ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದು ಚೀನಾ ಮಾತ್ರ; ನೆಟ್​ವರ್ಕ್​18 ಸಂದರ್ಶನದಲ್ಲಿ ಪ್ರಧಾನಿ ಮೋದಿ ಮಾತು

ಇನ್ನು ರಫೇಲ್​ ಒಪ್ಪಂದದ ವಿಚಾರಕ್ಕೆ ಸಂಬಂಧಿಸಿ ವಿಪಕ್ಷಗಳು ಸಾಕಷ್ಟು ಆರೋಪ ಮಾಡುತ್ತಾ ಬಂದಿವೆ. ಈ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದು, ಪ್ರತಿಪಕ್ಷಗಳು ಸುಳ್ಳನ್ನು ಪದೇಪದೆ ಹೇಳುತ್ತಿದ್ದಾರೆ ಎಂದಿದ್ದಾರೆ.

Rajesh Duggumane | news18
Updated:April 9, 2019, 1:34 PM IST
ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದು ಚೀನಾ ಮಾತ್ರ; ನೆಟ್​ವರ್ಕ್​18 ಸಂದರ್ಶನದಲ್ಲಿ ಪ್ರಧಾನಿ ಮೋದಿ ಮಾತು
ಮೋದಿ
  • News18
  • Last Updated: April 9, 2019, 1:34 PM IST
  • Share this:
ನವದೆಹಲಿ (ಏ.9): ಭಯೋತ್ಪಾದನೆಗೆ ನಿರಂತರವಾಗಿ ಬೆಂಬಲ ನೀಡುತ್ತಿರುವ ಪಾಕಿಸ್ತಾನವನ್ನು ಚೀನಾ ಬೆಂಬಲಿಸುತ್ತಿದೆ. ನೆಟ್​ವರ್ಕ್​18 ಮುಖ್ಯ ಸಂಪಾದಕ ರಾಹುಲ್ ಜೋಶಿ ಅವರ ಜತೆಗಿನ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರಕ್ಕೆ ಸಂಬಂಧಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಂದು ಪಾಕಿಸ್ತಾನವನ್ನು ಚೀನಾ ಮಾತ್ರ ಬೆಂಬಲಿಸುತ್ತಿದೆ ಎಂದಿದ್ದಾರೆ.

“ಹಲವು ಜಾಗತಿಕ ವಿಚಾರಗಳಲ್ಲಿ ರಷ್ಯಾ ಭಾರತದ ಬೆಂಬಲಕ್ಕೆ ನಿಂತಿತ್ತು. ಆದರೆ, ಇಂದು ಚೀನಾ ಮಾತ್ರ ಪಾಕಿಸ್ತಾನದ ಬೆನ್ನಿಗೆ ನಿಂತಿದೆ. ಪಾಕಿಸ್ತಾನ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದೆ. ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯನ್ನು ಭಾರತ ಪ್ರಶ್ನಿಸುತ್ತಿದೆ. ಇದಕ್ಕೆ ಇಡೀ ವಿಶ್ವವೇ ನಮ್ಮ ಬೆಂಬಲಕ್ಕೆ ನಿಂತಿದೆ,”  ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ರಫೇಲ್​ ಒಪ್ಪಂದದ ವಿಚಾರಕ್ಕೆ ಸಂಬಂಧಿಸಿ ವಿಪಕ್ಷಗಳು ಸಾಕಷ್ಟು ಆರೋಪ ಮಾಡುತ್ತಾ ಬಂದಿವೆ. ಈ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದು, ಪ್ರತಿಪಕ್ಷಗಳು ಸುಳ್ಳನ್ನು ಪದೇಪದೆ ಹೇಳುತ್ತಿದ್ದಾರೆ ಎಂದಿದ್ದಾರೆ. “ಪ್ರತಿಪಕ್ಷಗಳು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ ಎನ್ನುವ ವಿಚಾರ ಸುಪ್ರೀಂಕೋರ್ಟ್​​ನಲ್ಲಾಗಲೀ ಅಥವಾ ಸಿಎಜಿ ವರದಿಯಲ್ಲಾಗಲೀ ಸಾಬೀತಾಗಿಲ್ಲ. ರಫೇಲ್​ ಒಪ್ಪಂದವನ್ನು ಕೆದಕುವ ಮೂಲಕ ರಾಹುಲ್​ ತಮ್ಮ ತಂದೆ ಮಾಡಿದ ಬೋಫೋರ್ಸ್​ ಹರಗಣದ ಕಪ್ಪು ಚುಕ್ಕೆಯನ್ನು ಅಳಿಸಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ,” ಎಂದು ಮೋದಿ ದೂರಿದರು.

ಇದನ್ನೂ ಓದಿ: AFSPA ಹಿಂಪಡೆಯುವುದೂ ಒಂದೇ, ದೇಶ ಕಾಯುವ ಸೈನಿಕರನ್ನು ಗಲ್ಲಿಗೇರಿಸುವುದೂ ಒಂದೇ: ಪ್ರಧಾನಿ ಮೋದಿ

ರಾಷ್ಟ್ರೀಯತೆ ಹಾಗೂ ಅಭಿವೃದ್ಧಿ ಒಟ್ಟೊಟ್ಟಿಗೆ ಕೊಂಡೊಯ್ಯುತ್ತಿದ್ದೇವೆ ಎಂಬುದು ಪ್ರಧಾನಿ ಮಾತು. "ನಾನು ಭಾರತ್​ ಮಾತಾಕಿ ಜೈ ಎನ್ನುವ ಘೋಷಣೆಯ ಜೊತೆಗೆ ಸ್ವಚ್ಛ ಭಾರತ ಯೋಜನೆ ಜಾರಿ ಮಾಡಿದೆ. ಇದು ರಾಷ್ಟ್ರೀಯತೆ ಅಲ್ಲವೇ? ಭಾರತ್​ ಮಾತಾಕಿ ಜೈ ಎಂದು ಬಡವರಿಗೆ ವಿಮೆ ಜಾರಿ ಮಾಡಿದ್ದೇವೆ. ಇದು ರಾಷ್ಟ್ರೀಯತೆ ಅಲ್ಲವೆ? ಬಡವರಿಗೆ ಬ್ಯಾಂಕ್​ ಖಾತೆ ತೆರೆಯುವ ಅವಕಾಶ ಮಾಡಿಕೊಟ್ಟಿದ್ದೇವೆ. ಎಲ್​ಪಿಜಿ ಸಿಲಿಂಡರ್​ ನೀಡಿದ್ದೇವೆ. ಇದು ರಾಷ್ಟ್ರೀಯತೆ ಅಲ್ಲವೇ? ನಮ್ಮ ಸರ್ಕಾರದಲ್ಲಿ ರಾಷ್ಟ್ರೀಯತೆ ಹಾಗೂ ಅಭಿವೃದ್ಧಿ ಒಟ್ಟೊಟ್ಟಿಗೆ ಕೊಂಡೊಯ್ಯುತಿದೆ," ಎಂದರು ಮೋದಿ.

First published:April 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ