ನವದೆಹಲಿ(ಜೂ.21): ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೈನಿಕರು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಹತ್ಯೆಯಾದ ಮೂವರು ಉಗ್ರರು ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಭಯೋತ್ಪಾದಕ ಸಂಘಟನೆಗೆ ಸೇರಿದವರಾಗಿದ್ದರು. ಮೋಸ್ಟ್ ವಾಂಟೆಡ್ ಉಗ್ರ ಮುದಾಸಿರ್ ಪಂಡಿತ್ ಕೂಡ ಈ ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ ಎಂದು ತಿಳಿದು ಬಂದಿದೆ. ಉತ್ತರ ಕಾಶ್ಮೀರದ ಬರಾಮುಲ್ಲಾ ಜಿಲ್ಲೆಯ ಸೊಪೋರ್ನ ಗುಂದ್ ಬ್ರಾತ್ ಪ್ರದೇಶದಲ್ಲಿ ಈ ಎನ್ಕೌಂಟರ್ ನಡೆದಿದೆ.
ಕಮಾಂಡರ್ ಹಾಗೂ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮುದಾಸಿರ್ ಪಂಡಿತ್ ಕೂಡ ಈ ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ ಎಂದು ತಿಳಿದು ಬಂದಿದೆ. ಈತ ಕಳೆದ ಮಾರ್ಚ್ ತಿಂಗಳಿನಲ್ಲಿ ಸೊಪೋರ್ನಲ್ಲಿ ಸಭೆ ನಡೆಯುತ್ತಿದ್ದ ವೇಳೆ, ಇಬ್ಬರು ಬಿಜೆಪಿ ಕೌನ್ಸಿಲರ್ಗಳು ಹಾಗೂ ಒಬ್ಬ ಪೊಲೀಸ್ ಅಧಿಕಾರಿಯನ್ನು ಕೊಂದಿದ್ದ. ಜೊತೆಗೆ ಹಲವು ಪ್ರಕರಣಗಳಲ್ಲಿ ಸಿಕ್ಕಿಕೊಂಡಿದ್ದ ಈತನನ್ನು ಭದ್ರತಾ ಪಡೆಯವರು ಹುಡುಕುತ್ತಿದ್ದರು.
ಇದನ್ನೂ ಓದಿ:International Yoga Day 2021: ಅಂತರಾಷ್ಟ್ರೀಯ ಯೋಗ ದಿನದಂದು M Yoga App ಲಾಂಚ್ ಮಾಡಿದ ಪ್ರಧಾನಿ ಮೋದಿ
ಪಂಡಿತ್ ಸೇರಿ ಮೂವರು ಉಗ್ರರು ಅಡಗಿ ಕುಳಿತಿದ್ದಾರೆ ಎಂಬ ಗುಪ್ತಚರ ದಳದ ಖಚಿತ ಮಾಹಿತಿ ಮೇರೆಗೆ, ಭದ್ರತಾ ಪಡೆ ಭಾನುವಾರ ರಾತ್ರಿ ಸೊಪೋರ್ ಪ್ರದೇಶದಲ್ಲಿ ಕಾರ್ಡನ್ ಲಾಂಚ್ ಮಾಡಿ, ಶೋಧ ಕಾರ್ಯಾಚರಣೆ ಆರಂಭಿಸಿತ್ತು.
ಎಲ್ಇಟಿ ಸಂಘಟನೆಯ ಟಾಪ್ ಟೆರರಿಸ್ಟ್ ಮುದಾಸಿರ್ ಪಂಡಿತ್ ಇತ್ತೀಚೆಗೆ ಮೂವರು ಪೊಲೀಸರು, ಇಬ್ಬರು ಕೌನ್ಸಿಲರ್ಗಳು ಹಾಗೂ ಇಬ್ಬರು ನಾಗರಿಕರನ್ನು ಕೊಲೆ ಮಾಡಿದ್ದ. ಸೊಪೋರ್ನಲ್ಲಿ ಭಯೋತ್ಪಾದನಾ ಪ್ರಕರಣ ಸಂಬಂಧ ನಡೆದ ಎನ್ಕೌಂಟರ್ನಲ್ಲಿ ಹಲವರು ಈತನ ಗುಂಡೇಟಿಗೆ ಬಲಿಯಾಗಿದ್ದರು. ಈಗ ಮುದಾಸಿರ್ ಪಂಡಿತ್ನನ್ನು ಭಾರತೀಯ ಸೈನಿಕರು ಹತ್ಯೆಗೈದಿದ್ದಾರೆ ಎಂದು ಕಾಶ್ಮೀರದ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ