ಕೃಷಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ; ಇಂಡಿಯಾ ಗೇಟ್ ಬಳಿ ಹೊತ್ತಿ ಉರಿದ ಟ್ರ್ಯಾಕ್ಟರ್​

ಇಂದು ಬೆಳಗ್ಗೆ 7.40ರ ಸುಮಾರಿಗೆ ಈ ಘಟನೆ ನಡೆದಿದೆ. 15ರಿಂದ 20 ಜನರ ಗುಂಪೊಂದು ಮಾನ್​ಸಿಂಗ್ ರಸ್ತೆಗೆ ಟ್ರ್ಯಾಕ್ಟರ್​ ತೆಗೆದುಕೊಂಡು ಬಂದರು. ನೋಡನೋಡುತ್ತಿದ್ದಂತೆ ಆ ಟ್ರ್ಯಾಕ್ಟರ್​ಗೆ ಬೆಂಕಿ ಹಚ್ಚಿದರು.

Sushma Chakre | news18-kannada
Updated:September 28, 2020, 12:06 PM IST
ಕೃಷಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ; ಇಂಡಿಯಾ ಗೇಟ್ ಬಳಿ ಹೊತ್ತಿ ಉರಿದ ಟ್ರ್ಯಾಕ್ಟರ್​
ಇಂಡಿಯಾ ಗೇಟ್ ಬಳಿ ಟ್ರ್ಯಾಕ್ಟರ್​ಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು
  • Share this:
ನವದೆಹಲಿ (ಸೆ. 28): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯನ್ನು ವಿರೋಧಿಸಿ ದೇಶದ ಹಲವೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಕರ್ನಾಟಕದಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರದ ವಿರುದ್ಧ ರೈತರು ಮತ್ತು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ನಡೆಸುತ್ತಿವೆ. ಇಂದು ದೆಹಲಿಯ ಇಂಡಿಯಾ ಗೇಟ್ ಬಳಿ ಪಂಜಾಬ್​ನ ಕಾಂಗ್ರೆಸ್ ಯುವಘಟಕದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಟ್ರ್ಯಾಕ್ಟರ್​ಗೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಇಂದು ಬೆಳಗ್ಗೆ ಇಂಡಿಯಾ ಗೇಟ್ ಸುತ್ತ ಹೊಗೆ ಆವರಿಸಿತ್ತು.

ಇಂದು ಬೆಳಗ್ಗೆ 7.40ರ ಸುಮಾರಿಗೆ ಈ ಘಟನೆ ನಡೆದಿದೆ. 15ರಿಂದ 20 ಜನರ ಗುಂಪೊಂದು ಮಾನ್​ಸಿಂಗ್ ರಸ್ತೆಗೆ ಟ್ರ್ಯಾಕ್ಟರ್​ ತೆಗೆದುಕೊಂಡು ಬಂದರು. ನೋಡನೋಡುತ್ತಿದ್ದಂತೆ ಆ ಟ್ರ್ಯಾಕ್ಟರ್​ಗೆ ಬೆಂಕಿ ಹಚ್ಚಿದರು. ಇದ್ದಕ್ಕಿದ್ದಂತೆ ನಡೆದ ಈ ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆ ನಡೆದ ಕೂಡಲೆ 2 ಅಗ್ನಿಶಾಮಕದಳದ ವಾಹನಗಳು ಸ್ಥಳಕ್ಕೆ ಆಗಮಿಸಿ, ಬೆಂಕಿ ಆರಿಸಿವೆ. ಇಂಡಿಯಾ ಗೇಟ್ ಬಳಿಯಲ್ಲೇ ಈ ಘಟನೆ ನಡದಿದ್ದರಿಂದ ಭದ್ರತೆಯ ಬಗ್ಗೆ ಪ್ರಶ್ನೆಗಳೆದ್ದಿವೆ. ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.

ಭಗತ್ ಸಿಂಗ್ ಚಿತ್ರಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಾ, ಟ್ರ್ಯಾಕ್ಟರ್​ಗೆ ಬೆಂಕಿ ಹಚ್ಚಿರುವ ವಿಡಿಯೋ ಈಗ ವೈರಲ್ ಆಗಿದೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಕಂಡುಹಿಡಿಯಲಾಗುತ್ತಿದೆ. ಅಲ್ಲಿಗೆ ಟ್ರ್ಯಾಕ್ಟರ್​ನಲ್ಲಿ ಬಂದ ಗುಂಪಿನವರು ಕೈಯಲ್ಲಿ ಭಗತ್ ಸಿಂಗ್ ಫೋಟೋ ಇರುವ ಪೋಸ್ಟರ್​ಗಳನ್ನು ಹಿಡಿದುಕೊಂಡು ಬಂದಿದ್ದರು ಎಂಬುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರನ್ನು ಆದಷ್ಟು ಬೇಗ ಪತ್ತೆಹಚ್ಚಲಾಗುವುದು ಎಂದು ದೆಹಲಿ ಡಿಸಿಪಿ ಐಶ್ ಸಿಂಘಾಲ್ ಮಾಹಿತಿ ನೀಡಿದ್ದಾರೆ. ಈಗಾಗಲೇ ಪಂಜಾಬ್​ನ ಐವರನ್ನು ಈ ಪ್ರಕರಣದಲ್ಲಿ ವಶಕ್ಕೆ ಪಡೆಯಲಾಗಿದೆ.
Published by: Sushma Chakre
First published: September 28, 2020, 12:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading