HOME » NEWS » National-international » TOYCATHON 2021 ORGANIZED BY INTER MINISTRIES INVITES FOR EXPERTS STUDENTS AND STARTUPS SNVS

Toycathon 2021 – ಸರ್ಕಾರದಿಂದ ಟಾಯ್ ಹ್ಯಾಕಥಾನ್; 50 ಲಕ್ಷ ರೂ ಗೆಲ್ಲುವ ಅವಕಾಶ; ನಾಳೆಯೊಳಗೆ ನೊಂದಾಯಿಸಿ

ಕೇಂದ್ರದ ವಿವಿಧ ಸಚಿವಾಲಯಗಳು ಜಂಟಿಯಾಗಿ ಆಯೋಜಿಸಿರುವ ಆಟಿಕೆ ಹ್ಯಾಕಥಾನ್ ಕಾರ್ಯಕ್ರಮಕ್ಕೆ ಹೆಸರು ನೊಂದಾಯಿಸಲು ಜನವರಿ 20 ಕೊನೆಯ ದಿನವಾಗಿದೆ. ಟಾಯ್ ತಜ್ಞರು, ಸ್ಟಾರ್ಟಪ್​ಗಳು ಹಾಗೂ ವಿದ್ಯಾರ್ಥಿಗಳು ಈ ಹ್ಯಾಕಥಾನ್​ನಲ್ಲಿ ಪಾಲ್ಗೊಳ್ಳಬಹುದಾಗಿದೆ.

news18
Updated:January 19, 2021, 1:54 PM IST
Toycathon 2021 – ಸರ್ಕಾರದಿಂದ ಟಾಯ್ ಹ್ಯಾಕಥಾನ್; 50 ಲಕ್ಷ ರೂ ಗೆಲ್ಲುವ ಅವಕಾಶ; ನಾಳೆಯೊಳಗೆ ನೊಂದಾಯಿಸಿ
Toycathon 2021
  • News18
  • Last Updated: January 19, 2021, 1:54 PM IST
  • Share this:
ಬೆಂಗಳೂರು(ಜ. 19): ಭಾರತೀಯ ಸಂಸ್ಕೃತಿ, ಜಾನಪದ ಕಲೆಗಳನ್ನ ಪ್ರತಿಬಿಂಬಿಸುವ ಆಟಿಕೆ ಮತ್ತು ಗೇಮ್​ಗಳನ್ನ ಅಭಿವೃದ್ಧಿಪಡಿಸಲು ಹೊಸ ಐಡಿಯಾಗಳಿಗಾಗಿ ಕೇಂದ್ರ ಸರ್ಕಾರ ಟಾಯ್ ಹ್ಯಾಕಥಾನ್ (Toycathon 2021) ಆಯೋಜಿಸಿದೆ. ಆಟಿಕೆ ಮತ್ತು ವಿನ್ಯಾಸ ತಜ್ಞರು, ಸ್ಟಾರ್ಟಪ್​ಗಳು ಹಾಗೂ ವಿದ್ಯಾರ್ಥಿಗಳನ್ನು ಈ ಟಾಯ್ ಹ್ಯಾಕಥಾನ್​ಗೆ ಆಹ್ವಾನಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮಾಹಿತಿ-ಪ್ರಸರಣ, ಶಿಕ್ಷಣ, ವಾಣಿಜ್ಯ-ಉದ್ಯಮ, ಸಣ್ಣ-ಮಧ್ಯಮ ಉದ್ಯಮ, ಜವಳಿ ಸಚಿವಾಲಯಗಳು ಜಂಟಿಯಾಗಿ ನಡೆಸುತ್ತಿರುವ ಈ ಕಾರ್ಯಕ್ರಮಕ್ಕೆ ಸಚಿವರಾದ ಸ್ಮೃತಿ ಇರಾನಿ ಹಾಗೂ ರಮೇಶ್ ಪೋಖ್ರಿಯಾಲ್ ಚಾಲನೆ ನೀಡಿದ್ದಾರೆ. ಟಾಯ್ ಹ್ಯಾಕಥಾನ್​ಗೆ ಹೆಸರು ನೊಂದಾಯಿಸಲು ಜನವರಿ 20, ಅಂದರೆ ನಾಳೆ ಬುಧವಾರ ಕೊನೆಯ ದಿನವಾಗಿದೆ.

ಟಾಯ್​ಕಥಾನ್​ನಲ್ಲಿ ಜೂನಿಯರ್, ಸೀನಿಯರ್ ಮ ಮತ್ತು ಸ್ಟಾರ್ಟಪ್ ಹೀಗೆ ಮೂರು ಹಂತಗಳಿವೆ. ಟಾಯ್ ಎಕ್ಸ್​ಪರ್ಟ್​ಗಳು, ಸ್ಟಾರ್ಟಪ್​ಗಳಲ್ಲದೆ ದೇಶಾದ್ಯಂತ ವಿವಿಧ ಶಾಲೆ, ಕಾಲೇಜು ಮತ್ತು ವಿವಿಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ. ಭಾರತದ ಅಂದಾಜು 1 ಬಿಲಿಯನ್ ಡಾಲರ್ (ಸುಮಾರು 7 ಸಾವಿರ ಕೋಟಿ ರೂ) ಮೌಲ್ಯದಷ್ಟಿರುವ ಆಟಿಕೆ ಮಾರುಕಟ್ಟೆಯನ್ನು ಯಶಸ್ವಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ವಿನೂತನ ಐಡಿಯಾಗಳನ್ನ ಹೊರತರುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕೋಟ್ಯಂತರ ವಿದ್ಯಾರ್ಥಿಗಳಲ್ಲಿ ಹುದುಗಿರುವ ಕ್ರಿಯಾಶೀಲತೆಯನ್ನ ಬಳಸಿ ವಿಶೇಷವಾದ ಗೊಂಬೆ, ಆಟಿಕೆ, ಗೇಮ್​ಗಳನ್ನ ಆವಿಷ್ಕರಿಸುವ ಗುರಿ ಇದೆ.

ಒಂಬತ್ತು ಥೀಮ್​ಗಳ ಆಧಾರದ ಮೇಲೆ Toycathon ಅನ್ನು ರೂಪಿಸಲಾಗಿದೆ. ಭಾರತೀಯ ಸಂಸ್ಕೃತಿ, ಇತಿಹಾಸ, ಭಾರತೀಯ ಜ್ಞಾನ, ಕಲಿಕೆ-ಶಿಕ್ಷಣ-ಪಾಠ, ಸಾಮಾಜಿಕ-ಮಾನವೀಯ ಮೌಲ್ಯ, ಕಸುಬು, ಪರಿಸರ, ದಿವ್ಯಾಂಗ, ಫಿಟ್ನೆಸ್, ಕ್ರೀಡೆ, ಸಾಂಪ್ರದಾಯಿಕ ಭಾರತೀಯ ಆಟಿಕೆಗಳ ಮರು ಅಭಿವೃದ್ಧಿ, ಕ್ರಿಯಾಶೀಲತೆ ಈ ಥೀಮ್​ಗಳ ಮೇಲೆ ಆಟಿಕೆ, ಗೇಮ್ ಅಭಿವೃದ್ಧಿಪಡಿಸುವ ಬಗೆ ಆವಿಷ್ಕರಿಸುವ ಮಹತ್ ಪ್ರಯತ್ನ ಇದಾಗಿದೆ.

ಈ ಆಟಿಕೆ ಹ್ಯಾಕಥಾನ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ವೆಬ್ ಸೈಟ್​ನಲ್ಲಿ ಪಡೆಯಬಹುದು: https://toycathon.mic.gov.in

ಈ ಜಾಲತಾಣದಲ್ಲಿ ನೀವು ಚಾಲೆಂಜಸ್ ಟ್ಯಾಬ್​ನಲ್ಲಿರುವ ನಿರ್ದಿಷ್ಟ ಥೀಮ್ ಕ್ಲಿಕ್ ಮಾಡಿದರೆ ನಿಮಗೆ ನಿರ್ದಿಷ್ಟ ಗುರಿಗಳನ್ನ ನೀಡಲಾಗಿರುತ್ತದೆ. ಇದನ್ನು ಪೂರೈಸುವ ನಿಟ್ಟಿನಲ್ಲಿ ನಿಮ್ಮ ಕ್ರಿಯೇಟಿವ್ ಐಡಿಯಾಗಳನ್ನ ಕೊಡಬಹುದಾಗಿದೆ. ಈ ವಿವರವನ್ನು ಫಾರ್ಮ್​​ನಲ್ಲಿ ಭರ್ತಿ ಮಾಡಿ ಸಲ್ಲಿಸಬಹುದು. ನಾಳೆಯೊಳಗೆ(ಜನವರಿ 20) ಅದನ್ನ ಸಲ್ಲಿಸಬೇಕು.

ಫೆಬ್ರವರಿ 12ಕ್ಕೆ ನಿಮ್ಮ ಐಡಿಯಾಗಳನ್ನ ಶಾರ್ಟ್ ಲಿಸ್ಟ್ ಮಾಡಿ ಘೋಷಿಸಲಾಗುತ್ತದೆ. ಫೆಬ್ರವರಿ 23-25ರ ಒಂದು ದಿನದಂದು ಗ್ರ್ಯಾಂಡ್ ಫಿನಾಲೆ ಇರುತ್ತದೆ.
Published by: Vijayasarthy SN
First published: January 19, 2021, 1:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories