ಜಮ್ಮು-ಕಾಶ್ಮೀರ: ಪ್ರಮುಖ ಎಲ್ಇಟಿ ಕಮಾಂಡರ್​ ಸೇರಿದಂತೆ ಇಬ್ಬರು ಭಯೋತ್ಪಾದಕರ ಹತ್ಯೆ

ಹಲವಾರು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿದ್ದ ಫಯಾಜ್ ಅಹ್ಮದ್​ವಾರ್ ಭದ್ರತಾ ಪಡೆಗಳು ಮತ್ತು ನಾಗರಿಕ ಹತ್ಯೆಗಳ ಮೇಲೆ ಭಯೋತ್ಪಾದಕ ದಾಳಿ ಮಾಡುವ ಹಾಗು ಅದನ್ನು ಕಾರ್ಯಗತಗೊಳಿಸುವಲ್ಲಿ ಅತ್ಯಂತ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದನು.

ಎನ್​ಕೌಂಟರ್​ ನಡೆಸಿದ ಭದ್ರತಾ ಪಡೆ

ಎನ್​ಕೌಂಟರ್​ ನಡೆಸಿದ ಭದ್ರತಾ ಪಡೆ

 • Share this:
  ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ಶುಕ್ರವಾರ ರಾತ್ರಿ ನಡೆದ ಸಂಘರ್ಷದಲ್ಲಿ ಇಬ್ಬರು ಲಷ್ಕರ್-ಎ-ತೋಯಿಬಾ (ಎಲ್‌ಇಟಿ) ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ನಿರ್ದಿಷ್ಟ ಮಾಹಿತಿ ಸಿಕ್ಕ ನಂತರ ಭದ್ರತಾ ಪಡೆಗಳು ಸೋಪೋರ್‌ನ ವಾರ್ಪೋರಾ ಪ್ರದೇಶದಲ್ಲಿ ಗುರುವಾರ  ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೆವು ಇದಾದ ನಂತರ ಭಯೋತ್ಪಾದಕರು ಅವಿತಿದ್ದ ಜಾಗ ತಿಳಿದ ಮೇಲೆ ಮುಂದಿನ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

  "ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಭಯೋತ್ಪಾದಕರು ಅಡಗಿ ಕುಳಿತಿರುವ ಜಾಗವನ್ನು ಕಂಡುಹಿಡಿಯಲಾಯಿತು ಹಾಗೂ ಅವರಿಗೆ ಶರಣಾಗುವಂತೆ ನಮ್ಮ ಭದ್ರತಾ ಪಡೆಯು ಪದೇ ಪದೇ ಮನವಿ ಮಾಡಿತು. ಆದರೆ ಉಗ್ರರು ಮಾತಿಗೆ ಬಗ್ಗದೆ ಶರಣಾಗುವ ಬದಲು, ಎಲ್ಲರ ಮೇಲೆ ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದರು. ಅನಿವಾರ್ಯವಾಗಿ ಭದ್ರತಾ ಪಡೆಗಳು ಅವರನ್ನು ಎನ್​ಕೌಂಟರ್​ ಮಾಡಬೇಕಾಯಿತು"ಎಂದು ಅವರು ಹೇಳಿದರು. ಎನ್​ಕೌಂಟರ್​ ಆದ ಮೇಲೆ ಅವರು ಅಡಗಿ ಕುಳಿತಿದ್ದ ಜಾಗವನ್ನು ಪರಿಶೀಲಿಸಿದಾಗ ಇವರುಗಳು ಲಷ್ಕರ್-ಎ-ತೋಯಿಬಾ ಸಂಘಟನೆಗೆ ಸೇರಿದ ಉಗ್ರರು ಎಂದು ತಿಳಿಯಿತು. ದುರ್ಘಟನೆ ನಡೆದ ಜಾಗದಿಂದ ಅವರ ಮೃತ ದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.

  ಎಲ್‌ಇಟಿಯ ಉನ್ನತ ಕಮಾಂಡರ್ ಆಗಿದ್ದ ವಾರ್‌ಪೊರ ಪ್ರದೇಶದ ಫಯಾಜ್ ಅಹ್ಮದ್​ವಾರ್​, ಅಲಿಯಾಸ್ ರುಕಾನಾ, ಅಲಿಯಾಸ್ ಉಮರ್ ಮತ್ತು ಚೆರ್ಪೊರಾ ಬುಡ್ಗಮ್ ಪ್ರದೇಶದ ಶಾಹೀನ್ ಅಹ್ಮದ್ ಮಿರ್, ಅಲಿಯಾಸ್ ಶಾಹೀನ್ ಮೊಲ್ವಿ ಎಂದು ಮೃತ ಭಯೋತ್ಪಾದಕರನ್ನು ಗರುತಿಸಲಾಗಿದೆ". ಪೊಲೀಸ್ ದಾಖಲೆಗಳ ಪ್ರಕಾರ, ಹತ್ಯೆಗೀಡಾದ ಇಬ್ಬರೂ ಭಯೋತ್ಪಾದಕರು ವಿವಿಧ ಸಮಾಜ ಘಾತುಕ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಅಲ್ಲದೇ ಈ ಇಬ್ಬರ ವಿರುದ್ಧ ಹಲವಾರು ಅಪರಾಧ ಪ್ರಕರಣಗಳು ದಾಖಲಾಗಿದ್ದವು" ಎಂದು ವಕ್ತಾರರು ತಿಳಿಸಿದ್ದಾರೆ.

  ಫಯಾಜ್ ಅಹ್ಮದ್​ವಾರ್ 2008 ರಿಂದಲೂ ಭಯೋತ್ಪಾದಕ ಕೃತ್ಯಗಳನ್ನು ಎಸಗುತ್ತಲೇ ಬಂದಿದ್ದ ಹಾಗೂ ಸಂಬಂಧ ಹೊಂದಿದ್ದ ಎಂದು ವಕ್ತಾರರು ಹೇಳಿದ್ದಾರೆ. “ಈಗಾಗಲೇ ಒಮ್ಮೆ ಪೊಲೀಸರಿಗೆ ಭಾರೀ ಪ್ರಮಾಣದ ಮದ್ದು, ಗುಂಡುಗಳ ಜೊತೆಗ ಶರಣಾಗಿದ್ದ ಇವನು, ಆನಂತರ ಜೈಲಿನಿಂದ ಬಿಡುಗಡೆಯಾಗಿದ್ದನು, ಆನಂತರ ಮತ್ತೆ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದನು.  ನಂತರ ಹಿಜ್ಬುಲ್​ ಮುಜಾಯಿದ್ದೀನ್​ ಭಯೋತ್ಪಾದಕ ಸಂಘಟನೆಯ ಪರವಾಗಿ ಕೆಲಸ ಮಾಡುತ್ತಿದ್ದನು ಆಗ ಪಿಎಸ್‌ಎ ಅಡಿಯಲ್ಲಿ ಬಂಧಿಸಲಾಗಿತ್ತು. ಮಾರ್ಚ್ 2020 ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ, ನಿಷೇಧಿತ ಭಯೋತ್ಪಾದಕ ಸಂಘಟನೆಯ ಎಲ್‌ಇಟಿಯ ಭಯೋತ್ಪಾದಕ  ಸಂಘಟನೆಗೆ ಸೇರಿದ್ದ"ಎಂದು ಅವರು ಹೇಳಿದರು.

  ಹಲವಾರು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿದ್ದ ಫಯಾಜ್ ಅಹ್ಮದ್​ವಾರ್ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ಭಯೋತ್ಪಾದಕ ದಾಳಿ ಮಾಡುವ ಹಾಗು ಅದನ್ನು ಕಾರ್ಯಗತಗೊಳಿಸುವಲ್ಲಿ ಅತ್ಯಂತ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದನು.  ಉತ್ತರ ಕಾಶ್ಮೀರದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿ ಇವನು ಒಬ್ಬನಾಗಿದ್ದ ಎಂದು ವಕ್ತಾರರು ತಿಳಿಸಿದ್ದಾರೆ. "ಉತ್ತರ ಕಾಶ್ಮೀರದಲ್ಲಿ ಹಲವಾರು ಭಯೋತ್ಪಾದಕ ಕೃತ್ಯಗಳು ಮತ್ತು ಹಿಂಸಾಚಾರಗಳನ್ನು ನಡೆಸುತ್ತಿದ್ದ ಕೊನೆಯ ಸಕ್ರಿಯ ಭಯೋತ್ಪಾದಕ ಇವನಾಗಿದ್ದು, ಕಳೆದ ಮಾರ್ಚ್​ತಿಂಗಳಲ್ಲಿ ಸೋಪೋರ್‌ನ ವಾರ್ಪೋರಾ ಅಹದ್​ ಬಾಬಾ ಕ್ರಾಸಿಂಗ್​ ಬಳಿ ದಾಳಿ ನಡೆಸಿ ಒಬ್ಬ ಪೊಲೀಸ್​ ಹಾಗೂ ನಾಗರಿಕನನ್ನು ಕೊಂದಿದ್ದ. ಕಳೆದ ವರ್ಷ ಏಪ್ರಿಲ್​ ತಿಂಗಳಲ್ಲಿ ಮೂರು ಸಿಆರ್​ಪಿಎಫ್​ ಸಿಬ್ಬಂದಿಯನ್ನು ಸಾಯಿಸಲಾಗಿತ್ತು"ಎಂದು ಅವರು ಹೇಳಿದರು.

  ಈತ ಡ್ಯಾನಿಶ್ ಮಂಜೂರ್ ನಜಾ ಹತ್ಯೆ  ಮಾಡಿದ್ದ  ಹಾಗು ಮಾಡೆಲ್ ಟೌನ್ ಸೊಪೋರೆ ಬಳಿ ಜಂಟಿ ಪಡೆಗಳ ಮೇಲೆ ದಾಳಿ ಮಾಡಿದ್ದ. ಈ ವೇಳೆ ಒಬ್ಬ ನಾಗರಿಕ ಮತ್ತು ಸಿಆರ್​ಪಿಎಫ್​ ಸೈನಿಕ ಮೃತಪಟ್ಟಿದ್ದರು. ಜೂನ್ 12 ರಂದು ಎಸ್‌ಡಿಹೆಚ್ ಸೊಪೋರೆ ಬಳಿ ಇಬ್ಬರು ಪುರಸಭೆ ಕೌನ್ಸಿಲರ್‌ಗಳು ಮತ್ತು ಪೊಲೀಸರ ಹತ್ಯೆ ಸೇರಿದಂತೆ  ಸೊಪೋರೆಯ ಪ್ರಮುಖ ವೃತ್ತದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಮತ್ತು ಇಬ್ಬರು ನಾಗರಿಕರನ್ನು ಹತ್ಯೆ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಪೊಲೀಸ್ ಮತ್ತು ಭದ್ರತಾ ಪಡೆಗಳ ಮೇಲೆ ಸರಣಿ ಗ್ರೆನೇಡ್ ದಾಳಿ ನಡೆಸುತ್ತಲೇ ಇದ್ದ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಎನ್‌ಕೌಂಟರ್ ನಡೆದ ಸ್ಥಳದಿಂದ ಎರಡು ಎಕೆ -47 ರೈಫಲ್‌ಗಳು ಮತ್ತು ನಾಲ್ಕು ನಿಯತಕಾಲಿಕೆಗಳು ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

  ಇದನ್ನೂ ಓದಿ: Exclusive: ಸಿಎಂ ಬಿಎಸ್​ವೈ ಚೇಂಬರ್​ನಲ್ಲಿ ಏನಾಯ್ತು? ವಲಸಿಗ ಸಚಿವರ ಜೊತೆ ಸಿಎಂ ಏನು ಚರ್ಚೆ ಮಾಡಿದರು? ಇಲ್ಲಿದೆ ಸಂಪೂರ್ಣ ವರದಿ

  ಕಾಶ್ಮೀರದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಕುಮಾರ್ ಅವರು ಯಾರ ಜೀವಕ್ಕೂ ಹಾನಿಯಾಗದಂತೆ ವೃತ್ತಿಪರ ರೀತಿಯಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಕ್ಕಾಗಿ ಪೊಲೀಸ್ ಮತ್ತು ಭದ್ರತಾ ಪಡೆಗಳನ್ನು ಅಭಿನಂದಿಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: