ಹೈದರಾಬಾದ್: ಹೃದಯಾಘಾತದಿಂದ (Heart Attack)ಫುಟ್‌ಪಾತ್‌ನಲ್ಲಿ ಕುಸಿದ ಬಿದ್ದಿದ್ದ ವ್ಯಕ್ತಿಯೊಬ್ಬರ ಜೀವವನ್ನು ಕಾರ್ಡಿಯೋಪಲ್ಮನರಿ ರಿಸಸಿಟೇಶನ್ (CPR)ನೀಡುವ ಮೂಲಕ ಕಾನ್ಸ್ಟೇಬಲ್ (Constable) ಒಬ್ಬರು ಉಳಿಸಿದ್ದಾರೆ. ಹೈದರಾಬಾದ್‌ನಲ್ಲಿ (Hyderabad) ಈ ಘಟನೆ ನಡೆದಿದ್ದು ವ್ಯಕ್ತಿಯ ಪ್ರಾಣ ಉಳಿಸಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನೆಟಿಜನ್ಸ್ ಪ್ರಶಂಸಿಸುತ್ತಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ವರದಿಯ ಪ್ರಕಾರ, ಬಾಲರಾಜ್ ಎಂಬ ಹೆಸರಿನ ವ್ಯಕ್ತಿಯೊಬ್ಬರು ಬಸ್‌ನಿಂದ ಉಳಿದು ರಾಜೇಂದರ್ ನಗರ ಎಂಬಲ್ಲಿ ಇಳಿದಿದ್ದರು. ಬಸ್‌ನಿಂದ ಇಳಿದ ಕೆಲವೇ ಕ್ಷಣಗಳಲ್ಲಿ ಆತನಿಗೆ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣ ಪಕ್ಕದಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಕಾನ್ಸ್ಟೇಬಲ್ ಸಹಾಯಕ್ಕೆ ಆಗಮಿಸಿದ್ದಾರೆ.
ಸಿಪಿಆರ್ ನೀಡಿ ಪ್ರಾಣ ಉಳಿಸಿದ ಕಾನ್ಸ್ಟೇಬಲ್
ವಿಡಿಯೋದಲ್ಲಿ ಟ್ರಾಫಿಕ್ ಕಾನ್‌ಸ್ಟೆಬಲ್ ರಾಜಶೇಖರ್ ಕುಸಿದುಬಿದ್ದ ವ್ಯಕ್ತಿಯ ಎದೆಯನ್ನು ಹೊತ್ತಿ ಪಂಪ್ ಮಾಡಿ ಬದುಕಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಸದ್ಯ ಕಾನ್ಸ್ಟೇಬಲ್ ಪ್ರಯತ್ನದಿಂದ ಹೃದಯಾಘಾತಕ್ಕೊಳಗಾಗಿದ್ದ ಬಾಲರಾಜ್ ಬದುಕುಳಿದಿದ್ದಾರೆ. ಬಾಲರಾಜ್ ಪ್ರಾಣ ಉಳಿಸಿದ ಟ್ರಾಫಿಕ್ ಕಾನ್ ಸ್ಟೇಬಲ್ ರಾಜಶೇಖರ್ ರಾಜೇಂದ್ರನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ತಿಳಿದುಬಂದಿದೆ.
ప్రాణం కాపాడిన ట్రాఫిక్ పోలీస్ రాజశేఖర్
రాజేంద్రనగర్ ఆరంఘర్ చౌరస్తాలో బాలరాజు అనే వ్యక్తికి గుండెపోటు రాగా అక్కడే విధులు నిర్వహిస్తున్న ట్రాఫిక్ కానిస్టేబుల్ రాజశేఖర్ సిపిఆర్ చేసి ప్రాణం కాపాడాడు. ఇప్పుడు బాలరాజు సురక్షితంగా ఉన్నారు. pic.twitter.com/vDH3zdd6gm
— CYBERABAD TRAFFIC POLICE సైబరాబాద్ ట్రాఫిక్ పోలీస్ (@CYBTRAFFIC) February 24, 2023
ಕಾನ್ಸ್ಟೇಬಲ್ ಬಾಲರಾಜ್ಗೆ ಸಿಪಿಆರ್ ನೀಡಿದ ನಂತರ ಉಸಿರಾಡಲು ಶುರುಮಾಡಿದ್ದಾರೆ. ತಕ್ಷಣ ಅವರು 108ಕ್ಕೂ ಕರೆ ಮಾಡಿದ್ದು, ಆ್ಯಂಬುಲೆನ್ಸ್ ಮೂಲಕ ಹೈದರ್‌ಗುಡದ ಜರ್ಮನ್‌ಟೆಕ್ ಆಸ್ಪತ್ರೆಗೆ ಸೇರಿಸಲಾಗಿದೆ. ಸೈಬರಾಬಾದ್ ಟ್ರಾಫಿಕ್ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಬಾಲರಾಜ್ ಅವರು ಈಗ ಸುರಕ್ಷಿತವಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ಬಾಲರಾಜ್ ಪ್ರಾಣ ಉಳಿಸಿದ ಟ್ರಾಫಿಕ್ ಪೊಲೀಸ್ ರಾಜಶೇಖರ್ಗೆ ನೆಟಿಜನ್ಗಳು ಮೆಚ್ಚುಗೆಯ ಸುರಿಮಳೆ ಹರಿಸುತ್ತಿದ್ದಾರೆ. ದೇವರೇ ಮನುಷ್ಯನ ರೂಪದಲ್ಲಿ ಬಂದು ಪ್ರಾಣ ಉಳಿಸಿದ್ದಾನೆ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ.
ರಾತ್ರೋ ರಾತ್ರಿ ಸ್ಟಾರ್ ಆಗಿದ್ದ ಮಹಿಳಾ ಕಾನ್ಸ್ಟೇಬಲ್
ಇತ್ತೀಚೆಗೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲೂ ಮಹಿಳಾ ಪೇದೆಯೊಬ್ಬರು ಕೂಡ ಹೃದಯಾಘಾತಕ್ಕೊಳಗಾಗಿದ್ದ ವ್ಯಕ್ತಿಯನ್ನು ಸಿಪಿಆರ್ ಮೂಲಕ ಪ್ರಾಣ ಉಳಿಸಿ ಒಂದೇ ದಿನಕ್ಕೆ ಸ್ಟಾರ್ ಆಗಿದ್ದರು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಓರ್ವ ವ್ಯಕ್ತಿಗೆ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದಿದ್ದರು. ಈ ವೇಳೆ ಸೋನಂ ಪರಾಶರ್ ಟ್ರಾಫಿಕ್ ಡ್ಯೂಟಿಯಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿರುವ ಸೋನಂ, ಕೂಡಲೇ ಸಿಪಿಆರ್ ನೀಡಿ ವ್ಯಕ್ತಿಯನ್ನುಆಸ್ಪತ್ರೆಗೆ ಸಾಗಿಸಿ ಆತನ ಪ್ರಾಣ ಉಳಿಸಿದ್ದರು.
CPR ಎಂದರೇನು?
ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ನನ್ನು ಶಾರ್ಟ್ ಆಗಿ ಸಿಪಿಆರ್ ಎಂದು ಕರೆಯಲಾಗುತ್ತದೆ. ವ್ಯಕ್ತಿಯು ಮೂರ್ಛೆ ಹೋದರೆ, ಹೃದಯ ಬಡಿತವು ನಿಂತುಹೋದರೆ ಅಥವಾ ನಾಡಿ ಮಿಡಿತ ನಿಂತಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಸಿಪಿಆರ್ ನೀಡಲಾಗುತ್ತದೆ. ಇದು ರೋಗಿಗೆ ಉಸಿರಾಡಲು ನೆರವಾಗುತ್ತದೆ. ಸಿಪಿಆರ್ ನೀಡುವಾಗ, ಇದು ಹೃದಯ ಮತ್ತು ಮೆದುಳಿನಲ್ಲಿ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಸಿಪಿಆರ್ ಸಹಾಯದಿಂದ, ವ್ಯಕ್ತಿಗೆ ಹೊಸ ಜೀವ ಸಿಗಬಹುದು.
ಉಸಿರಾಟ ಅಥವಾ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಉಸಿರಾಟ ಅಥವಾ ಹೃದಯ ಬಡಿತ ಸ್ಥಗಿತಗೊಂಡಾಗ ಸಿಪಿಆರ್ ನೀಡುವ ಮೂಲಕ ಅವರ ಜೀವವನ್ನು ಉಳಿಸಬಹುದು. ಇದರಲ್ಲಿ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯ ಎದೆಯ ಮೇಲೆ ಕೈ ಇಟ್ಟು ಬಲವಾಗಿ ಒತ್ತಿ ಪಂಪ್ ಮಾಡಲಾಗುತ್ತದೆ. ಸಣ್ಣಪುಟ್ಟ ಸಮಸ್ಯೆಯಿಂದ ಉಸಿರಾಟ ಅಥವಾ ಹೃದಯ ಬಡಿತ ನಿಂತುಹೋಗಿದ್ದರೆ, ಅದು ಮತ್ತೆ ಹೃದಯಬಡಿದ ಶುರುವಾಗಿ ವ್ಯಕ್ತಿಯ ಜೀವವೂ ಉಳಿಯುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ