Assembly Election: ಇಂದು ಪಂಜಾಬ್ ವಿಧಾನಸಭೆ ಚುನಾವಣೆ, ಯುಪಿಯಲ್ಲಿ ಮೂರನೇ ಹಂತದ ವೋಟಿಂಗ್

ಇಂದು ಪಂಜಾಬ್ ವಿಧಾನಸಭೆಯ ಎಲ್ಲಾ 117 ಸ್ಥಾನಗಳಿಗೆ ಮತ್ತು ಉತ್ತರ ಪ್ರದೇಶದ 59 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ನಡೆಯಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ಇಂದು  ಪಂಜಾಬ್‌ (Panjab) ವಿಧಾನಸಭೆಯ ಎಲ್ಲಾ 117 ಸ್ಥಾನಗಳಿಗೆ ಮತ್ತು ಉತ್ತರ ಪ್ರದೇಶದ (Uttar Pradesh) 59 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ನಡೆಯಲಿದೆ. ಉತ್ತರ ಪ್ರದೇಶ ವಿಧಾನಸಭೆಗೆ ಏಳು ಹಂತಗಳಲ್ಲಿ ಚುನಾವಣೆ (Election) ನಡೆಯುತ್ತಿದೆ. ಮೂರನೇ ಹಂತದಲ್ಲಿ 16 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಿಗೆ (Assembly constituencies) ಇಂದು ಮತದಾನ ನಡೆಯಲಿದೆ. ಹಂತದಲ್ಲಿ 627 ಅಭ್ಯರ್ಥಿಗಳು ಕಣದಲ್ಲಿದ್ದು, 2.15 ಕೋಟಿಗೂ ಹೆಚ್ಚು ಜನರು ಮತದಾರರಿದ್ದಾರೆ. ಪಂಜಾಬ್ 117 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಮತ್ತು ಯುಪಿಯಲ್ಲಿ 59 ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ರಿಂದ  ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.

ಪಂಜಾಬ್​, ಉತ್ತರಪ್ರದೇಶ್​ನಲ್ಲಿ ಬಿಗ್​ ಫೈಟ್​

ಪಂಜಾಬ್ ನಲ್ಲಿ ಕಾಂಗ್ರೆಸ್ ಎಎಪಿ ಎಸ್‌ಎಡಿ-ಬಿಎಸ್‌ಪಿ, ಬಿಜೆಪಿ-ಪಿಎಲ್‌ಸಿ-ಎಸ್‌ಎಡಿ (ಸಂಯುಕ್ತ) ಮತ್ತು ವಿವಿಧ ರೈತ ಸಂಘಟನೆಗಳ ರಾಜಕೀಯ ಪಕ್ಷವಾದ ಸಂಯುಕ್ತ ಸಮಾಜ ಮೋರ್ಚಾ ನಡುವೆ ಬಹುಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ. ಯುಪಿಯಲ್ಲಿ, ಮೂರನೇ ಹಂತದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬಿಜೆಪಿಯ ಎಸ್‌ಪಿ ಸಿಂಗ್ ಬಘೆಲ್ ವಿರುದ್ಧ ಕರ್ಹಾಲ್ ಅಸೆಂಬ್ಲಿ ಸ್ಥಾನಕ್ಕಾಗಿ ಸೆಣಸಲಿದ್ದಾರೆ. ಪಂಜಾಬ್‌ನಲ್ಲಿ 93 ಮಹಿಳೆಯರು ಸೇರಿದಂತೆ ಒಟ್ಟು 1,304 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2.14 ಕೋಟಿ ಮತದಾರರು ರಾಜಕೀಯ ನಾಯಕರುಗಳ ಭವಿಷ್ಯವನ್ನು ನಿರ್ಧಾರ ಮಾಡಲಿದ್ದಾರೆ.

ಇದನ್ನೂ ಓದಿ: Election: ಈ ಅಭ್ಯರ್ಥಿಯ ಮನೆಯಲ್ಲಿ 12 ಜನ ಇದ್ದಾರೆ, ಆದ್ರೆ ಚುನಾವಣೆಯಲ್ಲಿ ಬಿದ್ದಿದ್ದು ಮಾತ್ರ ಒಂದೇ ಮತ - ಅದೂ ಅವ್ರದ್ದೇ!

ಪಂಜಾಬ್ ಅಖಾಡದಲ್ಲಿ ಘಟಾನುಘಟಿಗಳು

ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್‌ ಚನ್ನಿ, ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಭಗವಂತ್‌ ಮಾನ್‌, ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ನವಜೋತ್‌ ಸಿಂಗ್‌ ಸಿಧು, ಮಾಜಿ ಮುಖ್ಯಮಂತ್ರಿಗಳಾದ ಅಮರಿಂದರ್‌ ಸಿಂಗ್‌ ಮತ್ತು ಪ್ರಕಾಶ್‌ ಸಿಂಗ್‌ ಬಾದಲ್‌ ಮತ್ತು ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್‌ ಸಿಂಗ್‌ ಬಾದಲ್‌ ಕಣದಲ್ಲಿರುವ ನಾಯಕರು. ಮಾಜಿ ಸಿಎಂ ರಾಜಿಂದರ್ ಕೌರ್ ಭಟ್ಟಾಲ್, ಪಂಜಾಬ್ ಬಿಜೆಪಿ ಮುಖ್ಯಸ್ಥ ಅಶ್ವನಿ ಶರ್ಮಾ ಮತ್ತು ಕೇಂದ್ರದ ಮಾಜಿ ಸಚಿವ ವಿಜಯ್ ಸಂಪ್ಲಾ ಕೂಡ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಅಬ್ಬರದ ಪ್ರಚಾರ ಭರವಸೆಗಳ ಮಹಾಪೂರ

ಅಬ್ಬರದ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವೆ ಸ್ಮೃತಿ ಇರಾನಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಭಾಗವಹಿಸಿದ್ದರು. ಪಂಜಾಬ್ ಚುನಾವಣೆಯಲ್ಲಿ ಯಾವುದೇ "ಪ್ರಯೋಗ" ಕ್ಕೆ ಹೋಗದಂತೆ ಜನರಿಗೆ ಎಚ್ಚರಿಕೆ ನೀಡಿದ ರಾಹುಲ್ ಗಾಂಧಿ, ಶಾಂತಿ ಕಾಪಾಡುವುದು ರಾಜ್ಯಕ್ಕೆ ಅತ್ಯಂತ ಮುಖ್ಯ ಮತ್ತು ಕಾಂಗ್ರೆಸ್ ಪಕ್ಷದಿಂದ ಮಾತ್ರವೇ ಅದು ಸಾಧ್ಯ ಎಂದು ರಾಹುಲ್ ಗಾಂಧಿ ಹೇಳಿದ್ರು

ಇದನ್ನೂ ಓದಿ: ನಾಳೆ Punjab Election; ಮತದಾನಕ್ಕೂ ಮುನ್ನ ಸಿಎಂ ಚನ್ನಿ ವಿರುದ್ಧ ಪ್ರಕರಣ

ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದು ಅಂಗಡಿ, ವಾಣಿಜ್ಯ ಸಂಸ್ಥೆಗಳು ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ವೇತನ ಸಹಿತ ರಜೆ ಘೋಷಿಸಿದೆ. ಪ್ರಚಾರದ ವೇಳೆ ಎಲ್ಲಾ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ನಾನಾ ರೀತಿಯ ಉಚಿತ ಕೊಡುಗೆಗಳನ್ನು ನೀಡಿದ್ದವು. ಎಎಪಿ ಎಲ್ಲಾ ಮಹಿಳೆಯರಿಗೆ 1,000 ರೂ. ಭರವಸೆ ನೀಡಿದರೆ, ಕಾಂಗ್ರೆಸ್ ನಿರ್ಗತಿಕ ಮಹಿಳೆಯರಿಗೆ ತಿಂಗಳಿಗೆ 1,100 ರೂಪಾಯಿ ನೀಡುವ ಭರವಸೆ ನೀಡಿದೆ.

ಮಾರ್ಚ್ 10ಕ್ಕೆ ಪಂಚರಾಜ್ಯಗಳ ಫಲಿತಾಂಶ

ಪಂಜಾಬ್​ ನಲ್ಲಿ 117 ಸ್ಥಾನಗಳ ವಿಧಾನಸಭೆಗೂ ಇಂದು ಮತದಾನ ನಡೆಯಲಿದೆ. ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಯವರೆಗೆ ಮುಕ್ತಾಯಗೊಳಲಿದೆ. ಸಿಎಪಿಎಫ್ ಸೇರಿದಂತೆ ಸುಮಾರು 4,000 ಪೊಲೀಸ್ ಸಿಬ್ಬಂದಿಯನ್ನು ಚುನಾವಣಾ ಭದ್ರತೆಗಾಗಿ ಪಂಜಾಬ್‌ನಾದ್ಯಂತ ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರಪ್ರದೇಶ, ಪಂಜಾಬ್​, ಗೋವಾ, ಉತ್ತರಾಖಂಡ ಹಾಗೂ ಮಣಿಪುರ ಸೇರಿ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶವು ಮಾರ್ಚ್ 10 ರಂದು ಹೊರಬೀಳಲಿದೆ.
Published by:Pavana HS
First published: