Tomato Flu: ಹೆಚ್ಚಾಗ್ತಿದೆ ಟೊಮ್ಯಾಟೋ ಫ್ಲೂ! ಈ ಸೋಂಕಿನಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ

ಟೊಮೆಟೊ ಜ್ವರ ಒಂದು ವೈರಲ್ ಕಾಯಿಲೆಯಾಗಿದೆ. "ಟೊಮ್ಯಾಟೋ ಫ್ಲೂ" ಎಂಬ ಹೆಸರು ಈ ರೋಗದ ಮುಖ್ಯ ರೋಗಲಕ್ಷಣದಿಂದ ಬಂದಿದೆ, ದೇಹದ ಹಲವಾರು ಭಾಗಗಳಲ್ಲಿ ಮೊದಲಿಗೆ ಕೆಂಪು-ಬಣ್ಣದ ಸಣ್ಣ ಗುಳ್ಳೆಗಳಾಗಿ ಪ್ರಾರಂಭವಾಗಿ ನಂತರ ಮತ್ತು ಅವು ಟೊಮ್ಯಾಟೋ ರೀತಿ ದೊಡ್ಡದಾಗಿ, ಕೆಂಪಾಗಿ ದೇಹದ ಭಾಗಗಳಲ್ಲಿ ಹರಡುತ್ತದೆ. ಇಲ್ಲಿ ಕೊರೋನಾ ವೈರಸ್‌ ಗೂ ಈ ರೋಗಕ್ಕೂ ಯಾವುದೇ ಸಂಬಂಧವಿಲ್ಲ.

ಟೊಮೆಟೊ ಜ್ವರ

ಟೊಮೆಟೊ ಜ್ವರ

  • Share this:
ನವದೆಹಲಿ: ಕೇರಳ, ತಮಿಳುನಾಡು, ಒಡಿಶಾ ಮತ್ತು ಹರಿಯಾಣದಿಂದ 100ಕ್ಕೂ ಹೆಚ್ಚು ಟೊಮ್ಯಾಟೋ ಜ್ವರ (Tomato Fever) ಪ್ರಕರಣಗಳು ವರದಿಯಾದ ನಂತರ ಕೇಂದ್ರ ಸರ್ಕಾರವು (Central Government) ಈ ಕುರಿತಾಗಿ ರಾಜ್ಯಗಳಿಗೆ ಸಲಹಾಸೂಚನೆ ನೀಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಮೇ 6 ರಂದು ಕೇರಳದ (Kerala) ಕೊಲ್ಲಂ ಜಿಲ್ಲೆಯಲ್ಲಿ ಟೊಮ್ಯಾಟೋ ಜ್ವರವನ್ನು ಮೊದಲು ಗುರುತಿಸಲಾಗಿದ್ದು, ಜುಲೈ 26 ರ ಹೊತ್ತಿಗೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 82ಕ್ಕೂ ಹೆಚ್ಚು ಮಕ್ಕಳಲ್ಲಿ (Children) ಟೊಮ್ಯಾಟೋ ಜ್ವರದ ಸೋಂಕು ಪತ್ತೆಯಾಗಿದೆ. ಆಂಚಲ್, ಆರ್ಯಂಕಾವು ಮತ್ತು ನೆಡುವತ್ತೂರ್ ಸೇರಿ ಕೇರಳದ ಇತರೆ ಭಾಗಗಳಲ್ಲೂ ಸಹ ಈ ಸೋಂಕು ಪ್ರಕರಣಗಳು (Cases) ಕಂಡುಬಂದಿದೆ.

ಕೇರಳದಲ್ಲಿ ಮೊದಲಿಗೆ ಕಂಡುಬಂದ ಈ ಜ್ಚರ ಕ್ರಮೇಣ ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಕರ್ನಾಟಕಕ್ಕೂ ಆತಂಕ ಉಂಟು ಮಾಡಿದೆ. ಹೆಚ್ಚುವರಿಯಾಗಿ, ಭುವನೇಶ್ವರದಲ್ಲಿರುವ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದಿಂದ ಒಡಿಶಾದಲ್ಲಿ 26 ಮಕ್ಕಳು (1-9 ವರ್ಷ ವಯಸ್ಸಿನವರು) ಸೋಂಕಿತರಾಗಿದ್ದಾರೆ.  ಇಲ್ಲಿಯವರೆಗೆ, ಕೇರಳ, ತಮಿಳುನಾಡು, ಹರಿಯಾಣ ಮತ್ತು ಒಡಿಶಾವನ್ನು ಹೊರತುಪಡಿಸಿ, ಭಾರತದ ಯಾವುದೇ ಪ್ರದೇಶಗಳು ಟೊಮ್ಯಾಟೋ ಜ್ವರವನ್ನು ವರದಿ ಮಾಡಿಲ್ಲ.

ಟೊಮ್ಯಾಟೋ ಜ್ವರ ಎಂದರೇನು ಮತ್ತು ಅದು ಹೇಗೆ ಹರಡುತ್ತದೆ?
ಟೊಮ್ಯಾಟೋ ಜ್ವರ ಒಂದು ವೈರಲ್ ಕಾಯಿಲೆಯಾಗಿದೆ. ದೇಹದ ಹಲವಾರು ಭಾಗಗಳಲ್ಲಿ ಮೊದಲಿಗೆ ಕೆಂಪು-ಬಣ್ಣದ ಸಣ್ಣ ಗುಳ್ಳೆಗಳಾಗಿ ಪ್ರಾರಂಭವಾಗಿ ನಂತರ ಮತ್ತು ಅವು ಟೊಮೆಟೊ ರೀತಿ ದೊಡ್ಡದಾಗಿ, ಕೆಂಪಾಗಿ ದೇಹದ ಭಾಗಗಳಲ್ಲಿ ಹರಡುತ್ತದೆ. ಇಲ್ಲಿ ಕೊರೋನಾ ವೈರಸ್‌ ಗೂ ಈ ರೋಗಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಟೊಮ್ಯಾಟೋ ಜ್ವರದ ಲಕ್ಷಣಗಳು
ಟೊಮ್ಯಾಟೋ ಜ್ವರ ಹೊಂದಿರುವ ಮಕ್ಕಳಲ್ಲಿ ಕಂಡುಬರುವ ಪ್ರಾಥಮಿಕ ರೋಗಲಕ್ಷಣಗಳು, ಇತರ ವೈರಲ್ ಸೋಂಕುಗಳಂತೆಯೇ ಇರುತ್ತವೆ. ಜ್ವರ, ದದ್ದುಗಳು ಮತ್ತು ಕೀಲುಗಳಲ್ಲಿನ ನೋವು ಈ ಜ್ವರದ ಲಕ್ಷಣಗಳಾಗಿವೆ. ಇತರ ವೈರಲ್ ಸೋಂಕುಗಳಂತೆಯೇ, ರೋಗಲಕ್ಷಣಗಳು ಆಯಾಸ, ವಾಕರಿಕೆ, ವಾಂತಿ, ಅತಿಸಾರ, ಜ್ವರ, ನಿರ್ಜಲೀಕರಣ, ಕೀಲುಗಳ ಊತ, ದೇಹದ ನೋವು ಮತ್ತು ಸಾಮಾನ್ಯ ಕಾಯಿಲೆ ತರಹದ ರೋಗಲಕ್ಷಣಗಳನ್ನು ಒಳಗೊಂಡಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ:  Heart Attack: ಸರಿಯಾಗಿ ನಿದ್ದೆ ಮಾಡಿಲ್ಲ ಅಂದ್ರೆ ಹೃದಯಕ್ಕೆ ಅಪಾಯ ಗ್ಯಾರಂಟಿ

ಕೈ ಕಾಲು ಮತ್ತು ಬಾಯಿ ರೋಗ (HFMD) ಜ್ವರ, ಬಾಯಿಯಲ್ಲಿ ಹುಣ್ಣುಗಳು ಮತ್ತು ಚರ್ಮದ ದದ್ದುಗಳು ಮೂಲಕ ಸಣ್ಣ ಜ್ವರ, ಹಸಿವು, ಗಂಟಲು ನೋವಿನಿಂದ ಪ್ರಾರಂಭವಾಗುತ್ತದೆ. ಜ್ವರ ಪ್ರಾರಂಭವಾದ ಒಂದು ಅಥವಾ ಎರಡು ದಿನಗಳ ನಂತರ, ಸಣ್ಣ ಕೆಂಪು ಕಲೆಗಳು ಕಾಣಿಸಿಕೊಳ್ಳುತ್ತವೆ, ಅದು ಗುಳ್ಳೆಗಳಾಗಿ ಮತ್ತು ನಂತರ ಹುಣ್ಣುಗಳಾಗಿ ಬದಲಾಗುತ್ತದೆ. ಹುಣ್ಣುಗಳು ಸಾಮಾನ್ಯವಾಗಿ ನಾಲಿಗೆ, ಒಸಡುಗಳು, ಕೆನ್ನೆಗಳ ಒಳಗೆ, ಅಂಗೈ ಮತ್ತು ಅಡಿಭಾಗದ ಮೇಲೆ ಉಂಟಾಗುತ್ತವೆ.

ರೋಗವನ್ನು ಹೇಗೆ ನಿರ್ಣಯ ಮಾಡಲಾಗುತ್ತದೆ?
ಈ ರೋಗಲಕ್ಷಣಗಳನ್ನು ಹೊಂದಿರುವ ಮಕ್ಕಳಲ್ಲಿ, ಡೆಂಗ್ಯೂ, ಚಿಕೂನ್‌ಗುನ್ಯಾ, ಝಿಕಾ ವೈರಸ್, ವರಿಸೆಲ್ಲಾ-ಜೋಸ್ಟರ್ ವೈರಸ್ ಮತ್ತು ಹರ್ಪಿಸ್ ರೋಗನಿರ್ಣಯಕ್ಕಾಗಿ ಮಾಡಲಾಗುವ ಆಣ್ವಿಕ ಮತ್ತು ಸಿರೊಲಾಜಿಕಲ್ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಈ ಯಾವುದೇ ಸೋಂಕು ಪತ್ತೆಯಾಗದಿದ್ದಾಗ ಟೊಮೆಟೊ ಜ್ವರವನ್ನು ನಿರ್ಣಯ ಮಾಡಲಾಗುತ್ತದೆ.

ಟೊಮ್ಯಾಟೋ ಜ್ವರವು ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಕೆಲವು ದಿನಗಳ ನಂತರ ಜ್ಚರ ಸೇರಿ ಇತರೆ ರೋಗಲಕ್ಷಣಗಳು ಕಡಿಮೆಯಾಗುತ್ತವೆ.

ಹೇಗೆ ಹರಡುತ್ತದೆ?
ಶಿಶುಗಳು ಮತ್ತು ಚಿಕ್ಕ ಮಕ್ಕಳು ಅಶುಚಿಯಾದ ಮೇಲ್ಮೈಗಳನ್ನು ಸ್ಪರ್ಶಿಸುವುದು, ನೆಲದ ಮೇಲೆ ಬಿದ್ದ ವಸ್ತುಗಳನ್ನು ನೇರವಾಗಿ ಬಾಯಿಗೆ ಹಾಕುವಂತಹ ಅಭ್ಯಾಸಗಳ ಮೂಲಕ ಈ ಸೋಂಕಿಗೆ ಗುರಿಯಾಗುತ್ತಾರೆ. ಇದಕ್ಕೆ ಯಾವುದೇ ನಿರ್ದಿಷ್ಟ ಔಷಧಗಳು ಲಭ್ಯವಿಲ್ಲ. ಚಿಕಿತ್ಸೆಗಾಗಿ ಹೆಚ್ಚಿನ ವಿಶ್ರಾಂತಿ, ನೀರು ಸೇವನೆ, ಜ್ವರ ಮತ್ತು ದೇಹದ ನೋವಿಗೆ ಪ್ಯಾರಸಿಟಮಾಲ್‌ ಅನ್ನು ನೀಡಲಾಗುತ್ತದೆ.

ಯಾವೆಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?
ಇತರ ಮಕ್ಕಳು ಅಥವಾ ವಯಸ್ಕರಿಗೆ ಸೋಂಕು ಹರಡುವುದನ್ನು ತಡೆಯಲು ಸೋಂಕು ಹರಡಿದ ಮಕ್ಕಳನ್ನು 5-7 ದಿನಗಳವರೆಗೆ ಬೇರೆಯಾಗಿ ಇರಿಸುವಂತೆ ನೋಡಿಕೊಳ್ಳಬೇಕು. ಕಾಯಿಲೆ ಹರಡದಂತೆ ತಡೆಯಲು ಪರಿಸರದ ಸುತ್ತಮುತ್ತಲಿನ ಸರಿಯಾದ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಬೇಕು ಹಾಗೂ ಸೋಂಕಿತ ಮಗು ಇತರ ಸೋಂಕಿತವಲ್ಲದ ಮಕ್ಕಳೊಂದಿಗೆ ಆಟಿಕೆಗಳು, ಬಟ್ಟೆ, ಆಹಾರ ಅಥವಾ ಇತರ ವಸ್ತುಗಳನ್ನು ಹಂಚಿಕೊಳ್ಳದಂತೆ ತಡೆಯಬೇಕು.

ಇದನ್ನೂ ಓದಿ:  Cancer: ಮಕ್ಕಳ ಕಣ್ಣುಗಳು ಕೆಂಪಾಗಿದ್ದರೆ ನಿರ್ಲಕ್ಷಿಸಬೇಡಿ; ಇದು ಕಣ್ಣಿನ ಕ್ಯಾನ್ಸರ್ ಆಗಿರಬಹುದು ಎಚ್ಚರ!

ಕೈ ಕಾಲು ಮತ್ತು ಬಾಯಿ ರೋಗ (HFMD) ಬಾಯಿ ಹುಣ್ಣುಗಳಿಗೆ ಕಾರಣವಾಗುವ ಅನೇಕ ಸೋಂಕುಗಳಲ್ಲಿ ಒಂದಾಗಿದೆ. ಆದಾಗ್ಯೂ, ಆರೋಗ್ಯ ಇಲಾಖೆ ಸಾಮಾನ್ಯವಾಗಿ ರೋಗಿಯ ವಯಸ್ಸು, ರೋಗಿಯ ಅಥವಾ ಪೋಷಕರು ವರದಿ ಮಾಡಿದ ರೋಗಲಕ್ಷಣಗಳು ಮತ್ತು ದದ್ದು ಮತ್ತು/ಅಥವಾ ಹುಣ್ಣುಗಳನ್ನು ಪರಿಗಣಿಸಿ HFMD ಮತ್ತು ಬಾಯಿ ಹುಣ್ಣುಗಳ ಇತರ ಕಾರಣಗಳ ನಡುವಿನ ವ್ಯತ್ಯಾಸವನ್ನು ವರದಿ ಮಾಡಿ ಕ್ಲಿನಿಕಲ್‌ ಆಗಿ ರೋಗನಿರ್ಣಯ ಮಾಡುತ್ತಾರೆ.
Published by:Ashwini Prabhu
First published: