ಇಂದು ಸಿಜೆಐ ಜೊತೆ ಜಡ್ಜ್​ಗಳ ಮಾತುಕತೆ ಸಾಧ್ಯತೆ: ಬಗೆಹರಿಯುತ್ತಾ ಸುಪ್ರೀಂ ಕೋರ್ಟ್​ ಭಿನ್ನಮತ..?


Updated:January 14, 2018, 12:10 PM IST
ಇಂದು ಸಿಜೆಐ ಜೊತೆ ಜಡ್ಜ್​ಗಳ ಮಾತುಕತೆ ಸಾಧ್ಯತೆ: ಬಗೆಹರಿಯುತ್ತಾ ಸುಪ್ರೀಂ ಕೋರ್ಟ್​ ಭಿನ್ನಮತ..?

Updated: January 14, 2018, 12:10 PM IST
-ನ್ಯೂಸ್ 18 ಕನ್ನಡ

ನವದೆಹಲಿ(ಜ.14): ಸವೋಚ್ಛ ನ್ಯಾಯಾಲಯದಲ್ಲಿ ಸದ್ಯ ಉಂಟಾಗಿರುವ ಬಿಕ್ಕಟ್ಟನ್ನು ತುರ್ತಾಗಿ ಬಗೆಹರಿಸಲೇಬೇಕೆಂದು ಸುಪ್ರೀಕೋರ್ಟ್‌ನ ಬಾರ್ ಅಸೋಸಿಯೇಷನ್‌ ಹಾಗೂ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿರ್ಧರಿಸಿದೆ.

ಪ್ರಕರಣಗಳ ಹಂಚಿಕೆ ಸೇರಿದಂತೆ ಕೆಲವು ಆಡಳಿತಾತ್ಮಕ ವಿಚಾರಗಳ ಸಂಬಂಧ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿರುದ್ಧ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಎರಡು ದಿನಗಳ ಹಿಂದಷ್ಟೇ ಸುದ್ದಿಗೋಷ್ಠಿ ನಡೆಸುವ ಮೂಲಕ ಬಹಿರಂಗ ಅತೃಪ್ತಿ ಹೊರ ಹಾಕಿದ್ದರು. ಸಮಸ್ಯೆ ಬಗೆಹರಿಸಲು ಇಂದು ಸಮಿತಿ ಸದಸ್ಯರು ಸಿಜೆಐ ಹಾಗೂ ನಾಲ್ವರು ನ್ಯಾಯ ಮೂರ್ತಿಗಳನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಇಷ್ಟೇ ಅಲ್ಲದೇ ಉಳಿದ ನ್ಯಾಯಮೂರ್ತಿಗಳನ್ನ ಸಮಿತಿ ಸದ್ಯರು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಸುಪ್ರೀಂ ಕೋರ್ಟ್​ನ ನ್ಯಾಯಮೂರ್ತಿಗಳು ಬಹಿರ.ಗವಾಗಿ ಸಿಜೆಐ ವಿರುದ್ಧ ಬಂಡಾಯವೆದ್ದಿದ್ದು, ನ್ಯಾಯಾಂಗದ ಇತಿಹಾಸದಲ್ಲಿ ಇದೇ ಮೊದಲಾಗಿತ್ತು. ಇದೇ ಕಾರಣದಿಂದಾಗಿ ಈ ವಿಚಾರ ವ್ಯಾಪಕ ಸದ್ದು ಮಾಡಿತ್ತು.
First published:January 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ