ಮುಂಬೈ: ಕಾರನ್ನು ತಡೆಯಲು ಯತ್ನಿಸಿ ಬಾನೆಟ್ (Car Bonnet) ಮೇಲೆ ಜಿಗಿದಿದ್ದ ಪೊಲೀಸ್ ಪೇದೆಯನ್ನು (Traffic Cop) ಕಾರು ಚಾಲಕನೊಬ್ಬ ಸುಮಾರು 20 ಕೀ.ಮೀ ವರೆಗೆ ಹೊತ್ತೊಯ್ದಿರುವ ಅಚ್ಚರಿಯ ಘಟನೆ ಮಹಾರಾಷ್ಟ್ರದ ನವಿ ಮುಂಬೈಯಲ್ಲಿ (Navi Mumbai) ನಡೆದಿದೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆರೋಪಿ ಚಾಲಕನನ್ನು ಪೊಲೀಸರು (Police) ಬಂಧಿಸಿದ್ದಾರೆ. ಸಿಗ್ನಲ್ ಜಂಪ್ ಮಾಡಿ ಹೋಗುತ್ತಿದ್ದ ಕಾರಣಕ್ಕೆ ಟ್ರಾಫಿಕ್ ಪೊಲೀಸ್ ( Traffic Policeman) ಕಾರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಯುವಕ ಕಾರನ್ನು ನಿಲ್ಲಿಸಲಿಲ್ಲ. ಕಾರಣ ಕಾನ್ಸ್‌ಟೇಬಲ್ ಕಾರಿನ ಬಾನೆಟ್ ಮೇಲೆ ಜಿಗಿದಿದ್ದಾರೆ. ಆದರೂ ಯುವಕ ನಿಲ್ಲಿಸದೇ 20 ಕಿಮೀ ದೂರ ಎಳೆದೊಯ್ದಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಇನ್ನು ಪೊಲೀಸ್ ಕಾನ್ಸ್‌ಟೇಬಲ್ ಕಾರಿನ ಮೇಲೆ ಬಿದ್ದಿದ್ದರೂ ಯುವಕ ಕಾರನ್ನು ನಿಲ್ಲಿಸದೇ ವೇಗವಾಗಿ ಕಾರನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವ ವಿಡಿಯೋಗಳು ಸಿಗ್ನಲ್ನಲ್ಲಿರುವ ಕ್ಯಾಮೆರಾ ಸೇರಿದಂತೆ ಹಲವು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಕಾರಿನಲ್ಲಿ ಸಿಲುಕಿಕೊಂಡಿದ್ದ ಕಾನ್ಸ್‌ಟೇಬಲ್ ಅವರನ್ನು ಸಿದ್ದೇಶ್ವರ ಮಾಳಿ ಹಾಗೂ ಆರೋಪಿ ಚಾಲಕನನ್ನು ನೆರೂಲ್ ನಿವಾಸಿ ಆದಿತ್ಯ ಬೆಮ್ಡೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Crime News: ಪ್ರಿಯತಮೆಯನ್ನು ಇಸ್ಲಾಂಗೆ ಮತಾಂತರವಾಗುವಂತೆ ಒತ್ತಾಯ; ಒಪ್ಪದ ಯುವತಿ ಕಿರುಕುಳಕ್ಕೆ ಬಲಿ!
ಕಾರು ಚಾಲಕ ಬಂಧನ
ಪೊಲೀಸರು ಕಾರು ಚಾಲಕ ಆದಿತ್ಯ ಬೆಮ್ಡೆ (23) ನನ್ನು ಬಂಧಿಸಿದ್ದಾರೆ. ಆದಿತ್ಯ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಾಫಿಕ್ ಕಾನ್ಸ್‌ಟೇಬಲ್ ಸಿದ್ಧೇಶ್ವರ ಮಾಳಿ (37) ಕಾರಿನ ಬಾನೆಟ್ ಮೇಲೆ ಬಿದ್ದರೂ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಆದರೂ ವೇಗವಾಗಿ ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ನೇತಾಡಿಕೊಂಡು 15-20 ನಿಮಿಷಗಳ ಕಾಲ ಹೋಗಿದ್ದಾರೆ. ಪಾಮ್ ಬೀಚ್ ರಸ್ತೆಯ ಹಲವೆಡೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದೆ. ಕಾನ್ಸ್‌ಟೇಬಲ್ ಸಿದ್ಧೇಶ್ವರ ಮಾಳಿ ಅವರು ಬ್ಲೂ ಡೈಮಂಡ್ ಜಂಕ್ಷನ್‌ನಲ್ಲಿ ರೆಡ್ ಸಿಗ್ನಲ್ ಜಂಪ್ ಮಾಡಿ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ ಚಾಲಕನನ್ನು ನಿಲ್ಲಿಸಲು ಪ್ರಯತ್ನಿಸಿದ ವೇಳೆ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಮಿಶ್ ಆಗಮನದ ಹಿನ್ನಲೆ ಭದ್ರತಾ ಕಾರ್ಯದಲ್ಲಿದ್ದ ಕಾನ್ಸ್‌ಟೇಬಲ್
ಕೇಂದ್ರ ಗೃಹ ಸಚಿವ ಅಮಿತ್ ಶಾ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸ್ ಸಿದ್ದೇಶ್ವರ ಮಾಲಿ ಅವರು ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು. ವಾಹನಗಳ ಪರಿಶೀಲನೆಯಲ್ಲಿ ಅವರು ತೊಡಗಿದ್ದರು. ಈ ವೇಳೆ ಸಿಗ್ನಲ್ ಜಂಪ್ ಮಾಡಿದ್ದ ಕಾರನ್ನು ಅನುಮಾನದ ಮೇರೆಗೆ ಸಿದ್ದೇಶ್ವರ ಅವರು ತಡೆಯಲು ಯತ್ನಿಸಿದ್ದಾರೆ. ಆದರೆ, ಕಾರು ನಿಲ್ಲಿಸದ ಕಾರಣ ಪೊಲೀಸ್ ಸಿಬ್ಬಂದಿ ಬಾನೆಟ್ ಮೇಲೆ ಬಿದ್ದಿದ್ದಾರೆ. ಆದರೂ ಅಮಲಿನಲ್ಲಿದ್ದ ಚಾಲಕ 20ಕೀ.ಮೀ ತನಕ ಹಾಗೆಯೇ ಹೊತ್ತೊಯ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದರು.
Watch | A traffic constable in Navi Mumbai was dragged on top of a car's bonnet for about 20km along the Palm Beach Road from Vashi till Gavhan Phata near Uran after he tried to stop a motorist for jumping traffic signal. pic.twitter.com/y3YeXXeaUR
— Daily Report (@dailyreported) April 15, 2023
ಕಾರಿನ ಮೇಲೆ ಬಿದ್ದಿದ್ದ ಪೊಲೀಸ್ ಎಷ್ಟು ಸಾರಿ ಕಾರನ್ನು ನಿಲ್ಲಿಸಲು ಹೇಳಿದರೂ, ಚಾಲಕ ಮಾತ್ರ ನಿಲ್ಲಿಸದೇ ಇನ್ನೂ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಅಲ್ಲದೆ ಚಾಲಕ ಪಾಮ್ ಬೀಚ್ ರಸ್ತೆಗೆ ಎಡಕ್ಕೆ ತಿರುಗಿಸಿದ್ದಾನೆ. ಈ ಸಂದರ್ಭದಲ್ಲಿ, ಪೊಲೀಸ್ನನ್ನು ಬಾನೆಟ್‌ನಿಂದ ಬೀಳುವಂತೆ ಮಾಡಲು ಆರೋಪಿ ಚಾಲಕ ಹಲವಾರು ಬಾರಿ ಪ್ರಯತ್ನಿಸಿದ್ದಾನೆ. ಅಷ್ಟೊತ್ತಿಗಾಗಲೇ ಪೋಲೀಸ್ರೊಬ್ಬರನ್ನು ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋಗುತ್ತಿರುವ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದಿದೆ. ನಂತರ ದಾರಿಯಲ್ಲಿದ್ದ ಪೊಲೀಸರಿಗೆ ವೈರ್‌ಲೆಸ್ ಸಂದೇಶಗಳನ್ನು ನೀಡಲಾಗಿದ್ದು, ಕಾರ್ಯನಿರತರಾದ ಪೊಲೀಸರು ಕಾರನ್ನು ಅಡ್ಡಗಟ್ಟಿ ಕಾನ್ಸ್ಟೇಬಲ್ರನ್ನ ರಕ್ಷಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Atiq Ahmed Killers: ಅತೀಕ್ ಅಹ್ಮದ್ ಶೂಟೌಟ್‌ನ ಮೂವರು ಆರೋಪಿಗಳಿಗಿದೆ ಖತರ್ನಾಕ್ ಇತಿಹಾಸ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ