• Home
  • »
  • News
  • »
  • national-international
  • »
  • ಎಲ್​ಪಿಜಿ ಗ್ಯಾಸ್​ ಸಿಲಿಂಡರ್ ಬುಕ್ ಮಾಡಿ, 50 ರೂ.ವರೆಗೆ ಕ್ಯಾಶ್​ಬ್ಯಾಕ್ ಪಡೆಯಿರಿ; ಜ.25ರವರೆಗೆ ಮಾತ್ರ ಆಫರ್

ಎಲ್​ಪಿಜಿ ಗ್ಯಾಸ್​ ಸಿಲಿಂಡರ್ ಬುಕ್ ಮಾಡಿ, 50 ರೂ.ವರೆಗೆ ಕ್ಯಾಶ್​ಬ್ಯಾಕ್ ಪಡೆಯಿರಿ; ಜ.25ರವರೆಗೆ ಮಾತ್ರ ಆಫರ್

ಎಲ್​ಪಿಜಿ ಗ್ಯಾಸ್.

ಎಲ್​ಪಿಜಿ ಗ್ಯಾಸ್.

ಕ್ಯಾಶ್​ಬ್ಯಾಕ್ ಪಡೆಯಲು ನೀವು PMRJAN2021 ಪ್ರೋಮೋ ಕೋಡ್​ನ್ನು ನಮೂದಿಸಬೇಕು. ಇದು ನಿಮಗೆ 10 ಪರ್ಸೆಂಟ್​​​ಗೆ ಗರಿಷ್ಠ 50 ರೂಪಾಯಿವರೆಗೆ ಕ್ಯಾಶ್​ಬ್ಯಾಕ್ ನೀಡುತ್ತದೆ. ಈ ಆಫರ್​ ಜನವರಿ 25ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಮೇಲ್ಕಂಡ ಪ್ರೋಮೋ ಕೋಡ್​ನ್ನು ತಿಂಗಳಿಗೆ ಮೂರು ಬಾರಿ ಬಳಸಬಹುದಾಗಿದೆ.

ಮುಂದೆ ಓದಿ ...
  • Share this:

    ನವದೆಹಲಿ(ಜ.11): ಎಲ್​ಪಿಜಿ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ.14.2 ಕೆಜಿಯ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಒಟ್ಟು 694 ರೂಪಾಯಿಗಳನ್ನು ನೀಡಬೇಕು. ಇದರಿಂದ ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ. ಈಗ ನಾವು ಹೇಳುವ ರೀತಿಯಲ್ಲಿ ನೀವು ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ಖಂಡಿತಾ ನಿಮಗೆ ಲಾಭ ಸಿಗಲಿದೆ. ಅಂದರೆ ನಾವು ಈಗ ಹೇಳ ಹೊರಟಿರುವುದು ಕ್ಯಾಶ್​​ಬ್ಯಾಕ್ ಬಗ್ಗೆ. ಹೌದು, ಗ್ಯಾಸ್​ ಸಿಲಿಂಡರ್ ಬುಕ್ ಮಾಡುವ ಮೂಲಕ ನೀವು 50 ರೂಪಾಯಿ ಕ್ಯಾಶ್​ಬ್ಯಾಕ್ ಪಡೆಯಬಹುದಾಗಿದೆ. ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ. ಐಸಿಐಸಿಐ ಬ್ಯಾಂಕ್ ನಿರ್ವಹಿಸುವ​​ ಪಾಕೆಟ್ಸ್​ ವಾಲೆಟ್​​​ ಮೂಲಕ ನೀವು ಗ್ಯಾಸ್ ಸಿಲಿಂಡರ್ ಬುಕ್ ಮಾಡಬೇಕು. ಈ ರೀತಿಯಾಗಿ ಮಾಡಿದರೆ ನೀವು ಕ್ಯಾಶ್​ಬ್ಯಾಕ್ ಪಡೆಯುತ್ತೀರಿ.


    ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ಕ್ಯಾಶ್​​ಬ್ಯಾಕ್ ನೀಡಲಾಗುವುದು. ಗ್ರಾಹಕರು ಜನವರಿಯಲ್ಲಿ ಮೊದಲ ಬಾರಿಗೆ ಪಾಕೆಟ್ಸ್​ ಆ್ಯಪ್​ ಮೂಲಕ ಗ್ಯಾಸ್​ ಬುಕಿಂಗ್​ ಅಥವಾ ಬಿಲ್​ ಪಾವತಿ ಮಾಡಬೇಕು. ಕ್ಯಾಶ್​ಬ್ಯಾಕ್ ಪಡೆಯಲು ನೀವು PMRJAN2021 ಪ್ರೋಮೋ ಕೋಡ್​ನ್ನು ನಮೂದಿಸಬೇಕು. ಇದು ನಿಮಗೆ 10 ಪರ್ಸೆಂಟ್​​​ಗೆ ಗರಿಷ್ಠ 50 ರೂಪಾಯಿವರೆಗೆ ಕ್ಯಾಶ್​ಬ್ಯಾಕ್ ನೀಡುತ್ತದೆ. ಈ ಆಫರ್​ ಜನವರಿ 25ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಮೇಲ್ಕಂಡ ಪ್ರೋಮೋ ಕೋಡ್​ನ್ನು ತಿಂಗಳಿಗೆ ಮೂರು ಬಾರಿ ಬಳಸಬಹುದಾಗಿದೆ.


    ಪ್ರಬಂಧ, ಭಾಷಣ ಸ್ಪರ್ಧೆಯ ವಿಜೇತರಿಗೆ ಹೆಲಿಕಾಪ್ಟರ್ ರೌಂಡ್ಸ್; ಸತೀಶ್ ಜಾರಕಿಹೊಳಿ ಹೊಸ ಪ್ರಯತ್ನ


    ಕ್ಯಾಶ್​ಬ್ಯಾಕ್​ ಪಡೆಯಲು ಅನುಸರಿಸಬೇಕಾದ ಕ್ರಮಗಳು:


    • ಮೊದಲು ನೀವು ನಿಮ್ಮ ಪಾಕೆಟ್ಸ್​ ವಾಲೆಟ್​ ಅಪ್ಲಿಕೇಶನ್​ ತೆರೆಯಬೇಕು.

    • ಬಳಿಕ ನೀವು ಪೇ ಬಿಲ್ಸ್​​ ಮೇಲೆ ಕ್ಲಿಕ್​ ಮಾಡಬೇಕು.

    • ಇದಾದ ನಂತರ, ಬಿಲ್ಲರ್ಸ್​​ಗಳಲ್ಲಿ ಮತ್ತಷ್ಟು ಆಯ್ಕೆಗಳು ಕಾಣಿಸುತ್ತವೆ, ಅದರ ಮೇಲೆ ನೀವು ಕ್ಲಿಕ್ ಮಾಡಬೇಕು.

    • ಕ್ಲಿಕ್ ಮಾಡಿದ ಬಳಿಕ ಎಲ್​ಪಿಜಿ ಆಯ್ಕೆ ನಿಮ್ಮ ಮುಂದೆ ಕಾಣಿಸುತ್ತದೆ.

    • ಇಲ್ಲಿ ನೀವು ನಿಮ್ಮ ಸೇವಾ ಪೂರೈಕೆದಾರರನ್ನು(ಸರ್ವೀಸ್ ಪ್ರೊವೈಡರ್) ಆಯ್ಕೆ ಮಾಡಬೇಕು.

    • ನಂತರ ನೀವು ಗ್ರಾಹಕ ಸಂಖ್ಯೆ, ವಿತರಕ ಐಡಿ(ಡಿಸ್ಟ್ರಿಬ್ಯೂಟರ್​ ಐಡಿ) ಮತ್ತು ಮೊಬೈಲ್ ನಂಬರ್​ನ್ನು ನಮೂದಿಸಬೇಕು.

    • ಇದಾದ ಬಳಿಕ PMRJAN2021 ಪ್ರೋಮೋ ಕೋಡ್​ನ್ನು ನಮೂದಿಸಬೇಕು.

    • ಆಗ ನಿಮ್ಮ ಗ್ಯಾಸ್​ ಸಿಲಿಂಡರ್​​​​ ಬುಕಿಂಗ್​​ನ ಒಟ್ಟು ಮೊತ್ತವನ್ನು ತಿಳಿಸಲಾಗುತ್ತದೆ.

    • ಇದಾದ ನಂತರ ನೀವು ಗ್ಯಾಸ್​ ಸಿಲಿಂಡರ್​​​​​​​​​​​ ಬುಕಿಂಗ್ ಹಣವನ್ನು ಪಾವತಿಸಬೇಕಾಗುತ್ತದೆ.





    • ಗ್ಯಾಸ್​ ಸಿಲಿಂಡರ್ ಬುಕಿಂಗ್ ಆದ 10 ದಿನಗಳಲ್ಲಿ ಗರಿಷ್ಠ 50 ರೂಪಾಯಿಗಳ ಕ್ಯಾಶ್​​ಬ್ಯಾಕ್​ನ್ನು ನಿಮ್ಮ ಪಾಕೆಟ್ಸ್​​ ವಾಲೆಟ್​​​ಗೆ ಜಮಾ ಮಾಡಲಾಗುತ್ತದೆ.

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು