ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಹೆಲ್ಮೆಟ್​ ಫ್ರೀ; ವಿನೂತನ ಅಭಿಯಾನಕ್ಕೆ ಮುಂದಾದ ಒರಿಸ್ಸಾ ಸರ್ಕಾರ

ಒರಿಸ್ಸಾದಲ್ಲಿ ಸಾರಿಗೆ ಇಲಾಖೆ ರಜಾ ದಿನವೂ ತೆರೆದಿರುತ್ತದೆ. ಸಾರ್ವಜನಿಕರು ಮೋಟಾರು ವಾಹನ ಕಾಯ್ದೆಯಲ್ಲಿ ನಮೂದಿಸಲಾದ ದಾಖಲಾತಿಗಳನ್ನು ಸಿದ್ಧಪಡಿಸಿಕೊಳ್ಳಲು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು

Sushma Chakre | news18-kannada
Updated:September 11, 2019, 2:52 PM IST
ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಹೆಲ್ಮೆಟ್​ ಫ್ರೀ; ವಿನೂತನ ಅಭಿಯಾನಕ್ಕೆ ಮುಂದಾದ ಒರಿಸ್ಸಾ ಸರ್ಕಾರ
ಸಾಂದರ್ಭಿಕ ಚಿತ್ರ
Sushma Chakre | news18-kannada
Updated: September 11, 2019, 2:52 PM IST
ಭುವನೇಶ್ವರ್ (ಸೆ. 11): ಎಲ್ಲ ದಾಖಲೆಗಳೂ ಸರಿಯಾಗಿದ್ದರೂ ಟ್ರಾಫಿಕ್ ಪೊಲೀಸರು ಬೇರೇನಾದರೂ ತಪ್ಪು ಹುಡುಕಿ ಎಲ್ಲಿ ದಂಡ ಹಾಕಿಬಿಡುತ್ತಾರೋ ಎಂಬ ಭಯದಿಂದ ಅನೇಕ ಜನರು ವಾಹನವನ್ನು ರಸ್ತೆಗೆ ಇಳಿಸೋಕೂ ಹಿಂಜರಿಯುವಂತಾಗಿದೆ. ಚಪ್ಪಲಿ ಹೆಲ್ಮೆಟ್ ಧರಿಸದೇ ಇದ್ದದ್ದು, ಡಿಎಲ್​ ಇಲ್ಲದೇ ಗಾಡಿ ಓಡಿಸಿದ್ದು ಇಂತಹ ತಪ್ಪುಗಳ ಜೊತೆಗೆ ಚಪ್ಪಲಿ ಹಾಕಿಕೊಂಡು ಗಾಡಿ ಓಡಿಸಿದ್ದಕ್ಕೆ, ಲುಂಗಿ ಉಟ್ಟುಕೊಂಡು ಡ್ರೈವ್ ಮಾಡಿದ್ದಕ್ಕೆ ಹೀಗೆ ಹೊಸ ಹೊಸ ಕಾರಣಗಳನ್ನು ನೀಡಿ ಟ್ರಾಫಿಕ್ ಪೊಲೀಸರು ಸಾವಿರಾರು ರೂ. ದಂಡ ಹಾಕುತ್ತಿದ್ದಾರೆ.

ಟ್ರಾಫಿಕ್ ರೂಲ್ಸ್​ ಉಲ್ಲಂಘಿಸಿದವರಿಗೆ ದುಬಾರಿ ದಂಡ ವಿಧಿಸುವುದರಿಂದ ಏನೂ ಉಪಯೋಗವಿಲ್ಲ. ಅದರ ಬದಲು ಹೆಲ್ಮೆಟ್ ಇಲ್ಲದವರ ಬಳಿ 500 ರೂ. ತೆಗೆದುಕೊಂಡು ಹೊಸ ಹೆಲ್ಮೆಟ್ ನೀಡಿ, ಆರ್​ಸಿ ಇಲ್ಲದವರಿಗೆ ವ್ಯವಸ್ಥೆ ಕಲ್ಪಿಸಿ. ಆಗ ಅವರೂ ಸುರಕ್ಷಿತರಾಗಿರುತ್ತಾರೆ ಎಂಬ ಸಲಹೆಗಳು ಸಾರ್ವಜನಿಕರಿಂದ ಬಂದಿತ್ತು. ಇದೀಗ ಅದೇ ಹಾದಿಯಲ್ಲಿ ಸಾಗಿರುವ ಒರಿಸ್ಸಾ ಸರ್ಕಾರ ಹೆಲ್ಮೆಟ್ ಧರಿಸದೆ ಬೈಕ್ ಓಡಿಸುವವರಿಗೆ ಗುಲಾಬಿ ಹೂವು ಕೊಟ್ಟು, ಉಚಿತವಾಗಿ ಹೆಲ್ಮೆಟ್ ಕೂಡ ವಿತರಿಸಲಾಗುತ್ತಿದೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಒರಿಸ್ಸಾ ಸರ್ಕಾರ ಮುಂದಾಗಿದೆ.

ಓವರ್ ಲೋಡ್​ ಮಾಡಿದ ಲಾರಿ ಮಾಲೀಕನಿಗೆ 1.41 ಲಕ್ಷ ದಂಡ..!

ಒರಿಸ್ಸಾದ ಭುವನೇಶ್ವರದಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ. ಇಲ್ಲಿನ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ಕೂಡಲೇ ತಮ್ಮ ರಾಜ್ಯದಲ್ಲಿ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆಯನ್ನು ಅಳವಡಿಸದೆ ಜನರಿಗೆ ಸೂಕ್ತ ದಾಖಲಾತಿಗಳನ್ನು ಸಂಗ್ರಹಿಸಿಕೊಳ್ಳಲು 3 ತಿಂಗಳ ಕಾಲ ಸಮಯಾವಕಾಶ ನೀಡುವುದಾಗಿ ಘೋಷಿಸಿದ್ದರು. ಹೀಗಾಗಿ, ಒರಿಸ್ಸಾದಲ್ಲಿ ಇನ್ನೂ ಈ ಹೊಸ ಕಾಯ್ದೆ ಜಾರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ಕಾನೂನಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ರಸ್ತೆ ಸುರಕ್ಷತಾ ಕ್ರಮದ ಬಗ್ಗೆ ಮಾಹಿತಿ ನೀಡಲು ಉಚಿತವಾಗಿ ಹೆಲ್ಮೆಟ್ ವಿತರಿಸಲಾಗುತ್ತಿದೆ.

ಹೊಸದಾಗಿ ಜಾರಿಗೆ ತಂದಿರುವ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಿಂದ ದುಬಾರಿ ದಂಡ ವಿಧಿಸಿ ಆದಾಯ ಗಳಿಸಬೇಕಾದ ಅಗತ್ಯ ಸರ್ಕಾರಕ್ಕಿಲ್ಲ. ನಮ್ಮ ಮುಖ್ಯ ಉದ್ದೇಶ ಜನರ ಸುರಕ್ಷತೆಯೇ ಹೊರತು ದಂಡ ಹಾಕುವುದಲ್ಲ. ಹೀಗಾಗಿ, ರಸ್ತೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಒರಿಸ್ಸಾದ ಉಪ ಪೊಲೀಸ್ ಆಯುಕ್ತರಾದ (ಟ್ರಾಫಿಕ್) ಸಾಗರಿಕಾ ನಾಥ್ ತಿಳಿಸಿದ್ದಾರೆ.

 ಲುಂಗಿ ಉಟ್ಟಿದ್ದಕ್ಕೆ 2 ಸಾವಿರ ರೂ. ದಂಡ ಕಟ್ಟಿದ ಚಾಲಕ!

ಅಂದಹಾಗೆ, ಹೆಲ್ಮೆಟ್ ಇಲ್ಲದೆ ಪ್ರಯಾಣಿಸುವ ದ್ವಿಚಕ್ರ ವಾಹನ ಚಾಲಕರಿಗೆ ಉಚಿತವಾಗಿ ಹೆಲ್ಮೆಟ್ ನೀಡುವುದರ ಜೊತೆಗೆ 500 ರೂ. ದಂಡ ಹಾಕಲಾಗುತ್ತಿದೆ. ಇದು ಬೇರೆ ರಾಜ್ಯಗಳಿಗೆ ಹೋಲಿಸಿದರೆ ಬಹಳ ಕಡಿಮೆ ಮೊತ್ತದ್ದಾಗಿದ್ದು, ಆ ಹಣದಲ್ಲಿ ಪೊಲೀಸ್ ಇಲಾಖೆಯೇ ಹೆಲ್ಮೆಟ್ ಖರೀದಿಸುತ್ತಿದೆ. ಒರಿಸ್ಸಾದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಮಾತ್ರವಲ್ಲ ಕೆಲವು ಸೆಲೆಬ್ರಿಟಿಗಳು ಕೂಡ ಟ್ರಾಫಿಕ್ ನಿಯಮ ಉಲ್ಲಂಘಿಸಿದವರಿಗೆ ಚಾಕೋಲೇಟ್, ಹೂಗಳು, ಥ್ಯಾಂಕ್​ ಯು ಕಾರ್ಡ್​ ನೀಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
Loading...

ಹಾಗೇ, ಒರಿಸ್ಸಾದಲ್ಲಿ ಸಾರಿಗೆ ಇಲಾಖೆ ರಜಾ ದಿನವೂ ತೆರೆದಿರುತ್ತದೆ. ಸಾರ್ವಜನಿಕರು ಮೋಟಾರು ವಾಹನ ಕಾಯ್ದೆಯಲ್ಲಿ ನಮೂದಿಸಲಾದ ದಾಖಲಾತಿಗಳನ್ನು ಸಿದ್ಧಪಡಿಸಿಕೊಳ್ಳಲು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. 3 ತಿಂಗಳ ಅವಧಿ ಮುಗಿದ ನಂತರ ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಕಾಯ್ದೆಯನ್ನು ಜಾರಿಗೆ ತರಲಾಗುತ್ತದೆ. ಅಷ್ಟರೊಳಗೆ ಡಾಕ್ಯುಮೆಂಟ್​ಗಳನ್ನು ರೆಡಿ ಮಾಡಿಕೊಳ್ಳಬೇಕು ಎಂದು ಸಾರಿಗೆ ಸಚಿವ ಪಿ.ಎನ್. ಬೆಹೆರಾ ತಿಳಿಸಿದ್ದಾರೆ.

 

First published:September 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...