• Home
  • »
  • News
  • »
  • national-international
  • »
  • Drought in Europe: ಯುರೋಪಿನಾದ್ಯಂತ ಭೀಕರ ಬರಗಾಲ, ಇತಿಹಾಸದ ಕುರುಹುಗಳು ಪತ್ತೆ

Drought in Europe: ಯುರೋಪಿನಾದ್ಯಂತ ಭೀಕರ ಬರಗಾಲ, ಇತಿಹಾಸದ ಕುರುಹುಗಳು ಪತ್ತೆ

ಯುರೋಪನ್‌ನ ಬರಗಾಲ

ಯುರೋಪನ್‌ನ ಬರಗಾಲ

ಯುರೋಪ್‌ನಲ್ಲಿ ಉಂಟಾದ ಭೀಕರ ಬರಗಾಲದಿಂದಾಗಿ ನೀರಿನಲ್ಲಿ ಮುಚ್ಚಿಹೋಗಿದ್ದ ಅನೇಕ ಇತಿಹಾಸದ ಮಹತ್ವದ ಸ್ಮಾರಕಗಳು, ಕಲಾಕೃತಿಗಳು, ಹೀಗೆ ಹಲವು ಇತಿಹಾಸದ ಕುರುಹುಗಳು ಕಾಣಿಸಿಕೊಳ್ಳುತ್ತಿವೆ. ಅವುಗಳನ್ನು ಈ ಬರಗಾಲವು ಬಹಿರಂಗಪಡಿಸುತ್ತಿದೆ ಎಂದೇ ಹೇಳಬಹುದು. 2022 ರ ಆರಂಭದಿಂದಲೂ, ಯುರೋಪ್ ಸಾಮಾನ್ಯಕಿಂತ ಗರಿಷ್ಠ ತಾಪಮಾನ ಹೊಂದಿತ್ತು ಅದರ ಜೊತೆಗೆ ಮಳೆಯ ಅಭಾವವನ್ನು ಕೂಡ ಎದುರಿಸಿದೆ.

ಮುಂದೆ ಓದಿ ...
  • Share this:

ಯುರೋಪಿನಾದ್ಯಂತ (Europe) ತೀವ್ರವಾದ ಬರಗಾಲದಿಂದ ಅಲ್ಲಿನ ಸರೋವರಗಳು, ತೊರೆಗಳು ಮತ್ತು ಜಲಾಶಯಗಳೆಲ್ಲ ಬತ್ತುತ್ತಿವೆ. ಇದಕ್ಕೆ ಏನ್‌ ಕಾರಣವೆಂದು ಸಂಶೋಧಕರು ತಿಳಿಯಲು ಯತ್ನಿಸುತ್ತಿರುವಾಗ ಅವರಿಗೆ ಸಿಕ್ಕ ಗತಕಾಲದ ಕುರುಹುಗಳು ಮತ್ತೆ ಕಾಣಿಸುತ್ತಿವೆ. ನೀರಿನಲ್ಲಿ (Water) ಮುಚ್ಚಿಹೋಗಿದ್ದ ಅನೇಕ ಇತಿಹಾಸದ ಮಹತ್ವದ ಸ್ಮಾರಕಗಳು, ಕಲಾಕೃತಿಗಳು, ಹೀಗೆ ಹಲವು ಇತಿಹಾಸದ ಕುರುಹುಗಳು ಕಾಣಿಸಿಕೊಳ್ಳುತ್ತಿವೆ. ಅವುಗಳನ್ನು ಈ ಬರಗಾಲವು (Drought) ಬಹಿರಂಗಪಡಿಸುತ್ತಿದೆ ಎಂದೇ ಹೇಳಬಹುದು. 2022 ರ ಆರಂಭದಿಂದಲೂ, ಯುರೋಪ್ ಸಾಮಾನ್ಯಕಿಂತ ಗರಿಷ್ಠ ತಾಪಮಾನ (Maximum temperature) ಹೊಂದಿತ್ತು ಅದರ ಜೊತೆಗೆ ಮಳೆಯ ಅಭಾವವನ್ನು (Lack of rain) ಕೂಡ ಎದುರಿಸಿದೆ.


ಯುರೋಪ್‌ನಲ್ಲಿ ಉಂಟಾದ ಭೀಕರ ಬರಗಾಲ 
ಜಾಗತಿಕ ಬರ ವೀಕ್ಷಣಾಲಯವು “ಈ ವರ್ಷದ ಆಗಸ್ಟ್ ವೇಳೆಗೆ, ಯುರೋಪ್‌ ಖಂಡದ 47% ರಷ್ಟು ಭಾಗವು ಸಂಪೂರ್ಣವಾಗಿ ಬರಗಾಲದಿಂದ ಕಂಗಾಲಾಗಿತ್ತು. ಇದು ಇಡೀ ಖಂಡಕ್ಕೆ ಒಂದು ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿತು. ಇದು ಮಣ್ಣಿನ ತೇವಾಂಶದ ಕೊರತೆ ಮತ್ತು ಸಸ್ಯವರ್ಗದ ಮೇಲೆ ನಕಾರಾತ್ಮಕ ಪರಿಣಾಮಗಳಿಂದ ಗುರುತಿಸಲ್ಪಟ್ಟಿದೆ” ಎಂದು ವರದಿ ಮಾಡಿದೆ.


ಯುರೋಪಿಯನ್ ಕಮಿಷನ್‌ನ ಜಂಟಿ ಸಂಶೋಧನಾ ಕೇಂದ್ರದ ಹಿರಿಯ ಸಂಶೋಧಕರಾದ ಆಂಡ್ರಿಯಾ ಟೊರೆಟಿ ಅವರು ಆಗಸ್ಟ್‌ನಲ್ಲಿ ಸ್ಕೈ ನ್ಯೂಸ್‌ಗೆ “500 ವರ್ಷಗಳಲ್ಲಿ ಈ ಬರಗಾಲವು ಯುರೋಪಿನ ಅತ್ಯಂತ ಕೆಟ್ಟ ಬರಗಾಲವಾಗಿರಬಹುದು” ಎಂದು ಹೇಳಿದರು.


ಸಂಶೋಧನೆಗಳು ಏನ್‌ ಹೇಳ್ತಿವೆ?
ಇತ್ತೀಚಿನ ಇಂಟರ್‌ಗವರ್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್ ಎಂಬ ವರದಿಯನ್ನು ಒಳಗೊಂಡಂತೆ ಹೆಚ್ಚು ಅಧ್ಯಯನ ನಡೆಯುತ್ತಿರುವ ಈ ಸಂಶೋಧನೆಯು “ಹವಾಮಾನ ಬದಲಾವಣೆಯು ತಾಪಮಾನವನ್ನು ಹೊಸ ವೈಪರೀತ್ಯಗಳಿಗೆ ತಳ್ಳುವುದರಿಂದ ಯುರೋಪ್‌ನಲ್ಲಿ ವ್ಯಾಪಕವಾದ ಬರಗಾಲಗಳು ಹೆಚ್ಚು ತೀವ್ರವಾಗುತ್ತಿವೆ” ಎಂದು ಸೂಚಿಸುತ್ತದೆ.


ಇದನ್ನೂ ಓದಿ: Explained: ಝೋಂಬಿ ಐಸ್​ನಿಂದ ವಿಶ್ವಾದ್ಯಂತ ಆತಂಕ: ಜಾಗತಿಕ ಸಮುದ್ರ ಮಟ್ಟ ಭಾರೀ ಹೆಚ್ಚಳ!


ಮತ್ತೆ ಕಾಣಿಸಿಕೊಂಡ ಇತಿಹಾಸಪೂರ್ವ 'ಸ್ಪ್ಯಾನಿಷ್ ಸ್ಟೋನ್‌ಹೆಂಜ್'
ಸ್ಪೇನ್‌ನಲ್ಲಿ ಬಹಳ ಪುರಾತನವಾದ ಸ್ಟೋನ್‌ ಹೆಂಜ್‌ ಸ್ಮಾರಕವು ಈಗ ಕಾಣಿಸತೊಡಗಿದೆ. ಜುಲೈ ಅಂತ್ಯದಲ್ಲಿ, ಸ್ಪೇನ್‌ನ ವಾಲ್ಡೆಕಾನಾಸ್ ಜಲಾಶಯದಲ್ಲಿನ ನೀರಿನ ಮಟ್ಟವು ಅದರ ಸಾಮರ್ಥ್ಯದ 28% ರಷ್ಟಕ್ಕೆ ಇಳಿದಿದೆ. ಆಗ ಈ "ಸ್ಪ್ಯಾನಿಷ್ ಸ್ಟೋನ್‌ಹೆಂಜ್" ಎನ್ನುವ ಅಧಿಕೃತವಾಗಿ ಗ್ವಾಡಾಲ್‌ಪೆರಾಲ್‌ನ ಡಾಲ್ಮೆನ್ ಎಂದು ಕರೆಯುವ ಕಲ್ಲಿನ ವೃತ್ತವು ಮತ್ತೆ ಕಾಣಿಸಿಕೊಂಡಿದೆ” ಎಂದು ಎಂದು ರಾಯಿಟರ್ಸ್ ಮಾಧ್ಯಮವು ವರದಿ ಮಾಡಿದೆ.


ಸ್ಟೋನ್‌ಹೆಂಜ್ ಎಂದರೆ ಭಾರವಾದ ಕಲ್ಲುಗಂಬಗಳ ವೃತ್ತಾಕಾರದ ರಚನೆ ಎಂದೇ ಹೇಳಬಹುದು. ಸುಮಾರು ೧೫೦ ಕಲ್ಲುಗಳನ್ನು ಒಳಗೊಂಡ ಇದರ ಮೂಲವಿನ್ಯಾಸ ಕಲ್ಲುಗಳ ಮೂರು ಪದರ ಅಥವಾ ಸ್ತರಗಳನ್ನು ಹೊಂದಿತ್ತು. “ಈ ಪುರಾತನ ಸ್ಮಾರಕವು ಕಾಣಿಸಿಕೊಂಡಿರುವುದು ನಿಜಕ್ಕೂ ಅತ್ಯಂತ ಆಶ್ಚರ್ಯಕರವಾಗಿದೆ. ಈಗ ಅದನ್ನು ನಾವು ಮತ್ತೆ ನೋಡಬಹುದು. ಇದು ಅಪರೂಪದ ಅವಕಾಶವಾಗಿದೆ” ಎಂದು ಮ್ಯಾಡ್ರಿಡ್‌ನ ಕಂಪ್ಲುಟೆನ್ಸ್ ವಿಶ್ವವಿದ್ಯಾಲಯದ ಪುರಾತತ್ತ್ವ ಶಾಸ್ತ್ರಜ್ಞ ಎನ್ರಿಕ್ ಸೆಡಿಲ್ಲೊ ಅವರು ರಾಯಿಟರ್ಸ್‌ಗೆ ತಿಳಿಸಿದರು.


ಮೆಗಾಲಿಥಿಕ್ ಕಲ್ಲುಗಳಿಂದ ಮಾಡಲ್ಪಟ್ಟ ಪುರಾತನ ಸ್ಮಾರಕ
ಗ್ವಾಡಾಲ್‌ಪೆರಲ್‌ನ ಡಾಲ್ಮೆನ್ ಡಜನ್‌ಗಟ್ಟಲೆ ಮೆಗಾಲಿಥಿಕ್ ಕಲ್ಲುಗಳಿಂದ ಮಾಡಲ್ಪಟ್ಟಿದೆ ಎಂದು ಇತಿಹಾಸಗಳು ಹೇಳುತ್ತವೆ. 5000 BC ಯಲ್ಲಿ ಇದು ರಚನೆಯಾಗಿದೆ. ಇದನ್ನು 1926 ರಲ್ಲಿ ಜರ್ಮನ್ ಪುರಾತತ್ವ ಶಾಸ್ತ್ರಜ್ಞರು ಕಂಡುಹಿಡಿದರು. 1963 ರಲ್ಲಿ ಜಲಾಶಯದ ರಚನೆಯಿಂದಾಗಿ ಇದು ನೀರಿನಿಂದ ಮುಚ್ಚಿ ಹೋಯಿತು. ಅಂದಿನಿಂದ, ಈ ಪುರಾತನ ಸ್ಮಾರಕವು ಕೇವಲ ನಾಲ್ಕು ಬಾರಿ ಸಂಪೂರ್ಣವಾಗಿ ಗೋಚರಿಸಿದೆ.


"ನನ್ನ ಜೀವನದುದ್ದಕ್ಕೂ, ಜನರು ಡಾಲ್ಮೆನ್ ಬಗ್ಗೆ ನನಗೆ ಹೇಳಿದ್ದರು. ಈಗ ಅದಕ್ಕೆ ಸಮಯ ಕೂಡಿ ಬಂದಿದೆ. ಕಡಿಮೆ ನೀರಿನ ಮಟ್ಟದಿಂದಾಗಿ ಸ್ಮಾರಕವು ಮತ್ತೆ ಕಾಣಿಸಿಕೊಂಡಿದೆ. ನಾನು ಅದರ ಭಾಗಗಳನ್ನು ಈ ಮೊದಲು ನೀರಿನಿಂದ ಇಣುಕಿ ನೋಡಿದೆ. ಆದರೆ ನಾನು ಅದನ್ನು ಸಂಪೂರ್ಣವಾಗಿ ನೋಡಿದ್ದು ಇದೇ ಮೊದಲ ಬಾರಿಗೆ. ಅದ್ಭುತ ಕಲಾಕೃತಿ ಇದಾಗಿದೆ” ಎಂದು ಸ್ಥಳೀಯ ಸಾಂಸ್ಕೃತಿಕ ಸಂಘದ ರೈಸೆಸ್ ಡಿ ಪೆರಾಲೆಡಾದ ಅಧ್ಯಕ್ಷ ಏಂಜೆಲ್ ಕ್ಯಾಸ್ಟಾನೊ ಅಟ್ಲಾಸ್ ಅಬ್ಸ್ಕ್ಯೂರಾ ಎಂಬ ಮಾಧ್ಯಮಕ್ಕೆ ತಿಳಿಸಿದರು.


"ಹಂಗ್ರಿ ಸ್ಟೋನ್ಸ್"
“ಕಳೆದ ಆಗಸ್ಟ್‌ನಲ್ಲಿ ಯುರೋಪ್‌ನಲ್ಲಿನ ಭೀಕರ ಪರಿಸ್ಥಿತಿಗಳಿಂದಾಗಿ "ಹಂಗ್ರಿ ಸ್ಟೋನ್ಸ್" ಎಂದು ಕರೆಯಲ್ಪಡುವ ಶತಮಾನಗಳಷ್ಟು ಹಳೆಯದಾದ ಬಂಡೆಗಳು ಮತ್ತೆ ಗೋಚರಿಸಿವೆ “ ಎಂದು ದಿ ಮಿಯಾಮಿ ಹೆರಾಲ್ಡ್ ಮಾಧ್ಯಮವು ವರದಿ ಮಾಡಿದೆ. ಯುರೋಪ್‌ನ ಬರಗಾಲವು ಮೊದಲ ಶತಮಾನದಲ್ಲಿ ರೋಮನ್ ಚಕ್ರವರ್ತಿ ನೀರೋ ಆಳ್ವಿಕೆಯಲ್ಲಿ ನಿರ್ಮಿಸಲಾದ ಸೇತುವೆಯನ್ನು ಸಹ ಬಹಿರಂಗಗೊಳಿಸಿದೆ. ಇದು ಇಟಲಿಯ ಟೈಬರ್ ನದಿಯಲ್ಲಿ ಮುಳುಗಿತ್ತು.


ಇದನ್ನೂ ಓದಿ:  Mohenjo-daro: ನಶಿಸಿಹೋಗುತ್ತಿದೆ ಮೊಹೆಂಜೋದಾರೋ ಕುರುಹು! ಕಳಚಿ ಹೋಗುತ್ತಾ ಐತಿಹಾಸಿಕ ಕೊಂಡಿ?


ಸ್ಪೇನ್‌ನ ವಾಯುವ್ಯ ಗಲಿಷಿಯಾ ಪ್ರದೇಶದ ಅಸೆರೆಡೊ ಗ್ರಾಮವು 1992 ರಲ್ಲಿ ಆಲ್ಟೊ ಲಿಂಡೋಸೊ ಜಲಾಶಯವನ್ನು ನಿರ್ಮಾಣ ಮಾಡುವ ಅದರ ಪ್ರವಾಹಕ್ಕೆ ಈ ಗ್ರಾಮವು ಸಂಪೂರ್ಣವಾಗಿ ಮುಳುಗಿ ಹೋಗಿತ್ತು. ಆದರೆ ಈಗ ಬರಗಾಲದಿಂದ, ಆ ಪ್ರಾಚೀನ ಗ್ರಾಮವು ಹೊರಗಡೆ ಕಾಣಿಸುತ್ತಿದೆ. ಈ ಪ್ರಾಚೀನ ಗ್ರಾಮವನ್ನು ನೋಡಲು ಪ್ರವಾಸಿಗರು ಬರುತ್ತಲೇ ಇದ್ದಾರೆ. ಹೀಗೆ ಯುರೋಪ್‌ನಲ್ಲಿ ಹೆಚ್ಚುತ್ತಿರುವ ಬರಗಾಲದಿಂದ ಅನೇಕ ಗತಕಾಲದ ಸ್ಮಾರಕಗಳು ಕಾಣಿಸಿಕೊಳ್ಳುತ್ತಿವೆ.

Published by:Ashwini Prabhu
First published: