HOME » NEWS » National-international » TO CROWN MAMATA BANERJEE AS UPA CHAIRPERSON OR CONVENOR KVD

ರಾಜಕೀಯ ಗೂಗ್ಲಿ: ಸೋನಿಯಾರನ್ನು ಕೆಳಗಿಳಿಸಿ ದೀದಿಗೆ UPA ಅಧ್ಯಕ್ಷೆ ಪಟ್ಟ ಕಟ್ಟುತ್ತಾರಾ..?

ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶದ ಬಳಿಕ ರಾಷ್ಟ್ರ ರಾಜಕಾರಣಕ್ಕೆ ಸಿಕ್ಕಿದೆಯಾ ಹೊಸ ಆಯಾಮ? ಮೋದಿ ನಾಯಕತ್ವವನ್ನು ಎದುರಿಸಲು ಸೋನಿಯಾ ಗಾಂಧಿಗಿಂತ ಮಮತಾ ಬ್ಯಾನರ್ಜಿ ಹೆಚ್ಚು ಸಮರ್ಥರೇ? ಗೆಲುವಿಗಾಗಿ ಯುಪಿಎ ಅಧ್ಯಕ್ಷೆ ಪಟ್ಟ ಬಿಟ್ಟು ಕೊಡುತ್ತಾರೆಯೇ ಸೋನಿಯಾ?

Kavya V | news18-kannada
Updated:May 3, 2021, 6:49 PM IST
ರಾಜಕೀಯ ಗೂಗ್ಲಿ: ಸೋನಿಯಾರನ್ನು ಕೆಳಗಿಳಿಸಿ ದೀದಿಗೆ UPA ಅಧ್ಯಕ್ಷೆ ಪಟ್ಟ ಕಟ್ಟುತ್ತಾರಾ..?
ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ
  • Share this:
Pನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣಾ ಫಲಿತಾಂಶ ಹೊರ ಬೀಳುತ್ತಲೇ ರಾಜಕೀಯ ಪಡಸಾಲೆಯಲ್ಲಿ ಹೊಸ ಹಾದಿಗಳು ಹುಟ್ಟಿಕೊಂಡಿವೆ. ಪ್ರಧಾನಿ ಮೋದಿ, ಅಮಿತ್​ ಶಾ ಎದುರು ದಿಗ್ವಿಜಯ ಸಾಧಿಸಿದ ಮಮತಾ ಬ್ಯಾನರ್ಜಿ ಎಡಪಕ್ಷಗಳಿಗೆ ಹೊಸ ಆಶಾಕಿರಣವಾಗಿ ಗೋಚರಿಸುತ್ತಿದ್ದಾರೆ. ಆಪರೇಷನ್​ ಕಮಲ, ಹೆಜ್ಜೆಹೆಜ್ಜೆಗೂ ವೊಡ್ಡಿದ ಅಡ್ಡಿ-ಆತಂಕಗಳನ್ನು ಮೀರಿ ದೀದಿ ಬಂಗಾಳವನ್ನು ತನ್ನದಾಗಿಸಿಕೊಂಡಿದ್ದಾರೆ. ದೀದಿಯ ಘರ್ಜನೆಗೆ ಕಮಲ ಪಕ್ಷವೂ ಮುದುರಿದೆ. ಪ್ರಾದೇಶಿಕ ಪಕ್ಷಗಳಿಗೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮಾದರಿಯಾಗಿದ್ದಾರೆ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ವ್ಯಾಖ್ಯಾನಿಸಿದ್ದರು. ಇವೆಲ್ಲವುಗಳ ಬೆನ್ನಲ್ಲೇ ರಾಷ್ಟ್ರ ರಾಜಕಾರಣದಲ್ಲಿ ಹೊಸ ಆಯಮದ ರಾಜಕಾರಣದ ಕುರಿತು ತೆರೆಮರೆಯ ಚರ್ಚೆ ಜೋರಾಗಿದೆ.

2014ರ ಬಳಿಕ ಸತತ ಸೋಲುಂಡಿರುವ ಕಾಂಗ್ರೆಸ್​ ನೇತೃತ್ವದ ಯುಪಿಎಗೆ ಹೊಸ ಆಕ್ಸಿಜನ್​ನ ಅಗ್ಯವಿದೆ. ಯುಪಿಎ ಅಧ್ಯಕ್ಷತೆಯ ಬಗ್ಗೆ ತಕರಾರು ಇದ್ದವರು ಈಗ ಮಮತಾ ಬ್ಯಾನರ್ಜಿಯತ್ತ ಮುಖ ಮಾಡಿದ್ದಾರೆ. ಬಿಜೆಪಿಯೇತರ ಯುಪಿಎ ಮೈತ್ರಿಕೂಟಕ್ಕೆ ಸೋನಿಯಾ ಗಾಂಧಿ ಬದಲು ಮಮತಾ ಬ್ಯಾನರ್ಜಿ ಅಧ್ಯಕ್ಷರಾದರೆ ಹೇಗೆ ಎಂಬ ಮಾತು ನಿಧಾನಕ್ಕೆ ಜೋರಾಗಿ ಕೇಳಲಾರಂಭಿಸಿದೆ. ಬಂಗಾಳ ಚುನಾವಣೆ ಫಲಿತಾಂಶದ ಮರುದಿನವೇ ಇಂಥಹದೊಂದು ರಾಜಕೀಯ ಗೂಗ್ಲಿ ಸಕ್ರಿಯಗೊಂಡಿದೆ.

ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ರಾಹುಲ್​ ಗಾಂಧಿ ಯುಪಿಎ ಅಧ್ಯಕ್ಷ ಸ್ಥಾನವನ್ನು ತೊರೆದಿದ್ದರು. ಪರ್ಯಾಯ ನಾಯಕತ್ವದ ಬಗ್ಗೆ ತೀವ್ರ ಚರ್ಚೆಗಳಾಗಿದ್ದವು. ಗಾಂಧಿ ಕುಟುಂಬಕ್ಕೆ ಪ್ರಾಮಾಣಿಕವಾಗಿರುವವರು ಪ್ರಿಯಾಂಕ ಗಾಂಧಿಯನ್ನು ಎದುರು ನೋಡಿದ್ದರು. ಆದರೆ ಸೋನಿಯಾ ಗಾಂಧಿಯವರೇ ಮತ್ತೊಮ್ಮೆ ಅಧ್ಯಕ್ಷ ಸ್ಥಾನದಲ್ಲಿ ಆಸೀನರಾಗಿದ್ದರು. ನಾಯಕತ್ವದ ವಿರುದ್ಧ ಕಳೆದ ವರ್ಷ ಕಾಂಗ್ರೆಸ್​ನ ಹಿರಿಯ ನಾಯಕರಾದ ಕಪಿಲ್​ ಸಿಬಲ್​, ಗುಲಾಂ ನಬಿ ಅಜಾದ್​, ಶಶಿ ತರೂರು, ಮನೀಶ್​ ತಿವಾರಿ ಸೇರಿದಂತೆ 23 ಮಂದಿ ಪತ್ರದ ಮೂಲಕ ಅಸಮಾಧಾನ ಹೊರ ಹಾಕಿದ್ದರು.

G-23 ಹೆಸರಿನಲ್ಲಿ ಯುಪಿಎ ಅಧ್ಯಕ್ಷರ ವಿರುದ್ಧ ತಮ್ಮ ತಕರಾರನ್ನು ಬಹಿರಂಗವಾಗಿ ಹೊರ ಹಾಕಿದ್ದರು. ಇದು ಸೋನಿಯಾ ಗಾಂಧಿ ಹಾಗೂ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು. ಈಗ ಮತ್ತೆ ಈ G-23 ಗುಂಪು ಸಕ್ರಿಯವಾಗಿದೆ. ಕಾಂಗ್ರೆಸ್​ನ ಹಿರಿಯ ನಾಯಕರೊಬ್ಬರು ಸೋನಿಯಾರ ಜಾಗಕ್ಕೆ ಮಮತಾರನ್ನು ತರಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

2024ರ ಲೋಕಸಭೆ ಚುನಾವಣೆಯನ್ನು ಬಿಜೆಪಿಯೇತರ ಪಕ್ಷಗಳು ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಎದುರಿಸಲು ರಣತಂತ್ರ ಎಣೆಯಲಾಗುತ್ತಿದೆ. ಮೋದಿ ವಿರುದ್ಧ ದೀದಿ ಒಬ್ಬರೇ ಸಮರ್ಥ ನಾಯಕತ್ವ ತೋರಲ್ಲರು ಅನ್ನೋದು ಸದ್ಯದ ರಾಜಕೀಯ ಲೆಕ್ಕಾಚಾರ. ಯುಪಿಎ ಅಧ್ಯಕ್ಷರಾಗಲು ಮಮತಾ ಬ್ಯಾನರ್ಜಿ ಮನವೊಲಿಸಲು ದೊಡ್ಡ ಮಟ್ಟದಲ್ಲಿ ಪ್ರಯತ್ನಗಳು ಆರಂಭಿಸಿವೆಯಂತೆ. ಇತ್ತ ಅಧ್ಯಕ್ಷೆ ಪಟ್ಟದಿಂದ ಕೆಳಗಿಳಿಯಲು ಸೋನಿಯಾ ಗಾಂಧಿ ಅವರನ್ನು ಮನವೊಲಿಸಿ ದೀದಿಗೆ ಬೆಂಬಲವಾಗಿ ನಿಲ್ಲುವಂತೆ ಮಾಡಲೂ ಪ್ಲಾನ್​ ಮಾಡಲಾಗುತ್ತಿದೆಯಂತೆ.

ಇನ್ನು 2014ದಿಂದ ಅಧಿಕಾರ ಕಳೆದುಕೊಂಡ ಕಾಂಗ್ರೆಸ್​ ಪಕ್ಷ 3ನೇ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಶೂನ್ಯ ಸುತ್ತಿದೆ. 2015 ಹಾಗೂ 2020ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ 1 ಸ್ಥಾನವನ್ನೂ ಗೆಲ್ಲಲಿಲ್ಲ. 2019ರ ಆಂಧ್ರಪ್ರದೇಶ ವಿಧಾನಸಭೆ ಹಾಗೂ ಈಗಿನ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್​ನದ್ದು ಶೂನ್ಯ ಸಾಧನೆ. ಇವೆಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ಸೋನಿಯಾ ಗಾಂಧಿ ಮನವೊಲಿಸಲು ಮುಂದಾಗಿದ್ದಾರಂತೆ. ಈ ರಣತಂತ್ರ ಫಲ ಕೊಟ್ಟಿದ್ದೇ ಆದರೆ ದೀದಿ ದೆಹಲಿಯಲ್ಲೂ ತಮ್ಮ ಛಾಪು ಮೂಡಿಸಲು ಸನ್ನದ್ಧರಾಗಬಹುದು. ಅಧ್ಯಕ್ಷ ಸ್ಥಾನದಿಂದ ಇಳಿದರೂ ಚಿಂತೆ ಇಲ್ಲ ಎಂದು ಗಾಂಧಿ ಕುಟುಂಬ ಯೋಚಿಸಿದರಷ್ಟೇ ಈ ಗೂಗ್ಲಿ ಪ್ಲಾನ್​​ ಸಕ್ಸಸ್​ ಆಗಲಿದೆ.
Published by: Kavya V
First published: May 3, 2021, 6:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories