ಛಲವೊಂದು ಇದ್ದರೆ ಏನು ಬೇಕಾದರೂ ಸಾಧಿಸಬಹುದು ಅದಕ್ಕೆ ವಯಸ್ಸು ಒಂದು ಸಂಖ್ಯೆ ಮಾತ್ರ ಎಂದು ಟೋಕಿಯೋ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮೂವರು ಕ್ರೀಡಾಪಟುಗಳು ಸಾಧಿಸಿ ತೋರಿಸಿದ್ದಾರೆ.
ಕೇವಲ 13 ವರ್ಷ ತುಂಬಿರುವಂತಹ ಜಪಾನ್‌ನ ಮೊಮಿಜಿ ನಿಶಿಯಾ ಸೋಮವಾರ ಟೋಕಿಯೋದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮಹಿಳೆಯರ ಸ್ಕೇಟ್ ಬೋರ್ಡಿಂಗ್ ಆಟದಲ್ಲಿ ಮೊದಲ ಬಾರಿಗೆ ಒಲಿಂಪಿಕ್ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ನಿಶಿಯಾ ಅಗ್ರಸ್ಥಾನದಲ್ಲಿದ್ದು, ಬ್ರೆಜಿಲ್‌ನ ರೇಸ್ಸಾ ಲೀಲ್ ಸಹ 13 ವರ್ಷದವರಾಗಿದ್ದು ಬೆಳ್ಳಿ ಪದಕ ಗೆದ್ದಿದ್ದಾರೆ ಮತ್ತು ಜಪಾನ್‌ನ 16 ವರ್ಷದ ಫೂನಾ ನಕಯಾಮಾ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ.
ಸರಾಸರಿ ವಯಸ್ಸು 14 ವರ್ಷ ಮತ್ತು 191 ದಿನಗಳು ಇದು ಒಲಿಂಪಿಕ್ ಕ್ರೀಡಾಕೂಟದ ಇತಿಹಾಸದಲ್ಲಿ ಅತ್ಯಂತ ಕಿರಿಯ ವೈಯಕ್ತಿಕ ದಾಖಲೆ ಎನಿಸಿಕೊಂಡಿದೆ. ಈ ಪಂದ್ಯವಾದ ನಂತರ ಒಲಿಂಪಿಕ್ ಸಂಸ್ಥೆ ತನ್ನ ಟ್ವಿಟ್ಟರ್ ಪೇಜ್ ನಲ್ಲಿ ಫಲಿತಾಂಶವನ್ನು ನಿಶಿಯಾ ಮೊಮಿಜಿ: 13 ವರ್ಷ ವಯಸ್ಸು, ರೇಸ್ಸಾ ಲೀಲ್: 13 ವರ್ಷ ವಯಸ್ಸು ಮತ್ತು ಫೂನಾ ನಕಯಾಮಾ: 16 ವರ್ಷ ವಯಸ್ಸು ಎಂದು ಪದಕ ಪಡೆದ ಕ್ರಮಾಂಕದಲ್ಲಿ ಬರೆದಿದೆ.
1936 ರ ಬರ್ಲಿನ್ ಕ್ರೀಡಾಕೂಟದಲ್ಲಿ ಸ್ಪ್ರಿಂಗ್‌ಬೋರ್ಡ್ ಪ್ರಶಸ್ತಿಯನ್ನು ಗೆದ್ದ ಮಾರ್ಜೋರಿ ಗೆಸ್ಟ್ರಿಂಗ್ ಅವರು ಇದುವರೆಗು ಅತ್ಯಂತ ಕಿರಿಯ ಒಲಿಂಪಿಕ್ ಚಾಂಪಿಯನ್ ಆಗಿದ್ದು, ನಿಶಿಯಾ ಅವರಿಗಿಂತ ಕೇವಲ 63 ದಿನ ಚಿಕ್ಕವಳಾಗಿದ್ದು, ಈಗ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದಾರೆ. ಪುರುಷರ ಸ್ಪರ್ಧೆಯಲ್ಲಿ ಯುಟೊ ಹರಿಗೊಮ್ ಗೆದ್ದ ನಂತರ ಆತಿಥೇಯ ರಾಷ್ಟ್ರವು ಸ್ಕೇಟ್ ಬೋರ್ಡಿಂಗ್‌ನ ಸ್ಪರ್ಧೆಯಲ್ಲಿ ಚಿನ್ನದ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.
ನಿಶಿಯಾ ತನ್ನ ಮೊದಲ ಎರಡು ಟ್ರಿಕ್‌ಗಳಲ್ಲಿ ಎಡವಿದ್ದರು, ಆದರೆ ಅಂತಿಮ ಮೂರನೇ ಟ್ರಿಕ್ ನಲ್ಲಿ ಪಂದ್ಯವನ್ನು 15.26 ಅಂಕಗಳೊಂದಿಗೆ ಮುಗಿಸಿದರು, 14.64 ಅಂಕಗಳಿಂದ ಅಗ್ರಸ್ಥಾನದಲ್ಲಿದ್ದ ಲೀಲ್ ಅವರನ್ನು ಕೊನೆಯ ಸುತ್ತಿನಲ್ಲಿ ಹಿಂದಿಕ್ಕಿ ಚಿನ್ನದ ಪದಕವನ್ನು ನಿಶಿಯಾ ಗೆದ್ದುಕೊಂಡರು.
ಅವರ ಗೆಲುವು ಖಚಿತವಾದಾಗ ಈ 13 ವರ್ಷದ ಬಾಲಕಿಯ ಸಂತೋಷಕ್ಕೆ ಪಾರವೇ ಇರಲಿಲ್ಲ, ಬ್ರೆಜಿಲ್‌ನ ರೇಸ್ಸಾ ಲೀಲ್ ಸಹ 13 ವರ್ಷದವರಾಗಿದ್ದು ನಿಶಿಯಾಗಿಂತಲೂ ಕಿರಿಯವವಳು, ಲೀಲ್ ಅವರು ಈ ಪಂದ್ಯದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಚಿನ್ನದ ಪದಕ ಗೆದ್ದಿದ್ದರೆ ನಿಶಿಯಾಗಿಂತಲೂ ಚಿಕ್ಕವಯಸ್ಸಿನ ಆಟಗಾರ್ತಿ ಚಿನ್ನದ ಜಯಿಸಿದರು ಎನ್ನುವ ಹಿರಿಮೆ ಇವರದ್ದಾಗುತ್ತಿತ್ತು.
ಈ ಕ್ರೀಡಾಕೂಟದಲ್ಲಿ ದಾಖಲೆಯ ಆಟಗಾರ್ತಿ ಗೆಸ್ಟ್ರಿಂಗ್ ಅವರ ದಾಖಲೆಯನ್ನು ಹಿಂದಿಕ್ಕುವ ಸಾಧ್ಯತೆಗಳು ದಟ್ಟವಾಗಿ ಇವೆ ಎಂದು ಹೇಳಲಾಗುತ್ತಿದೆ ಏಕೆಂದರೆ ಸ್ಕೈ ಬ್ರೌನ್, 13 ವರ್ಷ 28 ದಿನಗಳ ವಯಸ್ಸಿನವನಾಗಿದ್ದು, ಆಗಸ್ಟ್ 4 ರ ಬುಧವಾರದಂದು ನಡೆಯಲಿರುವಂತಹ ಮಹಿಳಾ ಪಾರ್ಕ್ ಸ್ಕೇಟ್ ಬೋರ್ಡಿಂಗ್ ನ ಸ್ಪರ್ಧೆಯಲ್ಲಿ ಸ್ಪರ್ಧಿಸಿದರೆ ಇವರು ಬ್ರಿಟನ್ ದೇಶದಿಂದ ಭಾಗವಹಿಸಿರುವ ದೇಶದ ಅತ್ಯಂತ ಕಿರಿಯ ಒಲಿಂಪಿಯನ್ ಆಗುತ್ತಾರೆ.
ಜಪಾನ್‌ನ ಕೊಕೊನಾ ಹಿರಾಕಿ (12 ವರ್ಷ ಮತ್ತು 343 ದಿನಗಳು) ಕೂಡ ಇದೇ ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಕ್ರೀಡಾಕೂಟಕ್ಕೆ ಸೇರಿಸಲಾದ ಐದು ಹೊಸ ಕ್ರೀಡೆಗಳಲ್ಲಿ ಸ್ಕೇಟ್ ಬೋರ್ಡಿಂಗ್ ಸಹ ಒಂದಾಗಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.