ಮುಂದುವರೆದ ಚೀನಾ-ಅಮೆರಿಕ ವಾಣಿಜ್ಯ ಸಮರ; ಯುಎಸ್​ನ 75 ಬಿ. ಡಾಲರ್ ಮೌಲ್ಯದ ಸರಕಿನ ಮೇಲೆ ಹೆಚ್ಚುವರಿ ಸುಂಕ

ಕಳೆದ ವರ್ಷ ಅಮೆರಿಕ ಮತ್ತು ಚೀನಾ ನಡುವೆ ವಾಣಿಜ್ಯ ಸಮರ ಆರಂಭವಾಗಿದ್ದು, ಎರಡು ಕಡೆಯಿಂದಲೂ ವಾಣಿಜ್ಯ ವಹಿವಾಟುಗಳ ಮೇಲೆ ಶಿಕ್ಷಾರ್ಹ ಸುಂಕಗಳನ್ನು ಹೇರಿಕೆ ಮಾಡಲಾಗುತ್ತಿದೆ. ಎರಡು ದೇಶಗಳ ವಾಣಿಜ್ಯ ಸಮರದಿಂದಾಗಿ ಜಾಗತಿಕ ಆರ್ಥಿಕತೆ ಅದೋಗತಿಗೆ ತಲುಪಿದ್ದು, ಇತರೆ ದೇಶಗಳ ಆರ್ಥಿಕ ಪರಿಸ್ಥಿತಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

HR Ramesh | news18-kannada
Updated:August 23, 2019, 9:55 PM IST
ಮುಂದುವರೆದ ಚೀನಾ-ಅಮೆರಿಕ ವಾಣಿಜ್ಯ ಸಮರ; ಯುಎಸ್​ನ 75 ಬಿ. ಡಾಲರ್ ಮೌಲ್ಯದ ಸರಕಿನ ಮೇಲೆ ಹೆಚ್ಚುವರಿ ಸುಂಕ
ಪ್ರಾತಿನಿಧಿಕ ಚಿತ್ರ
  • Share this:
ಬೀಜಿಂಗ್: ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್ ಅವರು ಚೀನಾದ 300 ಬಿಲಿಯನ್ ಯುಎಸ್​ ಡಾಲರ್ ಮೌಲ್ಯದ ಸರಕುಗಳ ಮೇಲೆ  ಹೊಸ ಸುಂಕ ಹೇರಿದ್ದಕ್ಕೆ ಪ್ರತಿಯಾಗಿ ಚೀನಾ ಕೂಡ ಅಮೆರಿಕದ 75 ಬಿಲಿಯನ್ ಯುಎಸ್​ ಡಾಲರ್ ಮೌಲ್ಯದ ಸರಕುಗಳ ಮೇಲೆ ಹೆಚ್ಚುವರಿ ಶೇ.10 ಸುಂಕ ಹೇರಿಕೆ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಈ ಮೂಲಕ ಎರಡು ದೇಶಗಳು ಉದ್ದೇಶಪೂರ್ವಕವಾಗಿ ವಾಣಿಜ್ಯ ಸಮರವನ್ನು ಮುಂದುವರೆಸಿವೆ.

ಕಳೆದ ವರ್ಷ ಅಮೆರಿಕ ಮತ್ತು ಚೀನಾ ನಡುವೆ ವಾಣಿಜ್ಯ ಸಮರ ಆರಂಭವಾಗಿದ್ದು, ಎರಡು ಕಡೆಯಿಂದಲೂ ವಾಣಿಜ್ಯ ವಹಿವಾಟುಗಳ ಮೇಲೆ ಶಿಕ್ಷಾರ್ಹ ಸುಂಕಗಳನ್ನು ಹೇರಿಕೆ ಮಾಡಲಾಗುತ್ತಿದೆ. ಎರಡು ದೇಶಗಳ ವಾಣಿಜ್ಯ ಸಮರದಿಂದಾಗಿ ಜಾಗತಿಕ ಆರ್ಥಿಕತೆ ಅದೋಗತಿಗೆ ತಲುಪಿದ್ದು, ಇತರೆ ದೇಶಗಳ ಆರ್ಥಿಕ ಪರಿಸ್ಥಿತಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಕಳೆದ ವರ್ಷ 539 ಶತಕೋಟಿ ಡಾಲರ್‌ಗೆ ಏರಿದ ಬೃಹತ್ ವ್ಯಾಪಾರ ಕೊರತೆಯನ್ನು ಕಡಿಮೆ ಮಾಡುವಂತೆ ಚೀನಾಕ್ಕೆ ಒತ್ತಾಯಿಸಿದ ಟ್ರಂಪ್​ ವ್ಯಾಪಾರ ಸಮರವನ್ನು ಪ್ರಾರಂಭಿಸಿದರು.

ಬೌದ್ಧಿಕ ಸಂಪನ್ಮೂಲ ಹಕ್ಕುಗಳ (ಐಪಿಆರ್​) ತಂತ್ರಜ್ಞಾನ ವರ್ಗಾವಣೆ ಮತ್ತು ಚೀನಾ ಮಾರುಕಟ್ಟೆಯಲ್ಲಿ ಅಮೆರಿಕ ಸರಕುಗಳ ಪ್ರವೇಶ ಕ್ರಮಗಳನ್ನು ಪರಿಶೀಲಿಸುವಂತೆ ಟ್ರಂಪ್​ ಚೀನಾವನ್ನು ಒತ್ತಾಯಿಸಿದ್ದರು.

ಇದನ್ನು ಓದಿ: ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಭಾರತದ ಪ್ರಗತಿ ಉತ್ತಮವಾಗಿದೆ; ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಚೀನಾದ 300 ಬಿಲಿಯನ್​ ಡಾಲರ್ ಮೌಲ್ಯದ ಸರಕುಗಳ ಮೇಲೆ ಅಮೆರಿಕ ಹೆಚ್ಚುವರಿಯಾಗಿ ಶೇ.10ರಷ್ಟು ಹೊಸ ಸುಂಕವನ್ನು ಆಗಸ್ಟ್​ 15ರಂದು ಜಾರಿ ಮಾಡಿತ್ತು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

First published:August 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ