Lok Sabha Elections 2019; ಆಂಧ್ರ ತೆಲಂಗಾಣದಲ್ಲಿ ಬಿರುಸಿನ ಮತದಾನ; ಮತ ಚಲಾಯಿಸಿದ  ತೆಲುಗು ಸಿನಿಮಾ ನಟ ನಟಿಯರು  

ತೆಲುಗು ಚಿತ್ರರಂಗದ ಪವರ್​ ಸ್ಟಾರ್ ಖ್ಯಾತಿಯ ನಟ ಹಾಗೂ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ವಿಜಯವಾಡ ಕ್ಷೇತ್ರದಲ್ಲಿ ಬೆಳಗ್ಗೆ 10 ಗಂಟೆಗೆ ತಮ್ಮ ಮತ ಚಲಾಯಿಸಿದರು. ಅಲ್ಲದೆ ರಾಜ್ಯದ ಶೇ.10 ರಷ್ಟು ಇವಿಎಂ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.

MAshok Kumar | news18
Updated:April 11, 2019, 12:05 PM IST
Lok Sabha Elections 2019; ಆಂಧ್ರ ತೆಲಂಗಾಣದಲ್ಲಿ ಬಿರುಸಿನ ಮತದಾನ; ಮತ ಚಲಾಯಿಸಿದ  ತೆಲುಗು ಸಿನಿಮಾ ನಟ ನಟಿಯರು  
ಮತದಾನ ಮಾಡಿದ ತೆಲುಗು ಸಿನಿಮಾ ಸ್ಟಾರ್​ಗಳು.
  • News18
  • Last Updated: April 11, 2019, 12:05 PM IST
  • Share this:
ಆಂಧ್ರಪ್ರದೇಶ (ಏ.11): ಆಂಧ್ರಪ್ರದೇಶ ತೆಲಂಗಾಣ ರಾಜ್ಯಗಳಲ್ಲಿ ಮೊದಲ ಹಂತದ ಮತದಾನ ಭರದಿಂದ ಸಾಗಿದ್ದು ಚಿರಂಜೀವಿ, ಪವನ್ ಕಲ್ಯಾಣ್ ನಟಿ ರೋಜಾ ಸೇರಿದಂತೆ ತೆಲುಗಿನ ಖ್ಯಾತ ನಟ-ನಟಿಯರು ಇಂದು ಬೆಳಗ್ಗೆಯೇ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಮತ ಚಲಾಯಿಸಿದ್ದಾರೆ.

ತೆಲುಗು ಚಿತ್ರರಂಗದ ಮೆಗಾಸ್ಟಾರ್ ಖ್ಯಾತಿಯ ನಟ ಚಿರಂಜೀವಿ ತಮ್ಮ ಮಗ ರಾಮ್ ಚರಣ್ ತೇಜ ಹಾಗೂ ಕುಟುಂಬ ಸಮೇತರಾಗಿ ಆಂಧ್ರಪ್ರದೇಶದಲ್ಲಿ ಬೆಳಗ್ಗೆ 8 ಗಂಟೆಗೆ ಮತ ಚಲಾಯಿಸಿದ್ದಾರೆ.

ಇದನ್ನೂ ಓದಿ : Lok Sabha Election Voting Live: ಇಂದು ಮೊದಲ ಹಂತದ ಮತದಾನ; ಆಂಧ್ರದಲ್ಲಿ ಕೆಲವೆಡೆ ಕೈಕೊಟ್ಟ ಇವಿಎಂ; ಆಯೋಗಕ್ಕೆ ಟಿಡಿಪಿ ದೂರು!

ತೆಲುಗು ಚಿತ್ರರಂಗದ ಪವರ್​ ಸ್ಟಾರ್ ಖ್ಯಾತಿಯ ನಟ ಹಾಗೂ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಭೀಮಾವರಂ ಹಾಗೂ ಗಾಜುವಾಕದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದು, ವಿಜಯವಾಡ ಕ್ಷೇತ್ರದಲ್ಲಿ ಬೆಳಗ್ಗೆ 10 ಗಂಟೆಗೆ ತಮ್ಮ ಮತ ಚಲಾಯಿಸಿದರು. ಅಲ್ಲದೆ ರಾಜ್ಯದ ಶೇ.10 ರಷ್ಟು ಇವಿಎಂ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಮತ್ತೊಬ್ಬ ಖ್ಯಾತ ನಟ ನಾಗಾರ್ಜುನ್ ಹಾಗೂ ನಟಿ ಅಮಲ ಅಕ್ಕಿನೇನಿ ಹೈದ್ರಾಬಾದ್​ನ ಜ್ಯಬಿಲಿ ಹಿಲ್​ನಲ್ಲಿರುವ ಬೂತ್ ನಂಬರ್ 151 ರಲ್ಲಿ ತಮ್ಮ ಮತ ಚಲಾಯಿಸಿದರು. ನಟ ವರುಣ್ ತೇಜ್ ಹಾಗೂ ಅವರ ಕುಟುಂಬ ಹೈದ್ರಾಬಾದ್​ನಲ್ಲಿ ಮತ ಚಲಾಯಿಸಿದ್ದಾರೆ

ಇದನ್ನೂ ಓದಿ : ಬದಲಾವಣೆಗಾಗಿ ಧೈರ್ಯದಿಂದ ಮತ ಚಲಾಯಿಸಿ; ಮತದಾರರಿಗೆ ಕರೆ ನೀಡಿದ ವೈ.ಎಸ್​.ಜಗನ್ ​ಮೋಹನ್ ರೆಡ್ಡಿ

ನಟ ಜ್ಯೂನಿಯರ್ ಎನ್​ಟಿಆರ್ ಹೈದ್ರಾಬಾದ್​ನ ಜ್ಯುಬಿಲಿ ಹಿಲ್ ಮತಗಟ್ಟೆ 152 ರಲ್ಲಿ ಮತ ಚಲಾಯಿಸಿದ್ದರೆ, ಮತ್ತೊಬ್ಬ ನಟ ಅಲ್ಲು ಅರ್ಜುನ್ ಸಹ ಇಂದು ಬೆಳಗ್ಗೆಯೇ ಆಂಧ್ರಪ್ರದೇಶದಲ್ಲಿ ತನ್ನ ಮತ ಚಲಾಯಿಸಿದ್ದಾರೆ. ಮಾಜಿ ನಟಿ ವೈಎಸ್​ಆರ್ ಕಾಂಗ್ರೆಸ್ ಪಕ್ಷದ ನಗಾರಿ ಕ್ಷೇತ್ರದ ಅಭ್ಯರ್ಥಿ ರೋಜಾ ಸಹ ಇಂದು ಸಿಕಂದ್ರಾಬಾದ್​ನಲ್ಲಿ ತಮ್ಮ ಮತ ಚಲಾಯಿಸಿದ್ದಾರೆ.

ಆಂಧ್ರಪ್ರದೇಶದ 25 ಲೋಕಸಭಾ ಹಾಗೂ 175 ವಿಧಾನಸಭೆ ಕ್ಷೇತ್ರಗಳಿಗೆ ಹಾಗೂ ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ.

First published:April 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ