• Home
  • »
  • News
  • »
  • national-international
  • »
  • Tokyo Population: ನಗರ ಬಿಟ್ಟು ಹೋಗಿ ಎಂದು ಲಕ್ಷ ಲಕ್ಷ ಹಣ ನೀಡುತ್ತಿದೆ ಟೋಕಿಯೋ ಸರ್ಕಾರ!

Tokyo Population: ನಗರ ಬಿಟ್ಟು ಹೋಗಿ ಎಂದು ಲಕ್ಷ ಲಕ್ಷ ಹಣ ನೀಡುತ್ತಿದೆ ಟೋಕಿಯೋ ಸರ್ಕಾರ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಗ್ರಾಮೀಣ ಭಾಗಗಳಿಗೆ ಜನರು ಹಿಂದಿರುಗಲು ಮತ್ತು ನಗರಗಳಿಂದ ವಸತಿ ಬದಲಾಯಿಸುವಂತೆ ಮಾಡಲು, ಸರ್ಕಾರ, ನಗರಗಳನ್ನು ತೊರೆಯುವ ಕುಟುಂಬಕ್ಕೆ 1.87 ಲಕ್ಷ ರೂ.ಗಳ ಸಹಾಯಧನ (3 ಲಕ್ಷ ಯೆನ್) ವನ್ನು ಈ ಹಿಂದೆ ನೀಡುತ್ತಿತ್ತು. ಆದರೆ ಈ ಯೋಜನೆಗೆ ನಾಗರಿಕರು ಅಷ್ಟಾಗಿ ಹೆಚ್ಚಿನ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಆ ಯೋಜನೆಯನ್ನು ಕೈ ಬಿಟ್ಟ ಸರ್ಕಾರ ಈಗ ಈ ಸೌಲಭ್ಯವನ್ನು ಪರಿಷ್ಕರಿಸಿದ್ದು, ರಾಜಧಾನಿ ತೊರೆಯುವ ಕುಟುಂಬಗಳ ಪ್ರತಿ ಮಗುವಿಗೆ 6.26 ಲಕ್ಷ ರೂ. ನೀಡುವುದಾಗಿ ಹೇಳಿದೆ.

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ಟೋಕಿಯೋ (Tokyo) ನಗರ ಬಿಟ್ಟು ಹೊರ ಹೋಗುವ ಜನರಿಗೆ ಜಪಾನ್‌ ಸರ್ಕಾರ ಲಕ್ಷ-ಲಕ್ಷ ಹಣ ಪಾವತಿಸುತ್ತಿದೆ. ಅರೇ, ನಗರ ಬಿಟ್ಟು ಹೋಗುವಂತೆ ನಾಗರಿಕರಿಗೆ ಹೇಳುತ್ತಿರೋದೇಕೆ, ಹಣ ನೀಡುತ್ತಿರುವುದೇಕೆ ಎಂಬ ಪ್ರಶ್ನೆ ಇಲ್ಲಿ ಉದ್ಭವಾಗುತ್ತಿದೆ. ಇದಕ್ಕೆ ಕಾರಣ ಇಷ್ಟೇ, ಟೋಕಿಯಾದ ಜನಸಂಖ್ಯೆ (Population). ಜಪಾನ್ ದೇಶದ ರಾಜಧಾನಿ ಟೋಕಿಯೋ ನಗರದಲ್ಲಿ (City) ಜನಸಂಖ್ಯೆ ಹೆಚ್ಚುತ್ತಿದೆ. ಗ್ರಾಮೀಣ ಭಾಗದ ಜನ ಉದ್ಯೋಗವಕಾಶಗಳ ಅರಸುತ್ತ ಮತ್ತು ಸೌಲಭ್ಯಗಳು (Benifit) ಉತ್ತಮವಾಗಿರುವ ನಗರ ಪ್ರದೇಶಗಳತ್ತ ವಲಸೆ ಬರುತ್ತಿದ್ದಾರೆ.


ಇದರಿಂದಾಗಿ ಹಳ್ಳಿ ಪ್ರದೇಶಗಳು ಜನಸಂಖ್ಯಾ ಕೊರತೆಯನ್ನು ಎದುರಿಸುತ್ತಿದ್ದರೆ ಟೋಕಿಯೋದಂತಹ ನಗರಗಳು ಜನಸಂಖ್ಯೆಯನ್ನು ಮೀರಿ ಬೆಳೆಯುತ್ತಿವೆ.


ಟೋಕಿಯೋ ತೊರೆಯುವವರಿಗೆ ಲಕ್ಷ-ಲಕ್ಷ ಹಣ


ರಾಜಧಾನಿ ಟೋಕಿಯೋ ನಗರದಲ್ಲಿ ಜನಸಂಖ್ಯೆ ಹೆಚ್ಚಿದ್ದು, ಜನರ ಒತ್ತಡವನ್ನ ಕಡಿಮೆ ಮಾಡಲು ಮತ್ತು ದೇಶದಲ್ಲಿ ಅವನತಿ ಹೊಂದುತ್ತಿರುವ ಸಣ್ಣ ಪಟ್ಟಣಗಳು ​​ಮತ್ತು ಹಳ್ಳಿಗಳ ಕಡೆಗೆ ಜನರನ್ನು ಸ್ಥಳಾಂತರಿಸಲು ಸರ್ಕಾರವು ಜನರಿಗೆ ಪ್ರೋತ್ಸಾಹದಾಯಕವಾಗಿ ಹಣ ನೀಡುವ ಕ್ರಮವನ್ನು ಘೋಷಿಸಿದೆ. ಜಪಾನ್‌ ಸರ್ಕಾರ ಟೋಕಿಯೋ ನಗರ ಬಿಟ್ಟು ಹೊರ ಹೋಗುವಂತೆ ಮತ್ತು ಅಂತವರಿಗೆ ಹಣ ನೀಡುವ ಬಗ್ಗೆ ಯೋಜನೆಯನ್ನು ಪ್ರಕಟಿಸಿದೆ.


ಟೋಕಿಯೋದಿಂದ ಹೊರ ಹೋಗುವ ಕುಟುಂಬಗಳ ಪ್ರತಿಯೊಂದು ಮಗುವಿಗೆ ಒಂದು ಮಿಲಿಯನ್‌ ಯೆನ್‌ ( ಯೆನ್‌ ಜಪಾನಿನ ಹಣ, $7,700, ಭಾರತದ ರೂ. 6.26 ಲಕ್ಷ) ನೀಡುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದೆ.


ಏಪ್ರಿಲ್‌ನಿಂದ ಯೋಜನೆ ಜಾರಿಗೆ


ಗ್ರಾಮೀಣ ಭಾಗಗಳಿಗೆ ಜನರು ಹಿಂದಿರುಗಲು ಮತ್ತು ನಗರಗಳಿಂದ ವಸತಿ ಬದಲಾಯಿಸುವಂತೆ ಮಾಡಲು, ಸರ್ಕಾರ, ನಗರಗಳನ್ನು ತೊರೆಯುವ ಕುಟುಂಬಕ್ಕೆ 1.87 ಲಕ್ಷ ರೂ.ಗಳ ಸಹಾಯಧನ (3 ಲಕ್ಷ ಯೆನ್) ವನ್ನು ಈ ಹಿಂದೆ ನೀಡುತ್ತಿತ್ತು. ಆದರೆ ಈ ಯೋಜನೆಗೆ ನಾಗರಿಕರು ಅಷ್ಟಾಗಿ ಹೆಚ್ಚಿನ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಆ ಯೋಜನೆಯನ್ನು ಕೈ ಬಿಟ್ಟ ಸರ್ಕಾರ ಈಗ ಈ ಸೌಲಭ್ಯವನ್ನು ಪರಿಷ್ಕರಿಸಿದ್ದು, ರಾಜಧಾನಿ ತೊರೆಯುವ ಕುಟುಂಬಗಳ ಪ್ರತಿ ಮಗುವಿಗೆ 6.26 ಲಕ್ಷ ರೂ. ನೀಡುವುದಾಗಿ ಹೇಳಿದೆ.


ಇದನ್ನೂ ಓದಿ: Madhya Pradesh: ನಾಯಕನಿಂದ ಅಪ್ರಾಪ್ತೆಯ ರೇಪ್, ಉದ್ರಿಕ್ತ ಗ್ರಾಮಸ್ಥರಿಂದ ಕಾರಿಗೇ ಬೆಂಕಿ, ಆರೋಪಿ ಶರಣು!


ಈ ವರ್ಷದ ಏಪ್ರಿಲ್‌ನಿಂದ ಈ ಯೋಜನೆ ಜಾರಿಗೆ ಬರಲಿದೆ. ಹಿಂದಿನ ಹಣಕ್ಕಿಂತ ಈ ಯೋಜನೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.


ಜನರಿಲ್ಲದೇ ಬಿಕೋ ಎನ್ನುತ್ತಿವೆ ಹಳ್ಳಿಗಳು


ಕಡಿಮೆ ಜನನ ಪ್ರಮಾಣ ಮತ್ತು ದೀರ್ಘಾಯುಷ್ಯದೊಂದಿಗೆ ಜಪಾನ್ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಅಲ್ಲಿನ ಸರ್ಕಾರ ಹಣಕಾಸಿನ ಪ್ರೋತ್ಸಾಹ ನೀಡುತ್ತಿದೆ. ಯುವಕರು ನಗರಗಳಲ್ಲಿನ ಅವಕಾಶಗಳಿಗಾಗಿ ಹಳ್ಳಿಗಳನ್ನು ಬಿಟ್ಟು ಅನುಕೂಲಸ್ಥ ನಗರದ ಕಡೆ ಮುಖ ಮಾಡುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಜನಸಂಖ್ಯೆ ಕುಸಿದಿದೆ. ಇಲ್ಲಿ ಮನೆಗಳು ಖಾಲಿಯಾಗಿದ್ದು ತೆರಿಗೆ ಆದಾಯ ಕೂಡ ಕ್ಷೀಣಿಸುತ್ತಿದೆ. ಹೀಗಾಗಿ ಈ ಎಲ್ಲಾ ಸಮಸ್ಯೆಗಳ ವಿರುದ್ಧ ಹೋರಾಡಲು ಜಪಾನ್‌ ಇಂಥದ್ದೊಂದು ಯೋಜನೆಗೆ ಮುಂದಾಗಿದೆ.


ಮಕ್ಕಳಿರುವ ಕುಟುಂಬಗಳಿಗೆ ಹೆಚ್ಚಿನ ಹಣ


ಮಕ್ಕಳಿರುವ ಕುಟುಂಬಗಳು ಬೇರೆಡೆಗೆ ಹೋಗುವುದಾದರೆ 1 ಮಿಲಿಯನ್ ಯೆನ್‌ಗಿಂತ ಹೆಚ್ಚಿನ ಹಣ ನೀಡಲಾಗುತ್ತದೆ. ಹೊಸ ಪ್ರಸ್ತಾಪದ ಅಡಿಯಲ್ಲಿ, ಇಬ್ಬರು ಮಕ್ಕಳಿರುವ ಮನೆಯವರು ಟೋಕಿಯೊ ಪ್ರದೇಶವನ್ನು ತೊರೆದರೆ ಬೆಂಬಲವಾಗಿ 3 ಮಿಲಿಯನ್ ಯೆನ್ ಪಡೆಯಬಹುದು.


ಇದನ್ನೂ ಓದಿ: Pakistan: ಪಾಕ್​​ಗೆ ಮತ್ತೊಂದು ಕುತಂತ್ರಿ ಚೀನಾದಿಂದ ಮೋಸ; ತುಕ್ಕು ಹಿಡಿದ ರೈಲು ಕೊಟ್ಟು ವಂಚಿಸಿದ ಡ್ರ್ಯಾಗನ್​ ರಾಷ್ಟ್ರ


ಬೆಂಬಲ ನಿಧಿಗೆ ಅರ್ಜಿ ಸಲ್ಲಿಸಲು ಅವಕಾಶ


ಜಪಾನ್‌ನ ರಾಷ್ಟ್ರೀಯ ಸರ್ಕಾರವು 2019 ರಲ್ಲಿ ಜನರನ್ನು ಪ್ರಾದೇಶಿಕ ಪ್ರದೇಶಗಳಿಗೆ ಆಕರ್ಷಿಸುವ ಉಪಕ್ರಮವನ್ನು ಪ್ರಾರಂಭಿಸಿತು, ಕೇಂದ್ರ ಟೋಕಿಯೊ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಐದು ವರ್ಷಗಳ ಕಾಲ ವಾಸಿಸುವ ಕುಟುಂಬಗಳು ಸ್ಥಳಾಂತರಗೊಂಡರೆ ಬೆಂಬಲ ನಿಧಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು.


ಕುಟುಂಬಗಳು ತಮ್ಮ ಪ್ರಸ್ತುತ ಕೆಲಸದಲ್ಲಿ ದೂರದಿಂದಲೇ ಕೆಲಸ ಮಾಡುವುದನ್ನು ಮುಂದುವರಿಸಬಹುದು, ಸ್ಥಳೀಯ ಸಣ್ಣ ಅಥವಾ ಮಧ್ಯಮ ಗಾತ್ರದ ವ್ಯಾಪಾರದಲ್ಲಿ ಕೆಲಸ ಮಾಡಬಹುದು ಅಥವಾ ಸ್ಥಳೀಯ ಪ್ರದೇಶದಲ್ಲಿ ವ್ಯಾಪಾರವನ್ನು ಪ್ರಾರಂಭಿಸಬಹುದು. ಇದು ಅವರಿಗೆ ಇನ್ನಷ್ಟು ಹಣಕಾಸಿನ ಬೆಂಬಲಕ್ಕಾಗಿ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ.

First published: