HOME » NEWS » National-international » TOYCATHON 2021 HOW TO PARTICIPATE LAST DATE TO REGISTER AND EVERYTHING ELSE YOU NEED TO KNOW LG

Toycathon 2021: ಟಾಯ್​ ಹ್ಯಾಕಥಾನ್​ನಲ್ಲಿ ಭಾಗವಹಿಸುವುದು ಹೇಗೆ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಇಲ್ಲಿದೆ ಮಾಹಿತಿ..!

ಟಾಯ್​ ಹ್ಯಾಕಥಾನ್​ನಲ್ಲಿ ಯಾವುದೇ ವಯಸ್ಸಿನ ನಿರ್ಬಂಧವಿರುವುದಿಲ್ಲ. ಎಲ್ಲಾ ವಯಸ್ಸಿನ ಮತ್ತು ಎಲ್ಲಾ ವರ್ಗದ ಜನರು ಭಾಗವಹಿಸಬಹುದು. ವಿದ್ಯಾರ್ಥಿಗಳು, ಶಿಕ್ಷಕರು, ಆಟಿಕೆ ತಜ್ಞರು ಮತ್ತು ಸ್ಟಾರ್ಟ್​ ಅಪ್​​ಗಳು ಈ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಅವಕಾಶವಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಪ್ರತ್ಯೇಕವಾಗಿ ಅಥವಾ ತಂಡವಾಗಿ ಭಾಗವಹಿಸಬಹುದು.

news18-kannada
Updated:January 20, 2021, 10:22 PM IST
Toycathon 2021: ಟಾಯ್​ ಹ್ಯಾಕಥಾನ್​ನಲ್ಲಿ ಭಾಗವಹಿಸುವುದು ಹೇಗೆ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಇಲ್ಲಿದೆ ಮಾಹಿತಿ..!
ಟಾಯ್​ ಹ್ಯಾಕಥಾನ್
  • Share this:
ಭಾರತೀಯ ಸಂಸ್ಕೃತಿ, ಜಾನಪದ ಕಲೆಗಳನ್ನ ಪ್ರತಿಬಿಂಬಿಸುವ ಆಟಿಕೆ ಮತ್ತು ಗೇಮ್​ಗಳನ್ನ ಅಭಿವೃದ್ಧಿಪಡಿಸಲು ಹೊಸ ಐಡಿಯಾಗಳಿಗಾಗಿ ಕೇಂದ್ರ ಸರ್ಕಾರ ಟಾಯ್ ಹ್ಯಾಕಥಾನ್ (Toycathon 2021) ಆಯೋಜಿಸಿದೆ. ಆಟಿಕೆ ಮತ್ತು ವಿನ್ಯಾಸ ತಜ್ಞರು, ಸ್ಟಾರ್ಟಪ್​ಗಳು ಹಾಗೂ ವಿದ್ಯಾರ್ಥಿಗಳನ್ನು ಈ ಟಾಯ್ ಹ್ಯಾಕಥಾನ್​ಗೆ ಆಹ್ವಾನಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮಾಹಿತಿ-ಪ್ರಸರಣ, ಶಿಕ್ಷಣ, ವಾಣಿಜ್ಯ-ಉದ್ಯಮ, ಸಣ್ಣ-ಮಧ್ಯಮ ಉದ್ಯಮ, ಜವಳಿ ಸಚಿವಾಲಯಗಳು ಜಂಟಿಯಾಗಿ ಈ ಕಾರ್ಯಕ್ರಮವನ್ನು ನಡೆಸುತ್ತಿವೆ.

ಟಾಯ್ ಹ್ಯಾಕಥಾನ್ ರಾಷ್ಟ್ರಮಟ್ಟ ಟಾಯ್​(ಆಟಿಕೆ) ಆಧಾರಿತ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯಾವುದೇ ವಯಸ್ಸಿನ ನಿರ್ಬಂಧವಿರುವುದಿಲ್ಲ. ಈ ಕಾರ್ಯಕ್ರಮಕ್ಕೆ ಸಚಿವರಾದ ಸ್ಮೃತಿ ಇರಾನಿ ಹಾಗೂ ರಮೇಶ್ ಪೋಖ್ರಿಯಾಲ್ ಚಾಲನೆ ನೀಡಿದ್ದಾರೆ.

ಆಗಸ್ಟ್​ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್​ ಕಿ ಬಾತ್​ ಭಾಷಣದಲ್ಲಿ ಆತ್ಮ ನಿರ್ಭರ್​ ಇಂಡಿಯನ್​ ಟಾಯ್ಸ್​​ನ್ನು​​ ಉತ್ತೇಜಿಸುವ ಬಗ್ಗೆ ಮಾತನಾಡಿದ್ದರು. ಆ ನಿಟ್ಟಿನಲ್ಲಿ ಟಾಯ್​ ಹ್ಯಾಕಥಾನ್​ ಬಹುದೊಡ್ಡ ಹೆಜ್ಜೆ ಇಟ್ಟಿದೆ.

ಟಾಯ್​ ಹ್ಯಾಕಥಾನ್​-2021ರಲ್ಲಿ ಯಾರು ಭಾಗವಹಿಸಬಹುದು?

ಟಾಯ್​ ಹ್ಯಾಕಥಾನ್​ನಲ್ಲಿ ಯಾವುದೇ ವಯಸ್ಸಿನ ನಿರ್ಬಂಧವಿರುವುದಿಲ್ಲ. ಎಲ್ಲಾ ವಯಸ್ಸಿನ ಮತ್ತು ಎಲ್ಲಾ ವರ್ಗದ ಜನರು ಭಾಗವಹಿಸಬಹುದು. ವಿದ್ಯಾರ್ಥಿಗಳು, ಶಿಕ್ಷಕರು, ಆಟಿಕೆ ತಜ್ಞರು ಮತ್ತು ಸ್ಟಾರ್ಟ್​ ಅಪ್​​ಗಳು ಈ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಅವಕಾಶವಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಪ್ರತ್ಯೇಕವಾಗಿ ಅಥವಾ ತಂಡವಾಗಿ ಭಾಗವಹಿಸಬಹುದು.

ಟಾಯ್​ ಹ್ಯಾಕಥಾನ್​-2021ರ ವಿಜೇತರಿಗೆ ಬಹುಮಾನವೇನು?

ಟಾಯ್​ ಹ್ಯಾಕಥಾನ್​ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದವರಿಗೆ 50 ಲಕ್ಷ ರೂ.ನಗದು ಬಹುಮಾನ ಇರುತ್ತದೆ.ಟಾಯ್‌ಕಾಥಾನ್ -2021  ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲಿ ನೋಂದಾಯಿಸಬೇಕು?

ಟಾಯ್ ಹ್ಯಾ‌ಕಥಾನ್ -2021 ರಲ್ಲಿ ಭಾಗವಹಿಸಲು ಆಸಕ್ತರು toycathon.mic.gov.in ವೆಬ್​​ಸೈಟ್​​​ನಲ್ಲಿ ನೋಂದಾಯಿಸಿಕೊಳ್ಳಬಹುದು.

ಐತಿಹಾಸಿಕ ಬಾದಾಮಿಯಲ್ಲಿ 2 ಲಕ್ಷ ವರ್ಷಗಳ ಹಿಂದಿನ ಪ್ರಾಗೈತಿಹಾಸಿಕ ಕಾಲದ ಶಿಲಾಯುಧ ತಯಾರಿಕಾ ನೆಲೆ ಪತ್ತೆ

ಈ ಜಾಲತಾಣದಲ್ಲಿ ನೀವು ಚಾಲೆಂಜಸ್ ಟ್ಯಾಬ್​ನಲ್ಲಿರುವ ನಿರ್ದಿಷ್ಟ ಥೀಮ್ ಕ್ಲಿಕ್ ಮಾಡಿದರೆ ನಿಮಗೆ ನಿರ್ದಿಷ್ಟ ಗುರಿಗಳನ್ನ ನೀಡಲಾಗಿರುತ್ತದೆ. ಇದನ್ನು ಪೂರೈಸುವ ನಿಟ್ಟಿನಲ್ಲಿ ನಿಮ್ಮ ಕ್ರಿಯೇಟಿವ್ ಐಡಿಯಾಗಳನ್ನ ಕೊಡಬಹುದಾಗಿದೆ. ಈ ವಿವರವನ್ನು ಫಾರ್ಮ್​​ನಲ್ಲಿ ಭರ್ತಿ ಮಾಡಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನಾಂಕವಾಗಿತ್ತು.

ಟಾಯ್‌ಹ್ಯಾಕಥಾನ್ 2021 ನೋಂದಣಿ ಜನವರಿ 5, 2021 ರಂದು ಪ್ರಾರಂಭವಾಯಿತು. ನೊಂದಾಯಿಸಲು ಕೊನೆಯ ದಿನಾಂಕ ಜನವರಿ 20, 2021. ಅಂದರೆ ಇಂದೇ ಕೊನೆಯ ದಿನವಾಗಿತ್ತು.

ಟಾಯ್​ಕಥಾನ್​ನಲ್ಲಿ ಜೂನಿಯರ್, ಸೀನಿಯರ್  ಮತ್ತು ಸ್ಟಾರ್ಟಪ್ ಹೀಗೆ ಮೂರು ಹಂತಗಳಿವೆ. ಟಾಯ್ ಎಕ್ಸ್​ಪರ್ಟ್​ಗಳು, ಸ್ಟಾರ್ಟಪ್​ಗಳಲ್ಲದೆ ದೇಶಾದ್ಯಂತ ವಿವಿಧ ಶಾಲೆ, ಕಾಲೇಜು ಮತ್ತು ವಿವಿಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಭಾರತದ ಅಂದಾಜು 1 ಬಿಲಿಯನ್ ಡಾಲರ್ (ಸುಮಾರು 7 ಸಾವಿರ ಕೋಟಿ ರೂ) ಮೌಲ್ಯದಷ್ಟಿರುವ ಆಟಿಕೆ ಮಾರುಕಟ್ಟೆಯನ್ನು ಯಶಸ್ವಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ವಿನೂತನ ಐಡಿಯಾಗಳನ್ನ ಹೊರತರುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕೋಟ್ಯಂತರ ವಿದ್ಯಾರ್ಥಿಗಳಲ್ಲಿ ಹುದುಗಿರುವ ಕ್ರಿಯಾಶೀಲತೆಯನ್ನ ಬಳಸಿ ವಿಶೇಷವಾದ ಗೊಂಬೆ, ಆಟಿಕೆ, ಗೇಮ್​ಗಳನ್ನ ಆವಿಷ್ಕರಿಸುವ ಗುರಿ ಇದೆ.

ಒಂಬತ್ತು ಥೀಮ್​ಗಳ ಆಧಾರದ ಮೇಲೆ Toycathon ಅನ್ನು ರೂಪಿಸಲಾಗಿದೆ. ಭಾರತೀಯ ಸಂಸ್ಕೃತಿ, ಇತಿಹಾಸ, ಭಾರತೀಯ ಜ್ಞಾನ, ಕಲಿಕೆ-ಶಿಕ್ಷಣ-ಪಾಠ, ಸಾಮಾಜಿಕ-ಮಾನವೀಯ ಮೌಲ್ಯ, ಕಸುಬು, ಪರಿಸರ, ದಿವ್ಯಾಂಗ, ಫಿಟ್ನೆಸ್, ಕ್ರೀಡೆ, ಸಾಂಪ್ರದಾಯಿಕ ಭಾರತೀಯ ಆಟಿಕೆಗಳ ಮರು ಅಭಿವೃದ್ಧಿ, ಕ್ರಿಯಾಶೀಲತೆ ಈ ಥೀಮ್​ಗಳ ಮೇಲೆ ಆಟಿಕೆ, ಗೇಮ್ ಅಭಿವೃದ್ಧಿಪಡಿಸುವ ಬಗೆ ಆವಿಷ್ಕರಿಸುವ ಮಹತ್ ಪ್ರಯತ್ನ ಇದಾಗಿದೆ.

ಫೆಬ್ರವರಿ 12ಕ್ಕೆ ನಿಮ್ಮ ಐಡಿಯಾಗಳನ್ನ ಶಾರ್ಟ್ ಲಿಸ್ಟ್ ಮಾಡಿ ಘೋಷಿಸಲಾಗುತ್ತದೆ. ಫೆಬ್ರವರಿ 23-25ರ ಒಂದು ದಿನದಂದು ಗ್ರ್ಯಾಂಡ್ ಫಿನಾಲೆ ಇರುತ್ತದೆ.
Published by: Latha CG
First published: January 20, 2021, 10:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories