RIP Pervez Musharraf: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

 ಪಾಕಿಸ್ತಾನದ (Pakistan) ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (Pervez Musharraf) ಇಂದು  (ಜೂನ್ 10) ದುಬೈನಲ್ಲಿ (Dubai) ನಿಧನರಾಗಿದ್ದಾರೆ ಎಂದು ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. 

ಪರ್ವೇಜ್ ಮುಷರಫ್‌

ಪರ್ವೇಜ್ ಮುಷರಫ್‌

  • Share this:
ಪಾಕಿಸ್ತಾನ (ಜೂನ್ 10): ಪಾಕಿಸ್ತಾನದ (Pakistan) ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (Pervez Musharraf) ಇಂದು  (ಜೂನ್ 10) ದುಬೈನಲ್ಲಿ (Dubai) ನಿಧನರಾಗಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಪರ್ವೇಜ್ ಮುಷರಫ್ ಅವರು ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಮುಂಜಾನೆ ಅವರನ್ನು ದುಬೈನ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. 2007ರಲ್ಲಿ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. 2013ರಲ್ಲಿ ಅವರ ವಿರುದ್ಧ ಕೇಸ್ ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ಪಾಕಿಸ್ತಾನದ ಪೇಶಾವರ ಹೈಕೋರ್ಟ್ ನ ವಿಶೇಷ ಪೀಠ ಮುಷರಫ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು.

ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಮುಷರಫ್ :

ಇನ್ನು, ಪರ್ವೇಜ್ ಮುಷರಫ್ ಅವರು 1999 ರಿಂದ 2008ರ ವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ಪರ್ವೇಜ್ ಅವರ ಮೇಲೆ 2007ರಲ್ಲಿ ಪಾಕಿಸ್ತಾನದಲ್ಲಿ ಸಾಂವಿಧಾನಿಕ ತುರ್ತು ಪರಿಸ್ಥಿತಿ ಬಲವಂತವಾಗಿ ಹೇರಿಕೆ, ದೇಶದ್ರೋಹ ಎಸಗಿದ ಆರೋಪವಿತ್ತು. ಈ ಸಂಬಂಧ ನವೆಂಬರ್ 19ರಂದು ವಿಚಾರಣೆ ನಂತರದಲ್ಲಿ ಶಿಕ್ಷೆ ಪ್ರಮಾಣವನ್ನು ಕಾಯ್ದಿರಿಸಲಾಗಿತ್ತು, ಅದರಂತೆ ಡಿಸೆಂಬರ್ 17ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಾಗಿತ್ತು. ಸದ್ಯ ಅನಾರೋಗ್ಯ ಪೀಡಿತರಾಗಿರುವ ಮುಷರಫ್ ಅವರು ದುಬೈನಲ್ಲಿ ನೆಲೆಸಿದ್ದರು.

ದೆಹಲಿ ವಿಶ್ವವಿದ್ಯಾಲಯದಲ್ಲಿ ಕಲಿತಿದ್ದ ಪಾಕ್ ಮಾಜಿ ಅಧ್ಯಕ್ಷ:

ಪರ್ವೇಜ್ ಮುಷರಫ್ ಅವರು 1943 ಆಗಷ್ಟ್ 11ರಂದು ಸೈಯದ್ ಮುಷಾರಫುದ್ದೀನ್ ಮತ್ತು ಬೇಗಂ ಜರೀನ್ ಅವರ ಪುತ್ರರಾಗಿ ದೆಹಲಿಯಲ್ಲಿ ಜನಿಸಿದರು. ನಂತರದಲ್ಲಿ ದೆಹಲಿಯ ಇಂದ್ರಪ್ರಸ್ಥ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮುಗಿಸಿದ್ದರು. ಅಲ್ಲದೇ ಆ ಸಮಯದಲ್ಲಿ ಬ್ರಿಟಿಷ್​ ಆಡಳಿತದಲ್ಲಿ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರದಲ್ಲಿ ಅಕೌಂಟೆಟ್ ಆಗಿ ಕಾರ್ಯ ನಿರ್ವಹಿಸಿದ್ದರು.

ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಪರ್ವೇಜ್ ಮುಷರಫ್:

ಪಾಕಿಸ್ತಾನ(Pakistan)ದ ಮಾಜಿ ಅಧ್ಯಕ್ಷ ಜನರಲ್ (ನಿವೃತ್ತ) ಪರ್ವೇಜ್ ಮುಷರಫ್(Pervez Musharraf) ಅವರನ್ನು ದುಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ವರದಿಗಳ ಪ್ರಕಾರ, ಮುಷರಫ್ ಹೃದಯ ಮತ್ತು ರಕ್ತದೊತ್ತಡದ ಸಮಸ್ಯೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಪಾಕಿಸ್ತಾನ ಟುಡೆ ಪತ್ರಿಕೆ ಇತ್ತೀಚೆಗೆ ವರದಿ ಮಾಡಿತ್ತು.

ಇದನ್ನೂ ಓದಿ: Covid-19: ಜನವರಿ ನಂತರ ಅತ್ಯಧಿಕ ಪಾಸಿಟಿವ್ ಪ್ರಕರಣ, ಬೆಂಗಳೂರಲ್ಲೂ ಒಂದೇ ದಿನ 458 ಕೇಸ್

ದುಬೈನಲ್ಲಿ ವಾಸಿಸುತ್ತಿದ್ದ ಪರ್ವೇಜ್:

ಪಾಕ್​ ನ ಮಾಜಿ ಅಧ್ಯಕ್ಷರಾದ ಪರ್ವೇಜ್ ಮುಷರಫ್ ಅವರು 2016 ರಿಂದ ಅನಾರೋಗ್ಯದ ಕಾರಣದಿಂದಾಗಿ ವೈದ್ಯಕೀಯ ಚಿಕಿತ್ಸೆಗೆಂದು ದುಬೈನಲ್ಲಿ ವಾಸಿದುತ್ತಿದ್ದರು. ಇದೇ ವೇಳೆ ಅವರ ಮೇಲೆ ಪಾಕಿಸ್ತಾನದಲ್ಲಿ ದೇಶದ್ರೋಹದ ಕೇಸ್​ ದಾಖಲಾಗಿತ್ತು. ಹೀಗಾಗಿ ಮುಷರಫ್ ಅವರಿಗೆ ಪಾಕ್​ ಕೋರ್ಟ್ ಅವರಲ್ಲಿ ಸ್ವದೇಶಕ್ಕೆ ಮರಳುವಂತೆ ಅನೇಖ ಬಾರಿ ನೋಟಿಸ್ ನೀಡಿತ್ತು.

ಇದನ್ನೂ ಓದಿ: Pervez Musharraf: ಪ್ರಧಾನಿಯಿಂದ ಅಧಿಕಾರ ಕಸಿದುಕೊಂಡಿದ್ದ ಮುಷರಫ್​, ಸಾಯೋವರೆಗೂ ವಿವಾದಗಳಲ್ಲೇ ಬದುಕಿದ್ದ ಪಾಕ್​ ರೂಲರ್!​

ಪಾಕ್​ ನಲ್ಲಿ ಮಿಲಿಟರಿ ಆಡಳಿತ ತಂದಿದ್ದರು:

ಪಾಕಿಸ್ಥಾನ ಇತಿಹಾಸದಲ್ಲಿ ಪರ್ವೇಜ್ ಮುಷರಫ್ ಆಡಳಿತ ಒಂದು ಅಚ್ಚಳಿಯದ ಕೆಲಸವನ್ನು ಮಾಡಿತ್ತು ಎಂದರೂ ತಪ್ಪಾಗಲಾರದು. ಹೌದು, ಪರ್ವೇಜ್ ಮುಷರಫ್ ಮೊದಲು ಪಾಕಿಸ್ತಾನದ ಮಿಲಿಟರಿ ಜನರಲ್‌ ಆಗಿದ್ದರು. ಆದರೆ ನಂತರದಲ್ಲಿ ಬಲವಂತದಿಂದ ಪ್ರಧಾನಿ ಕೈಯಿಂದ ಅಧಿಕಾರ ಕಿತ್ತುಕೊಂಡಿದ್ದರು. ಇದಾದ ಬಳಿಕ ಪಾಕಿಸ್ತಾನದ ಇತಿಹಾಸದಲ್ಲಿ ಮೊದಲ ಬಾರಿಗೆ ಮಿಲಿಟರಿ ಆಡಳಿತವನ್ನು ಮುಷರಫ್ ಜಾರಿಗೆ ತಂದಿದ್ದರು.

ಇದೊಂದು ಪಾಕ್​ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದಿದೆ. ಇದಾದ ನಂತರ ಅವರು ತಮ್ಮ ಅಧ್ಯಕ್ಷೀಯ ಸ್ಥಾನವನ್ನು ಕಳೆದುಕೊಂಡರು. ಬಳಿಕ ಅನಾರೋಗ್ಯ ಕಾರಣ ತಿಳಿಸಿ ದುಬೈನಲ್ಲಿ ನೆಲೆಸಿದ್ದರು. ಜೊತೆಗೆ ಅಲ್ಲಿಯೇ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
Published by:shrikrishna bhat
First published: