Petrol Price| ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ತೈಲ ಬೆಲೆ, ಜಿಲ್ಲೆಗಳಲ್ಲಿ ಅಲ್ಪ ಇಳಿಕೆ

ಬೆಂಗಳೂರಿನಲ್ಲಿ ಒಂದು ಲಿಟರ್​ ಪೆಟ್ರೋಲ್ ಅನ್ನು 104.70 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ 94.04 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪೆಟ್ರೋಲ್ ಅನ್ನು ಅತ್ಯಧಿಕ 106.93 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
    ಬೆಂಗಳೂರು (ಸೆಪ್ಟೆಂಬರ್​ 21); ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ 10 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ತೆರಿಗೆಯಲ್ಲಿನ ವ್ಯತ್ಯಾಸ ಮತ್ತು ಇನ್ನಿತರೆ ಕಾರಣಗಳಿಂದಾಗಿ ರಾಜ್ಯ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮಾತ್ರ ಅಲ್ಪ ಬದಲಾವಣೆ ಉಂಟಾಗಿದೆ. ಬೆಂಗಳೂರಿನಲ್ಲಿ ಒಂದು ಲಿಟರ್​ ಪೆಟ್ರೋಲ್ ಅನ್ನು 104.70 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ 94.04 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪೆಟ್ರೋಲ್ ಅನ್ನು ಅತ್ಯಧಿಕ 106.93 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಂದರೆ ಇಂದು ಮಾತ್ರ 83 ಪೈಸೆ ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಇದಲ್ಲದೆ ವಿವಿಧ ಜಿಲ್ಲೆಗಳ ತೈಲ ಬೆಲೆ ವಿವದ ಇಲ್ಲಿದೆ.

    ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ;

    ಬಾಗಲಕೋಟೆ - 105.33 ರೂ. (11 ಪೈಸೆ ಇಳಿಕೆ)
    ಬೆಂಗಳೂರು - 104.70 ರೂ.
    ಬೆಂಗಳೂರು ಗ್ರಾಮಾಂತರ -104.33ರೂ. (44 ಪೈಸೆ ಇಳಿಕೆ)
    ಬೆಳಗಾವಿ - 105.19 ರೂ. (60 ಪೈಸೆ ಏರಿಕೆ)
    ಬಳ್ಳಾರಿ - 105.67 ರೂ. (93 ಪೈಸೆ ಇಳಿಕೆ)
    ಬೀದರ್ - 105.12 ರೂ. (11 ಪೈಸೆ ಇಳಿಕೆ)
    ಬಿಜಾಪುರ - 104.41 ರೂ. (70 ಪೈಸೆ ಇಳಿಕೆ)
    ಚಾಮರಾಜನಗರ - 104.72 ರೂ. (50 ಪೈಸೆ ಇಳಿಕೆ)
    ಚಿಕ್ಕಬಳ್ಳಾಪುರ - 104.76 ರೂ. (17 ಪೈಸೆ ಏರಿಕೆ)
    ಚಿಕ್ಕಮಗಳೂರು - 105.64ರೂ. (35 ಪೈಸೆ ಇಳಿಕೆ)
    ಚಿತ್ರದುರ್ಗ - 106.30 ರೂ. (30 ಪೈಸೆ ಇಳಿಕೆ)
    ದಕ್ಷಣ ಕನ್ನಡ - 103.84ರೂ. (81 ಪೈಸೆ ಇಳಿಕೆ)
    ದಾವಣಗೆರೆ - 105.86 ರೂ. (1.07 ರೂ ಇಳಿಕೆ)
    ಧಾರವಾಡ - 104.57 ರೂ. (17 ಪೈಸೆ ಇಳಿಕೆ)
    ಗದಗ - 105 ರೂ. (00)
    ಗುಲಬರ್ಗ - 104.71 ರೂ. (30 ಪೈಸೆ ಏರಿಕೆ)
    ಹಾಸನ – 104.69 ರೂ. (00)
    ಹಾವೇರಿ - 105.42 ರೂ. (20 ಪೈಸೆ ಇಳಿಕೆ)
    ಕೊಡಗು – 106.10 ರೂ. (15 ಪೈಸೆ ಏರಿಕೆ)
    ಕೋಲಾರ - 104.63 ರೂ. (13 ಪೈಸೆ ಇಳಿಕೆ)
    ಕೊಪ್ಪಳ- 105.92 ರೂ. (31 ಪೈಸೆ ಇಳಿಕೆ)
    ಮಂಡ್ಯ – 104.65 ರೂ. (30 ಪೈಸೆ ಇಳಿಕೆ)
    ಮೈಸೂರು – 104.62 ರೂ. (43 ಪೈಸೆ ಏರಿಕೆ)
    ರಾಯಚೂರು – 105.14 ರೂ. (15 ಪೈಸೆ ಏರಿಕೆ)
    ರಾಮನಗರ – 105.02 ರೂ. (16 ಪೈಸೆ ಇಳಿಕೆ)
    ಶಿವಮೊಗ್ಗ – 106.17 ರೂ. (19 ಪೈಸೆ ಇಳಿಕೆ)
    ತುಮಕೂರು – 105.39 ರೂ. (11 ಪೈಸೆ ಏರಿಕೆ)
    ಉಡುಪಿ - 104.97 ರೂ. (80 ಪೈಸೆ ಏರಿಕೆ)
    ಉತ್ತರಕನ್ನಡ – 106.93 ರೂ . (87 ಪೈಸೆ ಏರಿಕೆ)
    ಯಾದಗಿರಿ – 105.16 ರೂ. (38 ಪೈಸೆ ಇಳಿಕೆ).

    ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 98.96 ರೂ ಇದ್ದರೆ ಡೀಸೆಲ್​ ಬೆಲೆ 93.26 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಹೈದ್ರಾಬಾದ್​ನಲ್ಲಿ ಪೆಟ್ರೋಲ್​ ಬೆಲೆ 87.24 ರೂ ಆಗಿದ್ದರೆ, ಡೀಸೆಲ್​ ಬೆಲೆ 80.21 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ನೋಡ್ಡಾದಲ್ಲಿ ಒಂದು ಲೀಟರ್​ ಪೆಟ್ರೋಲ್ ಬೆಲೆ 98.52 ರೂ ಆಗಿದ್ದರೆ, ದೆಹಲಿಯಲ್ಲಿ 101.62 ರೂ ಮತ್ತು ಮಹಾರಾಷ್ಟ್ರದಲ್ಲಿ 107.26 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ರಾಜಸ್ಥಾನದ ಜೈಪುರದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 108.56 ರೂ ಇದೆ. ಇದು ದೇಶದಲ್ಲೇ ಅತ್ಯಂತ ಹೆಚ್ಚಿನ ಬೆಲೆ ಎಂದು ಗುರುತಿಸಿಕೊಂಡಿದೆ.

    ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

    ಇದನ್ನೂ ಓದಿ: Murder for Accident: ಬೈಕ್ ನಲ್ಲಿ ಯುವತಿಗೆ ಗುದ್ದಿದ್ದಕ್ಕೆ ಕೊಂದೇ ಬಿಟ್ಟರು,19 ವರ್ಷದ ಯುವಕನ ದುರಂತ ಅಂತ್ಯ

    ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.
    Published by:MAshok Kumar
    First published: