ಜಮ್ಮು-ಕಾಶ್ಮೀರದಲ್ಲಿ ಹೊಸ ಸಮಸ್ಯೆ ಸೃಷ್ಟಿಯಾಗದಂತೆ 370ನೇ ವಿಧಿ ರದ್ದು ಮಾಡಿದ್ದೇವೆ; ಜಾರ್ಖಂಡ್ ಚುನಾವಣಾ ಸಮಾವೇಶದಲ್ಲಿ ಮೋದಿ ಹೇಳಿಕೆ

ಜಾರ್ಖಂಡ್ ರೈತರಿಗೆ ನಾವು ಆಶ್ವಾಸನೆ ನೀಡುತ್ತೇವೆ, ನಿಮ್ಮ ಖಾತೆಗಳಿಗೆ ಹಣ ನೇರವಾಗಿ ಬರಲಿದೆ. ಬಿಜೆಪಿಯೇತರ ರಾಜ್ಯಗಳಲ್ಲಿ ರೈತರ ಪರಿಸ್ಥಿತಿಯನ್ನು ಒಮ್ಮೆ ನೋಡಿ. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ರೈತರಿಗೆ ಮೋಸ ಮಾಡುತ್ತಿವೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

HR Ramesh | news18-kannada
Updated:December 3, 2019, 4:34 PM IST
ಜಮ್ಮು-ಕಾಶ್ಮೀರದಲ್ಲಿ ಹೊಸ ಸಮಸ್ಯೆ ಸೃಷ್ಟಿಯಾಗದಂತೆ 370ನೇ ವಿಧಿ ರದ್ದು ಮಾಡಿದ್ದೇವೆ; ಜಾರ್ಖಂಡ್ ಚುನಾವಣಾ ಸಮಾವೇಶದಲ್ಲಿ ಮೋದಿ ಹೇಳಿಕೆ
ಪ್ರಧಾನಿ ನರೇಂದ್ರ ಮೋದಿ
  • Share this:
ರಾಂಚಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಹೊಸ ಸಮಸ್ಯೆ ಸೃಷ್ಟಿಯಾಗದಂತೆ ಜಾಗ್ರತೆ ವಹಿಸಿ ಸರ್ಕಾರ 370ನೇ ರದ್ದುಗೊಳಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಡಿಸೆಂಬರ್ 7ರಂದು ಜಾರ್ಖಂಡ್​ನಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ. ಚುನಾವಣೆ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಾವು 370ನೇ ವಿಧಿಯನ್ನು ರದ್ದುಗೊಳಿಸಿದೆವು. ಇದು ಕಾಂಗ್ರೆಸ್​ ಸೃಷ್ಟಿಸಿದ್ದ ಕೊಳಕು. ಆದರೆ, ನಾವು ಯಾವುದೇ ಹೊಸ ಸಮಸ್ಯೆ ಉದ್ಬವವಾದಂತೆ ಮುಂಜಾಗ್ರತೆಯಿಂದ ಇದನ್ನು ವಜಾಗೊಳಿಸಿದೆವು. ನನಗೆ ಗೊತ್ತು ಜಮ್ಮು-ಕಾಶ್ಮೀರದಲ್ಲಿ ಪ್ರಗತಿ ಹೊಂದಲು ಜಾರ್ಖಂಡ್ ಜನರಿಗೆ ಸಹಾಯವಾಗಲಿದೆ ಎಂದು ಹೇಳಿದರು.

ಆಗಸ್ಟ್ 5ರಂದು ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಪ್ರಾತಿನಿಧ್ಯದ 370ನೇ ವಿಧಿಯನ್ನು ರದ್ದುಗೊಳಿಸಿತು. ಮತ್ತು ಜಮ್ಮು-ಕಾಶ್ಮೀರ ರಾಜ್ಯವನ್ನು ಪ್ರತ್ಯೇಕಿಸಿ, ಜಮ್ಮು-ಕಾಶ್ಮಿರ ಮತ್ತು ಲಡಾಖ್ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿತು.

ಕುಂತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜಾರ್ಖಂಡ್ ಬೆಳೆಯುತ್ತಿರುವ ಮಗುವಿನಂತೆ. ಮಗುವಿನ ಭವಿಷ್ಯ, ಬೆಳವಣಿಗೆ ಬಗ್ಗೆ ಪೋಷಕರು ಚಿಂತಿಸುವಂತೆ ನಾನು ಜಾರ್ಖಂಡ್​ಗಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಜಾರ್ಖಂಡ್​ಗೆ ಈಗ 19 ವರ್ಷ. ಶೀಘ್ರದಲ್ಲೇ ಇದು ಪ್ರೌಢಾವಸ್ಥೆಗೆ ಬರಲಿದೆ. ನೀವು ನನ್ನ ಜೊತೆ ನಿಲ್ಲಿ. 25 ವರ್ಷ ತುಂಬುವುದರೊಳಗೆ ಇದನ್ನು ಗುರುತಿಸಲಾಗದ ಮಟ್ಟಿಗೆ ನಾನು ಬೆಳೆಸುತ್ತೇನೆ ಎಂದು ನಿಮಗೆ ಭರವಸೆ ನೀಡುತ್ತೇನೆ ಎಂದರು.

ಜಾರ್ಖಂಡ್​ನಲ್ಲಿ ನಕ್ಸಲ್​ ಹೆಡೆಮುರಿ ಕಟ್ಟುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಮತ್ತು ಶನಿವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮತದಾನಕ್ಕೆ ಅಡ್ಡಿಪಡಿಸುವ ಶಕ್ತಿಗಳ ವಿರುದ್ಧ ಹೋರಾಡಿ ಮತ ಚಲಾಯಿಸಿದ ರಾಜ್ಯದ ಜನರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

ಇದನ್ನು ಓದಿ: ಅವರೆಲ್ಲಾ ನಿಮ್ಮ ಸೋದರ ಸಂಬಂಧಿಗಳೇ?; ಅಕ್ರಮ ವಲಸಿಗರ ವಿಚಾರವಾಗಿ ರಾಹುಲ್ ಗಾಂಧಿ ಟೀಕಿಸಿದ ಅಮಿತ್ ಶಾನಾನು ಜಾರ್ಖಂಡ್​ನೊಂದಿಗೆ ಯಾವಾಗಲೂ ಹತ್ತಿರದ ಸಂಬಂಧ ಹೊಂದಿದ್ದೇನೆ. ನಾನು ಹಲವು ಸ್ಥಾನಗಳನ್ನು ನಿಭಾಯಿಸುವಾಗ ಈ ರಾಜ್ಯಕ್ಕೆ ಭೇಟಿ ನೀಡಿದ್ದೇನೆ. ಜಾರ್ಖಂಡ್​ನಲ್ಲಿ ಇದಕ್ಕೂ ಮುನ್ನ ವಿರೋಧ ಪಕ್ಷಗಳು ಭೇಟಿ ನೀಡದ ಸ್ಥಳಗಳಿಗೂ ನಾವು ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಸೋಲಾರ್ ಪ್ಲಾಂಟ್ ಅಳವಡಿಕೆ ಮೂಲಕ ಜಾರ್ಖಂಡ್​ನಲ್ಲಿ ಬಿಜೆಪಿ ಮ್ಯಾಜಿಕ್ ಮಾಡಿದೆ ಎಂದು ಹೇಳಿದರು.

ಜಾರ್ಖಂಡ್ ರೈತರಿಗೆ ನಾವು ಆಶ್ವಾಸನೆ ನೀಡುತ್ತೇವೆ, ನಿಮ್ಮ ಖಾತೆಗಳಿಗೆ ಹಣ ನೇರವಾಗಿ ಬರಲಿದೆ. ಬಿಜೆಪಿಯೇತರ ರಾಜ್ಯಗಳಲ್ಲಿ ರೈತರ ಪರಿಸ್ಥಿತಿಯನ್ನು ಒಮ್ಮೆ ನೋಡಿ. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ರೈತರಿಗೆ ಮೋಸ ಮಾಡುತ್ತಿವೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
Published by: HR Ramesh
First published: December 3, 2019, 3:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading