CoronaVirus: ರೈಲು ನಿಲ್ದಾಣ-ಪ್ರಯಾಣದ ವೇಳೆಯೂ ಮಾಸ್ಕ್ ಕಡ್ಡಾಯ; ನಿಯಮ ಮೀರಿದರೆ 500 ರೂ. ದಂಡ

ಸತತ ಮೂರನೇ ದಿನ ಭಾರತದಲ್ಲಿ 2,00,000 ಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 2,34,692 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವ ದೆಹಲಿ; ಭಾರತದಲ್ಲಿ ಕೊರೋನಾ ಎರಡನೇ ಅಲೆ ದಿನದಿಂದ ಅಧಿಕವಾಗುತ್ತಲೇ ಇದೆ. ಪ್ರತಿ ದಿನ ದೇಶದಾದ್ಯಂತ 2 ಲಕ್ಷಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಕೇಂದ್ರ ಸರ್ಕಾರ ಕೊರೋನಾ ಲಸಿಕೆ ಅಭಿಯಾನವನ್ನು ನಡೆಸುತ್ತಿದೆಯಾದರೂ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಗುಜರಾತ್​-ಮುಂಬೈ ಸೇರಿದಂತೆ ಅನೇಕ ರಾಜ್ಯಗಳು ಈಗಾಗಲೇ ಕೊರೋನಾದಿಂದ ತತ್ತರಿಸಿದ್ದು, ಸೋಂಕು ತಡೆಗೆ ನೈಟ್​ ಕರ್ಫ್ಯೂ ಮೊರೆ ಹೋಗಿವೆ. ಮತ್ತೊಮ್ಮೆ ಲಾಕ್​ಡೌನ್ ಕೂಗು ಕೇಳಿಬರುತ್ತಿದೆಯಾದರೂ, ಕೇಂದ್ರ ಸರ್ಕಾರ ಮಾತ್ರ ಯಾವುದೇ ನಿರ್ಧಾರಕ್ಕೆ ಮುಂದಾಗಿಲ್ಲ. ಕೊರೋನಾ ತಡೆಗೂ ಸೂಕ್ತ ಕ್ರಮ ಜರುಗಿಸಿಲ್ಲ. ಈ ನಡುವೆ ರೈಲ್ವೆ ನಿಲ್ದಾಣಗಳಲ್ಲಿ ಮತ್ತು ಪ್ರಯಾಣದ ವೇಳೆ ಜನ ಮಾಸ್ಕ್​ ಧರಿಸುತ್ತಿಲ್ಲ ಎಂದು ವರದಿಯಾಗುತ್ತಿವೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಭಾರತೀಯ ರೈಲ್ವೆ ಇಲಾಖೆ ರೈಲ್ವೆ ನಿಲ್ದಾಣ ಮತ್ತು ಪ್ರಯಾಣದ ವೇಳೆ ಮಾಸ್ಕ್ ಕಡ್ಡಾಯ ಮಾಡಿದೆ. ಅಲ್ಲದೆ, ನಿಯಮ ಮೀರಿದರೆ 500 ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

  ಈ ಸಂಬಂಧ ಪ್ರಕಟಣೆ ಹೊರಡಿಸಿರುವ ರೈಲ್ವೆ ಇಲಾಖೆ "ರೈಲು ಪ್ರಯಾಣಿಕರು ಮತ್ತು ಲ್ವೆ ನಿಲ್ದಾಣದ ಆವಣರದಲ್ಲಿರುವವರು ಫೇಸ್ ಮಾಸ್ಕ್ ಧರಿಸದಿದ್ದದ್ದೂ ಕಂಡುಬಂದಿದೆ ಹಾಗಾಗಿ ಇನ್ನು ಮುಂದೆ 500 ರೂಪಾಯಿ ದಂಡವನ್ನು ವಿಧಿಸಲಾಗುವುದು" ಎಂದು ತಿಳಿಸಿದೆ.

  ಕೊರೋನಾ ಸೋಂಕು ಹರಡುವುದನ್ನು ನಿರ್ಬಂಧಿಸುವುದಕ್ಕಾಗಿ ಆವರಣದಲ್ಲಿ ಉಗುಳುವುದು ಕಂಡು ಬಂದರೂ 500 ರೂಪಾಯಿ ದಂಡ ವಿಧಿಸಲಾಗುತ್ತದೆ. ಇದು ಕೂಡ ಕೊರೊನಾ ನಿಯಮಗಳ ಉಲ್ಲಂಘನೆ ಎಂದು ರೈಲ್ವೆ ಹೇಳಿದೆ. ಮುಂದಿನ ಸೂಚನೆಗಳನ್ನು ಪ್ರಕಟಿಸುವವರೆಗೆ ಆರು ತಿಂಗಳ ಅವಧಿಗೆ ತಕ್ಷಣ ಜಾರಿಗೆ ಬರುವಂತೆ ದಂಡ ವಿಧಿಸಲಾಗುವುದು ಎಂದು ಹೇಳಿದೆ.

  ಎಲ್ಲಾ ಪ್ರಯಾಣಿಕರು ನಿಲ್ದಾಣ ಪ್ರವೇಶ ಮತ್ತು ಪ್ರಯಾಣದ ಸಮಯದಲ್ಲಿ ಮಾಸ್ಕ್‌ಗಳನ್ನು ಧರಿಸಬೇಕು” ಎಂದು ಕೊರೊನಾ ನಿಯಂತ್ರಣ ಸಂಬಂಧ ಭಾರತೀಯ ರೈಲ್ವೆ ಇಲಾಖೆ 2020ರ ಮೇ 11ರಂದು ಜಾರಿಗೆ ತಂದಿರುವ ನಿಗದಿತ ಕಾರ್ಯವಿಧಾನವನ್ನು (ಸ್ಟಾಂಟರ್ಡ್‌ ಆಪರೇಟಿಂಗ್ ಪ್ರೊಸೀಜರ್ – ಎಸ್‌ಒಪಿ) ಉಲ್ಲೇಖಿಸಿ ರೈಲ್ವೆ ಆದೇಶಿಸಿದೆ.

  ಸತತ ಮೂರನೇ ದಿನ ಭಾರತದಲ್ಲಿ 2,00,000 ಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 2,34,692 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

  ದೆಹಲಿಯಲ್ಲಿ ಕೈಮೀರಿದ ಪರಿಸ್ಥಿತಿ:

  ಈ ನಡುವೆ ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕೋವಿಡ್​ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನಲೆ ವಿಕೇಂಡ್​ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ದೇಶದಲ್ಲಿ ಪ್ರತಿನಿತ್ಯ 2.3 ಲಕ್ಷ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಸೋಂಕಿನ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಬೆಡ್​ ಸೇರಿದಂತೆ ಔಷಧಿಗಳಿಗಾಗಿ ಸೋಂಕಿತರು ಸಮಸ್ಯೆ ಎದುರಿಸುವಂತೆ ಆಗಿದೆ. ಇಂದು ದೇಶದಲ್ಲಿ 2.34 ಲಕ್ಷ ಪ್ರಕರಣ ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 1.45 ಕೋಟಿ ದಾಟಿದೆ. ಇಂದು 1,341 ಸೋಂಕಿತರು ಸಾವನ್ನಪ್ಪಿದ್ದು, ಒಟ್ಟಾರೆ 1,75,649ಜನ ಕೋವಿಡ್​ನಿಂದ ಮೃತಪಟ್ಟಿದ್ದಾರೆ.

  ದೆಹಲಿಯಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಆಕ್ಸಿಜನ್​ ಮತ್ತು ರೆಮ್​ಡಿಸಿವಿರ್​ ಮತ್ತು ಪ್ಯಾಬಿಫ್ಲೂನಂತರ ಔಷಧ ಕೊರತೆ ಉಂಟಾಗಿದ್ದು, ಇದು ಕಳ್ಳ ಸಂತೆಯಲ್ಲಿ ಮಾರಾಟವಾಗುವಂತೆ ಪ್ರೇರೇಪಿಸಿದೆ.

  ಇದನ್ನೂ ಓದಿ: CoronaVirus: ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲ; ಸೋನಿಯಾ ಗಾಂಧಿ ಕಿಡಿ

  ದೇಶದಲ್ಲಿ ಕೊರೋನಾ ಏರಿಕೆ ಪ್ರಕರಣದ ಬಗ್ಗೆ ರೆಡ್​ಕ್ರಾಸ್​ ಸಂಸ್ಥೆ ಕೂಡ ಆತಂಕ ವ್ಯಕ್ತಪಡಿಸಿದ್ದೇನೆ.ದೆಹಲಿಯಲ್ಲಿ ವೀಕೆಂಡ್​ ಕರ್ಫ್ಯೂ ಸ್ಪಾಗಳು, ಸಭಾಂಗಣಗಳು, ಮಾಲ್​ಗಳು ಹಾಗೂ ಜಿಮ್​ಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.ಈ ವೀಕೆಂಡ್​ ಕರ್ಫ್ಯೂ ವೇಳೆ ಮದುವೆ ಸಮಾರಂಭಗಳಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಪಾಸ್​ ಹೊಂದಿರಲೇಬೇಕು. ಆ ಪಾಸ್​ಗಳನ್ನು ಸರ್ಕಾರದ ವತಿಯಿಂದ ನೀಡಲಾಗುತ್ತದೆ.

  ಇದರ ಜೊತೆಗೆ ರೆಸ್ಟೋರೆಂಟ್​​ಗಳಲ್ಲಿ ಕೂತು ತಿನ್ನಲು ಅವಕಾಶವಿರುವುದಿಲ್ಲ. ಪಾರ್ಸಲ್​​ಗೆ ಮಾತ್ರ ಅವಕಾಶವಿರುತ್ತದೆ. ಮದುವೆ ಸಮಾರಂಭಗಳಿಗೆ ಕೇವಲ 50 ಮಂದಿಗಷ್ಟೇ ಅವಕಾಶವಿರುತ್ತದೆ. ಜೊತೆಗ ಅಂತ್ಯಕ್ರಿಯೆಯಲ್ಲಿ ಕೇವಲ 20 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕಡ್ಡಾಯವಾಗಿ ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಪಾಡಬೇಕು ಎಂದು ಸಿಎಂ ಅರವಿಂದ್ ಕೇಜ್ರಿವಾಲ್​ ಹೇಳಿದ್ದಾರೆ.
  Published by:MAshok Kumar
  First published: