Covid Vaccination: 100 ಕೋಟಿ ಡೋಸ್ ಕೋವಿಡ್-19 ಲಸಿಕೆ ವಿತರಣೆ; ಕೆಂಪು ಕೋಟೆಯಲ್ಲಿ ಹಾರಾಡಲಿದೆ 1,400 ಕೆಜಿ ತೂಕದ ತಿರಂಗ!

covid vaccine: ಕೋವಿನ್​ ಪೋರ್ಟಲ್​ನಲ್ಲಿ ಬುಧವಾರ ರಾತ್ರಿಯ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಇಲ್ಲಿಯವರೆಗೆ ಒಟ್ಟು 99.7 ಕೋಟಿ ಡೋಸ್​ ವ್ಯಾಕ್ಸಿನ್​​ ನೀಡಲಾಗಿದೆ. ದೇಶದ ಅರ್ಹ ಫಲಾನುಭವಿಗಳ ಪೈಕಿ ಶೇ. 75ರಷ್ಟು ಜನರಿಗೆ ಮೊದಲ ಡೋಸ್​ ನೀಡಲಾಗಿದೆ. ಶೇ.31ರಷ್ಟು ಜನರು ಎರಡೂ ಡೋಸ್ ವ್ಯಾಕ್ಸಿನ್​ ಪಡೆದುಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಮಹಾಮಾರಿ, ಹೆಮ್ಮಾರಿ, ಕ್ರೂರಿ, ರಕ್ಕಸ ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಿದ್ದ ಕೊರೋನಾ ವೈರಸ್​ (Corona Virus)ಸಾಂಕ್ರಾಮಿಕ ಪಿಡುಗಿನ ವಿರುದ್ಧ ಭಾರತ(India) ಎದೆಗುಂದದೆ, ದಿಟ್ಟತನದಿಂದ ಹೋರಾಟ ನಡೆಸಿದೆ. ಕೋವಿಡ್​-19 ಲಸಿಕೆ(Vaccine) ವಿತರಣೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಇಂದು ದೇಶದಲ್ಲಿ ಕರೊನಾ ವೈರಸ್​ ಲಸಿಕೆ ವಿತರಣೆ ಪ್ರಮಾಣ 100 ಕೋಟಿ ಗಡಿಯನ್ನ ದಾಟಿದೆ. ಕಳೆದ ಜನವರಿ 16ರಂದು ಮೊದಲ ಬಾರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi)ಯವರು ಕೋವಿಡ್-19 ಲಸಿಕೆ ವಿತರಣೆ(Vaccination drive) ಅಭಿಯಾನಕ್ಕೆ ಚಾಲನೆ ನೀಡಿದ್ದರು. 9 ತಿಂಗಳ ಬಳಿಕ ಲಸಿಕೆ ವಿತರಣೆ ಪ್ರಮಾಣ ಇಂದು 100 ಕೋಟಿ ಗಡಿಯನ್ನ ದಾಟಿದೆ. ಸೆಪ್ಟೆಂಬರ್(September)​ ತಿಂಗಳಿನಲ್ಲಿ ಅತಿ ಹೆಚ್ಚು ಡೋಸ್ ವ್ಯಾಕ್ಸಿನ್​ ವಿತರಣೆ ಮಾಡಲಾಗಿದೆ. ಇತ್ತೀಚೆಗೆ ಮೋದಿ ಜನ್ಮದಿನ ಹಿನ್ನೆಲೆ ಒಂದೇ ದಿನ ಬರೋಬ್ಬರಿ 2.25 ಕೋಟಿ ಡೋಸ್​ ಲಸಿಕೆ ಹಾಕಿ ಹೊಸ ದಾಖಲೆ ನಿರ್ಮಿಸಿತ್ತು.

ಭಾರತದಲ್ಲಿ 100 ಕೋಟಿ ಲಸಿಕೆ ವಿತರಣೆ

ಕೋವಿನ್​ ಪೋರ್ಟಲ್​ನಲ್ಲಿ ಬುಧವಾರ ರಾತ್ರಿಯ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ  ಒಟ್ಟು 99.7 ಕೋಟಿ ಡೋಸ್​ ವ್ಯಾಕ್ಸಿನ್​​ ನೀಡಲಾಗಿತ್ತು. ಇಂದು ಬೆಳಗ್ಗೆ 10ರ ವೇಳೆಗೆ 100 ಕೋಟಿ ಡೋಸ್​ ವ್ಯಾಕ್ಸಿನ್​ ವಿತರಣೆ ಸಂಪೂರ್ಣವಾಗಿದ್ದು, ಭಾರತ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ದೇಶದ ಅರ್ಹ ಫಲಾನುಭವಿಗಳ ಪೈಕಿ ಶೇ. 75ರಷ್ಟು ಜನರಿಗೆ ಮೊದಲ ಡೋಸ್​ ನೀಡಲಾಗಿದೆ. ಶೇ.31ರಷ್ಟು ಜನರು ಎರಡೂ ಡೋಸ್ ವ್ಯಾಕ್ಸಿನ್​ ಪಡೆದುಕೊಂಡಿದ್ದಾರೆ.

ಇದನ್ನು ಓದಿ: ಮಹಿಳೆಯರಿಗಿಂತ ಪುರುಷರಿಗೇ ಹೆಚ್ಚು ಲಸಿಕೆ ನೀಡಲಾಗಿದ್ಯಾ? ಅಸಮಾನತೆ ಬಗ್ಗೆ ಏರುತ್ತಿದೆ ಧ್ವನಿ

ಹಾರಾಡಲಿದೆ 1, 400 ಕೆಜಿ ತೂಕದ ತಿರಂಗ!

ವ್ಯಾಕ್ಸಿನ್​ ತೆಗೆದುಕೊಳ್ಳಲು ಹಿಂದೇಟು ಹಾಕಬೇಡಿ ಎಂದು ಕೇಂದ್ರ ಆರೋಗ್ಯ ಸಚಿವ ಮುನ್ಸುಖ್​​ ಮಾಂಡೋವಿಯಾ ಮನವಿ ಮಾಡಿದ್ದಾರೆ. ಅರ್ಹ ಫಲಾನುಭವಿಗಳು ತಡ ಮಾಡದೇ ವ್ಯಾಕ್ಸಿನ್​ ಹಾಕಿಸಿಕೊಳ್ಳಬೇಕು. ಆ ಮೂಲಕ ಐತಿಹಾಸಿಕ ಪ್ರಯಾಣಕ್ಕೆ ತಮ್ಮ ಕೊಡಗುಯನ್ನ ನೀಡಬೇಕು ಎಂದು ಹೇಳಿದ್ದಾರೆ. 100 ಕೋಟಿ ಡೋಸ್​ ಲಸಿಕೆ ವಿತರಣೆ ಹಿನ್ನಲೆ ದೆಹಲಿಯ ಕೆಂಪು ಕೋಟೆಯಲ್ಲಿ ಸಂಭ್ರಮಾಚರಣೆಯನ್ನ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಗಾಯಕ ಕೈಲಾಶ್​ ಖೇರ್​ ಅವರ ಹಾಡನ್ನು ಬಿಡುಗಡೆಗೊಳಿಸಲಿದ್ದಾರೆ. ಬಳಿಕ 1,400 ಕೆಜಿ ತೂಕದ ಅತಿದೊಡ್ಡ ರಾಷ್ಟ್ರಧ್ವಜವನ್ನು ಹಾರಿಸುವ ನಿರೀಕ್ಷೆಯಿದೆ.

ಪ್ರತಿ ಸೆಕೆಂಡಿಗೆ 700 ಲಸಿಕೆ ವಿತರಣೆ

`ನಾವು ಪ್ರತಿ ಸೆಕೆಂಡಿಗೆ 700 ಲಸಿಕೆಗಳನ್ನು ನೀಡುತ್ತಿದ್ದೇವೆ. ಹೀಗಾಗಿಯೇ ಇಷ್ಟು ಬೇಗ 100 ಕೋಟಿ ಗಡಿ ದಾಟಲು ಸಹಾಯವಾಯಿತು. 100 ಕೋಟಿಯ ಡೋಸ್​ ಪಡೆದುಕೊಂಡ ಫಲಾನುಭವಿ ಯಾರು ಎಂದು ಕಂಡುಹಿಡಿಯುವುದು ಕಷ್ಟ’ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಓ ಆರ್​​.ಎಸ್​​. ಶರ್ಮಾ ತಿಳಿಸಿದ್ದಾರೆ. ಇಂದು ಆದಷ್ಟು ಎಲ್ಲಾ ಲಸಿಕಾ ಕೇಂದ್ರಗಳಿಗೆ ಆಯಾ ಸ್ಥಳೀಯ ಬಿಜೆಪಿ ನಾಯಕರು ಭೇಟಿ ನೀಡುವಂತೆ ಬಿಜೆಪಿ ನಾಯಕರಿಗೆ ಸೂಚಿಸಲಾಗಿದೆ.

ಇದನ್ನು ಓದಿ: 2 ರಿಂದ 18 ವರ್ಷದೊಳಗಿನ ಮಕ್ಕಳ ಕೋವ್ಯಾಕ್ಸಿನ್ ಲಸಿಕೆಗೆ SEC ಗ್ರೀನ್ ಸಿಗ್ನಲ್

100 ಕೋಟಿ ಲಸಿಕೆ ಕೊಟ್ಟ ಎರಡನೇ ದೇಶ ಭಾರತ

ಇಡೀ ವಿಶ್ವಕ್ಕೆ ಕೊರೋನಾ ಹಂಚಿದ್ದ ಚೀನಾದಲ್ಲಿ ಈಗಾಗಲೇ 100 ಕೋಟಿ ಡೋಸ್​ ಲಸಿಕೆಯನ್ನ ವಿತರಿಸಲಾಗಿದೆ. 100 ಕೋಟಿ ಡೋಸ್​ ಲಸಿಕೆ ವಿತರಿಸಿದ ಎರಡನೇ ರಾಷ್ಟ್ರ ಎಂಬ ಹೆಗ್ಗಳಿಗೆ ಭಾರತಕ್ಕೆ ಸೇರಿದೆ. ಕಳೆದ ತಿಂಗಳು ಮೋದಿ ಜನ್ಮದಿನದಂದು ಒಂದೇ ದಿನ 2.5 ಕೋಟಿ ಡೋಸ್​ ಲಸಿಕೆಗಳನ್ನ ನೀಡಲಾಗಿತ್ತು. ಕೋವಿಡ್​ ವ್ಯಾಕ್ಸಿನ್​ ಡ್ರೈವ್​ಗೆ ಚಾಲನೆ ನೀಡುವ ಮುನ್ನ ಪ್ರಧಾನಿ ಮೋದಿ ಡಿಸೆಂಬರ್​ ವೇಳೆಗೆ 100 ಕೋಟಿ ಡೋಸ್​ ವ್ಯಾಕ್ಸಿನ್​ ನೀಡುವ ಭರವಸೆಯನ್ನು ನೀಡಿದ್ದರು . ಅದರಂತೆ ಅಕ್ಟೋಬರ್​​ ವೇಳೆಗೆ 100 ಕೋಟಿ ವ್ಯಾಕ್ಸಿನ್​ ವಿತರಣೆಯಾಗಿದೆ. ಆದಷ್ಟು ಬೇಗ ಉಳಿದವರಿಗೂ ವ್ಯಾಕ್ಸಿನ್​​ ಒದಗಿಸುವ ಕೆಲಸಗಳು ನಡೆಯುತ್ತಿವೆ. ಮಕ್ಕಳಿಗೆ ಹಾಕುವ ವ್ಯಾಕ್ಸಿನ್​ ಬಗ್ಗೆ ಅಂತಿಮ ಹಂತದ ಸಂಶೋಧನೆಗಳು ನಡೆಯುತ್ತಿವೆ. ಇದಾದ ಬಳಿಕ ಮಕ್ಕಳಿಗೂ ಆದಷ್ಟು ಬೇಗ ವ್ಯಾಕ್ಸಿನ್​ ಸಿಗಲಿದೆ.
Published by:Vasudeva M
First published: