ಏರ್ಬಿಎನ್ಬಿ, ಉಬರ್ ಮತ್ತು ಸ್ಪಾಟಿಫೈನಂತಹ ಗ್ಲೋಬಲ್ ಇನ್ವೆಸ್ಟ್ಮೆಂಟ್ ಕಂಪೆನಿಗಳು ಜಿಯೋ ಪ್ಲಾಟ್ಫಾರ್ಮ್ನಲ್ಲಿ 0.93 ಪ್ರತಿಶತದಷ್ಟು ಪಾಲನ್ನು ಪಡೆದಿದ್ದು 4,546.80 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ. ರಿಲಾಯನ್ಸ್ ಇಂಡಸ್ಟ್ರೀಸ್ನಲ್ಲಿ ಕಳೆದ ಏಳು ವಾರಗಳಲ್ಲಿ ಇದು ಐತಿಹಾಸಿಕ ಒಂಬತ್ತನೇ ಒಪ್ಪಂದವಾಗಿದ್ದು ಈ ಮೂಲಕ 1ಲಕ್ಷ ಕೋಟಿಗೂ ಅಧಿಕ ಹಣ ಹೂಡಿಕೆಯಾದಂತಾಗಿದೆ.
ಡಿಜಿಟಲ್ ಮಾಧ್ಯಮದಲ್ಲಿ ಚಲನಚಿತ್ರ ಸುದ್ದಿ ಮತ್ತು ಸಂಗೀತ ಅಪ್ಲಿಕೇಶನ್ಗಳನ್ನು ನಿರ್ವಹಿಸುವ ಟೆಲಿಕಾಂ ಎಂಟರ್ಪ್ರೈಸಸ್ ಜಿಯೋ ಇನ್ಪೋಕಾಮ್ ಅನ್ನು ಮುನ್ನಡೆಸುತ್ತಿರುವ ಜಿಯೋ ಪ್ಲಾಟ್ಫಾರ್ಮ್ ಸತತವಾಗಿ ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತಿದೆ. ತೈಲ ಉದ್ಯಮದಿಂದ ಚಿಲ್ಲರೆ ವ್ಯಾಪಾರದ ವಿಸ್ತರಿಸಿರುವ ಟೆಲಿಕಾಂ ಸಂಘಟನೆಯಾಗಿರುವ ಆರ್ಐಎಲ್ ಈ ಜಿಯೋದಲ್ಲಿನ ಶೇ.21.99 ರಷ್ಟು ಶೇರನ್ನು ಮಾರಾಟ ಮಾಡಿದೆ. ವಿಶ್ವದ ಪ್ರಮುಖ ತಂತ್ರಜ್ಞಾ ಹೂಡಿಕೆದಾರರಿಂದ ಈವರೆಗೆ 102,432.15 ಕೋಟಿ ರೂ. ಹೂಡಿಕೆ ಮಾಡಲಾಗಿದೆ.
ಡಿಜಿಟಲ್ ಮಾಧ್ಯಮದಲ್ಲಿ ಚಲನಚಿತ್ರ ಸುದ್ದಿ ಮತ್ತು ಸಂಗೀತ ಅಪ್ಲಿಕೇಶನ್ಗಳನ್ನು ನಿರ್ವಹಿಸುವ ಟೆಲಿಕಾಂ ಎಂಟರ್ಪ್ರೈಸಸ್ ಜಿಯೋ ಇನ್ಪೋಕಾಮ್ ಅನ್ನು ಮುನ್ನಡೆಸುತ್ತಿರುವ ಜಿಯೋ ಪ್ಲಾಟ್ಫಾರ್ಮ್ ಸತತವಾಗಿ ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತಿದೆ. ತೈಲ ಉದ್ಯಮದಿಂದ ಚಿಲ್ಲರೆ ವ್ಯಾಪಾರದ ವಿಸ್ತರಿಸಿರುವ ಟೆಲಿಕಾಂ ಸಂಘಟನೆಯಾಗಿರುವ ಆರ್ಐಎಲ್ ಈ ಜಿಯೋದಲ್ಲಿನ ಶೇ.21.99 ರಷ್ಟು ಷೇರನ್ನು ಮಾರಾಟ ಮಾಡಿದೆ. ವಿಶ್ವದ ಪ್ರಮುಖ ತಂತ್ರಜ್ಞಾನ ಹೂಡಿಕೆದಾರರಿಂದ ಈವರೆಗೆ 102,432.15 ಕೋಟಿ ರೂ. ಹೂಡಿಕೆ ಮಾಡಲಾಗಿದೆ.
ಒಪ್ಪಂದಗಳ ಮಹಾಪೂರ
ಜಾಗತಿಕ ಲಾಕ್ಡೌನ್ ನಡುವೆಯೂ ಭಾರತದ ಬೃಹತ್ ಡಿಜಿಟಲ್ ಸಾಮರ್ಥ್ಯಕ್ಕೆ ಜಿಯೋ ಸಾಕ್ಷಿಯಾಗಿದೆ. ಪರಿಣಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತ ತಂತ್ರಜ್ಞಾನ ಕಂಪೆನಿಗಳು ಸತತವಾಗಿ ಜಿಯೋದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿವೆ. ಜಿಯೋನ ಅಸಾಧಾರಣ ತಾಂತ್ರಿಕ ಸಾಮರ್ಥ್ಯಗಳು ಮತ್ತು ಮಾದರಿ ವ್ಯವಹಾರದಿಂದಾಗಿ ಎಲ್ಲಾ ಒಪ್ಪಂದಗಳನ್ನೂ ತೀರ್ಮಾನಿಸಲಾಗಿದೆ.
ಜೂನ್ 7 ರಂದು ಅಬುಧಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿ (ಎಡಿಐಎ) 1.16 ಶೇಕಡಾ ಪಾಲನ್ನು 5,683.5 ಕೋಟಿ ರೂ.ಗೆ ಖರೀದಿಸಿದ ಬೆನ್ನಿಗೆ 4.91 ಲಕ್ಷ ಕೋಟಿ ರೂ. ಈಕ್ವಿಟಿ ಹೊಂದಿರುವ ಟಿಪಿಜಿ ಕಂಪೆನಿ ಇದೀಗ ಜಿಯೋದಲ್ಲಿ ಷೇರು ಖರೀದಿ ಮಾಡಿರುವುದು ಗಮನಾರ್ಹ.
ಇದಕ್ಕೂ ಮುನ್ನವೇ ಏಪ್ರಿಲ್ 22 ರಂದು ಫೇಸ್ಬುಕ್ ಇಂಕ್ಗೆ ಶೇ 9.99 ರಷ್ಟು ಷೇರುಗಳನ್ನು 43,574 ಕೋಟಿ ರೂ.ಗೆ ಮಾರಾಟ ಮಾಡಲಾಗಿತ್ತು. ಆ ನಂತರ ಜನರಲ್ ಅಟ್ಲಾಂಟಿಕ್, ಸಿಲ್ವರ್ ಲೇಕ್ (ಎರಡು ಬಾರಿ), ವಿಸ್ಟಾ ಇಕ್ವಿಟಿ ಪಾರ್ಟ್ನರ್ಸ್, ಕೆಕೆಆರ್, ಮುಬಡಾಲಾ ಇನ್ವೆಸ್ಟ್ಮೆಂಟ್ ಕಂಪನಿ ಮತ್ತು ಎಡಿಐಎ ಗೆ ಜಿಯೋ ತನ್ನ ಷೇರನ್ನು ಮಾರಾಟ ಮಾಡಿಕೊಂಡಿದೆ.
ಜಿಯೋ ಪ್ಲಾಟ್ಫಾರ್ಮ್ಗಳು ಮುಂದಿನ ಪೀಳಿಗೆಯ ತಂತ್ರಜ್ಞಾನ ವೇದಿಕೆಯಾಗಿದ್ದು, ಭಾರತದಾದ್ಯಂತ ಉತ್ತಮ ಗುಣಮಟ್ಟದ ಮತ್ತು ಒಳ್ಳೆ ಡಿಜಿಟಲ್ ಸೇವೆಗಳನ್ನು ಒದಗಿಸುವತ್ತ ಗಮನಹರಿಸಿದ್ದು, ಸುಮಾರು 400 ಮಿಲಿಯನ್ ಚಂದಾದಾರರನ್ನು ಹೊಂದಿದೆ.
ಜಿಯೋ ಪ್ಲಾಟ್ಫಾರ್ಮ್ಗಳು ತನ್ನ ಡಿಜಿಟಲ್ ವ್ಯವಸ್ಥೆಯಲ್ಲಿ ಗಮನಾರ್ಹ ಹೂಡಿಕೆಗಳನ್ನು ಮಾಡಿದೆ. ಬ್ರಾಡ್ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ದೊಡ್ಡ ದತ್ತಾಂಶ ವಿಶ್ಲೇಷಣೆ, ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಬ್ಲಾಕ್ಚೇನ್ಗಳು ಸೇರಿದಂತೆ ಪ್ರಮುಖ ತಂತ್ರಜ್ಞಾನಗಳಿಗೆ ಹೆಚ್ಚು ಹೂಡಿಕೆ ಮಾಡುತ್ತಿದೆ.
1992 ರಲ್ಲಿ ಸ್ಥಾಪನೆಯಾದ ಪ್ರಮುಖ ಜಾಗತಿಕ ಪರ್ಯಾಯ ಆಸ್ತಿ ಸಂಸ್ಥೆಯಾದ ಟಿಪಿಜಿ, ಖಾಸಗಿ ಷೇರುಗಳು, ಬೆಳವಣಿಗೆಯ ಇಕ್ವಿಟಿ, ರಿಯಲ್ ಎಸ್ಟೇಟ್, ಕ್ರೆಡಿಟ್ ಮತ್ತು ಸಾರ್ವಜನಿಕ ಇಕ್ವಿಟಿಯಂತಹ ವ್ಯಾಪಕ ಶ್ರೇಣಿಯ ವರ್ಗಗಳಲ್ಲಿ 9,119 ಶತಕೋಟಿಗಿಂತ ಹೆಚ್ಚಿನ ಮೌಲ್ಯದ ಸ್ವತ್ತುಗಳನ್ನು ನಿರ್ವಹಿಸುತ್ತಿದೆ ಮತ್ತು 16 ಕ್ಕೂ ಹೆಚ್ಚು ದೇಶಗಳಲ್ಲಿ ಕಚೇರಿಗಳನ್ನು ನಡೆಸುತ್ತಿದೆ.
ಇದನ್ನೂ ಓದಿ : COVID-19 Test: ಕೊರೋನಾ ಪರೀಕ್ಷಾ ಶುಲ್ಕ ಇಳಿಕೆ ಮಾಡಿದ ಮಹಾರಾಷ್ಟ್ರ ಸರ್ಕಾರ
ಟಿಪಿಜಿಯ 25 ವರ್ಷಗಳಿಗಿಂತ ಹೆಚ್ಚು ಇತಿಹಾಸದಲ್ಲಿ ಇದು ನೂರಾರು ಪೋರ್ಟ್ಫೋಲಿಯೋ ಕಂಪನಿಗಳಿಂದ ಕೂಡಿದ ವ್ಯವಸ್ಥೆಯನ್ನು ನಿರ್ಮಿಸಿದೆ ಮತ್ತು ವಿಶ್ವದಾದ್ಯಂತ ವೃತ್ತಿಪರರು, ಕಾರ್ಯನಿರ್ವಾಹಕರು ಮತ್ತು ಸಲಹೆಗಾರರ ಮೌಲ್ಯವರ್ಧಿತ ಜಾಲವನ್ನು ನಿರ್ಮಿಸಿದೆ. ಸಾಂಸ್ಥಿಕ ಬೆಂಬಲ ಮತ್ತು ಜಾಗತಿಕ ಸಂಪನ್ಮೂಲಗಳನ್ನು ನೀಡುವ ಮೂಲಕ ಟಿಪಿಜಿ ಈ ಕಂಪನಿಗಳಿಗೆ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ತಲುಪಲು ಮತ್ತು ಹೆಚ್ಚಿನ ಸಾಧ್ಯತೆಗಳನ್ನು ಹೊಂದಲು ಅನುವು ಮಾಡಿಕೊಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ