ಇಂದು ಕೂಡ ಮುಂದುವರೆಯಲಿದೆ ರಾಹುಲ್ ಗಾಂಧಿ ನೇತೃತ್ವದ ಕೃಷಿ ಉಳಿಸಿ ಯಾತ್ರೆ

ಈ ರೀತಿ ರೈತಪರವಾದ ವ್ಯವಸ್ಥೆ ನಾಶವಾಗಲು‌ ಕಾಂಗ್ರೆಸ್ ಬಿಡುವುದಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಈ ರೈತ ವಿರೋಧಿ ಕಾನೂನುಗಳನ್ನು ತೆಗೆದು ಹಾಕಲಾಗುವುದು. ಈ ಕರಾಳ ಕಾನೂನುಗಳನ್ನು ಕಸದ ಬುಟ್ಟಿಗೆ ಎಸೆಯಲಾಗುವುದು ಎಂದು ರಾಹುಲ್ ಹೇಳಿದ್ದರು.

ರಾಹುಲ್ ಗಾಂಧಿ.

ರಾಹುಲ್ ಗಾಂಧಿ.

  • Share this:
ನವದೆಹಲಿ(ಅ.5): ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಿರಿಯ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ‘ಖೇತಿ ಬಚಾವೋ ಯಾತ್ರಾ’ (ಕೃಷಿ ಉಳಿಸಿ ಯಾತ್ರೆ) ಪಂಜಾಬ್​ನಲ್ಲಿ ಇಂದು ಕೂಡ ನಡೆಯಲಿದೆ. ಭಾನುವಾರ ಪಂಜಾಬ್​ನಲ್ಲಿ ರಾಹುಲ್ ಗಾಂಧಿ ‘ಖೇತಿ ಬಚಾವೋ ಯಾತ್ರಾ’ (ಕೃಷಿ ಉಳಿಸಿ ಯಾತ್ರೆ) ಉದ್ಘಾಟಿಸಿದ್ದರು. ಆ ಯಾತ್ರೆ ಇಂದು ಕೂಡ ಮುಂದುವರೆಯಲಿದೆ. ಬೆಳಿಗ್ಗೆ 11 ಗಂಟೆಗೆ ಪಂಜಾಬಿನ ಸನ್ಪುರದ ಬರ್ನಾಲಾ ಚೌಕದಿಂದ ಯಾತ್ರೆ ಆರಂಭವಾಗಲಿದೆ‌.  ಮಧ್ಯಾಹ್ನ 12 ಗಂಟೆಗೆ ಸುನ್ಪುರದ ಭಾವನಿಘಡದಲ್ಲಿ ಯಾತ್ರೆಯ ಅಂಗವಾಗಿ ಸಾರ್ವಜನಿಕ‌ ಸಭೆಯನ್ನು ಆಯೋಜಿಸಲಾಗಿದೆ. ರಾಹುಲ್ ಗಾಂಧಿ ಅವರು ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ. ಬಳಿಕ ಮಧ್ಯಾಹ್ನ 1 ಗಂಟೆಗೆ ಸುನ್ಪುರದ ಭಾವನಿಘಡದಿಂದ ಟ್ರ್ಯಾಕ್ಟರ್ ಯಾತ್ರೆ ಆರಂಭಗೊಳ್ಳಲಿದೆ. ನಿನ್ನೆ ಕೂಡ ರಾಹುಲ್ ಗಾಂಧಿ ಟ್ರ್ಯಾಕ್ಟರ್ ಜಾಥಾ ನಡೆಸಿದ್ದರು. ಸನ್ಪುರ ಜಿಲ್ಲೆಯ ಪಾಟಿಯಾಲವರೆಗೂ ಟ್ರ್ಯಾಕ್ಟರ್ ಜಾಥಾ ನಡೆಯಲಿದ್ದು, ಅಲ್ಲಿ ಸಂಜೆ 4ಕ್ಕೆ ಬೃಹತ್ ಸಮಾವೇಶ ನಡೆಸಲಾಗುವುದು. ಸಮಾವೇಶ ಉದ್ದೇಶಿಸಿ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ.

ಕೆ. ಕಲ್ಯಾಣ್ ಹೆಂಡತಿ ಅಶ್ವಿನಿಗೆ ಮನೆ ಬಾಡಿಗೆ ಕೊಟ್ಟಿದ್ದ ಮಂತ್ರವಾದಿ ಶಿವಾನಂದ ವಾಲಿ ಯಾರು?

ನಿನ್ನೆ ಟ್ರ್ಯಾಕ್ಟರ್ ರ‍್ಯಾಲಿ ಉದ್ಘಾಟಿಸಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು, ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ), ಆಹಾರ ಧಾನ್ಯ ಖರೀದಿ ಮತ್ತು ಸಗಟು ಮಾರುಕಟ್ಟೆಗಳು ದೇಶದ ಮೂರು ಆಧಾರಸ್ತಂಭಗಳು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ವ್ಯವಸ್ಥೆಯನ್ನೇ ನಾಶ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ರೀತಿ ರೈತಪರವಾದ ವ್ಯವಸ್ಥೆ ನಾಶವಾಗಲು‌ ಕಾಂಗ್ರೆಸ್ ಬಿಡುವುದಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಈ ರೈತ ವಿರೋಧಿ ಕಾನೂನುಗಳನ್ನು ತೆಗೆದು ಹಾಕಲಾಗುವುದು. ಈ ಕರಾಳ ಕಾನೂನುಗಳನ್ನು ಕಸದ ಬುಟ್ಟಿಗೆ ಎಸೆಯಲಾಗುವುದು ಎಂದು ರಾಹುಲ್ ಹೇಳಿದ್ದರು.

ಇದಲ್ಲದೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಯ ಮೂರು ತಿದ್ದುಪಡಿಗಳ ಅನುಷ್ಠಾನ ಆಗುವುದನ್ನು ತಡೆಯಲು ಕಾಂಗ್ರೆಸ್ ಆಡಳಿತದ ರಾಜ್ಯಗಳು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
Published by:Latha CG
First published: