Petrol Price Today: ಭೂಪಾಲ್​ನಲ್ಲಿ 110 ದಾಟಿದ ಪೆಟ್ರೋಲ್ ಬೆಲೆ ; ಬೆಂಗಳೂರಲ್ಲಿ ಯಥಾಸ್ಥಿತಿ ಮುಂದುವರಿಕೆ

ಶುಕ್ರವಾರದ ಹೊತ್ತಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅಲ್ಪ ಏರಿಕೆ ಕಂಡಿದೆ. 73.40 ಡಾಲರ್​​ ಬೆಲೆ ಇದ್ದು, ಸಾಕಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಸಹ ಭಾರತದಲ್ಲಿ ಏಕೆ ಬೆಲೆ ಇಳಿಕೆಯಾಗುತ್ತಿಲ್ಲ ಎನ್ನುವುದೇ ಯಕ್ಷ ಪ್ರಶ್ನೆಯಾಗಿ ಉಳಿದುಕೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  July 30 ಬೆಂಗಳೂರು:  ಇಡೀ ಇತಿಹಾಸದಲ್ಲೇ ಪೆಟ್ರೋಲ್​ ಬೆಲೆ ಹಿಂದೆಂದೂ ಕಾಣದಷ್ಟು ಮಟ್ಟಕ್ಕೆ  ನಿರಂತರವಾಗಿ ಏರಿಕೆ ಕಾಣುತ್ತಾ ಬಂದಿದೆ. ಶತಕ ಪೂರೈಸಿದ  ಆನಂತರವೂ ಕೆಳಗೆ ಇಳಿಯುವ ಲಕ್ಷಣ ಸದ್ಯಂಕ್ಕಂತು ಕಾಣುತ್ತಿಲ್ಲ.  ಕಳೆದ ಜೂನ್​ ಹಾಗೂ ಜುಲೈ ಆದಿ ಭಾಗದಲ್ಲಿ ಪೆಟ್ರೋಲ್ ಬೆಲೆ ಅಷ್ಟಾಗಿ ಏರಿಕೆ ಕಂಡಿರಲಿಲ್ಲ.  ಈ ಅವಧಿಯಲ್ಲಿ ಪೆಟ್ರೋಲ್ ಪೈಸೆಗಳ ಲೆಕ್ಕದಲ್ಲಿ ನಿಧಾನಕ್ಕೆ ದುಬಾರಿಯಾಗುತ್ತಾ ಹೋಗುತ್ತಿದೆ.

  ಶುಕ್ರವಾರದ ಹೊತ್ತಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅಲ್ಪ ಏರಿಕೆ ಕಂಡಿದೆ. 73.40 ಡಾಲರ್​​ ಬೆಲೆ ಇದ್ದು, ಹಿಂದಿನ ದರಗಳಿಗೆ ಹೋಲಿಕೆ ಮಾಡಿ ನೋಡಿದಾಗ ಸಾಕಷ್ಟು ಪ್ರಮಾಣದಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಸಹ ಭಾರತದಲ್ಲಿ ಏಕೆ ಬೆಲೆ ಇಳಿಕೆಯಾಗುತ್ತಿಲ್ಲ ಎನ್ನುವುದೇ ಯಕ್ಷ ಪ್ರಶ್ನೆಯಾಗಿ ಉಳಿದುಕೊಂಡಿದೆ.

  ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 105.31 ರೂ ದರ ಇದೆ. ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ  ಕಂಡುಬಂದಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಡೀಸೆಲ್​ ಬೆಲೆಯೂ ಸಹ ಆತಂಕದ ಮಟ್ಟಕ್ಕೆ ಮುಟ್ಟುಬಹುದು ಎಂಬುದು ಮಾರುಕಟ್ಟೆ ವಿಶ್ಲೇಷಕರ ಮಾತು. ಪ್ರಸ್ತುತ ಡೀಸೆಲ್​ ಬೆಲೆ 95.26 ರೂ ನಲ್ಲೇ ಮುಂದುವರಿದಿದೆ.

  ಮಹಾನಗರಿಗಳ ಪೈಕಿ ಮುಂಬೈನಲ್ಲಿ ಪೆಟ್ರೋಲ್ ಡೀಸೆಲ್ ಅತಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಕಳೆದ ಒಂದು ವಾರದಿಂದ ಈ ವಾಣಿಜ್ಯ ನಗರಿಯಲ್ಲಿ ಪೆಟ್ರೋಲ್ ಬೆಲೆ 107.89ನ್ನೇ ಕಾಯ್ದುಕೊಂಡಿತ್ತು ಜೊತೆಗೆ ಡೀಸೆಲ್ ದರವೂ ಸಹ 97.43 ಬೆಲೆಯನ್ನೇ ಕಾಯ್ದುಕೊಂಡಿತ್ತು. ಗುರುವಾರ ಮಾತ್ರ ಅಲ್ಪ ಇಳಿಕೆ ಕಂಡಿದ್ದ ಪೆಟ್ರೋಲ್​ ಶುಕ್ರವಾರ ಮತ್ತೆ ಒಂದು ವಾರಗಳ ಕಾಲ ಇದ್ದಂತಹ ಬೆಲೆಗೆ ಬಂದು ನಿಂತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 101.9 ರೂ ಬೆಲೆ ಒಂದು ವಾರದಿಂದ ಇದೇ ಸ್ಥಿರತೆಯನ್ನು ಕಾಯ್ದುಕೊಂಡು ಹೋಗಿದೆ. ದೆಹಲಿಯಲ್ಲಿ ಡೀಸೆಲ್ ಬೆಲೆ ಇನ್ನೂ 90 ರ ಆಸುಪಾಸಿನಲ್ಲೇ ಇದೆ.

  ಆದರೆ ಪಂಜಾಬಿನ ರಾಜಧಾನಿ ಚಂಢೀಗಡದಲ್ಲಿ ಮಾತ್ರ ಪೆಟ್ರೋಲ್​ ಶತಕ ಬಾರಿಸಿಲ್ಲ. ಶುಕ್ರವಾರದ ಹೊತ್ತಿಗೆ 97.99 ರೂ ದಾಖಲಾಗಿದೆ. ಆದರೆ ದೇಶದ ಇತರೇ ಭಾಗಗಳಲ್ಲಿ ಗ್ರಾಹಕರು ಬೆಲೆ ಕೇಳಿ ಶಾಕ್​ ಆಗಿದ್ದಾರೆ. ಮಧ್ಯಪ್ರದೇಶ ರಾಜಧಾನಿ ಭೋಪಾಲ್​ನಲ್ಲಿ ಪೆಟ್ರೋಲ್ ಬೆಲೆ 110.16 ರೂ ದಾಟಿದೆ. ದೇಶದಲ್ಲೇ ಅತಿ ದುಬಾರಿ ಪೆಟ್ರೋಲ್ ಇರುವುದು ರಾಜಸ್ಥಾನದ ಶ್ರೀ ಗಂಗಾನಗರ್ ಜಿಲ್ಲೆಯಲ್ಲಿ. ಇಲ್ಲಿ ಪೆಟ್ರೋಲ್ ಬೆಲೆ 113.31 ರೂ ದಾಟಿದೆ.

  ವಿವಿಧೆಡೆ ಇರುವ ಇಂದಿನ (ಜುಲೈ 30) ಪೆಟ್ರೋಲ್ ಮತ್ತು ಡೀಸೆಲ್ ಬೆಲೆ:

  ಬೆಂಗಳೂರು:
  ಪೆಟ್ರೋಲ್: 105.31 ರೂ
  ಡೀಸೆಲ್: 95.78

  ದೆಹಲಿ:

  ಪೆಟ್ರೋಲ್: 101.9 ರೂ
  ಡೀಸೆಲ್: 89.87 ರೂ

  ಮುಂಬೈ:
  ಪೆಟ್ರೋಲ್: 107.89 ರೂ
  ಡೀಸೆಲ್: 97.43 ರೂ

  ಚೆನ್ನೈ:
  ಪೆಟ್ರೋಲ್: 102.55 ರೂ
  ಡೀಸೆಲ್: 94.58 ರೂ

  ಕೋಲ್ಕತಾ:
  ಪೆಟ್ರೋಲ್: 102.22
  ಡೀಸೆಲ್: 93.18

  ಹೈದರಾಬಾದ್:
  ಪೆಟ್ರೋಲ್: 103.91 ರೂ
  ಡೀಸೆಲ್: 97.16 ರೂ

  ಭೋಪಾಲ್:
  ಪೆಟ್ರೋಲ್: 110.16 ರೂ
  ಡೀಸೆಲ್: 98.67 ರೂ

  ಇದನ್ನೂ ಓದಿ: ಛಾಯಾಗ್ರಾಹಕ ದಾನಿಶ್​ ಸಿದ್ದಿಕಿಯನ್ನು ಹುಡುಕಿ ಹೀನಾಯವಾಗಿ ಕೊಂದ ತಾಲಿಬಾನ್​ ಉಗ್ರರು?

  ದೇಶದ ಅನೇಕ ಭಾಗಗಳಲ್ಲಿ ಡೀಸೆಲ್ ಬೆಲೆಯೂ ಸಹ ಶತಕದ ಪೂರೈಸಿದ್ದು, ಇದಕ್ಕೆ ರಾಜ್ಯಗಳು ವಿಧಿಸುತ್ತಿರುವ ತೆರಿಗೆಯೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ ಆದರೂ ಸಹ ರಾಜ್ಯ, ಕೇಂದ್ರ ಸರ್ಕಾರಗಳು ಈ ಕಡೆ ಗಮನ ಹರಿಸುತ್ತಿಲ್ಲ ಎಂಬ ಆರೋಪವೂ ಇದೆ.

  ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಮಾರುಕಟ್ಟೆ ನಿಯಂತ್ರಿತವಾಗಿವೆ ಎಂದು ಸರ್ಕಾರ ಹೇಳುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆಯಲ್ಲಾಗುವ ಬದಲಾವಣೆಯು ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ಇಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ತೆರಿಗೆ ಹಾಕುತ್ತವೆ. ಪೆಟ್ರೋಲ್ ಬೆಲೆಯಲ್ಲಿ ಶೇ. 60 ರಷ್ಟು ಭಾಗ ತೆರಿಗೆಯೇ ಆಗಿರುತ್ತದೆ ಎಂಬುದು ಗಮನಾರ್ಹ. ಕೇಂದ್ರ ಸರ್ಕಾರ ಪ್ರತೀ ಲೀಟರ್ ಪೆಟ್ರೋಲ್​ಗೆ ವಿಧಿಸುವ ಅಬಕಾರಿ ಸುಂಕದ ಮೊತ್ತ 32.90 ರೂ ಇರುತ್ತದೆ. ಹಾಗೆಯೇ, ಡೀಸೆಲ್ ಬೆಲೆಯಲ್ಲಿ ಶೇ. 54ರಷ್ಟು ತೆರಿಗೆ ಇದೆ. ಇದರಲ್ಲಿ ಅಬಕಾರಿ ಸುಂಕದ ಮೊತ್ತ 31.80 ರೂ ಇದೆ.
  Published by:HR Ramesh
  First published: