• Home
 • »
 • News
 • »
 • national-international
 • »
 • ಟೂಲ್​ಕಿಟ್​ ಪ್ರಕರಣ; ವಕೀಲೆ ನಿಕಿತಾ ಜಾಕೋಬ್ ಬಂಧನವನ್ನು 3 ವಾರಗಳ ಕಾಲ ತಡೆಹಿಡಿದ ಮುಂಬೈ ಹೈ ಕೋರ್ಟ್​

ಟೂಲ್​ಕಿಟ್​ ಪ್ರಕರಣ; ವಕೀಲೆ ನಿಕಿತಾ ಜಾಕೋಬ್ ಬಂಧನವನ್ನು 3 ವಾರಗಳ ಕಾಲ ತಡೆಹಿಡಿದ ಮುಂಬೈ ಹೈ ಕೋರ್ಟ್​

ವಕೀಲೆ ನಿಕಿತಾ ಜಾಕೋಬ್​.

ವಕೀಲೆ ನಿಕಿತಾ ಜಾಕೋಬ್​.

ಟೂಲ್​ಕಿಟ್​ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೈತ ಹೋರಾಟಕ್ಕೆ ಬೆಂಬಲ ಪಡೆಯುವುದು ಇವರ ಆಕಾಂಕ್ಷೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಈಗಾಗಲೇ ಬೆಂಗಳೂರಿನ ವಿದ್ಯಾರ್ಥಿನಿ ದಿಶಾ ರವಿ ಅವರನ್ನು ಬಂಧಿಸಿದ್ದಾರೆ. ಪೊಲೀಸರ ಈ ನಡೆಯ ವಿರುದ್ಧ ಈಗಾಗಲೇ ವ್ಯಾಪಕ ಜನಾಕ್ರೋಶವೂ ಕೇಳಿ ಬರುತ್ತಿದೆ.

ಮುಂದೆ ಓದಿ ...
 • Share this:

  ಮುಂಬೈ (ಫೆಬ್ರವರಿ 17); ರೈತ ಹೋರಾಟದ ವೇಳೆ ಗಣರಾಜ್ಯೋತ್ಸವ ಗಲಭೆಗೆ ಟೂಲ್​ಕಿಟ್​ ಬಳಸಿದ ಆರೋಪವನ್ನು ಎದುರಿಸುತ್ತಿರುವ ವಕೀಲೆ ನಿಕಿತಾ ಜಾಕೋಬ್​ ಅವರಿಗೆ ಮುಂಬೈ ಹೈಕೋರ್ಟ್​ ಕೊನೆಗೂ 3 ವಾರಗಳ ಕಾಲ ಜಾಮೀನು ನೀಡುವ ಮೂಲಕ ಅವರ ಬಂಧನವನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಅಲ್ಲದೆ, ಜಾಮೀನಿಗಾಗಿ 25 ಸಾವಿರ ರೂ ವ್ಯಯಕ್ತಿಕ ಬಾಂಬ್​ ಅನ್ನು ಕೋರ್ಟ್​ಗೆ ನೀಡುವಂತೆಯೂ ಆರೋಪಿ ನಿಕಿತಾ ಜಾಕೋಬ್​ ಅವರಿಗೆ ಕೋರ್ಟ್​ ತಾಕೀತು ಮಾಡಿದೆ. ಗಣರಾಜ್ಯೋತ್ಸದ ಸಂದರ್ಭದಲ್ಲಿ ರೈತರು ದೆಹಲಿಯಲ್ಲಿ ಟ್ರ್ಯಾಕ್ಟರ್​ ರ‍್ಯಾಲಿ ಆಯೋಜಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಬೃಹತ್​ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಆದರೆ, ಈ ವೇಳೆ ಸಮಾನ ಮನಸ್ಕ ಪ್ರತಿಭಟನಾಕಾರರನ್ನು ಒಂದು ಕಡೆ ಸೇರಿಸಲು ಹಾಗೂ ಖಲಿಸ್ತಾನಿಗಳ ಪರ ಸಾಮಾಜಿಕ ಜಾಲತಾಣಗಳ ಮೂಲಕ ಬೆಂಬಲ ಸೂಚಿಸಲು ಟೂಲ್​ಕಿಟ್​ ಬಳಸಿದ್ದಾರೆ ಎಂದು ಬೆಂಗಳೂರಿನ ವಿದ್ಯಾರ್ಥಿನಿ ದಿಶಾ ರವಿ, ಮುಂಬೈ ಹೈಕೋರ್ಟ್​ ವಕೀಲೆ ನಿಕಿತಾ ಜಾಕೋಬ್ ಮತ್ತು ಎಂಜಿನಿಯರ್​ ಶಾಂತನೂ ಮುಲುಕ್​ ಮೇಲೆ ದೆಹಲಿ ಪೊಲೀಸರು ಆರೋಪ ಹೊರಿಸಿದ್ದಾರೆ.


  ಈ ಟೂಲ್​ಕಿಟ್​ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೈತ ಹೋರಾಟಕ್ಕೆ ಬೆಂಬಲ ಪಡೆಯುವುದು ಇವರ ಆಕಾಂಕ್ಷೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಈಗಾಗಲೇ ಬೆಂಗಳೂರಿನ ವಿದ್ಯಾರ್ಥಿನಿ ದಿಶಾ ರವಿ ಅವರನ್ನು ಬಂಧಿಸಿದ್ದಾರೆ. ಪೊಲೀಸರ ಈ ನಡೆಯ ವಿರುದ್ಧ ಈಗಾಗಲೇ ವ್ಯಾಪಕ ಜನಾಕ್ರೋಶವೂ ಕೇಳಿ ಬರುತ್ತಿದೆ.


  ಈ ನಡುವೆ ಗಣರಾಜ್ಯೋತ್ಸವದ ಮೊದಲು ಜೂಮ್ ಸಭೆ ನಡೆದಿದ್ದು, ಇದರಲ್ಲಿ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಸಂಸ್ಥಾಪಕ ಎಂ.ಒ. ಧಲಿವಾಲ್ ಮತ್ತು ಎಂ.ಎಸ್. ರವಿ ಸೇರಿದಂತೆ ಇತರ ಸಹ ಕಾರ್ಯಕರ್ತರು ಭಾಗವಹಿಸಿದ್ದರು ಎಂದು ಎಂ.ಎಸ್. ಜಾಕೋಬ್ ನಿನ್ನೆ ನ್ಯಾಯಾಲಯಕ್ಕೆ ತಿಳಿಸಿದ್ದರು. ತನ್ನ ವಕೀಲರು ಸಲ್ಲಿಸಿದ ದಾಖಲೆಯಲ್ಲಿ, "ಟೂಲ್​ಕಿಟ್​" ಅನ್ನು ಎಕ್ಸ್ಟಿಂಕ್ಷನ್ ರೆಬೆಲಿಯನ್ (ಎಕ್ಸ್ಆರ್) ಇಂಡಿಯಾ ಸ್ವಯಂಸೇವಕರು ಇಡೀ ಚಿತ್ರವನ್ನು ಅಂತರರಾಷ್ಟ್ರೀಯ ಪ್ರೇಕ್ಷಕರಿಗೆ ಸರಳವಾಗಿ ಪ್ರಸ್ತುತಪಡಿಸಲು ಸಿದ್ಧಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.


  ಆಕೆಯ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳನ್ನು ಪೊಲೀಸರು ಈಗಾಗಲೇ ವಶಪಡಿಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಇದು ದೇಶದ್ರೋಹದ ಕೆಲಸವಲ್ಲ. ಬದಲಾಗಿ ರೈತ ಹೋರಾಟಕ್ಕೆ ಬೆಂಬಲವಾಗಿಗ ಒಳ್ಳೆಯ ಉದ್ದೇಶಕ್ಕೆ ಮಾಡಿರುವ ಕಾರಣ ಆಕೆಗೆ ಜಾಮೀನು ಮಂಜೂರು ಮಾಡಬೇಕು ಎಂದು ನಿಕಿತಾ ಜಾಕೋಬ್​ ವಕೀಲರು ನ್ಯಾಯಾಲಯವನ್ನು ಕೇಳಿಕೊಂಡಿದ್ದರು.


  ಇದನ್ನೂ ಓದಿ: ಟೂಲ್​ಕಿಟ್​ ಪ್ರಕರಣ; ಆರೋಪಿ ಶಾಂತನೂಗೆ ಜಾಮೀನು, ವಕೀಲೆ ನಿಕಿತಾ ಜಾಕೋಬ್​ಗೆ ಮುಂದುವರೆದ ಸಂಕಷ್ಟ!


  ಮಂಗಳವಾರ ವಾದ-ವಿವಾದವನ್ನು ಆಲಿಸಿದ್ದ ನ್ಯಾಯಮೂರ್ತಿ ಪಿ.ಡಿ. ನಾಯಕ್ ಅವರು ತಮ್ಮ ಆದೇಶವನ್ನು ಬುಧವಾರಕ್ಕೆ ಮುಂದೂಡಿದ್ದರು. ಇದರ ಅನ್ವಯ ಇಂದು ಆದೇಶ ಹೊರಡಿಸಿರುವ ನ್ಯಾಯಮೂರ್ತಿ, "ಅರ್ಜಿದಾರರು ಮುಂಬೈನ ಖಾಯಂ ನಿವಾಸಿಯಾಗಿದ್ದು, ದೆಹಲಿಯಲ್ಲಿ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ. ಆದರೆ, ಅವರಿಗೆ 3 ವಾರಗಳ ಕಾಲ ನ್ಯಾಯಾಲಯ ಜಾಮೀನು ಮಂಜೂರು ಮಾಡುತ್ತಿದ್ದು, ಇದು ಕೇವಲ ತಾತ್ಕಾಲಿಕ ಪರಿಹಾರವಷ್ಟೇ" ಎಂದು ತಿಳಿಸಿದ್ದಾರೆ.


  ಟೂಲ್​ಕಿಟ್​ ಬಳಕೆ ಆರೋಪ ಎದುರಿಸುತ್ತಿರುವ ಮೂವರು ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ದೇಶದ್ರೋಹಕ್ಕಾಗಿ ಭಾರತೀಯ ದಂಡ ಸಂಹಿತೆ 124 (ಎ), ಸಮಾಜದ ವಿವಿಧ ವರ್ಗಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಅಪರಾಧ 153 (ಎ) ಮತ್ತು ಕ್ರಿಮಿನಲ್ ಪಿತೂರಿಗಾಗಿ 120 (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  Published by:MAshok Kumar
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು