Tomato Fever: ಟೊಮೆಟೊ ಜ್ವರ ಬರ್ತಿದೆ ಹುಷಾರ್! ಟೊಮೆಟೊ ತಿಂದರೆ ಈ ಜ್ವರ ಬರುತ್ತಾ?

ದದ್ದುಗಳು ಮತ್ತು ಚರ್ಮದ ಕಿರಿಕಿರಿಗಳ ಹೊರತಾಗಿಯೂ ವೈರಲ್ ಕಾಯಿಲೆಯಾಗಿರುವ ಟೊಮೆಟೊ ಜ್ವರದ ಕೆಲವು ಸಾಮಾನ್ಯ ಲಕ್ಷಣಗಳು ಇಲ್ಲಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೊವಿಡ್ ಭೀತಿ, ಆನಂತರ ಮಂಕಿಪಾಕ್ಸ್ ಹೆದರಿಕೆ..ಮತ್ತೂ ಮುಂದುವರೆದು ಇದೀಗ ಹೊಸ ಖಾಯಿಲೆಯೊಂದರ ಭೀತಿ ಎದುರಾಗಿದೆ. ಕೇರಳದ ಕೊಲ್ಲಂನಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು 'ಟೊಮೆಟೊ ಜ್ವರ' (Tomato Fever) ಎಂಬ ವೈರಲ್ ಸೋಂಕಿನಿಂದ (Viral Fever) ಬಳಲುತ್ತಿದ್ದಾರೆ. ಕೊಲ್ಲಂನಲ್ಲಿ 80 ಕ್ಕೂ ಹೆಚ್ಚು ಟೊಮೆಟೊ ಜ್ವರ ಪ್ರಕರಣಗಳು ವರದಿಯಾಗಿವೆ. ಟೊಮೆಟೊ ಜ್ವರದ ಎಲ್ಲಾ ದೃಢಪಡಿಸಿದ ಪ್ರಕರಣಗಳು ಐದು ವರ್ಷದೊಳಗಿನ ಮಕ್ಕಳಲ್ಲೇ ದೃಢಪಟ್ಟಿದೆ. ಕೇರಳದ ಸರ್ಕಾರಿ ಆಸ್ಪತ್ರೆಗಳಿಗೆ ಈ ಮಕ್ಕಳು ದಾಖಲಾಗಿದ್ದು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇರಳ ರಾಜ್ಯ ಆರೋಗ್ಯ (Kerala Government) ಇಲಾಖೆಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಪ್ರಕರಣಗಳು ವರದಿಯಾದ ಪ್ರದೇಶಗಳಲ್ಲಿ ತಡೆಗಟ್ಟುವ ಕ್ರಮಗಳನ್ನು ಕೈಗೊಂಡಿದೆ ಎಂದು ವರದಿಯಾಗಿದೆ.

    ಟೊಮೆಟೊ ಜ್ವರ ಎಂದರೇನು?
    ಟೊಮೆಟೊ ಜ್ವರ ಅಥವಾ ಟೊಮೆಟೊ ಜ್ವರ ಅಪರೂಪದ ವೈರಲ್ ಕಾಯಿಲೆಯಾಗಿದೆ. ಇದನ್ನು ಕೈ, ಕಾಲು ಮತ್ತು ಬಾಯಿ ರೋಗ (HFMD) ಎಂದೂ ಕರೆಯಲಾಗುತ್ತದೆ. ಟೊಮೆಟೊ ಜ್ವರ ಚರ್ಮದ ಮೇಲೆ ಕಿರಿಕಿರಿ ಅನಿಸುವಂತಹ ದದ್ದುಗಳು ಮತ್ತು ನಿರ್ಜಲೀಕರಣವನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ.

    ಟೊಮೆಟೊ ಜ್ವರ ಹೆಸರು ಬಂದಿದ್ದೇಗೆ?
    ಈ ವೈರಲ್ ಕಾಯಿಲೆಯನ್ನು 'ಟೊಮೆಟೊ ಜ್ವರ' ಎಂದೆ ಏಕೆ ಕರೆಯಲಾಗುತ್ತದೆ? ಈ ಪ್ರಶ್ನೆಗೆ ಉತ್ತರ ಸ್ಪಷ್ಟವಿದೆ. ಟೊಮೆಟೊ ಜ್ವರ ಬಂದಿರುವ ವ್ಯಕ್ತಿಗಳ ದೇಹದಲ್ಲಿ ಕೆಂಪು ಬಣ್ಣದ ಟೊಮೆಟೊಗಳನ್ನು ಹೋಲುವಂತಹ ದದ್ದುಗಳು ಮತ್ತು ಗುಳ್ಳೆಗಳಾಗುತ್ತವೆ. ಇದು ತುಂಬಾ ಸಾಂಕ್ರಾಮಿಕವಾಗಿದ್ದರೂ, ಜೀವಕ್ಕೆ ಗಂಭೀರ ಅಪಾಯವಿಲ್ಲ ಎಂದು ಹೇಳಲಾಗಿದೆ. ವೈರಸ್ ಜ್ವರದ ಮೂಲ ಎಂದು ವಿಜ್ಞಾನಿಗಳು ನಿರ್ಧರಿಸಿದ್ದಾರೆ. ಆದರೆ ಅದು ಯಾವ ನಿರ್ದಿಷ್ಟ ವೈರಸ್ ಕುಟುಂಬಕ್ಕೆ ಸೇರಿದೆ ಎಂದು ಅವರು ಇನ್ನೂ ನಿರ್ಧರಿಸಿಲ್ಲ.

    ಟೊಮೆಟೊಗೂ ಈ ಜ್ವರಕ್ಕೂ ಏನು ಸಂಬಂಧ?
    ಆದರೆ ಟೊಮೆಟೊ ಜ್ವರಕ್ಕೂ ಟೊಮೆಟೊಗಳೊಂದಿಗೆ ಯಾವುದೇ ಸಂಬಂಧವಿಲ್ಲ. ಆದರೆ ಟೊಮೆಟೊ ಜ್ವರ ಬಂದಾಗ ಆಗುವ ಕೆಂಪು ಗುಳ್ಳೆಗಳಿಂದಲೇ ಈ ಹೆಸರು ಬಂದಿದೆ. 

    ಟೊಮೆಟೊ ಜ್ವರದ ಲಕ್ಷಣಗಳು
    ದದ್ದುಗಳು ಮತ್ತು ಚರ್ಮದ ಕಿರಿಕಿರಿಗಳ ಹೊರತಾಗಿಯೂ ವೈರಲ್ ಕಾಯಿಲೆಯಾಗಿರುವ ಟೊಮೆಟೊ ಜ್ವರದ ಕೆಲವು ಸಾಮಾನ್ಯ ಲಕ್ಷಣಗಳು ಇಲ್ಲಿವೆ:

    ತುಂಬಾ ಜ್ವರ ಬರುವುದು
    ಮೈನೋವು
    ಊತ
    ನಿರ್ಜಲೀಕರಣ
    ಆಯಾಸ

    ಇದನ್ನೂ ಓದಿ: Nirmala Sitharaman: ಭಾರತೀಯರು ಸ್ವಿಸ್ ಬ್ಯಾಂಕ್​ಗಳಲ್ಲಿ ಇಟ್ಟಿರುವ ಹಣದ ಬಗ್ಗೆ ಮಾಹಿತಿಯಿಲ್ಲ; ನಿರ್ಮಲಾ ಸೀತಾರಾಮನ್

    ಈ ಲಕ್ಷಣಗಳೂ ಇರಬಹುದು
    ಜ್ವರ, ಬಾಯಿಯಲ್ಲಿ ನೋವಿನ ಹುಣ್ಣುಗಳು, ಕೈ, ಕಾಲು ಮತ್ತು ಪೃಷ್ಠದ ಮೇಲೆ ಗುಳ್ಳೆಗಳೊಂದಿಗೆ ದದ್ದು, ಸುಸ್ತು, ಕೀಲು ನೋವು, ಹೊಟ್ಟೆ ಸೆಳೆತ, ವಾಕರಿಕೆ, ವಾಂತಿ, ಅತಿಸಾರ, ಕೆಮ್ಮು, ಸೀನುವಿಕೆ, ಸ್ರವಿಸುವ ಮೂಗು, ತೀವ್ರ ಜ್ವರ ಮತ್ತು ದೇಹದ ನೋವು, ಟೊಮೆಟೊ ಜ್ವರದ ಕೆಲವು ಚಿಹ್ನೆಗಳು. ಇದು ಚಿಕೂನ್‌ಗುನ್ಯಾದ ಲಕ್ಷಣಗಳನ್ನು ಹೋಲುತ್ತವೆ. ಈ ಜ್ವರವು ಮಗುವಿನ ದೈನಂದಿನ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರುವ ಅಪಾಯ ಹೊಂದಿದೆ.

    ಇದನ್ನೂ ಓದಿ: Kargil Vijay Diwas: ಭಾರತೀಯ ಸೇನೆ ಪಾಕಿಸ್ತಾನದ ಹುಟ್ಟಡಗಿಸಿದ ಕ್ಷಣವದು ಕಾರ್ಗಿಲ್ ವಿಜಯ ದಿವಸ!

    ಟೊಮೆಟೊ ಜ್ವರ ಬರದಂತೆ ತಡೆಯುವುದು ಹೇಗೆ?
    ಮಕ್ಕಳು ಸ್ವಚ್ಛತೆಗೆ ಹೆಚ್ಚು ಗಮನ ಕೊಡಬೇಕು.  ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಟೊಮೆಟೊ ಜ್ವರಕ್ಕೆ ತುತ್ತಾಗುವ ಹೆಚ್ಚು ಅಪಾಯವಿದೆ. ಇನ್ನೂ  ಟೊಮೆಟೊ ಜ್ವರದ ಬಗ್ಗೆ ಯಾವುದೇ ನಿರ್ದಿಷ್ಟಸಂಶೋಧನೆಗಳು ಆಗದ ಕಾರಣ ಸ್ವಚ್ಛತೆಯನ್ನು ಕಾಪಾಡಿಕೊಂಡು ರೋಗ ಬರದೇ ಇರುವಂತೆ ತಡೆಗಟ್ಟುವುದೇ ಅಪಾಯದಿಂದ ದೂರ ಇರುವ ಮಾರ್ಗ ಎಂದು ವೈದ್ಯರು ಸೂಚಿಸಿದ್ದಾರೆ.
    Published by:guruganesh bhat
    First published: