ಜಮ್ಮು-ಕಾಶ್ಮೀರದ ಪುಲ್ವಾಮಾ ಸೇತುವೆ ಅಡಿಯಲ್ಲಿ ಪತ್ತೆ ಆಯ್ತು ರಾಶಿ ರಾಶಿ ಸ್ಫೋಟಕ; ತಪ್ಪಿದ ದುರಂತ

ಪುಲ್ವಾಮಾ ಜಿಲ್ಲೆಯ ತುಜಾನ್​ ಗ್ರಾಮದ ಸೇತುವೆಯ ಅಡಿ ಭಾಗದಲ್ಲಿ ಆಧುನಿಕ ಸ್ಫೋಟಕವನ್ನು ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಮುಂದಾಗಬಹುದಾಗಿದ್ದ ಭಾರೀ ದುರಂತವನ್ನು ಪೊಲೀಸರು ತಪ್ಪಿಸಿದ್ದಾರೆ.

 • Share this:
  ಪುಲ್ವಾಮಾ (ಆಗಸ್ಟ್​ 17): ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಕಾರ್​ ಬಾಂಬ್​ ದಾಳಿ ವೇಳೆ ಅನೇಕ ಸೈನಿಕರು ಮೃತಪಟ್ಟಿದ್ದರು. ಇದಾದ ನಂತರ ಇದೇ ಮಾದರಿಯಲ್ಲಿ ಮತ್ತೊಂದು ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರಾದರೂ ಅದು ವಿಫಲವಾಗಿತ್ತು. ಈಗ ಉಗ್ರರು ಸ್ಫೋಟಕ್ಕಾಗಿ ಬೇರೆಯದೇ ಮಾರ್ಗ ಅನುಸರಿಸಿದ್ದರು. ಕಾಶ್ಮೀರ ಪೊಲೀಸರು ಈಗ ಅದನ್ನು ವಿಫಲಗೊಳಿಸಿದ್ದಾರೆ.

  ಪುಲ್ವಾಮಾ ಜಿಲ್ಲೆಯ ತುಜಾನ್​ ಗ್ರಾಮದ ಸೇತುವೆಯ ಅಡಿ ಭಾಗದಲ್ಲಿ ಆಧುನಿಕ ಸ್ಫೋಟಕವನ್ನು ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಮುಂದಾಗಬಹುದಾಗಿದ್ದ ಭಾರೀ ದುರಂತವನ್ನು ಪೊಲೀಸರು ತಪ್ಪಿಸಿದ್ದಾರೆ.

  ಈ ಬಗ್ಗೆ ಮಾಹಿತಿ ನೀಡಿರುವ ಕಾಶ್ಮೀರ ಐಜಿಪಿ ವಿಜಯ್​ ಕುಮಾರ್, ಭಯೋತ್ಪಾದಕರು ಸೇತುವೆ ಮಧ್ಯೆ ಸ್ಫೋಟಕಗಳನ್ನು ಇಟ್ಟಿದ್ದರು. ಸೇನಾ ವಾಹನ ಹೋಗುವಾಗ ಇದನ್ನು ಸ್ಫೋಟ ಮಾಡುವ ಲೆಕ್ಕಾಚಾರ ಅವರದ್ದಾಗಿತ್ತು.ಅದೃಷ್ಟವಶಾತ್​ ಈ ಸ್ಫೋಟಕ ನಮ್ಮ ಕಣ್ಣಿಗೆ ಬಿದ್ದಿದೆ, ಎಂದು ಮಾಹಿತಿ ನೀಡಿದ್ದಾರೆ.

  ಸ್ಫೋಟಕ ಇಡಲಾದ ಸೇತುವೆ ಬುದ್ಗಾಮ್​ ಹಾಗೂ ಪುಲ್ವಾಮಾವನ್ನು ಸಂಪರ್ಕಿಸುತ್ತವೆ. ಭಾರತೀಯ ಸೇನಾ ಸಿಬ್ಬಂದಿ ಈ ಸೇತುವೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ಈ ಕಾರಣಕ್ಕಾಗಿಯೇ ಸ್ಫೋಟಕಗಳನ್ನು ಇಡಲಾಗಿದೆ ಎನ್ನಲಾಗಿದೆ.

  4ಜಿ ಸೇವೆ ಆರಂಭ:

  ಮಧ್ಯ ಕಾಶ್ಮೀರದ ಗಂದರ್​ಬಾಲ್​ನಲ್ಲಿ ಪೋಸ್ಟ್​ಪೇಡ್​ ಬಳಕೆದಾರರಿಗೆ 4ಜಿ ಸೇವೆ ನೀಡಲಾಗುತ್ತಿದೆ. ಪ್ರಯೋಗಾತ್ಮಕವಾಗಿ ಈ ಸೇವೆ ನೀಡಲಾಗುತ್ತಿದೆ. ಉಳಿದ ಭಾಗದಲ್ಲಿ 2ಜಿ ಸೇವೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಂ370ನ್ನು ಕೇಂದ್ರ ಸರ್ಕಾರ ಕಳೆದ ವರ್ಷ ಆಗಸ್ಟ್​ 5ರಂದು ಜಾರಿಗೆ ತಂದಿತ್ತು. ಇದಕ್ಕೂ ಮೊದಲು ಇಂಟರ್​ನೆಟ್​ ಸೇವೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿತ್ತು.
  Published by:Rajesh Duggumane
  First published: