ದೆಹಲಿಯಲ್ಲಿ ನಿಗೂಢವಾಗಿ ಬಾಯ್ಬಿಡುತ್ತಿದೆ ಭೂಮಿ: ಟ್ರಾಫಿಕ್ ಜಂಕ್ಷನ್​ನಲ್ಲಿ ಏಕಾಏಕಿ ಬೃಹತ್ ಹಳ್ಳ!

Delhi Sinkhole: ಇದೇ ತಿಂಗಳಲ್ಲಿ 2ನೇ ಸಲ ಈ ರೀತಿ ರಸ್ತೆ ಗುಂಡಿ ದೆಹಲಿಯಲ್ಲಿ ಪತ್ತೆಯಾಗಿದೆ. ಕೆಲ ದಿನಗಳ ಹಿಂದೆ ದ್ವಾರಕದಲ್ಲಿ ಇದೇ ರೀತಿ ರಸ್ತೆ ಮಧ್ಯೆ ಏಕಾಏಕಿ ಬೃಹತ್​ ಗುಂಡಿ ಬಿದ್ದಿತ್ತು.

ರಸ್ತೆ ಮಧ್ಯೆ ಬೃಹತ್​ ಹಳ್ಳ

ರಸ್ತೆ ಮಧ್ಯೆ ಬೃಹತ್​ ಹಳ್ಳ

 • Share this:
  ರಾಜಧಾನಿ ದೆಹಲಿಯಲ್ಲಿ ಭೂಮಿ ನಿಗೂಢವಾಗಿ ಬಾಯ್ಬಿಟ್ಟ 2ನೇ ಪ್ರಕರಣ ವರದಿಯಾಗಿದೆ. ಹೈವೇ ರಸ್ತೆಯಲ್ಲಿನ ಟ್ರಾಫಿಕ್​ ಜಂಕ್ಷನ್​ನಲ್ಲಿ ಬೃಹತ್​ ಹಳ್ಳ ಬಿದ್ದಿದೆ. ಸತತವಾಗಿ ವಾಹನಗಳು ಓಡಾಡುವ ಸ್ಥಳದಲ್ಲಿ ಏಕಾಏಕಿ ನೆಲೆ ಬಾಯ್ತರೆದು ಬೃಹದಾಕಾರದ ಗುಂಡಿ ಸೃಷ್ಟಿಯಾಗಿದೆ. ಐಐಟಿ ಡೆಲ್ಲಿ ಫ್ಲೈಓವರ್​  ಬಳಿ ರಸ್ತೆ ಗುಂಡಿ ಬಿದ್ದಿರುವುದು ಆತಂಕ ಸೃಷ್ಟಿಸಿದೆ.

  ಇದೇ ತಿಂಗಳಲ್ಲಿ 2ನೇ ಸಲ ಈ ರೀತಿ ರಸ್ತೆ ಗುಂಡಿ ದೆಹಲಿಯಲ್ಲಿ ಪತ್ತೆಯಾಗಿದೆ. ಕೆಲ ದಿನಗಳ ಹಿಂದೆ ದ್ವಾರಕದಲ್ಲಿ ಇದೇ ರೀತಿ ರಸ್ತೆ ಮಧ್ಯೆ ಏಕಾಏಕಿ ಬೃಹತ್​ ಗುಂಡಿ ಬಿದ್ದಿತ್ತು. ಚಲಿಸುತ್ತಿದ್ದ ವಾಹನ ಗುಂಡಿಯೊಳಗೆ ಮುಳಿಗಿಹೋಗಿತ್ತು. ಕಾರು ಚಲಾಯಿಸುತ್ತಿದ್ದ ಪೊಲೀಸ್​ ಅಧಿಕಾರಿ ಅಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದರು. ಇದಾದ ಬಳಿಕ ಮತ್ತೆ ಈಗ ದೆಹಲಿಯಲ್ಲಿ ಭೂಮಿ ಬಾಯ್ಬಿಟ್ಟಿದೆ.

  ರಾಷ್ಟ್ರರಾಜಧಾನಿಯಲ್ಲಿ ಮಳೆಯಿಂದಾಗಿ ಈ ರೀತಿಯ ಗುಂಡಿಗಳು ಸೃಷ್ಟಿಯಾಗುತ್ತಿವೆ ಎನ್ನುತ್ತಿದ್ದಾರೆ ಸ್ಥಳೀಯ ಅಧಿಕಾರಿಗಳು. ಆದರೆ ಈಗೆ ಭೂಮಿ ಬಾಯ್ಬಿಡುವುದರ ಹಿಂದೆ ನಿಗೂಢ ಕಾರಣವಿದೆಯಾ? ಭೂಕಂಪನದ ಮುನ್ಸೂಚನೆನಾ ಎಂಬ ಭೀತಿ ದೆಹಲಿ ಜನರಲ್ಲಿ ಮನೆ ಮಾಡಿದೆ. ಭೂಮಿ ಬಾಯ್ಬಿಡುವುದು ಹೀಗೆಯೇ ಮುಂದುವರೆದರೆ ಅಪಾಯ ಕಟ್ಟಿಟ್ಟ ಬುತ್ತಿ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Kavya V
  First published: