Tomato Price: ಶೀಘ್ರದಲ್ಲೇ ಕಡಿಮೆಯಾಗಲಿದೆ ಟೊಮೆಟೊ ಬೆಲೆ, ಯಾವಾಗ ಗೊತ್ತಾ?
Tomato Price :ಇನ್ನು ಜನವರಿ ತಿಂಗಳ ಬಳಿಕ ಮಧ್ಯಪ್ರದೇಶ ಹಾಗೂ ರಾಜಸ್ಥಾನದಿಂದ ಟೊಮೆಟೊ ಬೆಳೆ ಮಾರುಕಟ್ಟೆಗೆ ಪ್ರವೇಶ ಮಾಡಿದ ಬಳಿಕ ಈಗ ಏರಿಕೆಯಾಗಿರುವ ಬೆಲೆಯಲ್ಲಿ ಶೇ.30% ರಷ್ಟು ಬೆಲೆ ಕಡಿಮೆಯಾಗಲಿದೆ
ಕಳೆದೆರಡು ತಿಂಗಳಿನಿಂದ ಪೆಟ್ರೋಲ್ ಡೀಸೆಲ್(Petrol -Diesel), ಸೇಬಿನ(Apple) ಹಣ್ಣಿಗಿಂತಲೂ ಟೊಮೆಟೊ ಹಣ್ಣಿನ ಬೆಲೆ ದುಬಾರಿಯಾಗಿದೆ.. ಹೀಗಾಗಿ ಮನೆಯಲ್ಲಿ ಅಡುಗೆ (Food)ಮಾಡಲೂ ಟೊಮೆಟೋ ಬಳಸುವ ಮುನ್ನ ಒಮ್ಮೆ ಯೋಚಿಸಿ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.. ಉತ್ತರದ ರಾಜ್ಯಗಳಾದ ಪಂಜಾಬ್,(Panjab) ಉತ್ತರ ಪ್ರದೇಶ(Uttar Pradesh)ಹರಿಯಾಣ (Haryana)ಮತ್ತು ಹಿಮಾಚಲ ಪ್ರದೇಶ(Himachal Pradesh), ಹಾಗೂ ದಕ್ಷಿಣದ ರಾಜ್ಯಗಳಾದ ತಮಿಳುನಾಡು (Tamil Nadu )ಆಂಧ್ರಪ್ರದೇಶ (Andhra Pradesh)ತೆಲಂಗಾಣ(Telangana) ಮತ್ತು ಕರ್ನಾಟಕದಲ್ಲಿ(Karnataka)ಸುರಿದ ಅಕಾಲಿಕ ಮಳೆಯಿಂದಾಗಿ ಟೊಮೆಟೊ ಬೇಳೆ ಭಾರಿ ಪ್ರಮಾಣದಲ್ಲಿ ನಷ್ಟವಾಗಿದೆ.. ರಾಜ್ಯಗಳಲ್ಲಿ ಟೊಮೆಟೊ ಬೆಳೆ ಅಧಿಕವಾಗಿದ್ದು, ದೇಶಾದ್ಯಂತ ರಫ್ತಾಗುತ್ತಿತ್ತು.. ಆದರೆ ಅಕಾಲಿಕವಾಗಿ ಸುರಿದ ಮಳೆ ಟೊಮೆಟೊ ಬೆಳೆ ಕೊಯ್ಲಿಗೆ ಬರುವ ಮುನ್ನವೇ ಸಾಕಷ್ಟು ಹಾನಿ ಮಾಡಿದೆ ಹೀಗಾಗಿ ದೇಶಾದ್ಯಂತ ನೂರರಿಂದ 160 ರೂಪಾಯಿಯವರೆಗೂ ಟೊಮೇಟೊ ಹಣ್ಣಿನ ಬೆಲೆ ತಲುಪಿದೆ.. ಹೀಗಾಗಿ ಯಾವಾಗ ಬೆಲೆ ಕಡಿಮೆಯಾಗುತ್ತದೆ ಎಂದು ಕಾಯುತ್ತಿರುವ ಜನಸಾಮಾನ್ಯರಿಗೆ ಮತ್ತೆ ಟೊಮೆಟೊ ಬೆಲೆ ಶಾಕ್ ಸಿಕ್ಕಿದೆ..
ಈಗಾಗಲೇ ಟೊಮೆಟೊ ಬೆಲೆ ದುಬಾರಿಯಾಗಿರುವುದರಿಂದ ಕರ್ನಾಟಕದಲ್ಲಿ ಮಹಾರಾಷ್ಟ್ರದ ನಾಸಿಕ್ ನಿಂದ ಟೊಮೇಟೊ ಬೆಳೆ ಆಮದು ಮಾಡಿಕೊಳ್ಳಲಾಗುತ್ತಿದೆ.. ಇದರ ನಡುವೆಯೇ
ಕ್ರಿಸಿಲ್ ರಿಸರ್ಚ್ ಟೊಮ್ಯಾಟೊ ಇನ್ನೂ ಎರಡು ತಿಂಗಳ ಕಾಲ ಟೊಮೆಟೊ ದುಬಾರಿಯಾಗಿರುವುದು ಎಂಬ ಮಾಹಿತಿ ನೀಡಿದೆ. ಅಕ್ಟೋಬರ್ ಹಾಗೂ ಡಿಸೆಂಬರ್ ಅವಧಿಯಲ್ಲಿ ಹೆಚ್ಚು ಟೊಮೇಟೊ ಬೆಳೆಯುವ ಕರ್ನಾಟಕ ಆಂಧ್ರಪ್ರದೇಶ ಮಹಾರಾಷ್ಟ್ರದಲ್ಲಿ ಅತಿವೃಷ್ಟಿಯಿಂದಾಗಿ ತೀವ್ರ ಪ್ರಮಾಣದ ಟೊಮೆಟೊ ಬೆಳೆ ಹಾನಿಯಾಗಿದೆ.. ಹೀಗಾಗಿ ಜನವರಿ ವೇಳೆಗೆ ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿನ ಟಮೊಟೊ ಬೆಳೆ ಮಾರುಕಟ್ಟೆ ಪ್ರವೇಶ ಮಾಡುವವರೆಗೂ ದರ ಇನ್ನು ದುಬಾರಿಯಾಗಲಿದೆ..
2 ತಿಂಗಳುಗಳ ಬಳಿಕ ಇಳಿಯಲಿದೆ ಟೊಮೆಟೊ ಬೆಲೆ
ಇನ್ನು ಜನವರಿ ತಿಂಗಳ ಬಳಿಕ ಮಧ್ಯಪ್ರದೇಶ ಹಾಗೂ ರಾಜಸ್ಥಾನದಿಂದ ಟೊಮೆಟೊ ಬೆಳೆ ಮಾರುಕಟ್ಟೆಗೆ ಪ್ರವೇಶ ಮಾಡಿದ ಬಳಿಕ ಈಗ ಏರಿಕೆಯಾಗಿರುವ ಬೆಲೆಯಲ್ಲಿ ಶೇ.30% ರಷ್ಟು ಬೆಲೆ ಕಡಿಮೆಯಾಗಲಿದೆ..ಇನ್ನು ಏರುತ್ತಿರುವ ಟೊಮೆಟೊ ಬೆಲೆ ಬಗ್ಗೆ ಮಾತನಾಡಿರುವ ಕೇಂದ್ರ ಕೃಷಿ ಇಲಾಖೆ ಡಿಸೆಂಬರ್ ಮಧ್ಯ ಭಾಗದಿಂದ ಉತ್ತರ ಭಾರತದಲ್ಲಿ ಟೊಮೆಟೊ ಬೆಳೆ ಕೊಯ್ಲು ಆರಂಭವಾಗುವುದರಿಂದ ಹೆಚ್ಚಿರುವ ಟಮೇಟೊ ಬೆಳೆಯ ಅಭಾವ ಹಾಗೂ ಬೆಲೆ ಏರಿಕೆ ಗಣನೀಯ ಪ್ರಮಾಣದಲ್ಲಿ ಕುಸಿತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಕಳೆದ ವರ್ಷ ನವೆಂಬರ್ ವೇಳೆಗೆ ನಮ್ಮ ದೇಶದಲ್ಲಿ 70.12 ಲಕ್ಷ ಮೆಟ್ರಿಕ್ ಟನ್ ಟೊಮೆಟೊ ಬೆಳೆಯನ್ನು ಉತ್ಪಾದನೆ ಮಾಡಲಾಗಿತ್ತು.. ಆದರೆ ಈ ವರ್ಷ 69.52 ಲಕ್ಷ ಮೆಟ್ರಿಕ್ ಟನ್ ಟೊಮೆಟೊ ಬೆಳೆ ಉತ್ಪಾದನೆಯಾಗಿದೆ.. ನವೆಂಬರ್ನಲ್ಲಿ 19.62 ಲಕ್ಷ ಟನ್, ಅಕ್ಟೋಬರ್ನಲ್ಲಿ 14.79 ಲಕ್ಷ ಟನ್ನಿಂದ ಡಿಸೆಂಬರ್ನಲ್ಲಿ 17.21 ಲಕ್ಷ ಟನ್ ಟೊಮೋಟೊ ಕೊಯ್ಲು ಆಗಲಿದ್ದು ಕಳೆದ ವರ್ಷಕ್ಕಿಂತ 2 ಲಕ್ಷ ಟನ್ ನಷ್ಟು ಟಮೊಟೊ ಕಡಿಮೆ ಪ್ರಮಾಣದಲ್ಲಿ ಬೆಳೆದಿರುವುದರಿಂದ ಈ ವರ್ಷ ಟೊಮೆಟೊ ಬೆಲೆ ಅಧಿಕಆಗಲು ಕಾರಣ ಎಂದು ಕೃಷಿ ಇಲಾಖೆ ಹೇಳಿದೆ..
ಆದ್ರೆ ಕೆಲವು ಕಡೆ ಪ್ರವಾಹದ ಪರಿಸ್ಥಿತಿ ಕಡಿಮೆಯಾಗಿ,ಮಳೆಯ ಪ್ರಮಾಣ ನಿಂತಿದ್ದು,ಜನವರಿ ವೇಳೆಗೆ ಹೊಸ ಟೊಮೆಟೊ ಕೊಯ್ಲಿನ ಬೆಳೆ ಆರಂಭವಾಗಲಿದೆ.. ಹೀಗಾಗಿ ನಿರಂತರವಾಗಿ ಏರಿಕೆಯಾಗುತ್ತಿರುವ ಟೊಮೆಟೊ ಬೆಳೆ ಬೆಲೆ ಕುಸಿತವಾಗಲಿದೆ ಎಂದು ಅಂದಾಜಿಸಲಾಗಿದೆ..
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ