HOME » NEWS » National-international » TOTAL 21MINS AIR STRIKE TIMELINE BREAK UP IN PAKISTAN AND POK

ಇಲ್ಲಿದೆ ಸರ್ಜಿಕಲ್​ ಸ್ಟ್ರೈಕ್​ನ ಆ 21 ನಿಮಿಷಗಳ ಸಂಪೂರ್ಣ ಮಾಹಿತಿ

India Strikes Back: ಕೇವಲ 21 ನಿಮಿಷಗಳಲ್ಲಿ ಈ ದಾಳಿ ಪೂರ್ಣಗೊಂಡಿತ್ತು. ಜೈಶ್​-ಇ-ಮೊಹ್ಮದ್​ ಉಗ್ರ ಸಂಘಟನೆಯ ಅಡಗು ತಾಣಗಳು ನಾಶವಾಗಿದ್ದವು. ಆ 21 ನಿಮಿಷಗಳ ವಿವರಣೆ ಇಲ್ಲಿದೆ. 

Rajesh Duggumane | news18
Updated:February 26, 2019, 3:32 PM IST
ಇಲ್ಲಿದೆ ಸರ್ಜಿಕಲ್​ ಸ್ಟ್ರೈಕ್​ನ ಆ 21 ನಿಮಿಷಗಳ ಸಂಪೂರ್ಣ ಮಾಹಿತಿ
ದಾಳಿ ನಡೆದ ಪ್ರದೇಶದ ಮ್ಯಾಪ್​
  • News18
  • Last Updated: February 26, 2019, 3:32 PM IST
  • Share this:
ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಇಂದು ಮುಂಜಾನೆ ನಡೆದ ಸರ್ಜಿಕಲ್​ ಸ್ಟ್ರೈಕ್​ನಲ್ಲಿ ಸಾಕಷ್ಟು ಉಗ್ರ ಕ್ಯಾಂಪ್​ಗಳು ನಾಶ ಹೊಂದಿವೆ. 45 ವರ್ಷಗಳ ನಂತರ ಪಾಕಿಸ್ತಾನ ಪ್ರವೇಶಿಸಿ ಭಾರತ ಈ ದಾಳಿ ನಡೆಸಿದೆ. ಕೇವಲ 21 ನಿಮಿಷಗಳಲ್ಲಿ ಈ ಸರ್ಜಿಕಲ್​ ಸ್ಟ್ರೈಕ್​ ಪೂರ್ಣಗೊಂಡಿತ್ತು. ಜೈಶ್​-ಇ-ಮೊಹ್ಮದ್​ ಉಗ್ರ ಸಂಘಟನೆಯ ಅಡಗು ತಾಣಗಳು ನಾಶವಾಗಿದ್ದವು. ಆ 21 ನಿಮಿಷಗಳ ವಿವರಣೆ ಇಲ್ಲಿದೆ.

ಬಾಲ್​ಕೋಟ್​ನಲ್ಲಿ ಮೊದಲ ದಾಳಿ:

ಭಾರತೀಯ ವಾಯುಪಡೆಯ 12 ಮೀರಜ್​-2000 ವಿಮಾನಗಳು ಇದರಲ್ಲಿ ಪಾಲ್ಗೊಂಡಿದ್ದವು. ಮುಜಾಫರ್​​ಬಾದ್​​ನಿಂದ 24 ಕಿ.ಮೀ ದೂರದಲ್ಲಿರುವ ಬಾಲ್​ಕೋಟ್​ನಲ್ಲಿ 3.45-3.53ರವರೆಗೆ ದಾಳಿ ನಡೆದಿತ್ತು. ಅಲ್ಲಿದ್ದ ಜೈಶ್​​-ಇ-ಮೊಹ್ಮದ್​ ಉಗ್ರ ಸಂಘಟನೆಯ ಸಾಕಷ್ಟು ಅಡಗು ತಾಣಗಳು ನಾಶವಾದವು.

ಜೆಇಎಮ್​ ಟಾರ್ಗೆಟ್​:

ಈ ಭಾಗದಲ್ಲಿ ಜೈಶ್​-ಇ-ಮೊಹ್ಮದ್​, ಲಷ್ಕರ್​-ಇ-ತೊಯ್ಬಾ ಹಾಗೂ ಹಿಸ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆಗಳು ಈ ಭಾಗದಲ್ಲಿ ಶಿಬಿರಗಳನ್ನು ಮಾಡಿಕೊಂಡಿವೆ ಎನ್ನಲಾಗಿದೆ. ಇಲ್ಲಿ ತರಬೇತಿ ಉಗ್ರ ಕೇಂದ್ರಗಳು ಇವೆ ಎನ್ನಲಾಗಿದೆ. ಹಾಗಾಗಿ, ಇವನ್ನೇ ಗುರಿಯಾಗಿಸಿಕೊಂಡು ದಾಳಿ ನಡೆದಿದೆ.

ಇದನ್ನೂ ಓದಿ: ಪುಲ್ವಾಮಾ ದಾಳಿಗೆ ಪ್ರತೀಕಾರ: ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ದಾಳಿ ನಡೆಸಿದ ಭಾರತೀಯ ಯುದ್ಧ ವಿಮಾನಗಳು

ತರಬೇತಿ ಕೇಂದ್ರಗಳಲ್ಲಿದ್ದರು ಉಗ್ರರು:ಪುಲ್ವಾಮಾ ದಾಳಿ ನಂತರದಲ್ಲಿ ಭಾರತ ತಿರುಗೇಟು ನೀಡುತ್ತದೆ ಎಂಬುದು ಪಾಕಿಸ್ತಾನ ಮೊದಲೇ ಅರಿತಿತ್ತು. ಈ ಮೊದಲು ನಡೆದ ಉರಿ ದಾಳಿಗೆ ಪ್ರತಿಯಾಗಿ ಸರ್ಜಿಕಲ್​ ಸ್ಟ್ರೈಕ್​ ನಡೆಸಿತ್ತು ಭಾರತ. ಹಾಗಾಗಿ ಮೊದಲೇ ಎಚ್ಚೆತ್ತುಕೊಂಡಿದ್ದ ಪಾಕ್​​, ಲಾಂಚ್​ ಪ್ಯಾಡ್​ಗಳಲ್ಲಿದ್ದ ಉಗ್ರರರನ್ನು ಸ್ಥಳಾಂಥರ ಮಾಡಿತ್ತು. ಆದರೆ ತರಬೇತಿ ಕೇಂದ್ರಗಳು ಹಾಗೆಯೇ ಇದ್ದವು. ಅಲ್ಲಿದ್ದ ಉಗ್ರರು ದಾಳಿಯಲ್ಲಿ ಸತ್ತಿದ್ದಾರೆ.

ಮುಜಾಫರ್​ಬಾದ್​

ಬಾಲಕೋಟ್​ನಲ್ಲಿ 3.48ರಿಂದ 3-55ರವರೆಗೆ ದಾಳಿ ನಡೆದಿತ್ತು. ಚಕೋತಿಯಲ್ಲಿ 3.58ರಿಂದ 4.04ರವರೆಗೆ ಭಾರತೀಯ ಸೇನೆ ಏರ್​ ಸರ್ಜಿಕಲ್​ ಸ್ಟ್ರೈಕ್​ ನಡೆಸಿದೆ.  ಕೇವಲ 21 ನಿಮಿಷಗಳಲ್ಲಿ ದಾಳಿ ಸಂಪೂರ್ಣಗೊಂಡಿದೆ.

First published: February 26, 2019, 2:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories