G20 Summit: ಉಕ್ರೇನ್ ಯುದ್ಧ ಭೀತಿಯ ಮಧ್ಯೆ ರಷ್ಯಾ-ಅಮೆರಿಕಾ ಮುಖಾಮುಖಿ, ಏಕತೆ ಮೂಡಿಸುತ್ತಾ ಭಾರತ?

ಅಮೆರಿಕಾ ಮತ್ತು ರಷ್ಯಾ ಮುಖಾಮುಖಿ

ಅಮೆರಿಕಾ ಮತ್ತು ರಷ್ಯಾ ಮುಖಾಮುಖಿ

ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳ ವಿನಾಶಕಾರಿ ನೀತಿಯು ಈಗಾಗಲೇ ಜಗತ್ತನ್ನು ದುರಂತದ ಅಂಚಿನಲ್ಲಿ ಇರಿಸಿದೆ, ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಹಿನ್ನಡೆಯನ್ನು ಉಂಟುಮಾಡಿದೆ ಮತ್ತು ಬಡ ದೇಶಗಳ ಪರಿಸ್ಥಿತಿಯನ್ನು ಗಂಭೀರವಾಗಿ ಉಲ್ಬಣಗೊಳಿಸಿದೆ ಎಂದು ವರದಿ ತಿಳಿಸಿದೆ

  • Trending Desk
  • 4-MIN READ
  • Last Updated :
  • New Delhi, India
  • Share this:

ನವದೆಹಲಿ: ರಷ್ಯಾ (Russia) ಮತ್ತು ಉಕ್ರೇನ್ (Ukraine) ನಡುವಿನ ನಡುವಿನ ಯುದ್ಧದಿಂದ ಅಮೆರಿಕಾ (America)ಮತ್ತು ರಷ್ಯಾದ ಮಧ್ಯೆ ಉದ್ವಿಗ್ನತೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದಿಗ್ದತೆಯ ಪರಿಸ್ಥಿತಿಯಲ್ಲೇ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ (Sergey Lavrov) ಹಾಗೂ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ (Antony Blinker) ನವದೆಹಲಿಯಲ್ಲಿ ನಡೆಯುವ G20 ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಮುಖಾಮುಖಿಯಾಗಲಿದ್ದಾರೆ. ಇದರಿಂದ ವಿಶ್ವದ ಉನ್ನತ ಆರ್ಥಿಕತೆಗಳಲ್ಲಿ ಏಕತೆಯನ್ನು ರೂಪಿಸಲು ಆತಿಥೇಯ ಭಾರತ ಮಾಡುವ ಪ್ರಯತ್ನಗಳು ನಿಷ್ಪಲಗೊಳ್ಳಲಿವೆಯೇ ಎಂಬ ಆತಂಕ ಮನೆಮಾಡಿದೆ.


ಬಾಲಿಯಲ್ಲಿ ನಡೆದ ಜಿ20 ಶೃಂಗ ಸಭೆಯಲ್ಲಿ ರಷ್ಯಾದ ವಿದೇಶಾಂಗ ಸಚಿವರು ಸಭೆಯಿಂದ ಹೊರನಡೆದ ಘಟನೆ ನಡೆದ ನಂತರ ಇವರಿಬ್ಬರ ಮಧ್ಯೆ ಆತ್ಮೀಯ ಮಾತುಕತೆಗಳು ನಡೆಯುವುದು ಅಸಂಭವ ಎಂದು ಪಾಶ್ಚಿಮಾತ್ಯ ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡುವ ವಾರಗಳ ಮೊದಲು ಅವರು ಕೊನೆಯದಾಗಿ ಜನವರಿ 2022 ರಲ್ಲಿ ಪ್ರತ್ಯೇಕವಾಗಿ ಭೇಟಿಯಾಗಿದ್ದರು. ಇವರಿಬ್ಬರೂ ಯುದ್ಧವನ್ನು ಹೊರತುಪಡಿಸಿ ಬೇರೆ ವಿಷಯಗಳ ಬಗ್ಗೆ ಫೋನ್‌ ಮೂಲಕ ಸಂಭಾಷಣೆ ನಡೆಸಿದ್ದರು ಎಂದು ವರದಿಯಾಗಿದೆ.


ಇದನ್ನೂ ಓದಿ: HCA Awards 2023: ಅಮೆರಿಕಾದಲ್ಲಿ ರಾಮ್ ಚರಣ್​ಗೆ ಅಪಮಾನ ಮಾಡಿದ್ರಾ? ಹಾಲಿವುಡ್ ನಟಿ ಕ್ಷಮೆ ಕೇಳಿದ್ಯಾಕೆ?


ವಿನಾಶಕಾರಿ ನೀತಿಯಿಂದ ಆರ್ಥಿಕತೆಗೆ ಪೆಟ್ಟು


ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳ ವಿನಾಶಕಾರಿ ನೀತಿಯು ಈಗಾಗಲೇ ಜಗತ್ತನ್ನು ದುರಂತದ ಅಂಚಿನಲ್ಲಿ ಇರಿಸಿದೆ, ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಹಿನ್ನಡೆಯನ್ನು ಉಂಟುಮಾಡಿದೆ ಮತ್ತು ಬಡ ದೇಶಗಳ ಪರಿಸ್ಥಿತಿಯನ್ನು ಗಂಭೀರವಾಗಿ ಉಲ್ಬಣಗೊಳಿಸಿದೆ ಎಂದು ವರದಿ ತಿಳಿಸಿದೆ. ಅದೇ ರೀತಿ ಹೊಸದಿಲ್ಲಿಯಲ್ಲಿ ಎರಡು ದಿನಗಳ G20 ಕೂಟದಲ್ಲಿ ಬ್ಲಿಂಕೆನ್ ಮತ್ತು ಅವರ ಚೀನೀ ಎದುರಾಳಿ ಕ್ವಿನ್ ಗ್ಯಾಂಗ್ ನಡುವೆ ಸಭೆ ನಡೆಯುತ್ತದೆಯೋ ಇಲ್ಲವೋ ಎಂಬುದರ ಬಗ್ಗೆಯೂ ಅನುಮಾನವಿದೆ ಎಂದು ವರದಿ ಹೇಳಿದೆ.


ಸ್ಪೈ ಬಲೂನ್


ಇನ್ನು ಕಳೆದ ಫೆಬ್ರವರಿ 4 ರಂದು ತನ್ನ ಪೂರ್ವ ಕರಾವಳಿಯಲ್ಲಿ ಶಂಕಿತ ಚೀನೀ ಪತ್ತೇದಾರಿ ಬಲೂನ್ ಅನ್ನು ಯುಎಸ್ ಹೊಡೆದುರುಳಿಸಿದ ನಂತರ ಬ್ಲಿಂಕೆನ್ ಹಾಗೂ ಚೀನಾದ ಉನ್ನತ ರಾಜತಾಂತ್ರಿಕ ವಾಂಗ್ ಯಿ ಅವರೊಂದಿಗೆ ಶೀತಲ ಸಂಘರ್ಷ ಏರ್ಪಟ್ಟಂತಿದೆ. ಈ ಘಟನೆಯಿಂದ ಬ್ಲಿಂಕೆನ್ ಚೀನಾಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದು, ಯುಎಸ್ ಸಾರ್ವಭೌಮತ್ವ ಮತ್ತು ಅಂತರಾಷ್ಟ್ರೀಯ ಕಾನೂನಿನ ಸ್ವೀಕಾರಾರ್ಹವಲ್ಲದ ಉಲ್ಲಂಘನೆ ಎಂಬುದಾಗಿ ಈ ಘಟನೆಯನ್ನು ಖಂಡಿಸಿದ್ದು ಮಾತ್ರವಲ್ಲದೇ ಇದು ಮರುಕಳಿಸಬಾರದು ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.


ತೈವಾನ್‌ನಲ್ಲಿ ವಾಷಿಂಗ್ಟನ್‌ನ ನಿಲುವಿನಿಂದ ಕೋಪಗೊಂಡ ಚೀನಾ ತಾನು ಸ್ಪೈ ಬಲೂನ್‌ಗಳನ್ನು ಬಳಸಿಲ್ಲ ಎಂದು ನಿರಾಕರಿಸಿದೆ.


ರಷ್ಯಾಗೆ ಶಸ್ತ್ರಾಸ್ತ್ರ ಬೆಂಬಲ


ರಷ್ಯಾ ಬಣಕ್ಕೆ ಆಯುಧ ಬೆಂಬಲವನ್ನೊದಗಿಸುತ್ತಿರುವ ವಿಷಯದಲ್ಲಿ ವಾಂಗ್‌ಗೆ ಬ್ಲಿಂಕನ್ ಎಚ್ಚರಿಕೆ ನೀಡಿದ್ದಾರೆ. ಬೀಜಿಂಗ್ ಇದನ್ನು ಕೂಡ ನಿರಾಕರಿಸಿದೆ.


ಇದನ್ನೂ ಓದಿ: Alaska: ಅಲಸ್ಕಾ ಪ್ರಾಂತ್ಯದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮತ್ತೊಂದು ವಸ್ತುವನ್ನು ಹೊಡೆದರುಳಿಸಿದ ಅಮೆರಿಕಾ!


ವಿಚಿತ್ರವಾದ ಅತಿಥೇಯರು


ಗ್ರೂಪ್ ಆಫ್ ಟ್ವೆಂಟಿ 19 ದೇಶಗಳನ್ನು ಮತ್ತು ಯುರೋಪಿಯನ್ ಯೂನಿಯನ್ ಅನ್ನು ಒಳಗೊಂಡಿದೆ, ಇದು ವಿಶ್ವದ ಆರ್ಥಿಕತೆಯ ಸುಮಾರು 85% ಮತ್ತು ಅದರ ಜನಸಂಖ್ಯೆಯ ಮೂರನೇ ಎರಡರಷ್ಟು ಪ್ರತಿನಿಧಿಸುತ್ತದೆ. ಭಾರತವು ಈ ವರ್ಷ ತನ್ನ G20 ಅಧ್ಯಕ್ಷತೆಯನ್ನು ಬಡತನ ಮತ್ತು ಹವಾಮಾನ ಹಣಕಾಸು ಮುಂತಾದ ವಿಷಯಗಳ ಮೇಲೆ ಕೇಂದ್ರೀಕರಿಸಲು ಬಯಸುತ್ತದೆ, ಆದರೆ ಉಕ್ರೇನ್ ಯುದ್ಧ ಮತ್ತು ಅದರ ಪರಿಣಾಮಗಳು ಕಾರ್ಯಸೂಚಿಯಲ್ಲಿ ಪ್ರಾಬಲ್ಯ ಸಾಧಿಸಲು ಸಿದ್ಧವಾಗಿವೆ.


ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಜಿ 20 ಹಣಕಾಸು ಮಂತ್ರಿಗಳ ಸಭೆಯಲ್ಲಿಯೂ ರಷ್ಯಾ- ಉಕ್ರೇನ್ ಯುದ್ಧದ ಬಗ್ಗೆಯೇ ವಿಷಯಗಳು ಪ್ರಸ್ತಾವನೆಯಾಗಿತ್ತು. ರಷ್ಯಾ ಮತ್ತು ಚೀನಾ ಪರಸ್ಪರ ಬೆಂಬಲ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆಯ ಹೇಳಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಜಿ20 ಅನ್ನು ಆಯೋಜಿಸಿರುವುದು ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಒಂದೆಡೆ ಚೀನಾದ ಕುರಿತು ಪಾಶ್ಚಿಮಾತ್ಯ ದೇಶಗಳ ಬೆಂಬಲದ ಕುರಿತು ಕಳವಳ ಹಂಚಿಕೊಂಡರೆ, ಇನ್ನೊಂದೆಡೆ ಭಾರತವು ರಷ್ಯಾದ ಶಸ್ತ್ರಾಸ್ತ್ರಗಳ ಪ್ರಮುಖ ಖರೀದಿದಾರ ಮತ್ತು ಹೆಚ್ಚಿನ ತೈಲ ಆಮದುಗಳನ್ನು ಪಡೆದುಕೊಳ್ಳುವ ದೇಶ ಎಂದೆನಿಸಿದೆ.

Published by:Avinash K
First published: