ಟ್ರಾಫಿಕ್ ನಿಯಮ ಉಲ್ಲಂಘನೆ; ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಕಾರಿಗೂ ದಂಡ!

ಕೇಂದ್ರ ರಸ್ತೆ ಸಾರಿಗೆ ಸಚಿವನಿತಿನ್ ಗಡ್ಕರಿ ಓವರ್​ ಸ್ಪೀಡ್​ನಲ್ಲಿ ಸಾಗುತ್ತಿದ್ದ ಕಾರಣಕ್ಕೆ ಟ್ರಾಫಿಕ್ ಪೊಲೀಸರು ದಂಡ ಹಾಕಿದ್ದಾರೆ.

Sushma Chakre | news18-kannada
Updated:September 9, 2019, 5:36 PM IST
ಟ್ರಾಫಿಕ್ ನಿಯಮ ಉಲ್ಲಂಘನೆ; ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಕಾರಿಗೂ ದಂಡ!
ಕೇಂದ್ರ ಸಚಿವ ನಿತಿನ್ ಗಡ್ಕರಿ
  • Share this:
ನವದೆಹಲಿ (ಸೆ. 9): ದೇಶದೆಲ್ಲೆಡೆ ಟ್ರಾಫಿಕ್ ನಿಯಮ ಉಲ್ಲಂಘಿಸಿದವರಿಗೆ ದುಬಾರಿ ದಂಡ ವಿಧಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ಕೇಳಿಬರುತ್ತಿವೆ. ಈ ನೀತಿಯನ್ನು ಜಾರಿಗೆ ತಂದ ಕೇಂದ್ರ ಸರ್ಕಾರದ ವಿರುದ್ಧ ಅನೇಕರು ಸಿಟ್ಟಿಗೆದ್ದಿದ್ದಾರೆ. ಈ ದುಬಾರಿ ಟ್ರಾಫಿಕ್ ದಂಡದ ಬಿಸಿ ಜನಸಾಮಾನ್ಯರಿಗೆ ಮಾತ್ರವಲ್ಲ ಕೇಂದ್ರ ಸಚಿವರಿಗೂ ತಟ್ಟಿದೆಯಂತೆ.. ಹೀಗಂತ ಖುದ್ದು ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿಕೊಂಡಿದ್ದಾರೆ.

ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2ನೇ ಬಾರಿ ಅಧಿಕಾರಕ್ಕೆ ಬಂದು 100 ದಿನಗಳು ಕಳೆದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಸಚಿವ ನಿತಿನ್ ಗಡ್ಕರಿ, ರಸ್ತೆ ಸಾರಿಗೆ ಸಚಿವನಾಗಿರುವ ನನ್ನ ಕಾರು ನಿಗದಿತ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸುತ್ತಿತ್ತು ಎಂಬ ಕಾರಣಕ್ಕೆ ದಂಡ ಹಾಕಿದ್ದಾರೆ. ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ ಎಂದಿದ್ದಾರೆ. ಅತಿಯಾದ ವೇಗದಿಂದ ಓಡುತ್ತಿದ್ದ ನಿತಿನ್ ಗಡ್ಕರಿ ಅವರ ಖಾಸಗಿ ಕಾರಿಗೆ ಟ್ರಾಫಿಕ್ ಪೊಲೀಸರು ದಂಡ ಹಾಕಿದ್ದಾರೆ.

ಟ್ರಾಫಿಕ್​ ನಿಯಮ ಉಲ್ಲಂಘನೆ; ಒಡಿಶಾದ ಲಾರಿ ಚಾಲಕನಿಗೆ ಬಿದ್ದ ದಂಡ ಬರೋಬ್ಬರಿ 86,500 ರೂ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಲವೆಡೆ ರಸ್ತೆ ಹಾಳಾಗಿದೆ. ಹೀಗಾಗಿ, ಅಂತಹ ಪ್ರಮುಖ 786 ಜಾಗಗಳನ್ನು ಗುರುತಿಸಿದ್ದೇವೆ. ವಾಹನ ಚಾಲಕರ ಬಳಿ ಇರುವ ಶೇ. 30ರಷ್ಟು ಲೈಸೆನ್ಸ್​ಗಳು ನಕಲಿ ಎಂದು ಕೂಡ ನಮಗೆ ಹೊಸ ಕಾನೂನು ಜಾರಿಗೆ ತಂದಮೇಲೆ ಗೊತ್ತಾಗಿದೆ. ಈ ದುಬಾರಿ ದಂಡದಿಂದ ಟ್ರಾಫಿಕ್​ಗೆ ಸಂಬಂಧಿಸಿದ ಬಹುತೇಕ ಅಪರಾಧಗಳನ್ನು ತಡೆಗಟ್ಟಬಹುದು. ಹೊಸ ಕಾನೂನಿನಲ್ಲಿ ದಂಡ ಮಾತ್ರ ಹೆಚ್ಚಳವಾಗಿಲ್ಲ. ಅಪಘಾತದಲ್ಲಿ ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಆಕ್ಸಿಡೆಂಟ್​ನಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂ. ನೀಡಲಾಗುವುದು ಎಂದು ಹೇಳಿದ್ದಾರೆ.

New Traffic Rules: ವಾಹನ ಸವಾರರೇ ಎಚ್ಚರ!; ಇಂದಿನಿಂದಲೇ ಜಾರಿಯಾಗಲಿದೆ ಹೊಸ ಟ್ರಾಫಿಕ್ ನಿಯಮ

ಕೇಂದ್ರ ಸಚಿವನೇ ಆಗಿರಲಿ, ಮುಖ್ಯಮಂತ್ರಿಯೇ ಆಗಿರಲಿ ನೀವು ಕಾನೂನು ಉಲ್ಲಂಘನೆ ಮಾಡಿದ್ದೀರಿ ಎಂದರೆ ದಂಡ ಕಟ್ಟಲೇಬೇಕು. ಸಿಎಂ, ಅಧಿಕಾರಿಗಳ ವಾಹನಗಳಿಗೂ ದಂಡ ವಿಧಿಸಿರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಈ ರೀತಿ ಕಟ್ಟುನಿಟ್ಟಾಗಿ ಕಾನೂನು ಜಾರಿಗೆ ತಂದಾಗ ಮಾತ್ರ ಶಿಸ್ತು ಉಂಟಾಗಲು ಸಾಧ್ಯ ಎಂದು ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.

First published:September 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ