HOME » NEWS » National-international » TOP COURT CONFIRMS ORDER REJECTING NIRBHAYA CONVICTS CLAIM HE WAS MINOR

ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ; ಹಂತಕ ಪವನ್ ಗುಪ್ತಾ ಅರ್ಜಿ ಮತ್ತೆ ವಜಾ

ನಿರ್ಭಯಾ ಅತ್ಯಾಚಾರಿಗಳಿಗೆ ನಾಳೆ ಬೆಳಗ್ಗೆ 6 ಗಂಟೆಗೆ ತಿಹಾರ್​ ಜೈಲಿನಲ್ಲಿ ಗಲ್ಲಿಗೇರಿಸಲಾಗುತ್ತದೆ. ನೇಣಿಗೇರಿಸುವ ವ್ಯಕ್ತಿ ನಿನ್ನೆಯೇ ತಿಹಾರ್​ ಜೈಲಿಗೆ ಆಗಮಿಸಿದ್ದಾರೆ. ನಾಳೆ ದೋಷಿಗಳಿಗೆ ಗಲ್ಲುಶಿಕ್ಷೆ ಹಿನ್ನೆಲೆ, ಇಂದು ತಿಹಾರ್​ ಜೈಲಿನಲ್ಲಿ ದೋಷಿಗಳ ಪ್ರತಿಕೃತಿ ರಚಿಸಿ ನೇಣಿಗೇರಿಸುವ ಅಣಕು ಕಾರ್ಯಾಚರಣೆಯನ್ನು ನಡೆಸಲಾಗಿದೆ.

news18-kannada
Updated:January 31, 2020, 5:49 PM IST
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ; ಹಂತಕ ಪವನ್ ಗುಪ್ತಾ ಅರ್ಜಿ ಮತ್ತೆ ವಜಾ
ರೇಖಾಚಿತ್ರ- ಮೀರ್ ಸುಹೈಲ್
  • Share this:
ನವದೆಹಲಿ(ಜ. 31): ನಿರ್ಭಯಾ ಅತ್ಯಾಚಾರ ಪ್ರಕರಣ ಸಂಬಂಧ ದೋಷಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​​ ವಜಾ ಮಾಡಿದೆ. ಘಟನೆ ನಡೆದಾಗ ತಾನು ಅಪ್ರಾಪ್ತ ಎಂದು ಅಪರಾಧಿ ಪವನ್​ ಗುಪ್ತಾ  ಸುಪ್ರೀಂ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದ. ಅರ್ಜಿ ಸಲ್ಲಿಸಿದ್ದ ಕೆಲವೇ ಗಂಟೆಗಳಲ್ಲಿ ಸುಪ್ರೀಂ ಕೋರ್ಟ್​​ ದೋಷಿಯ ಅರ್ಜಿಯನ್ನು ವಜಾಗೊಳಿಸಿದೆ. 

2012ರ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆಯ ಸಂದರ್ಭದಲ್ಲಿ ಪವನ್​ ಗುಪ್ತಾ ಅಪ್ರಾಪ್ತ ವಯಸ್ಕನೆಂಬ ಹೇಳಿಕೆಯನ್ನು ಸುಪ್ರೀಂ ಕೋರ್ಟ್​​ ತಿರಸ್ಕರಿಸಿದೆ. ಅರ್ಜಿಯನ್ನು ಒಮ್ಮೆ ತಿರಸ್ಕರಿಸಿದ ಬಳಿಕ ಪದೇ ಪದೇ ಪರಿಶೀಲನೆ ನಡೆಸುವುದಿಲ್ಲ ಎಂಬುದಾಗಿ ಹೇಳಿದೆ. ಗಲ್ಲುಶಿಕ್ಷೆ ನಿಗದಿಯಾದ ಬಳಿಕ ನಾಲ್ವರು ದೋಷಿಗಳು ಸುಪ್ರೀಂ ಕೋರ್ಟ್​​ಗೆ ಸಾಕಷ್ಟು ಅರ್ಜಿಗಳನ್ನು ಸಲ್ಲಿಸಿದ್ದರು.

ಮತ್ತೊಂದು ನಿರ್ಭಯಾ ಪ್ರಕರಣ; ಅತ್ಯಾಚಾರ ಮಾಡಿ ಗುಪ್ತಾಂಗಕ್ಕೆ ಕಬ್ಬಿಣದ ಸಲಾಕೆ ಚುಚ್ಚಿದ ಕಾಮುಕ

ನಿರ್ಭಯಾ ಅತ್ಯಾಚಾರಿಗಳಿಗೆ ನಾಳೆ ಬೆಳಗ್ಗೆ 6 ಗಂಟೆಗೆ ತಿಹಾರ್​ ಜೈಲಿನಲ್ಲಿ ಗಲ್ಲಿಗೇರಿಸುವ ಸಾಧ್ಯತೆ ಇದೆ. ನೇಣಿಗೇರಿಸುವ ವ್ಯಕ್ತಿ ನಿನ್ನೆಯೇ ತಿಹಾರ್​ ಜೈಲಿಗೆ ಆಗಮಿಸಿದ್ದಾರೆ. ನಾಳೆ ದೋಷಿಗಳಿಗೆ ಗಲ್ಲುಶಿಕ್ಷೆ ಸಾಧ್ಯತೆ ಹಿನ್ನೆಲೆ, ಇಂದು ತಿಹಾರ್​ ಜೈಲಿನಲ್ಲಿ ದೋಷಿಗಳ ಪ್ರತಿಕೃತಿ ರಚಿಸಿ ನೇಣಿಗೇರಿಸುವ ಅಣಕು ಕಾರ್ಯಾಚರಣೆಯನ್ನು ನಡೆಸಲಾಗಿದೆ. ಸಂಪ್ರದಾಯದಂತೆ ದೋಷಿಗಳದ್ದಷ್ಟೇ ತೂಕದ ಪ್ರತಿಕೃತಿಗಳನ್ನು ಗಲ್ಲಿಗೇರಿಸುವ ಪ್ರಕ್ರಿಯೆ ನಡೆಯಿತು.

2012ರ ಡಿ. 16ರಂದು 23 ವರ್ಷದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಆರು ಜನರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಸ್ಸಿನೊಳಗೆ ಈ ಪೈಶಾಚಿಕ ಕೃತ್ಯ ಎಸಗಿ ಆಕೆಯನ್ನು ತೀರಾ ಗಂಭೀರವಾಗಿ ಗಾಯಗೊಳಿಸಿದ ಬಳಿಕ ಬಸ್ಸಿನಿಂದ ಹೊರ ಎಸೆದುಹೋಗಿದ್ದರು. ಬಹು ಅಂಗಾಂಗ ವೈಫಲ್ಯಗೊಂಡು ಈ ವಿದ್ಯಾರ್ಥಿನಿಯ ಕೆಲ ದಿನಗಳ ಬಳಿಕ ಅಸು ನೀಗಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲಾ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅವರಲ್ಲಿ ಒಬ್ಬಾತ ಬಾಲಾಪರಾಧಿಯಾಗಿದ್ದ. ರಾಮ್ ಸಿಂಗ್ ಎಂಬ ಮತ್ತೊಬ್ಬ ಆರೋಪಿ ತಿಹಾರ್ ಜೈಲಿನ ಕೋಣೆಯಲ್ಲೇ ನೇಣಿಗೆ ಶರಣಾಗಿದ್ದ. ಉಳಿದ ನಾಲ್ವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು: ಇಂದು ಪಟಿಯಾಲಾ ಹೌಸ್ ಕೋರ್ಟ್​ನಲ್ಲಿ ವಿಚಾರಣೆ; ಅಂತಿಮ ತೀರ್ಪು ಸಾಧ್ಯತೆ
Youtube Video
First published: January 31, 2020, 5:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories