Parliament Session: ಚಳಿಗಾಲದ ಅಧಿವೇಶನಕ್ಕೂ ಮುನ್ನ ಕೇಂದ್ರ ಸಚಿವರಿಗೆ ಚಿಂತನ-ಮಂಥನ ಪಾಠ!

Parliament Session: ಈ ಬಾರಿಯ ಚಳಿಗಾಲದ ಅಧಿವೇಶನಕ್ಕೆ ಮುನ್ನ ಪೂರ್ವತಯಾರಿ(Premade) ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ. ಹಣದುಬ್ಬರ, ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆ, ಖಾದ್ಯ ತೈಲಗಳ ಬೆಲೆ ಏರಿಕೆ, ಕಾಶ್ಮೀರದಲ್ಲಿ ಜನ ಸಾಮಾನ್ಯರ ಮೇಲೆ ಉಗ್ರರ ದಾಳಿ, ಲಖೀಂಪುರ ಕೇರಿ ಹಿಂಸಾಚಾರ, ರೈತರ ಪ್ರತಿಭಟನೆ ಸೇರಿದಂತೆ ಇತ್ತೀಚಿನ ಹಲವು ವಿದ್ಯಮಾನಗಳು ಸಂಸತ್‌ನಲ್ಲೂ ಪ್ರತಿಧ್ವನಿಸಲು ಸಜ್ಜಾಗಿವೆ.

ನ.29ರಿಂದ ಚಳಿಗಾಲದ ಅಧಿವೇಶನ

ನ.29ರಿಂದ ಚಳಿಗಾಲದ ಅಧಿವೇಶನ

  • Share this:
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್( Union Defense Minister Rajanath Singh) ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನ. 29ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ(Winter Parliament Session) ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ. ಅಧಿವೇಶನ ನಡೆಸುವ ತೀರ್ಮಾನ ಕೈಗೊಂಡ ಬೆನ್ನಲ್ಲೇ ಬಿಜೆಪಿ(BJP)ಗೆ ಹೊಸ ತಲೆನೋವು ಶುರುವಾಗಿದೆ. ಯಾಕಂದರೆ ಕಳೆದ ಮುಂಗಾರಿನ ಅಧಿವೇಶನ(Monsoon Session)ದ ಸಂದರ್ಭದಲ್ಲಿ ಹಲವಾರು ವಿಷಯಗಳನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ವಿರೋಧಪಕ್ಷಗಳು ವಾಗ್ದಾಳಿ ನಡೆಸಿದ್ದವು. ಹೀಗಾಗಿ ಈ ಬಾರಿಯ ಚಳಿಗಾಲದ ಅಧಿವೇಶನಕ್ಕೆ ಮುನ್ನ ಪೂರ್ವತಯಾರಿ(Premade) ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ. ಹಣದುಬ್ಬರ, ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆ, ಖಾದ್ಯ ತೈಲಗಳ ಬೆಲೆ ಏರಿಕೆ, ಕಾಶ್ಮೀರದಲ್ಲಿ ಜನ ಸಾಮಾನ್ಯರ ಮೇಲೆ ಉಗ್ರರ ದಾಳಿ, ಲಖೀಂಪುರ ಕೇರಿ ಹಿಂಸಾಚಾರ, ರೈತರ ಪ್ರತಿಭಟನೆ ಸೇರಿದಂತೆ ಇತ್ತೀಚಿನ ಹಲವು ವಿದ್ಯಮಾನಗಳು ಸಂಸತ್‌ನಲ್ಲೂ ಪ್ರತಿಧ್ವನಿಸಲು ಸಜ್ಜಾಗಿವೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ಹೀಗಾಗಿ ಚಳಿಗಾಲದ ಅಧಿವೇಶನದಲ್ಲಿ ಹೇಗೆ ವಿರೋಧ ಪಕ್ಷಗಳ ನಾಯಕರುಗಳನ್ನು ಎದುರಿಸಬೇಕು ಎಂಬುದನ್ನು ಸಿದ್ಧತೆ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದ್ದು, ಅಧಿವೇಶನದಲ್ಲಿ ಬಿಜೆಪಿಯ ಕೇಂದ್ರ ಮಂತ್ರಿಮಂಡಲದ ಸದಸ್ಯರು ಹೇಗೆ ನಡೆದುಕೊಳ್ಳಬೇಕು, ಪಕ್ಷಗಳ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲು ಇಂದು ಸಂಜೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಚಿಂತನ-ಮಂಥನ ಸಭೆ ನಡೆಸಲು ಮುಂದಾಗಿದೆ. ಅಧಿವೇಶನದಲ್ಲಿ ಯಾವುದರ ಬಗ್ಗೆ ಹೇಗೆ ಚರ್ಚೆ ಮಾಡಬೇಕು, ವಿಪಕ್ಷಗಳ ಪ್ರಶ್ನೆಗೆ ಹೇಗೆ ಉತ್ತರಿಸಬೇಕೆಂದು ಈ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತು.

ಇದನ್ನು ಓದಿ : ಕೊರೊನಾ 2ನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಯಾರೂ ಸತ್ತಿಲ್ಲ: ಕೇಂದ್ರ ಸರ್ಕಾರದ ಅಚ್ಚರಿಯ ಉತ್ತರ!

ವಿಶೇಷ ಆಹ್ವಾನಿತರಾಗಿ ರಾಜ್ಯಸಭೆ ಹಾಗೂ ಲೋಕಸಭೆ ಸ್ಪೀಕರ್ ಗಳು

ಇನ್ನು ಪ್ರಧಾನಿ ಮೋದಿ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಯಲಿರುವ ಕೇಂದ್ರ ಮಂತ್ರಿಮಂಡಲದ ಚಿಂತನ-ಮಂಥನ ಸಭೆಯಲ್ಲಿ, ಕೇಂದ್ರ ಮಂತ್ರಿಮಂಡಲದ ಸದಸ್ಯರಿಗೆ ಸಲಹೆ ನೀಡಲು ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಹಾಗೂ ರಾಜ್ಯಸಭೆ ಸ್ಪೀಕರ್ ವೆಂಕಯ್ಯ ನಾಯ್ಡು ವಿಶೇಷ ಆಹ್ವಾನಿತರಾಗಿ ಭಾಗಿಯಾಗಲಿದ್ದಾರೆ. ಪ್ರಸ್ತುತ ಹೆಚ್ಚಾಗಿರುವ ಹಿಂಸಾಚಾರಗಳ ಬಗ್ಗೆ ಹೇಗೆ ಉತ್ತರ ನೀಡಬೇಕು ಎಂಬ ಪಾಠವನ್ನು ಮೋದಿ ನೇತೃತ್ವದ ಸಂಪುಟ ಸದಸ್ಯರಿಗೆ ಸ್ಪೀಕರ್ ಓಂ ಬಿರ್ಲಾ ಹಾಗೂ ವೆಂಕಯ್ಯನಾಯ್ಡು ಮಾಡಲಿದ್ದಾರೆ. ಸಂಪುಟ ವಿಸ್ತರಣೆಯ ಬಳಿಕ ಹಲವಾರು ಹೊಸ ಮುಖಗಳು ಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿರುವುದರಿಂದ, ವಿರೋಧ ಪಕ್ಷಗಳ ದಾಳಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು, ಅದು ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದನ್ನು ಸಹ ಇಂದು ಮೋದಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಚರ್ಚಿಸಲಾಗುವುದು.

ಇದನ್ನು ಓದಿ : ರಾಜ್ಯಸಭೆಯಲ್ಲಿ ಕ್ಷಮೆ ಕೋರುವಂತೆ ವಿಪಕ್ಷಗಳಿಗೆ ಕೇಂದ್ರ ಸರ್ಕಾರ ಒತ್ತಾಯ: ಕೆಟ್ಟ ವರ್ತನೆ ಎಂದ ಬಿಜೆಪಿ

ಸರ್ಕಾರದ ವಿರುದ್ಧ ಮುಗಿಬಿದ್ದಿದ್ದ ವಿಪಕ್ಷಗಳು

ಈ ಹಿಂದೆ ನಡೆದಿದ್ದ ಮುಂಗಾರು ಅಧಿವೇಶನದಲ್ಲೂ ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದವು. ಪೆಗಾಸಸ್ ಬೇಹುಗಾರಿಕಾ ಆರೋಪ ಹಾಗೂ ಕೃಷಿ ಕಾಯ್ದೆಗಳ ವಿರುದ್ಧ ಸರ್ಕಾರವನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದವು. ಬಿಜೆಪಿ ವಿರುದ್ಧ ವಿಪಕ್ಷಗಳ ಸಂಘಟಿತ ಹೋರಾಟದ ಹಿನ್ನೆಲೆಯಲ್ಲಿ ಮುಂಗಾರು ಅಧಿವೇಶನವು 2 ದಿನ ಮೊದಲೇ ಮೊಟಕುಗೊಂಡಿತ್ತು. ಹೀಗಾಗಿ ಈ ಬಾರಿಯೂ ಸಹ ವಿರೋಧಪಕ್ಷಗಳು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ಒಂದು ವರ್ಷ ಪೂರೈಕೆ ಮಾಡಿರುವುದು,ಲಖೀಂಪುರ ಕೇರಿಯಲ್ಲಿ ರೈತರ ಮೇಲೆ ಬಿಜೆಪಿ ಸಚಿವರ ಮಗ ಕಾರು ಚಲಾಯಿಸಿ ಹತ್ಯೆ ಮಾಡಿರುವ ಘಟನೆಗಳನ್ನಿಟ್ಟುಕೊಂಡು ಮುಗಿ ಬೀಳಲು ಸಿದ್ಧತೆ ಮಾಡಿಕೊಂಡಿವೆ. ಜೊತೆಗೆ ಉತ್ತರ ಪ್ರದೇಶ ಚುನಾವಣೆ ಸಮೀಪ ಇರುವುದರಿಂದ ಉತ್ತರಪ್ರದೇಶದಲ್ಲಿನ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಚರ್ಚೆ ಹೆಚ್ಚಾಗಿ ನಡೆಯುವುದರಿಂದ, ಸಾಕಷ್ಟು ಜಾಗೃತೆಯಿಂದ ಇರಲು, ಇಂದು ಕೇಂದ್ರ ಮಂತ್ರಿಮಂಡಲದ ಸದಸ್ಯರಿಗೆ ಚಿಂತನ-ಮಂಥನ ಸಭೆ ನಡೆಸಲಾಗುತ್ತಿದೆ.
Published by:Vasudeva M
First published: