಟಿ ಹೋಗುತ್ತಿದ್ದಾರೆ. ಮನೆಯಿಂದ ಹೊರಗೆ ಹೋದವರು ಹಿಮದ ಮಧ್ಯೆ ಸಿಲುಕಿ ಸಾವನ್ನಪ್ಪುತ್ತಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದ್ದರೂ ಭಯಂಕರ ಹಿಮದ ಬಿರುಗಾಳಿ (Frozen Lake) ಜನರನ್ನು ಬಲಿಪಡೆಯುತ್ತಲೇ ಇದೆ. ಈ ಮಧ್ಯೆ ಅಮೆರಿಕದ ಅರಿಝೋನಾ ರಾಜ್ಯದಲ್ಲಿ ಮೂವರು ಭಾರತೀಯ ಮೂಲದವರು (Indian Origin) ಸಾವನ್ನಪ್ಪಿದ್ದಾರೆ.


ಅರಿಜೋನಾದಲ್ಲಿ ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಅಕಸ್ಮಾತ್‌ ಬಿದ್ದ ಪರಿಣಾಮ ಓರ್ವ ಮಹಿಳೆ ಸೇರಿದಂತೆ ಮೂವರು ಭಾರತೀಯ-ಅಮೆರಿಕನ್ನರು ಸಾವನ್ನಪ್ಪಿದ್ದಾರೆ. ಅರಿಜೋನಾದ ಕೊಕೊನಿನೊ ಕೌಂಟಿಯಲ್ಲಿರುವ ವುಡ್ಸ್ ಕ್ಯಾನ್ಯನ್ ಲೇಕ್‌ನಲ್ಲಿ ಮಧ್ಯಾಹ್ನ 3:35 ಕ್ಕೆ ಈ ಘಟನೆ ಸಂಭವಿಸಿದೆ.ಮೃತ ಪಟ್ಟವರಲ್ಲಿ ನಾರಾಯಣ ಮುದ್ದಣ (49) ಮತ್ತು ಗೋಕುಲ್ ಮೆಡಿಸೆಟಿ (47) ಎಂದು ಗುರುತಿಸಲಾಗಿದೆ. ಸಂತ್ರಸ್ತ ಮಹಿಳೆಯನ್ನು ಹರಿತಾ ಮುದ್ದಣ ಎಂದು ಗುರುತಿಸಲಾಗಿದೆ. ಈ ಮೂವರೂ ಅರಿಜೋನಾದ ಚಾಂಡ್ಲರ್‌ನಲ್ಲಿ ನೆಲೆಸಿದ್ದು, ಮೂಲತಃ ಭಾರತದವರಾಗಿದ್ದಾರೆ ಎಂಬುದಾಗಿ ಕೊಕೊನಿನೊ ಕೌಂಟಿ ಶೆರಿಫ್ ಕಚೇರಿ (CCSO) ಪ್ರಕಟಣೆಯಲ್ಲಿ ತಿಳಿಸಿದೆ.


ಮೇತದೇಹಕ್ಕಾಗಿ ನಿರಂತರ ಹುಡುಕಾಟ
ಘಟನೆ ವರದಿಯಾದ ಕೂಡಲೇ ನೀರಿಗೆ ಬಿದ್ದ ಹರಿತಾಳನ್ನು ಹೊರಕ್ಕೆ ತರಲು ಸಾಧ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ ಜೀವ ಉಳಿಸಲು ಯತ್ನಿಸಿದರೂ ಅದು ಫಲಕಾರಿಯಾಗಲಿಲ್ಲ. ಅವರು ಸ್ಥಳದಲ್ಲೇ ಸಾವನ್ನಪ್ಪಿದರು ಎಂಬುದಾಗಿ ಹೇಳಲಾಗಿದೆ. ಇದಾದ ಬಳಿಕ ಸಿಬ್ಬಂದಿ ನಾರಾಯಣ ಮತ್ತು ಮೆಡಿಸೇಟಿಯನ್ನು ಹುಡುಕಲು ಪ್ರಾರಂಭಿಸಿದರು. ಆದ್ರೆ ಅವರು ಸಿಗಲಿಲ್ಲ. ಮಂಗಳವಾರ ಮಧ್ಯಾಹ್ನ ಇಬ್ಬರು ವ್ಯಕ್ತಿಗಳು ಶವವಾಗಿ ಪತ್ತೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.


CCSO ಯ ಅಧಿಕಾರಿಗಳು ಬಿಡುಗಡೆ ಮಾಡಿದ ಪ್ರಕರಣೆಯ ಪ್ರಕಾರ, "ಇಬ್ಬರು ಪುರುಷರು ಮತ್ತು ಮಹಿಳೆ ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಆಗ ಈ ಘಟನೆ ನಡೆದಿದೆ. ವುಡ್ಸ್ ಕ್ಯಾನ್ಯನ್ ಸರೋವರವು ಅಪಾಚೆ-ಸಿಟ್‌ಗ್ರೀವ್ಸ್ ರಾಷ್ಟ್ರೀಯ ಅರಣ್ಯಗಳಲ್ಲಿ ಪೇಸನ್‌ನ ಪೂರ್ವದಲ್ಲಿದೆ. ಇದು ಪಾದಯಾತ್ರಿಕರು, ಗಾಳಹಾಕಿ ಮೀನು ಹಿಡಿಯುವವರು ಮತ್ತು ಇತರ ಹೊರಾಂಗಣ ಉತ್ಸಾಹಿಗಳಲ್ಲಿ ಜನಪ್ರಿಯವಾಗಿರುವ ಪ್ರದೇಶವಾಗಿದೆ.


ಇದನ್ನೂ ಓದಿ: ಇಬ್ಬರು ಹೆಣ್ಣುಮಕ್ಕಳಿಗೆ ಡಯಾಬಿಟೀಸ್; ಮಕ್ಕಳನ್ನು ನದಿಗೆ ತಳ್ಳಿ ತಾವೂ ಆತ್ಮಹತ್ಯೆ ಮಾಡಿಕೊಂಡ ದಂಪತಿ


ಹಿಮದ ಬಿರುಗಾಳಿಗೆ ತತ್ತರಿಸಿದ ಅಮೆರಿಕ
ಈ ಮಧ್ಯೆ ಅಮೆರಿಕದಲ್ಲಿ ಹಿಮ ಮಾರುತದಿಂದಾಗಿ ಜನರು ಕಂಗಾಲಾಗಿ ಹೋಗಿದ್ದಾರೆ. ಬಾಂಬ್ ಸೈಕ್ಲೋನ್ ನಿಂದಾಗಿ ಹಿಮ, ಬಲವಾದ ಗಾಳಿ ಮತ್ತು ಘನೀಕರಿಸುವ ತಾಪಮಾನ ಇದೆ. ಸುಮಾರು 250 ಮಿಲಿಯನ್ ಜನರು ಇದರಿಂದ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಕ್ವಿಬೆಕ್‌ನಿಂದ ಟೆಕ್ಸಾಸ್‌ವರೆಗೆ 3,200 ಕಿಮೀಗಿಂತ ಹೆಚ್ಚು ವಿಸ್ತರಿಸಿರುವ ಚಂಡಮಾರುತಕ್ಕೆ ಈಗಾಗಲೇ ಕನಿಷ್ಠ 50 ಸಾವುಗಳು ಸಂಭವಿಸಿವೆ.


ಅಮೆರಿಕದಲ್ಲಿ ಪಾಡು ಹೇಳತೀರದು
ಇನ್ನು ಅಮೆರಿಕದಲ್ಲಿ ಹೊರಗಡೆ ಸಿಕ್ಕಿಹಾಕಿಕೊಂಡವರ ಪಾಡು ಹೇಳತೀರದಾಗಿದೆ. ಒಬ್ಬೊಬ್ಬರದ್ದೂ ಒಂದೊಂದು ಕಥೆಯಾಗಿದೆ. 22 ವರ್ಷದ ಬಫಲೋ ನಿವಾಸಿ ಆಂಡೆಲ್ ಟೇಲರ್ ಅವರ ಕುಟುಂಬವು ಕೆಲಸದಿಂದ ಮನೆಗೆ ಹೋಗುವಾಗ ಸಿಕ್ಕಿಹಾಕಿಕೊಂಡು ಕಾರಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.


ಇದನ್ನೂ ಓದಿ: Kerala High Court: ಸ್ವ-ಇಚ್ಛೆಯಿಂದ ಪತ್ನಿ ದೂರವಾದ್ರು ಪತಿ ಜೀವನಾಂಶ ನೀಡಲೇಬೇಕು; ಕೇರಳ ಹೈಕೋರ್ಟ್​ ಮಹತ್ವದ ಆದೇಶ


ಹೀಗೆ ಸ್ನೋಫಾಲ್‌ ನಲ್ಲಿ ಸಿಲುಕಿಕೊಂಡ ಅದೆಷ್ಟೋ ಜನರನ್ನು ರಕ್ಷಣೆ ಮಾಡಲಾಗಿದೆ. ಹಲವಡೆ ವಿದ್ಯುತ್‌ ಇಲ್ಲದ ಕಾರಣ, ಜನರು ಕತ್ತಲೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಮಧ್ಯೆ ಹಿಮದ ಬಿರುಗಾಳಿ ಫ್ಲೈಟ್‌ ಗಳನ್ನು ಕ್ಯಾನ್ಸಲ್‌ ಮಾಡಲಾಗಿದೆ. ಸುಮಾರು 20,000 ಯುಎಸ್‌ ಫ್ಲೈಟ್‌ಗಳನ್ನು ರದ್ದುಗೊಳಿಸಲಾಗಿದೆ. ಮಂಗಳವಾರ 3,000 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಬಫಲೋದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಬುಧವಾರ ಬೆಳಗಿನ ತನಕ ಮುಚ್ಚಲ್ಪಟ್ಟಿದೆ. ಸಿಬ್ಬಂದಿಗಳು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಈ ಮಧ್ಯೆ ಯುಎಸ್ ಅಧ್ಯಕ್ಷ ಜೋ ಬಿಡನ್ ನ್ಯೂಯಾರ್ಕ್ ರಾಜ್ಯಕ್ಕೆ ತುರ್ತು ಘೋಷಣೆಯನ್ನು ಅನುಮೋದಿಸಿ, ನಿಧಿಯನ್ನು ಬಿಡುಗಡೆಗೊಳಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: