• Home
  • »
  • News
  • »
  • national-international
  • »
  • Sabarimala: ತೆರಿಗೆ ಹಣ ಉಳಿಸಲು ಕೇರಳ ರಿಜಿಸ್ಟ್ರೇಶನ್ ವಾಹನಗಳಲ್ಲಿ ಶಬರಿಮಲೆಗೆ ತೆರಳುತ್ತಿರುವ ಮಂಗಳೂರಿನ ಅಯ್ಯಪ್ಪ ಭಕ್ತರು

Sabarimala: ತೆರಿಗೆ ಹಣ ಉಳಿಸಲು ಕೇರಳ ರಿಜಿಸ್ಟ್ರೇಶನ್ ವಾಹನಗಳಲ್ಲಿ ಶಬರಿಮಲೆಗೆ ತೆರಳುತ್ತಿರುವ ಮಂಗಳೂರಿನ ಅಯ್ಯಪ್ಪ ಭಕ್ತರು

ಶಬರಿಮಲೆಗೆ ತೆರಳುತ್ತಿರುವ ಭಕ್ತರು

ಶಬರಿಮಲೆಗೆ ತೆರಳುತ್ತಿರುವ ಭಕ್ತರು

ಮಂಗಳೂರು, ಉಳ್ಳಾಲ ಹಾಗೂ ಸುತ್ತಮುತ್ತಲಿನ ಅಯ್ಯಪ್ಪ ವೃತಧಾರಿಗಳು ಕರ್ನಾಟಕ – ಕೇರಳ ಗಡಿಯ ತಲಪಾಡಿಯವರೆಗೆ ಪ್ರಯಾಣಿಸಿ ನಂತರ ಕೇರಳ ರಿಜಿಸ್ಟ್ರೇಶನ್ ಇರುವ ಗಾಡಿಯಲ್ಲಿ ಶಬರಿಮಲೆಗೆ ತೆರಳುತ್ತಿದ್ದಾರೆ. ಇದು ಭಕ್ತರಿಗೆ ಸಾವಿರಾರು ರೂಪಾಯಿ ಉಳಿಸಲು ನೆರವಾಗಿದೆ.

  • Trending Desk
  • 4-MIN READ
  • Last Updated :
  • Mangalore, India
  • Share this:

    ಇತರ ರಾಜ್ಯಗಳ ರಿಜಿಸ್ಟ್ರೇಶನ್ ಇರುವ ವಾಹನಗಳಿಗೆ ಕೇರಳ ಸರಕಾರವು ಹೆಚ್ಚಿನ ತೆರಿಗೆ ವಿಧಿಸುತ್ತಿರುವುದರಿಂದ ಮಂಗಳೂರಿನ ಸಾವಿರಾರು ಅಯ್ಯಪ್ಪ ಭಕ್ತರು ಕೇರಳ ರಿಜಿಸ್ಟ್ರೇಶನ್ ಇರುವ ವಾಹನಗಳಲ್ಲಿ ಶಬರಿಮಲೆಗೆ ತೆರಳುತ್ತಿದ್ದಾರೆ. ಮಂಗಳೂರು, ಉಳ್ಳಾಲ ಹಾಗೂ ಸುತ್ತಮುತ್ತಲಿನ ಅಯ್ಯಪ್ಪ ವೃತಧಾರಿಗಳು ಕರ್ನಾಟಕ – ಕೇರಳ ಗಡಿಯ ತಲಪಾಡಿಯವರೆಗೆ ಪ್ರಯಾಣಿಸಿ ನಂತರ ಕೇರಳ ರಿಜಿಸ್ಟ್ರೇಶನ್ ಇರುವ ಗಾಡಿಯಲ್ಲಿ ಶಬರಿಮಲೆಗೆ ತೆರಳುತ್ತಿದ್ದಾರೆ. ಇದು ಭಕ್ತರಿಗೆ ಸಾವಿರಾರು ರೂಪಾಯಿ ಉಳಿಸಲು ನೆರವಾಗಿದೆ.


    ತೆರಿಗೆ ಶುಲ್ಕ ಹೆಚ್ಚಿಸಿರುವ ಕೇರಳ ಸರಕಾರ


    ದಕ್ಷಿಣ ಕನ್ನಡ ಟ್ಯಾಕ್ಸಿಮೆನ್ಸ್ ಹಾಗೂ ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ದಿನೇಶ್ ಕಂಪಲ ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದು ತಾವು ಹೊಂದಿರುವ 12 ಸೀಟಿನ ಮ್ಯಾಕ್ಸಿಕ್ಯಾಬ್‌ಗೆ ಆಲ್ ಇಂಡಿಯಾ ಅನುಮೋದನೆಯನ್ನು ಪಡೆಯಲು ವರ್ಷಕ್ಕೆ ರೂ 1.35 ಲಕ್ಷ ಖರ್ಚುಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಎಲ್ಲಾ ಸಾರ್ವಜನಿಕ ಸಾರಿಗೆಗಳಿಗೆ ಆಸನಗಳನ್ನು ಸಂಖ್ಯೆಯನ್ನು ಆಧರಿಸಿ ತೆರಿಗೆ ವಿಧಿಸಲಾಗುತ್ತದೆ ಎಂದು ಹೇಳುವ ದಿನೇಶ್ ಮೊದಲೆಲ್ಲಾ ಶಬರಿಮಲೆಗೆ ಭಕ್ತರನ್ನು ಕರೆದೊಯ್ಯುವ ಕರ್ನಾಟಕ ರಿಜಿಸ್ಟ್ರೇಶನ್ ಇರುವ ಮ್ಯಾಕ್ಸಿಕ್ಯಾಬ್ ಆಲ್ ಇಂಡಿಯಾ ಪರವಾನಗಿಯನ್ನು ಹೊಂದಿದ್ದರೂ ಕೇರಳಕ್ಕೆ ಪ್ರವೇಶಿಸಿದೊಡನೆ ಒಂದು ಬಾರಿ ಪ್ರಯಾಣಿಸಲು ರೂ 800 ಅನ್ನು ಪಾವತಿಸಬೇಕಾಗಿತ್ತು, ಇದೀಗ ಕೇರಳ ಸರಕಾರ ಒಂದು ಬಾರಿ ಪ್ರಯಾಣಿಸಲು ಪ್ರತಿ ವಾಹನಕ್ಕೆ ರೂ 8,000 ತೆರಿಗೆ ವಿಧಿಸುತ್ತಿದೆ ಎಂದು ತಿಳಿಸಿದ್ದಾರೆ.


    ಇದನ್ನೂ ಓದಿ: Sabarimala Temple: ಶಬರಿಮಲೆ ದೇವಸ್ಥಾನದ ಬಳಿ ವಿಮಾನ ನಿಲ್ದಾಣ ನಿರ್ಮಿಸಲು 2,570 ಎಕರೆ ಭೂಸ್ವಾಧೀನಕ್ಕೆ ಒಪ್ಪಿಗೆ


    ಆಸನಗಳ ಸಂಖ್ಯೆಗೆ ಅನುಗುಣವಾಗಿ ತೆರಿಗೆ ವಿಧಿಸುತ್ತಾರೆ


    ಹೀಗಾಗಿ ಎಲ್ಲಾ ಸಾರ್ವಜನಿಕ ವಾಹನಗಳು ಕೇರಳ ಪ್ರವೇಶಿಸುತ್ತಿದ್ದಂತೆಯೇ ವಾಹನಗಳಲ್ಲಿರುವ ಸೀಟಿನ ಆದ್ಯತೆಗೆ ಅನುಸಾರವಾಗಿ ದೊಡ್ಡ ಮೊತ್ತದ ಹೆಚ್ಚುವರಿ ತೆರಿಗೆಯನ್ನು ಪಾವತಿಸಬೇಕಾಗಿದೆ ಎಂದು ತಿಳಿಸಿದ್ದಾರೆ.


    ದಸರಾ ಸಮಯದಲ್ಲಿ ತೆರಿಗೆ ವಿನಾಯಿತಿ ನೀಡುವ ಕರ್ನಾಟಕ ಸರಕಾರ


    ದಸರಾ ಸಮಯದಲ್ಲಿ ಮೈಸೂರಿಗೆ ಆಗಮಿಸುವ ಇತರ ರಾಜ್ಯಗಳ ವಾಹನಗಳಿಗೆ ಕರ್ನಾಟಕ ಸರಕಾರ ತೆರಿಗೆ ವಿನಾಯಿತಿಯನ್ನು ನೀಡಿದೆ. ಇದೇ ರೀತಿ ಕೇರಳ ಸರಕಾರ ಕೂಡ ಶಬರಿಮಲೆಗೆ ತೆರಳುವ ಅನ್ಯ ರಾಜ್ಯಗಳ ವಾಹನಗಳಿಂದ ಹೆಚ್ಚುವರಿ ತೆರಿಗೆ ಸಂಗ್ರಹಿಸುವುದನ್ನು ನಿಲ್ಲಿಸಬೇಕು ಎಂದು ದಿನೇಶ್ ಹೇಳಿದ್ದಾರೆ.


    ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ


    ನಮ್ಮ ಅಸೋಸಿಯೇಶನ್ ಈ ಕುರಿತು ಹಲವಾರು ಮನವಿಗಳನ್ನು ಕೇರಳ ಸರಕಾರಕ್ಕೆ ಸಲ್ಲಿಸಿದ್ದೇವೆ ಹಾಗೂ ಕಾಸರಗೋಡು ಜಿಲ್ಲೆಯ ಅಧಿಕಾರಿಗಳಿಗೆ ಈ ವಿಷಯದ ಕುರಿತು ಹಲವಾರು ಬಾರಿ ಪ್ರಸ್ತಾವಿಸಲಾಗಿದೆ ಎಂದು ತಿಳಿಸಿದ್ದಾರೆ.


    ಬುಕ್ಕಿಂಗ್‌ಗಳಲ್ಲಿ ತೀವ್ರ ಇಳಿಕೆ


    ಈ ಮೊದಲೆಲ್ಲಾ ದಕ್ಷಿಣ ಕನ್ನಡದಲ್ಲಿರುವ ಎಲ್ಲಾ ಟೂರಿಸ್ಟ್ ವಾಹನಗಳು ಶಬರಿಮಲೆಗೆ ತೆರಳಲು ಕನಿಷ್ಟ ಎರಡು ಬುಕ್ಕಿಂಗ್‌ಗಳನ್ನು ಪಡೆದುಕೊಳ್ಳುತ್ತಿದ್ದವು. ಇದೀಗ ಬುಕ್ಕಿಂಗ್‌ಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆ ಕಂಡುಬಂದಿದ್ದು, ಮಂಗಳೂರಿನ ಭಕ್ತರು ರೈಲಿನಲ್ಲಿ ಪ್ರಯಾಣಿಸುತ್ತಿದ್ದು ಇನ್ನು ಕೆಲವರು ತಲಪಾಡಿಯಿಂದ ಕೇರಳ ರಿಜಿಸ್ಟ್ರೇಶನ್ ವಾಹನಗಳಲ್ಲಿ ಪ್ರಯಾಣಿಸುತ್ತಾರೆ ಎಂದು ದಿನೇಶ್ ತಿಳಿಸಿದ್ದಾರೆ.


    ಕೇರಳ ಹಾಗೂ ಕರ್ನಾಟಕ ಸರಕಾರ ಸಮಾಲೋಚನೆ ನಡೆಸಬೇಕು


    ಕೇರಳ ಹಾಗೂ ಕರ್ನಾಟಕ ಸರಕಾರ ಜೊತೆಯಾಗಿ ಸಮಾಲೋಚನೆ ನಡೆಸಿ ಈ ಸಮಸ್ಯೆಗೆ ಪರಿಹಾರ ಪಡೆಯಬೇಕು ಎಂದು ಮಂಗಳೂರಿನ ಶಾಸಕರಾದ ಯುಟಿ ಖಾದರ್ ಅಭಿಪ್ರಾಯಪಟ್ಟಿದ್ದಾರೆ.


    ಕೇರಳದ ವಾಹನಗಳಿಗೆ ಮಂಗಳೂರಿಗೆ ಆಗಮಿಸಲು ಒಪ್ಪಿಗೆ ನೀಡಬೇಕು


    ಉಳ್ಳಾಲ ಹಾಗೂ ಮಂಗಳೂರಿನ ಸಾಕಷ್ಟು ಅಯ್ಯಪ್ಪ ಭಕ್ತರು ಶಬರಿಮಲೆಗೆ ತೆರಳಲು ಕೇರಳದ ಟೂರಿಸ್ಟ್ ವಾಹನಗಳನ್ನು ಬುಕ್ ಮಾಡುತ್ತಿದ್ದು ಕರ್ನಾಟಕ ರಿಜಿಸ್ಟ್ರೇಶನ್ ಗಾಡಿಗಳಿಗೆ ಕೇರಳದಲ್ಲಿ ಹೆಚ್ಚಿನ ತೆರಿಗೆ ವಿಧಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಯುಟಿ ಖಾದರ್ ತಿಳಿಸಿದ್ದಾರೆ.


    ಇದನ್ನೂ ಓದಿ: Sabarimala: ಶಬರಿಮಲೆಯ 18 ಮೆಟ್ಟಿಲಿಗೂ ಇದೇ ಒಂದೊಂದು ಅರ್ಥ, ಅಯ್ಯಪ್ಪನ ಮಹಿಮೆ ಅಪಾರ


    ಕೇರಳದ ಟೂರಿಸ್ಟ್ ವಾಹನಗಳಲ್ಲಿ ಪ್ರಯಾಣಿಸಲು ಇನ್ನು ಕೆಲವರು ತಲಪಾಡಿಯವರೆಗೆ ಬಸ್‌ಗಳಲ್ಲಿ ಬರುತ್ತಾರೆ. ಹಾಗಾಗಿ ಭಕ್ತರ ಅನುಕೂಲತೆಯನ್ನು ಗಮನದಲ್ಲಿರಿಸಿಕೊಂಡು ದಕ್ಷಿಣ ಕನ್ನಡದಲ್ಲಿರುವ ಅಧಿಕಾರಿಗಳು ಮಂಗಳೂರಿನಿಂದ ಭಕ್ತರನ್ನು ಕರೆದೊಯ್ಯಲು ಕೇರಳದ ಟೂರಿಸ್ಟ್ ವಾಹನಗಳಿಗೆ ನಗರವನ್ನು ಪ್ರವೇಶಿಸಲು ಅನುಮತಿ ನೀಡಬೇಕು ಎಂದು ಖಾದರ್ ತಿಳಿಸಿದ್ದಾರೆ.

    Published by:Precilla Olivia Dias
    First published: