Income Tax Return: ಎರಡನೇ ಕಂತಿನ ಮುಂಗಡ ತೆರಿಗೆ ಪಾವತಿಗೆ ನಾಳೆಯೇ ಕೊನೆಯ ದಿನ:  ಇಲ್ಲಿದೆ ವಿವರ..

Last Date to file Advance Tax Payment: CBDT 1ನೇ ಏಪ್ರಿಲ್, 2021 ರಿಂದ ಸೆಪ್ಟೆಂಬರ್ 6, 2021ರ ನಡುವೆ 26.09 ಲಕ್ಷ ತೆರಿಗೆದಾರರಿಗೆ 70,120 ಕೋಟಿ ರೂ. ಗಳಿಗಿಂತ ಹೆಚ್ಚಿನ ಮರುಪಾವತಿ ಮಾಡಿದೆ. 24,70,612 ಪ್ರಕರಣಗಳು ಮತ್ತು ಕಾರ್ಪೊರೇಟ್ ತೆರಿಗೆ ಮರುಪಾವತಿಗಳಲ್ಲಿ 16,753 ಕೋಟಿ ರೂ. ಗಳನ್ನು ನೀಡಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಆದಾಯ ತೆರಿಗೆ ಇಲಾಖೆಯು (Income Tax Department) ತೆರಿಗೆದಾರರಿಗೆ ಪ್ರಮುಖವಾದ ಅಪ್‌ಡೇಟ್‌ ನೀಡಿದೆ. ನಿಮ್ಮ ಎರಡನೇ ಕಂತಿನ ಮುಂಗಡ ತೆರಿಗೆಯನ್ನು ನೀವು ಸೆಪ್ಟೆಂಬರ್ 15,2021ರೊಳಗೆ ಅಂದರೆ ಬುಧವಾರದೊಳಗೆ ಪಾವತಿಸಬೇಕಾಗುತ್ತದೆ. "ಶಿಕ್ಷಣವು ನಮ್ಮ ರಾಷ್ಟ್ರದ ಬೆಳವಣಿಗೆಯ ಆಧಾರವಾಗಿದೆ. ನಿಮ್ಮ ತೆರಿಗೆಗಳು ಎಲ್ಲರಿಗೂ ಶಿಕ್ಷಣವನ್ನು ಲಭ್ಯವಾಗುವಂತೆ ಮಾಡುತ್ತದೆ..! 15 ನೇ ಸೆಪ್ಟೆಂಬರ್, 2021 ರೊಳಗೆ ನಿಮ್ಮ ಎರಡನೇ ಕಂತಿನ ಮುಂಗಡ ತೆರಿಗೆಯನ್ನು ಪಾವತಿಸಲು ಮರೆಯದಿರಿ" ಎಂದು ಭಾರತದ ಆದಾಯ ತೆರಿಗೆ ಇಲಾಖೆ ಸೋಮವಾರ ಟ್ವೀಟ್ ಮಾಡಿದೆ. ಈ ಮಧ್ಯೆ, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) 26.09 ಲಕ್ಷ ತೆರಿಗೆದಾರರಿಗೆ 70,120 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ತೆರಿಗೆಯನ್ನು ಮರುಪಾವತಿ ಮಾಡಿದೆ.

  "CBDT 1ನೇ ಏಪ್ರಿಲ್, 2021 ರಿಂದ ಸೆಪ್ಟೆಂಬರ್ 6, 2021ರ ನಡುವೆ 26.09 ಲಕ್ಷ ತೆರಿಗೆದಾರರಿಗೆ 70,120 ಕೋಟಿ ರೂ. ಗಳಿಗಿಂತ ಹೆಚ್ಚಿನ ಮರುಪಾವತಿ ಮಾಡಿದೆ. 24,70,612 ಪ್ರಕರಣಗಳು ಮತ್ತು ಕಾರ್ಪೊರೇಟ್ ತೆರಿಗೆ ಮರುಪಾವತಿಗಳಲ್ಲಿ 16,753 ಕೋಟಿ ರೂ. ಗಳನ್ನು ನೀಡಿದೆ. ಹಾಗೂ, 1,38,801 ಪ್ರಕರಣಗಳಲ್ಲಿ 53,367 ಕೋಟಿಗಳನ್ನು ನೀಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.

  ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫೈಲಿಂಗ್ ಕೊನೆಯ ದಿನಾಂಕ 2021 (When is the last date to file Income Tax Returns):

  ಕೆಲವು ದಿನಗಳ ಹಿಂದೆ, ಸಿಬಿಡಿಟಿ ಆದಾಯ ತೆರಿಗೆ ರಿಟರ್ನ್ಸ್ (Income Tax Returns) ಮತ್ತು 2021-22ರ ಮೌಲ್ಯಮಾಪನ ವರ್ಷದ ಅಥವಾ ಅಸ್ಸೆಸ್‌ಮೆಂಟ್‌ ವರ್ಷದ (Annual Assessment Year) ಲೆಕ್ಕಪರಿಶೋಧನಾ ವರದಿಗಳನ್ನು ಸಲ್ಲಿಸುವ ಗಡುವನ್ನು ಮತ್ತೆ ವಿಸ್ತರಣೆ ಮಾಡಿದೆ. ತೆರಿಗೆದಾರರು ಐಟಿಆರ್ ಸಲ್ಲಿಸುವಲ್ಲಿನ ತೊಂದರೆಗಳ ದೃಷ್ಟಿಯಿಂದ ಆದಾಯ ತೆರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ.

  - AY 2021-22 (ವ್ಯಕ್ತಿಗಳು ಮತ್ತು ಲೆಕ್ಕಪರಿಶೋಧನೆ ರಹಿತ ಪ್ರಕರಣಗಳು) ಆದಾಯ ಹಿಂದಿರುಗಿಸುವ ದಿನಾಂಕವನ್ನು ಡಿಸೆಂಬರ್ 31, 2021ರವರೆಗೆ ವಿಸ್ತರಿಸಲಾಗಿದೆ.
  - AY 2021-22 (ಕಂಪನಿಗಳು ಮತ್ತು ಲೆಕ್ಕಪರಿಶೋಧನೆ ಪ್ರಕರಣಗಳು, TP ಪ್ರಕರಣಗಳನ್ನು ಹೊರತುಪಡಿಸಿ) ಆದಾಯ ಹಿಂದಿರುಗಿಸುವ ಕೊನೆಯ ದಿನಾಂಕ ಫೆಬ್ರವರಿ 15, 2022 ಆಗಿದೆ.
  - ಮೌಲ್ಯಮಾಪನ ವರ್ಷ 2021-22 (ಟಿಪಿ ಪ್ರಕರಣಗಳು) ಆದಾಯ ಹಿಂದಿರುಗಿಸುವ ಅಂತಿಮ ದಿನಾಂಕ ಫೆಬ್ರವರಿ 28, 2022ರವರೆಗೆ ವಿಸ್ತರಣೆಯಾಗಿದೆ
  - ಹಿಂದಿನ ವರ್ಷದ 2020-21ರ ಲೆಕ್ಕಪರಿಶೋಧನೆಯ ವರದಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಜನವರಿ 15, 2022 ರವರೆಗೆ ಆಗಿದೆ
  - ಅಕೌಂಟೆಂಟ್‌ನಿಂದ ಅಂತಾರಾಷ್ಟ್ರೀಯ ವಹಿವಾಟು ಅಥವಾ ಹಿಂದಿನ ವರ್ಷ 2020-21ರ ನಿರ್ದಿಷ್ಟ ದೇಶೀಯ ವಹಿವಾಟಿಗೆ ಪ್ರವೇಶಿಸುವ ವ್ಯಕ್ತಿಗಳಿಂದ ವರದಿ ಸಲ್ಲಿಸುವ ದಿನಾಂಕವನ್ನು ಜನವರಿ 31, 2022 ರವರೆಗೆ ವಿಸ್ತರಿಸಲಾಗಿದೆ.
  -AY 2021-22ರ ತಡವಾದ/ಪರಿಷ್ಕೃತ ಆದಾಯದ ರಿಟರ್ನ್ ಸಲ್ಲಿಸುವ ಅಂತಿಮ ದಿನಾಂಕ ಮಾರ್ಚ್ 31, 2022 ಆಗಿದೆ.

  ಖಜಾನೆಗೆ ನಿಯಮಿತವಾಗಿ ಹಣದ ಹರಿವನ್ನು ಖಚಿತಪಡಿಸಿಕೊಳ್ಳಲು, ಆದಾಯ ತೆರಿಗೆ ಇಲಾಖೆಯು ಮೂಲದಲ್ಲಿ (TDS) ತೆರಿಗೆ ಕಡಿತ ಮತ್ತು ಮುಂಗಡ ತೆರಿಗೆ ಪಾವತಿಗೆ ನಿಯಮಗಳನ್ನು ರೂಪಿಸಿದೆ.

  ಇದನ್ನೂ ಓದಿ: PF Latest Update: ಉದ್ಯೋಗಿಗಳಿಗೆ ಶುಭಸುದ್ದಿ, ದೀಪಾವಳಿ ಹಬ್ಬಕ್ಕೂ ಮುನ್ನ 2021ರ ಪಿಎಫ್​ ಬಡ್ಡಿ ನೀಡುವ ಸಾಧ್ಯತೆ

  ಹಣಕಾಸು ವರ್ಷಕ್ಕೆ ಅಂದಾಜು ತೆರಿಗೆ ಹೊಣೆಗಾರಿಕೆ ರೂ. 10,000 ಅಥವಾ ಅದಕ್ಕಿಂತ ಹೆಚ್ಚಿನ ಪ್ರತಿ ವ್ಯಕ್ತಿಯು ನಾಲ್ಕು ಕಂತುಗಳಲ್ಲಿ ಕ್ರಮವಾಗಿ ಶೇ. 15, ಶೇ. 45, ಶೇ. 75 ಮತ್ತು 100 ಪ್ರತಿಶತ ಹಣಕಾಸು ವರ್ಷದ ಜೂನ್ 15, ಸೆಪ್ಟೆಂಬರ್ 15, ಡಿಸೆಂಬರ್ 15 ಮತ್ತು ಮಾರ್ಚ್ 15 ರೊಳಗೆ ಮುಂಗಡ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

  ಇದನ್ನೂ ಓದಿ: Aadhaar-PF Link: ಪಿಎಫ್ ಖಾತೆಗೆ ಇನ್ನೂ Aadhar Card ಲಿಂಕ್ ಮಾಡಿಲ್ವಾ? ಹೆಚ್ಚು ಕಾಲಾವಕಾಶ ಕೊಟ್ಟಿದ್ದಾರೆ ನೋಡಿ

  ಯಾವುದೇ ಆದಾಯವಿಲ್ಲದ ಸಂಬಳದ ವ್ಯಕ್ತಿಯು ಮುಂಗಡ ತೆರಿಗೆ ಕಂತುಗಳನ್ನು ಪಾವತಿಸಬೇಕಾಗಿಲ್ಲ, ಏಕೆಂದರೆ ಕಂಪನಿಯ ಮಾಲೀಕರು ಮಾಸಿಕ ವೇತನದಿಂದ ಅನ್ವಯವಾಗುವ ತೆರಿಗೆಯನ್ನು ಕಡಿತಗೊಳಿಸಬೇಕಾಗುತ್ತದೆ. ಆದರೆ ಇತರ ಆದಾಯದ ಮೂಲಗಳಿದ್ದರೆ, ಮುಂಗಡ ತೆರಿಗೆ ಪಾವತಿ ಮಾಡಬೇಕಾಗುತ್ತದೆ.
  Published by:Sharath Sharma Kalagaru
  First published: